ಇಂದು ಮಹಿಳೆಯರು ಪುರುಷರಿಗೆ ಕಡಿಮೆ ಇಲ್ಲದಂತೆ ಎಲ್ಲಾ ರಂಗದಲ್ಲೂ ಸಾಧನೆ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿಯೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಗರ್ಭಿಣಿ ಮಹಿಳೆಯೊಬ್ಬಳು ಪೊಲೀಸ್ ಫಿಸಿಕಲ್ ಟೆಸ್ಟ್ ನಲ್ಲಿ ಭಾಗವಹಿಸಿ ಉತ್ತೀರ್ಣರಾದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಎರಡು ದಿನದ ಹಿಂದೆ ಕಲಬುರಗಿಯ ಡಿಎಆರ್ ಮೈದಾನದಲ್ಲಿ ಪೊಲೀಸ್ ಸಬ್‌ಇನ್ಸ್​​ಪೆಕ್ಟರ್ ನೇಮಕಾತಿಯ ದೈಹಿಕ ಪರೀಕ್ಷೆ (ಫಿಜಿಕಲ್ ಟೆಸ್ಟ್‌) ಆಯೋಜಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಗರ್ಭಿಣಿಯಾದ ಅಶ್ವಿನಿ ಸಂತೋಷ್ ಕೋರೆ ಅವರು 1.36 ನಿಮಿಷದಲ್ಲಿ 400 ಮೀಟರ್ ದೂರ ಓಡಿದ್ದಾರೆ.

ಇಂಜಿನಿಯರಿಂಗ್ ಪದವಿ ಮುಗಿಸಿದ ಇವರು ಪೊಲೀಸ್ ಇಲಾಖೆ ಸೇರುವ ಗುರಿ ಹೊಂದಿದ್ದು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ತಾನು ಗರ್ಭಿಣಿ ಅನ್ನುವುದನ್ನೂ ಮರೆತು 400 ಮೀಟರ್​ ಓಡಿ ಅಚ್ಚರಿ ಮೂಡಿಸಿದ್ದಾರೆ. 24 ವರ್ಷದ ಇವರು ಮೂಲತಃ ಬೀದರ್​ ಜಿಲ್ಲೆಯವರು. ಓದಿನಲ್ಲಿ ಚುರುಕಾಗಿರುವ ಇವರು ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ.

ಇಂಜಿನಿಯರಿಂಗ್ ಪದವಿ ಪೂರೈಸಿರುವ ಇವರಿಗೆ ಯಾವುದಾದರೊಂದು ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟದ ಕೆಲಸವಾಗಿರಲಿಲ್ಲ ಆದರೆ ಪೊಲೀಸ್ ಸಬ್ ಇನ್ಸ್​​ಪೆಕ್ಟರ್​​ ಆಗಬೇಕು ಎಂಬ ಛಲ ಇವರಲ್ಲಿದೆ ಆದ್ದರಿಂದ ಕಠಿಣ ಪರಿಶ್ರಮ ಪಟ್ಟಿದ್ದು, ಈಗಾಗಲೇ ಎರಡು ಬಾರಿ ಫಿಜಿಕಲ್ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ.

ಇವರು ಲಿಖಿತ ಪರೀಕ್ಷೆ (ರಿಟನ್ ಟೆಸ್ಟ್)​​ ಯನ್ನು ಮುಗಿಸಲಿಲ್ಲ. ಎರಡು ಬಾರಿ ಹಿನ್ನಡೆ ಅನುಭವಿಸಿದರೂ ