pooja materials: ಮನೆಯ ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳು ದೇವರ ದೀಪಗಳನ್ನು ತೊಳೆಯುವುದು ಕಷ್ಟದ ಕೆಲಸ. ಎಣ್ಣೆಯ ಜಿಡ್ಡು ಹೋಗುವುದಿಲ್ಲ ಆದರೆ ದೀಪ ಮತ್ತು ಇತರೆ ಯಾವುದೆ ಪಾತ್ರೆಗಳನ್ನು ಸುಲಭವಾಗಿ ತೊಳೆದು ಪಳಪಳ ಹೊಳೆಯುವಂತೆ ಮಾಡಬಹುದು. ಹಾಗಾದರೆ ಪಾತ್ರೆ ತೊಳೆಯುವ ಸುಲಭ ವಿಧಾನವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ತಾಮ್ರ ಅಥವಾ ಹಿತ್ತಾಳೆಯ ಪಾತ್ರೆಗಳು ಎಷ್ಟೇ ಹಳೆಯದಾಗಿದ್ದರೂ, ಎಣ್ಣೆಯ ಜಿಡ್ಡು ಇದ್ದರೂ, ಕಪ್ಪಾಗಿದ್ದರೂ ತೊಳೆದು ಸ್ವಚ್ಛ ಮಾಡಬಹುದು. ಒಂದು ಪಾತ್ರೆಗೆ ಅರ್ಧ ಗ್ಲಾಸ್ ನೀರು ಹಾಕಿ ಪಾತ್ರೆ ತೊಳೆಯುವ ಪ್ರಿಲ್ ಅಥವಾ ವಿಮ್ ಲಿಕ್ವಿಡ್ ಹಾಕಿ ಬಿಸಿಮಾಡಿ ನಂತರ ಸ್ಕ್ರಬ್ಬರ್ ನಿಂದ ಹಿತ್ತಾಳೆ ಅಥವಾ ತಾಮ್ರದ ಪಾತ್ರೆಯನ್ನು ತೊಳೆಯಬೇಕು. ಹೆಚ್ಚು ಉಜ್ಜಬೇಕಾಗಿಲ್ಲ ಸ್ವಲ್ಪ ಉಜ್ಜಿದರೂ ಎಣ್ಣೆ ಜಿಡ್ಡು, ಕಪ್ಪು ಕಲೆಗಳು ಹೋಗುತ್ತವೆ. ನಂತರ ಹುಣಸೆಹಣ್ಣು ಉಪ್ಪು ಹಾಕಿ ಉಜ್ಜಿ ನಂತರ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಹುಣಸೆಹಣ್ಣು ಉಪ್ಪು ಸೇರಿಸಿ ಉಜ್ಜುವುದರಿಂದ ಕಲರ್ ಚೆನ್ನಾಗಿ ಬರುತ್ತದೆ.
ಈ ಕಲರ್ ಬಹಳ ದಿನಗಳವರೆಗೆ ಹಾಗೆ ಉಳಿಯಬೇಕು ಎಂದರೆ ಹುಣಸೆಹಣ್ಣು, ಉಪ್ಪು ಸೇರಿಸಿ ಉಜ್ಜಿ ನೀರಿನಲ್ಲಿ ತೊಳೆದ ನಂತರ ಬಿಸಿಮಾಡಿದ ನೀರು ಮತ್ತು ಲಿಕ್ವಿಡ್ ಅನ್ನು ಸ್ಕ್ರಬ್ಬರ್ ನಿಂದ ಉಜ್ಜಿದಾಗ ಹುಣಸೆಹಣ್ಣಿನ ಹುಳಿ ಅಂಶ ಹೋಗಿ ಬಣ್ಣ ಉಳಿಯುತ್ತದೆ. ನಂತರ ಶುದ್ಧವಾದ ನೀರಿನಲ್ಲಿ ಚೆನ್ನಾಗಿ ವಾಷ್ ಮಾಡಬೇಕು. ದೇವರ ದೀಪಗಳನ್ನು ಹೀಗೆ ತೊಳೆಯುವುದರಿಂದ ಹದಿನೈದು ದಿನಗಳವರೆಗೆ ಅದರ ಬಣ್ಣ ಹೊಳೆಯುತ್ತಿರುತ್ತದೆ. ದೇವರ ದೀಪಕ್ಕೆ ಬತ್ತಿಯನ್ನು ಹಾಕುವ ಕೊಳವೆಯನ್ನು ತೊಳೆಯುವುದು ಕಷ್ಟ, ಈ ರೀತಿ ನೀರಿಗೆ ಲಿಕ್ವಿಡ್ ಹಾಕಿ ತೊಳೆಯುವುದರಿಂದ ನೀಟಾಗಿ ಕೊಳೆ ಹೋಗುತ್ತದೆ ಮತ್ತು ಹೊಳೆಯುತ್ತದೆ.
ಎಣ್ಣೆ ಕ್ಯಾನ್ ಮುಂತಾದ ಪಾತ್ರೆಗಳನ್ನು ಈ ರೀತಿ ತೊಳೆಯುವುದರಿಂದ ಎಣ್ಣೆ ಜಿಡ್ಡು ಹೋಗಿ ಪಳಪಳ ಹೊಳೆಯುತ್ತದೆ. ದೇವರ ದೀಪ, ಎಣ್ಣೆ ಕ್ಯಾನ್ ಗಳನ್ನು ಪದೆ ಪದೆ ತೊಳೆಯಲು ಕಷ್ಟವಾಗುತ್ತದೆ. ಈ ರೀತಿ 15 ದಿನಗಳಿಗೊಮ್ಮೆ ತೊಳೆದರೆ ಸ್ವಚ್ಛವಾಗಿರುತ್ತದೆ. ಹೀಗೆ ತೊಳೆಯುವುದರಿಂದ ಸುಲಭವಾಗಿ ಎಣ್ಣೆ ಜಿಡ್ಡನ್ನು ಹೋಗಲಾಡಿಸಬಹುದು. ಈ ವಿಧಾನವನ್ನು ಅಳವಡಿಸಿಕೊಳ್ಳಿ, ದೇವರ ದೀಪಗಳನ್ನು ಇನ್ನಿತರ ಯಾವುದೆ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಯನ್ನು ತೊಳೆಯಿರಿ.