ನಾವು ಅನುಸರಿಸುವ ಮತ್ತು ಸೇವಿಸುವ ಆಹಾರ ಪದ್ದತಿಗನುಗುಣವಾಗಿ ನಮ್ಮ ದೇಹದ ಆರೋಗ್ಯ ನಿರ್ಧರಿತವಾಗುತ್ತದೆ. ಡಯಾಬಿಟಿಕ್ ಸಮಸ್ಯೆಯನ್ನು ಎದುರಿಸುವವರು ಯಾವ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೊ ನೋಡಿ..

ಮಧು ಮೇಹ ಅಂದರೆ ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಎಂದು ಹೇಳುತ್ತೇವೆ. ಇದು ಯಾವುದರಿಂದ ಬರುತ್ತದೆ ಎಂದರೆ ಸಾಮಾನ್ಯವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ಅಂದರೆ ಕಾಲಿ ಹೊಟ್ಟೆಯಲ್ಲಿ ತೊಂಬತ್ತರಿಂದ ನೂರಾ ಹತ್ತರ ಒಳಗೆ ಇರುವ ಸಕ್ಕರೆ ಪ್ರಮಾಣ ಆಹಾರ ತೆಗೆದುಕೊಂಡ ನಂತರ ಅದಕ್ಕಿಂತ ಜಾಸ್ತಿ ಆದರೆ ಇನ್ನುರಕ್ಕಿಂತ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಇದು ಮಧುಮೇಹದ ಲಕ್ಷಣವಾಗಿರುತ್ತದೆ ಪದೇಪದೆ ಮೂತ್ರ ಆಗುವಂತಹ ಸಮಸ್ಯೆ ಪದೇಪದೆ ಆಹಾರ ತೆಗೆದುಕೊಳ್ಳುವಂತಹದ್ದು ಬಾಯಾರಿಕೆ ಆಗುವಂತಹದ್ದು ಸುಸ್ತಾಗುವಂತಹದ್ದು ಮತ್ತು ತುಂಬಾ ಬೆವರುವುದು ತುಂಬಾ ಸುಸ್ಥಾಗುವಂತದ್ದು ಕೈ ಕಾಲುಗಳ ಸೆಳೆತ ಬರುವಂಥದ್ದು ಇವೆಲ್ಲ ಸಕ್ಕರೆ ಕಾಯಿಲೆಯ ಲಕ್ಷಣಗಳು. ಇದು ನಾವು ತೆಗೆದುಕೊಳ್ಳುವ ಆಹಾರಕ್ಕೆ ಸಂಬಂಧಿಸಿರುತ್ತದೆ.

ಈ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುವುದಕ್ಕೆ ನಾವು ತೆಗೆದಕೊಳ್ಳುವ ಆಹಾರದಲ್ಲಿ ಕಾರ್ಬೋಹೈಡ್ರೆಡ್ ಅಂದರೆ ಸಕ್ಕರೆ ಅಂಶ ಜಾಸ್ತಿ ಇದ್ದಾಗ ಇವೆಲ್ಲ ಕಾಣಿಸಿ ಕೊಳ್ಳುತ್ತದೆ ಯಾವ ಆಹಾರ ನಮ್ಮ ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುತ್ತದೋ ಅಂತಹ ಆಹಾರವನ್ನು ತಿಂದಾಗ ಸಹಜವಾಗಿ ಸಕ್ಕರೆ ಅಂಶ ಜಾಸ್ತಿ ಆಗುತ್ತದೆ ಅದು ನರಮಂಡಲವನ್ನು ಹಾಳು ಮಾಡುತ್ತದೆ ಹೃದಯವನ್ನು ಹಾಳು ಮಾಡುತ್ತದೆ ಮಜಲ್ ಅನ್ನು ಹಾಳು ಮಾಡುತ್ತದೆ ಎಲ್ಲ ರೀತಿಯ ತೊಂದರೆಗಳನ್ನುಂಟು ಮಾಡುತ್ತದೆ ಮುಖ್ಯವಾಗಿ ನಮಗೆ ಬೇಕಾಗಿರುವ ರೋಗನಿರೋಧಕ ಶಕ್ತಿಯನ್ನು ಹಾಳು ಮಾಡುತ್ತದೆ. ಹಾಗಾಗಿ ನಾವು ಇದರಿಂದ ಹೊರಗೆ ಬರಬೇಕೆಂದರೆ ಆಹಾರವನ್ನು ಸರಿಯಾಗಿ ತೆಗೆದುಕೊಳ್ಳಬೇಕು.

