ಇತ್ತೀಚಿನ ಆಹಾರ ಶೈಲಿಯಿಂದ ಹಾಗೂ ಕೆಲವರ ಜೀವನ ಶೈಲಿಯಲ್ಲಿ ಆಗಿರುವಂತ ಒಂದಿಷ್ಟು ಬದಲಾವಣೆಯಿಂದ ಈ ಸಾಮಾನ್ಯ ಅಸಮಸ್ಯೆಗಳು ಅಜೀರ್ಣತೆ ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಸಮಸ್ಯೆಗಳಿಗೆ ಪ್ರತಿದಿನ ಔಷದಿ ಮಾತ್ರೆಗಳನ್ನು ತಗೆದುಕೊಳ್ಳುವವರು ಇದ್ದಾರೆ. ಆದ್ರೆ ಪ್ರತಿದಿನ ಮಾತ್ರೆಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅಷ್ಟೊಂದು ಒಳ್ಳೆಯದಲ್ಲ, ಯಾಕೆಂದರೆ ಪ್ರತಿದಿನ ಇಂಗ್ಲಿಷ್ ಮಾತ್ರೆಗಳನ್ನು ಸೇವನೆ ಮಾಡುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಹಾಗಾಗಿ ನೈಸರ್ಗಿಕ ಮನೆಮದ್ದು ಅಂತವುಗಳನ್ನು ಬಳಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅತಿ ಉತ್ತಮ.
ಈ ಮನೆಮದ್ದು ಗ್ಯಾಸ್ಟ್ರಿಕ್ ಹಾಗೂ ಅಜೀರ್ಣತೆ ನಿವಾರಿಸುವ ಗುಣಗಳನ್ನು ಹೊಂದಿದೆ, ಹೌದು ಕರಬೇವು ಸಾಮಾನ್ಯವಾಗಿ ಅಡುಗೆಗಳಲ್ಲಿ ಬಳಸಲಾಗುತ್ತದೆ. ಈ ಕರಬೇವು ಬಳಸಿ ಮನೆಮದ್ದು ತಯಾರಿಸಿಕೊಳ್ಳಬೇಕು, ಅದು ಹೇಗೆ ಅನ್ನೋದನ್ನ ಹೇಳುವುದಾದರೆ ಒಂದು ಬಟ್ಟಲು ಕರಿಬೇವು, ಮೆಣಸಿನಕಾಳು 10 ರಿಂದ 12 , ಜೀರಿಗೆ ಎರಡು ಚಮಚ. ಹಾಗೂ ರುಚಿಗೆ ಎಷ್ಟು ಬೇಕೋ ಅಷ್ಟು ಉಪ್ಪು. ಇಷ್ಟನ್ನು ಬಳಸಿ ಹೇಗೆ ತಯಾರಿಸಬೇಕು ಅಂದ್ರೆ
ಮೊದಲು ಒಂದು ಬಟ್ಟಲು ಶುದ್ಧವಾದ ಕರಿಬೇವನ್ನು ತಗೆದುಕೊಂಡು ಆ ಕರಬೇವನ್ನು ಶುದ್ಧವಾದ ನೀರಿನಲ್ಲಿ ಚನ್ನಾಗಿ ತೊಳೆದು ಬಿಸಿಲಿನಲ್ಲಿ ಚನ್ನಾಗಿ ಒಣಗಿಸಿ, ಒಣಗಿಸಿದ ಕರಬೇವು ಪೂರ್ತಿಪ್ರಮಾಣದಲ್ಲಿ ಒಣಗಿದ್ದರೆ ಉತ್ತಮ. ಒಣಗಿದ ಕರಬೇವು ಜೊತೆಗೆ ಮೇಲೆ ತಿಳಿಸಿದ ಪದಾರ್ಥಗಳು ಮೆಣಸಿನಕಾಳು ಜೀರಿಗೆ ಉಪ್ಪು ಇವುಗಳನ್ನು ಬೆರಸಿ ಚನ್ನಾಗಿ ಪುಡಿಮಾಡಿಕೊಳ್ಳಬೇಕು.
ತಯಾರಿಸಿಕೊಂಡ ಕರಬೇವಿನ ಪುಡಿಯನ್ನು ಪ್ರತಿದಿನ ಊಟದ ಜೊತೆಗೆ ಸೇವಿಸಬಹುದು ಹಾಗೂ ಬಿಸಿ ಅನ್ನದ ಜೊತೆಗೆ ಸ್ವಲ್ಪ ತುಪ್ಪವನ್ನುಹಾಕಿಕೊಂಡು ಅದರೊಂದಿಗೆ ಈ ಪುಡಿಯನ್ನು ಹಾಕಿಕೊಂಡು ಸೇವಿಸಬಹುದು. ಹೀಗೆ ಮಾಡಿದ್ದೇಯಾದಲ್ಲಿ ನಿಮಗೆ ಪ್ರತಿದಿನ ಕಾಡುವಂತ ಗ್ಯಾಸ್ಟ್ರಿಕ್ ಅಜೀರ್ಣತೆ ಸಮಸ್ಯೆ ಕಾಡೋದಿಲ್ಲ. ನಿಮ್ಮ ಆತ್ಮೀಯಯರಿಗೂ ಈ ವಿಚಾರವನ್ನು ಹಂಚಿಕೊಳ್ಳಿ ಇದರ ಉಪಯೋಗವನ್ನು ಪಡೆದುಕೊಳ್ಳಲಿ.