ನಮ್ಮ ದೇಶ ಪ್ರಗತಿಯತ್ತ ಸಾಗುತ್ತಿರುವ ಹಾಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆಗಳು ಕಂಡುಬರುತ್ತಿವೆ ಹೊಸ ಹೊಸ ವಿಧಾನಗಳ ಅಳವಡಿಕೆಯಾಗುತ್ತಿದೆ ಇದೀಗ ಶಿಕ್ಷಣ ವ್ಯವಸ್ಥೆಯಲ್ಲಿಯೂ ಕೂಡ ಕೆಲವೊಂದು ಬದಲಾವಣೆಗಳನ್ನು ಮಾಡುವುದಕ್ಕೆ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಹಾಗಾದರೆ ಸರ್ಕಾರ ಜಾರಿಗೊಳಿಸುವಂತಹ ನೂತನ ಶಿಕ್ಷಣ ನೀತಿಯಲ್ಲಿನ ಕೆಲವು ಅಂಶಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.

ನೂತನ ಶಿಕ್ಷಣ ನೀತಿಯನ್ನು ಮೂರು ದಶಕಗಳ ಹಿಂದೆ ತರಲಾಗಿತ್ತು ಈಗ ಮತ್ತೆ ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಗಾಗಿ ಎನ್ ಇ ಪಿ ಯನ್ನು ಜಾರಿಗೊಳಿಸಲಾಗಿದೆ ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿ ಎಂದು ಕರೆಯಲಾಗುತ್ತದೆ ಎರಡು ಸಾವಿರದ ಇಪ್ಪತ್ತರಲ್ಲಿ ಈ ಒಂದು ಮಸೂದೆ ಅಂಗೀಕಾರವಾಗಿತ್ತು ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿ ಎಂದು ಕರೆಯಲಾಗುತ್ತದೆ ಇದರ ಪ್ರಕಾರವಾಗಿಯೇ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನೂ ತರಲಾಗಿದೆ ಅದರ ಜೊತೆಗೆ ಶಿಕ್ಷಕರ ಆಯ್ಕೆ ಪ್ರಕ್ರಿಯೆಯಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿದೆ ಇಲ್ಲಿಯವರೆಗೆ ನಡೆದ ಶಿಕ್ಷಕರ ನೇಮಕಾತಿಗೆ ಮತ್ತು ಮುಂದೆ ನಡೆಯಲಾಗುವ ಶಿಕ್ಷಕರ ನೇಮಕಾತಿಗೆ ಏನೆಲ್ಲಾ ಬದಲಾವಣೆ ವ್ಯತ್ಯಾಸ ಇರುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೊಣ.

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಶಿಕ್ಷಕರ ಆಯ್ಕೆಯ ಪ್ರಕ್ರಿಯೆಯಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತದೆ ಯಾವರೀತಿಯ ಎಂಬುದನ್ನು ನೋಡುವುದಾದರೆ ಮೊದಲನೆಯದಾಗಿ ಪ್ರಾರ್ಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಯಾವ ರೀತಿಯ ನಿಯಮಗಳಿದ್ದವು ಅಂದರೆ ಒಂದರಿಂದ ಐದನೇ ತರಗತಿಯವರೆಗೆ ಅದೇ ನಿಯಮಗಳು ಯಥಾವತ್ತಾಗಿ ಇರುತ್ತದೆ. ಆದರೆ ಆರರಿಂದ ಎಂಟನೇ ತರಗತಿಯವರೆಗೆ ಅಂದರೆ ಮಾಧ್ಯಮಿಕ ಶಿಕ್ಷಕರ ನೇಮಕಾತಿಯಲ್ಲಿ ಕೆಲವೊಂದು ಬದಲಾವಣೆಗಳು ಆಗಬಹುದು. ಜಿ ಪಿ ಎಸ್ ಟಿ ಆರ್ ನ ಆರರಿಂದ ಎಂಟನೇ ತರಗತಿಯ ಶಿಕ್ಷಕರ ಆಗುವುದಕ್ಕೆ ಬಿಎ – ಬಿ ಎಡ್, ಟಿಇಟಿ ಅಥವಾ ಪಿಯುಸಿ – ಡಿ ಎಡ್, ಬಿಎ – ಟಿಇಟಿ ಆಗಿರಬೇಕಾಗುತ್ತದೆ.

ಹಾಗೆಯೇ ಎಚ್ ಎಸ್ ಟಿ ಆರ್ ಅಂದರೆ ಪ್ರೌಢಶಾಲಾ ಶಿಕ್ಷಕರಾಗಲು ಇನ್ನುಮುಂದೆ ಒಂಬತ್ತು ಹತ್ತು ಹನ್ನೊಂದು ಮತ್ತು ಹನ್ನೆರಡನೇ ತರಗತಿಗೆ ಕಲಿಸುವ ಶಿಕ್ಷಕರಾಗಲು ಎಂಎ- ಬಿ ಎಡ್ ಆಗಿರಬೇಕು.ಇಲ್ಲಿ ಈ ಹಿಂದಿನಂತೆ ಟಿಇಟಿ ಅವಶ್ಯಕತೆ ಇರುವುದಿಲ್ಲ. ಮತ್ತು ಮಾಧ್ಯಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ವಯೋಮಾನದ ಮಿತಿ ಎಸ್ಸಿ ಎಸ್ಟಿಗಳಿಗೆ ನಲವತ್ತೈದು ವರ್ಷ, ಓಬಿಸಿ ಗಳಿಗೆ ನಲವತ್ಮುರು ವರ್ಷ ಜನರಲ್ ಕೆಟಗರಿ ಯವರಿಗೆ ನಲವತ್ತು ವರ್ಷದ ವರೆಗೆ ಅವಕಾಶ ಇರುತ್ತದೆ.

