ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಿನ ಸಮಸ್ಯೆಯಿಂದ ನೋವು ಹಾಗೂ ಸಂಕಟಗಳು ಕಾಡುವುದು ಸಾಮಾನ್ಯ. ಮುಟ್ಟಿನ ಸಂದರ್ಭದಲ್ಲಿ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಂಡು, ಅಂತರ್ನಿರ್ಮಿತ ಒಳಪದರಗಳನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿಕೊಂಡಿರುತ್ತದೆ. ಅಂತಹ ಸಂದರ್ಭದಲ್ಲಿ ಸ್ನಾಯುಗಳು ತೀವ್ರವಾದ ಸೆಳೆತ ಮತ್ತು ನೋವಿಗೆ ಒಳಗಾಗುತ್ತದೆ.

ಕೆಲವರು ಋತುಚಕ್ರದ ಸಂದರ್ಭದಲ್ಲಿ ವಾಕರಿಕೆ, ಅತಿಸಾರ, ತಲೆನೋವು ಮತ್ತು ಬೆನ್ನು ನೋವಿನಂತಹ ಸಮಸ್ಯೆಗಳಿಂದ ಜರ್ಜರಿತರಾಗುತ್ತಾರೆ. ಇಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಯಾವ ರೀತಿಯ ಮನೆ ಪರಿಹಾರಗಳನ್ನು ಮಾಡಬಹುದು? ಅವು ಹೇಗೆ ಪರಿಣಾಮಕಾರಿಯಾದ ವಿಶ್ರಾಂತಿಯನ್ನು ನೀಡುತ್ತವೆ? ಎನ್ನುವುದನ್ನು, ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವಿಗೆ ನೈಸರ್ಗಿಕ ಮನೆಮದ್ದುಗಳು ಏನು? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೊದಲು ​ಮುಟ್ಟಿನ ನೋವು ಏಕೆ ಉಂಟಾಗುವುದು? ಎನ್ನುವುದರ ಬಗ್ಗೆ ನೋಡೋಣ. ಮಹಿಳೆಯರಿಗೆ ಋತುಸ್ರಾವ ಎನ್ನುವುದು ಪ್ರಕೃತಿಯ ವರ. ಈ ಪ್ರಕ್ರಿಯೆಯು ಪ್ರಾಯಕ್ಕೆ ಬಂದ ಮಹಿಳೆಯರಲ್ಲಿ ನೈಸರ್ಗಿಕವಾಗಿಯೇ ಉಂಟಾಗುತ್ತದೆ. ಆದರೆ ಆ ಸಮಯದಲ್ಲಿ ಉಂಟಾಗುವ ನೋವು ಹಾಗೂ ಭಾವನತ್ಮಕ ಬದಲಾವಣೆಗಳು ಒಬ್ಬರಿಂದ ಒಬ್ಬರಿಗೆ ವಿಭಿನ್ನ ರೀತಿಯಲ್ಲಿರುತ್ತದೆ.

ಹದಿಹರೆಯದ ಹುಡುಗಿಯರಲ್ಲಿ ಹಾಗೂ ಮಕ್ಕಳನ್ನು ಹೊಂದಿರದ ಮಹಿಳೆಯರಲ್ಲಿ ಋತುಸ್ರಾವದ ಸಮಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಹೆಚ್ಚು. ಅಧಿಕ ರಕ್ತ ಸ್ರಾವ ಉಂಟಾಗುವುದರಿಂದ, ಗರ್ಭದ ಮೇಲೆ ಹಾರ್ಮೋನ್‍ಗಳ ಪ್ರಭಾವ ಉಂಟಾಗುವುದರಿಂದಲೂ ಸಾಕಷ್ಟು ನೋವು ಹಾಗೂ ಆರೋಗ್ಯದಲ್ಲಿ ಬದಲಾವಣೆ ಉಂಟಾಗುತ್ತವೆ. ಕ್ಯಾಲ್ಸಿಯಂ ಕೊರತೆ ಹಾಗೂ ಸಿ ಸೆಕ್ಷನ್ ಪ್ರಸವ ಹೊಂದಿರುವ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಅಧಿಕ ಬೆನ್ನು ನೋವು ಮತ್ತು ಪೆಲ್ವಿಕ್ ಮೂಳೆಯ ನೋವು ಕಾಣಿಸಿಕೊಳ್ಳುತ್ತವೆ.