ಯಾರು ಮಧುಮೇಹದಿಂದ ಬಳಲುತ್ತಿದ್ದಾರೆ ಅವರು ಆಹಾರವನ್ನೇ ಔಷಧಿಯನ್ನಾಗಿ ಮಾಡಿಕೊಳ್ಳಬೇಕು. ಮಧುಮೇಹದಿಂದ ಬಳಲುವವರಲ್ಲಿ ಆಹಾರವನ್ನು ಔಷಧವನ್ನಾಗಿ ಮಾಡಿಕೊಂಡು ಗುಣಮುಖರಾದವರು ತುಂಬಾ ಜನರಿದ್ದಾರೆ. ಹಾಗೆ ಮಾಡುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ. ನಾವು ತೆಗೆದು ಕೊಳ್ಳುವ ಕೆಲವು ಔಷಧಗಳಲ್ಲಿ ಕೆಮಿಕಲ್ಸ್ ಇರುತ್ತದೆ ಕೆಲವು ಸಲ ಅವು ಅಡ್ಡ ಪರಿಣಾಮ ಬೀರುತ್ತವೆ. ಹಾಗಾಗಿಆಹಾರದಿಂದ ಮಾಡುವಂತಹದ್ದು ಅತಿ ಉತ್ತಮ. ಹಾಗಾದರೆ ಯಾವ ರೀತಿಯ ಆಹಾರ ಕ್ರಮವನ್ನು ಅನುಸರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಮೊದಲನೆಯದಾಗಿ ಹಸಿರು ತರಕಾರಿಗಳನ್ನು ಹೆಚ್ಚು ಬಳಸುವಂತಹದ್ದು. ತರಕಾರಿಯನ್ನು ಸಣ್ಣದಾಗಿ ಕತ್ತರಿಸಿ ಪಲ್ಲೆಯ ರೀತಿ ಮಾಡಿ ಅದನ್ನು ತುಪ್ಪದಲ್ಲಿ ಹುರಿದು ಬೆಳಿಗ್ಗೆ ತಿಂಡಿ ತಿನ್ನುವ ಸಮಯದಲ್ಲಿ ಇದನ್ನು ತಿಂದರೆ ಒಳ್ಳೆಯದು. ಸಾಮಾನ್ಯವಾಗಿ ನಾವು ಬೆಳಿಗ್ಗೆ ತಿಂಡಿಗೆ ದೋಸೆ ಇಡ್ಲಿ ತಿನ್ನುತ್ತೇವೆ ಇವುಗಳ ಪ್ರಮಾಣವನ್ನು ಕಡಿಮೆ ಮಾಡಿ ತುಪ್ಪದಲ್ಲಿ ಹುರಿದ ಹಸಿರು ತರಕಾರಿಯನ್ನು ಹೆಚ್ಚು ತಿನ್ನುವುದರಿಂದ ದೇಹಕ್ಕೆ ಬೇಕಾದಂತಹ ಕೊಬ್ಬಿನಾಂಶ ಪ್ರೊಟೀನ್ ಅಂಶ ಸಿಗುತ್ತದೆ ಮತ್ತು ಕಾರ್ಬೋಹೈಡ್ರೆಡ್ ಅಂಶ ಕಡಿಮೆ ಆಗುತ್ತದೆ ಆಗ ದೇಹದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಆಗುತ್ತದೆ. ಮದ್ಯಾಹ್ನ ಊಟಕ್ಕೆ ಸಾಮಾನ್ಯವಾಗಿ ಅನ್ನ ಮುದ್ದೆ ತಿನ್ನುತ್ತೇವೆ ಇವುಗಳ ಪ್ರಮಾಣವನ್ನು ಕಡಿಮೆ ಮಾಡಿ ಸಿರಿಧಾನ್ಯಗಳು ಸಿಗುತ್ತವೆ ಅವುಗಳನ್ನು ಬಳಸಬೇಕು. ಮತ್ತು ಸಾಯಂಕಾಲದ ಊಟದ ಪ್ರಮಾಣವನ್ನು ಕಡಿಮೆ ಮಾಡಬೇಕು.

ಹಾಗೆ ಉಪವಾಸ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು ಅಂದರೆ ವಾರದಲ್ಲಿ ಒಂದು ದಿನ ಹದಿನಾರು ತಾಸು ಉಪವಾಸ ಮಾಡಬೇಕು. ಹದಿನೈದು ದಿನಕ್ಕೊಮ್ಮೆ ಇಪ್ಪತ್ನಾಲ್ಕು ಗಂಟೆ ಉಪವಾಸ ಮಾಡಬೇಕು. ಹೀಗೆ ಈ ರೀತಿಯ ಆಹಾರ ವಿಧಾನಗಳನ್ನು ಮಧುಮೇಹ ಇರುವವರು ಅನುಸರಿಸುವುದರಿಂದ ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮಧುಮೇಹ ಇರುವವರು ಈ ಕ್ರಮಗಳನ್ನು ಅನುಸರಿಸುವುದರಿಂದ ಉತ್ತಮ ಪರಿಣಾಮವನ್ನು ನೋಡಬಹುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!