ಇನ್ನು ಆರರಿಂದ ಎಂಟನೇ ತರಗತಿಯ ವರೆಗಿನ ಶಿಕ್ಷಕರ ನೇಮಕಾತಿ ಯಾವ ರೀತಿ ನಡೆಯುತ್ತದೆ ಎಂಬುದನ್ನು ನೋಡುವುದಾದರೆ ಡಿ ಎಡ್, ಬೀ ಎಡ್, ಬಿಎ ಮತ್ತು ಸಿಇಟಿ ಅಂಕಗಳನ್ನು ತೆಗೆದುಕೊಂಡು ಮೆರಿಟ್ ಲಿಸ್ಟ್ ಅನ್ನು ತಯಾರಿಸಿ ನೇಮಕಾತಿಯನ್ನು ಮಾಡಲಾಗುತ್ತದೆ. ಜಿ ಪಿ ಎಸ್ ಟಿ ಆರ್ ನ ಆರರಿಂದ ಎಂಟನೇ ತರಗತಿಯ ಶಿಕ್ಷಕರ ಹುದ್ದೆಗಳ ಆಯ್ಕೆಗಾಗಿ ಡಿಎಡ್ ಮತ್ತು ಬಿಎಡ್ ನ ಶೇಕಡಾ ಹತ್ತರಷ್ಟು ಅಂಕವನ್ನು, ಶೇಕಡ ಹದಿನೈದರಷ್ಟು ಪದವಿ ಅಂಕವನ್ನು ಶೇಕಡಾ ಐವತ್ತರಷ್ಟು ಸಿಇಟಿ ಅಂಕವನ್ನು ಸರಾಸರಿಯಾಗಿ ತೆಗೆದು ಶೇಕಡ ನೂರರಷ್ಟು ಅಂಕಗಳಿಗೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಹಾಗೆಯೇ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಪದವಿಯಿಂದ ಶೇಕಡ ಇಪ್ಪತ್ತರಷ್ಟ ಅಂಕವನ್ನು ಸ್ನಾತಕೋತ್ತರ ಪದವಿ ಇಂದ ಶೇಕಡ ಹತ್ತರಷ್ಟು ಅಂಕವನ್ನು ಸರಾಸರಿ ತೆಗೆದು ಮೇರಿಟ್ ಲಿಸ್ಟ್ ಅನ್ನು ತಯಾರಿಸಿ ಆಯ್ಕೆ ವಿಧಾನ ನಡೆಯುತ್ತದೆ.

ಇನ್ನೊಂದು ವಿಷಯ ಏನೆಂದರೆ ಆರರಿಂದ ಎಂಟನೇ ತರಗತಿಗೆ ಶಿಕ್ಷಕರಾಗುವುದಕ್ಕೆ ಪದವಿಯಲ್ಲಿ ಐಚ್ಛಿಕ ವಿಷಯಗಳಲ್ಲಿ ಕಡ್ಡಾಯವಾಗಿ ಎಸ್ಸಿ-ಎಸ್ಟಿ ಅವರು ಕನಿಷ್ಠ ಶೇಕಡ ನಲವತ್ತೈದರಷ್ಟು ಅಂಕವನ್ನು ಮತ್ತು ಇತರರು ಶೇಕಡಾ ಐವತ್ತರಷ್ಟು ಅಂಕವನ್ನು ಕಡ್ಡಾಯವಾಗಿ ಪಡೆದಿರಬೇಕು. ಹಾಗೆಯೇ ಪ್ರೌಢಶಾಲಾ ಶಿಕ್ಷಕರ ಆಗುವುದಕ್ಕೆ ಸ್ನಾತಕೋತ್ತರ ಪದವಿಯಲ್ಲಿ ಎಸ್ಸಿ ಎಸ್ಟಿ ಅಭ್ಯರ್ಥಿಗಳು ಶೇಕಡ ನಲವತ್ತರಷ್ಟು ಅಂಕವನ್ನು ಮತ್ತು ಇತರರು ಶೇಕಡ ಐವತ್ತರಷ್ಟು ಅಂಕವನ್ನು ಕಡ್ಡಾಯವಾಗಿ ಪಡೆದಿರಬೇಕು.