ಋತುಚಕ್ರದ ಸಮಯದಲ್ಲಿನ ಹೊಟ್ಟೆ ನೋವಿಗೆ ಅದ್ಭುತ ಮನೆ ಮದ್ದುಗಳು ಈ ರೀತಿಯಾಗಿವೆ. ಸುಲಭವಾದ ವಿಧಾನವೆಂದರೆ ಒಂದು ವೀಳ್ಯದೆಲೆ ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೀರಿಗೆಯನ್ನು ಹಾಕಿ ಎರಡನ್ನೂ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಂಡು ಬೆಳಗಿನ ಸಮಯ ಖಾಲಿ ಹೊಟ್ಟೆಯಲ್ಲಿ ಅಗೆದು ತಿಂಡಿ ಅದರ ರಸವನ್ನು ಸೇವಿಸಬೇಕು. ನಂತರ ಸಂಜೆ ಮತ್ತೆ ಇನ್ನೊಂದು ವೀಳ್ಯದ ಎಲೆ ಹಾಗೂ ಒಂದು ಚಮಚ ಜೀರಿಗೆಯನ್ನು ತೆಗೆದುಕೊಂಡು ಅದನ್ನು ಸಹ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಂಡು ಸೇವಿಸಬೇಕು ಹೀಗೆ ಮಾಡುವುದರಿಂದ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವು ಕಡಿಮೆ ಆಗುವುದು.

ಇನ್ನೂ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಮತ್ತು ಮೂಳೆ ನೋವಿಗೆ ಉತ್ತಮ ಮನೆ ಪರಿಹಾರ ಎಂದರೆ ಶಾಖವನ್ನು ಪಡೆದುಕೊಳ್ಳುವುದು. ಬಿಸಿ ನೀರನ್ನು ಹಾಟ್ ವಾಟರ್ ಬ್ಯಾಗ್‍ನ ಮೂಲಕ ಅಥವಾ ಒಂದು ಗಾಜಿನ ಬಾಟಲಿಯಲ್ಲಿ ಬಿಸಿ ನೀರನ್ನು ತುಂಬಿಕೊಂಡು ಶಾಖವನ್ನು ಪಡೆಯಬಹುದು. ಎಲ್ಲೆಲ್ಲಿ ನೋವು ಉಂಟಾಗುತ್ತದೆಯೋ ಆ ಸ್ಥಳದಲ್ಲಿ ಸುಲಭವಾಗಿ ಬಿಸಿ ನೀರಿನ ಶಾಖ ನೀಡಿ. ಆಗ ಸ್ನಾಯುಗಳು ವಿಶ್ರಾಂತಿಯನ್ನು ಪಡೆದುಕೊಂಡು, ನೋವಿನ ಸೆಳೆತವನ್ನು ನಿವಾರಿಸುತ್ತದೆ. ಶಾಖವನ್ನು ಪಡೆದುಕೊಳ್ಳಲು ಅನಾನುಕೂಲತೆ ಇದ್ದವರು ಹೆಚ್ಚು ಬಿಸಿ ನೀರಿನ ಸ್ನಾನ ಮಾಡುವುದರ ಮೂಲಕ ಪರಿಹಾರ ಕಾಣಬಹುದು.

ಎಣ್ಣೆಯ ಮಸಾಜ್ ಋತು ಸ್ರಾವದ ಸಮಯದಲ್ಲಿ ಹೊಟ್ಟೆಯ ಸುತ್ತಲೂ ಲ್ಯಾವೆಂಡರ್ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ನೋವಿನ ಸಮಯದಲ್ಲಿ ಲ್ಯಾವೆಂಡರ್ ಎಣ್ಣೆಯನ್ನು ಅನ್ವಯಿಸಿಕೊಳ್ಳುವುದರಿಂದ ಅಧಿಕ ನೋವಿನ ಸೆಳೆತವನ್ನು ಶಮನಗೊಳಿಸಬಹುದು. ಎಳ್ಳೆಣ್ಣೆಯನ್ನು ಹೊಟ್ಟೆಯ ಭಾಗದಲ್ಲಿ ಹಾಗೂ ಬೆನ್ನಿನ ಭಾಗಕ್ಕೆ ಅನ್ವಯಿಸಿಕೊಂಡು ಮೃದುವಾದ ಮಸಾಜ್ ಮಾಡಬೇಕು. ಎಳ್ಳೆಣ್ಣೆ ಲಿನೋಲಿಕ್ ಆಮ್ಲದಿಂದ ಸಮೃದ್ಧವಾಗಿರುತ್ತದೆ. ಇದು ಉರಿಯೂತಗಳನ್ನು ಹಾಗೂ ಸ್ನಾಯುಗಳ ಸೆಳೆತವನ್ನು ಸುಲಭವಾಗಿ ನಿವಾರಿಸುವುದು. ಜೊತೆಗೆ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುವುದು. ​ಸೋಂಪಿನ ಕಾಳು ಎಲ್ಲರ ಮನೆಯಲ್ಲೂ ಇರುವ ಒಂದು ಸಾಂಬಾರು ಪದಾರ್ಥ. ಇದು ಅತ್ಯುತ್ತಮ ಔಷಧೀಯ ಗುಣಗಳನ್ನು ಪಡೆದುಕೊಂಡಿದೆ.

ಮಹಿಳೆಯರಲ್ಲಿ ಹಾರ್ಮೋನ್‍ಗಳ ಸಮತೋಲನವನ್ನು ಪುನಃ ಸ್ಥಾಪಿಸಲು ಸಹಾಯ ಮಾಡುವ ಮೂಲಕ ಮುಟ್ಟಿಗೆ ಸಂಬಂಧಿಸಿದ ಸೆಳೆತ, ಅಸ್ವಸ್ಥತೆ ಹಾಗೂ ನೋವುಗಳನ್ನು ನಿವಾರಿಸುತ್ತದೆ. ಸೋಂಪಿನ ಕಾಳುಗಳು ನೈಸರ್ಗಿಕವಾಗಿ ಮೂತ್ರವರ್ಧಕ ಮತ್ತು ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ದೇಹದಲ್ಲಿ ನೀರಿನಂಶವನ್ನು ಹಿಡಿದಿಡುವ ಮೂಲಕ ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಸಹ ನಿವಾರಿಸುವುದು. ಸೊಂಪನ್ನು ಊಟದ ನಂತರ ಅಥವಾ ಕಾಲಿ ಹೊಟ್ಟೆಯಲ್ಲಿ ಅಗೆಯಬಹುದು. ತಿನ್ನಲು ಇಷ್ಟ ಪಡದವರು ಸೋಂಪಿನ ಕಷಾಯ ಅಥವಾ ಸೋಂಪಿನ ನೀರನ್ನು ಸಸೇವಿಸಬಹುದು.

ದಾಲ್ಚಿನ್ನಿ ಚಕ್ಕೆಯನ್ನು ಆಯುರ್ವೇದ ಹಾಗೂ ಮನೆ ಮದ್ದಿನಲ್ಲಿ ಹೆಚ್ಚು ಪರಿಣಾಮಕಾರಿಯಾದ ವಸ್ತುವನ್ನಾಗಿ ಬಳಸಲಾಗುವುದು. ಇದರಲ್ಲಿ ಆಂಟಿಸ್ಪಾಸ್ಮೊಡಿಕ್ ಗುಣ ಇರುವುದರಿಂದ ಉರಿಯೂತದಂತಹ ಸಮಸ್ಯೆ ಹಾಗೂ ಸೆಳೆತವನ್ನು ಸುಲಭವಾಗಿ ನಿವಾರಿಸುತ್ತದೆ. ಮಹಿಳೆಯರು ಋತು ಸ್ರಾವದ ಸಮಯದಲ್ಲಿ ಉಂಟಾಗುವ ನೋವು ಹಾಗೂ ಸೆಳೆತವನ್ನು ನಿವಾರಿಸುತ್ತದೆ.

ದಲ್ಚಿನ್ನಿಯಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಕಬ್ಬಿಣದ ಅಂಶವು ಅಧಿಕವಾಗಿರುವುದರಿಂದ ದೇಹಕ್ಕೆ ಪೂರಕ ಪೋಷಣೆ ನೀಡುವುದು. ಜೀರ್ಣ ಕ್ರಿಯೆಯನ್ನು ಸುಧಾರಿಸಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುವುದು. ದಾಲ್ಚಿನ್ನಿ ಕಷಾಯ, ದಾಲ್ಚಿನ್ನಿ ಪುಡಿಯ ಸೇವನೆ ಅಥವಾ ಆಹಾರ ಪದಾರ್ಥಗಳಲ್ಲಿ ದಾಲ್ಚಿನ್ನಿಯನ್ನು ಬಳಸುವುದರ ಮೂಲಕ ಸೇವಿಸಬಹುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!