ಸಿಟಿ ಪರೀಕ್ಷಾ ವಿಧಾನ ಹೇಗಿರುತ್ತದೆ ಎಂಬುದನ್ನು ನೋಡುವುದಾದರೆ, ಜಿ ಪಿ ಎಸ್ ಟಿ ಆರ್ ನ ಆರರಿಂದ ಎಂಟನೇ ತರಗತಿಯವರೆಗಿನ ಶಿಕ್ಷಕರ ನೇಮಕಾತಿಗೆ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನ ಮತ್ತು ಗಣಿತದ ಶಿಕ್ಷಕರಾಗುವುದಕ್ಕೆ ಸಾಮಾನ್ಯ ಜ್ಞಾನದಲ್ಲಿ ನೂರಾಐವತ್ತು ಅಂಕಗಳು ವಿವರಣಾತ್ಮಕ ಎರಡುನೂರಾಐವತ್ತು ಅಂಕಗಳು ಮತ್ತು ಕನ್ನಡಕ್ಕೆ ನೂರು ಅಂಕಗಳು ಸೇರಿದಂತೆ ಒಟ್ಟು ನಾಲ್ಕನೂರು ಅಂಕಗಳಿಗೆ ಮೂರು ಪತ್ರಿಕೆಗಳ ಸಿಇಟಿ ಪರೀಕ್ಷೆ ನಡೆಯುತ್ತದೆ.

ಹೀಗೆ ನಡೆಯುವ ಪತ್ರಿಕೆ ಎರಡು ಮತ್ತು ಮೂರರಲ್ಲಿ ಕ್ರಮವಾಗಿ ಶೇಕಡ ಐವತ್ತು ಮತ್ತು ಶೇಕಡಾ ಅರವತ್ತರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಇಂಗ್ಲಿಷ್ ಶಿಕ್ಷಕರ ಆಯ್ಕೆಗೆ ಸಾಮಾನ್ಯ ಜ್ಞಾನ ನೂರಾಐವತ್ತು ಡಿಸ್ಕ್ರಿಪ್ಶನ್ ಪೇಪರ್ ನೂರಾಐವತ್ತು ಅಂಕಗಳು ಸೇರಿದಂತೆ ಒಟ್ಟು ಮೂರುನೂರು ಅಂಕಗಳಿಗೆ ಸಿಇಟಿ ಪರೀಕ್ಷೆ ನಡೆಯಲಿದೆ. ಇದರಲ್ಲಿ ಎರಡನೇ ಪೇಪರ್ನಲ್ಲಿ ಕಡ್ಡಾಯವಾಗಿ ಶೇಕಡಾ ಐವತ್ತರಷ್ಟು ಅಂಕವನ್ನು ಪಡೆಯಲೇಬೇಕಾಗಿತ್ತದೆ.

ಇನ್ನು ಇಂಜಿನಿಯರಿಂಗ್ ಅಭ್ಯರ್ಥಿಗಳು ಕೂಡ ಶಿಕ್ಷಕರ ಹುದ್ದೆಗೆ ಸೇರಿಕೊಳ್ಳಬಹುದು ಆದರೆ ಅವರು ಕಡ್ಡಾಯವಾಗಿ ಗಣಿತ ವಿಷಯವನ್ನು ಓದಿರಬೇಕು ಜೊತೆಗೆ ಟಿಇಟಿ ಪರೀಕ್ಷೆಯನ್ನು ಪಾಸ್ ಮಾಡಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ಇದಿಷ್ಟು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಕರಾಗಲು ನಿಗದಿಪಡಿಸಿರುವ ಎನ್ ಇ ಪಿ ಯ ಆಯ್ಕೆ ಪ್ರಕ್ರಿಯೆ.ಇದರ ಕುರಿತು ಅಧಿಕೃತವಾಗಿ ಶೀಘ್ರದಲ್ಲಿಯೇ ಪ್ರಕಟವಾಗುವ ಅಂತಹ ಸಾಧ್ಯತೆ ಇದೆ ಕರ್ನಾಟಕ ಸರ್ಕಾರದಿಂದ ಎನ್ಇಪಿ ನೀತಿಯನ್ನು ದೇಶದಲ್ಲಿಯೇ ಮೊಟ್ಟ ಮೊದಲಿಗೆ ಅಂಗೀಕಾರ ಮಾಡಲಾಗಿದೆ.

ಇದಿಷ್ಟು ಸದ್ಯದಲ್ಲಿ ಜಾರಿಯಾಗುವ ನೂತನ ಶಿಕ್ಷಣ ನೀತಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಮಾಡಲಾಗುವ ಬದಲಾವಣೆಗಲಾಗಿವೆ. ಹೊಸ ಶಿಕ್ಷಣ ನೀತಿಯು ನವಭಾರತದ ಹೊಸ ಆಕಾಂಕ್ಷೆಗಳು ಮತ್ತು ಅವಕಾಶಗಳನ್ನು ಈಡೇರಿಸುವ ಸಾಧನವಾಗಿದೆ ಇಂದು ಪ್ರಧಾನಮಂತ್ರಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ನಾವು ನೀವೆಲ್ಲರೂಕೂಡ ಹೊಸ ಶಿಕ್ಷಣ ನೀತಿಯಲ್ಲಿ ಬರುವ ಬದಲಾವಣೆಗಳನ್ನು ಸ್ವಾಗತಿಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!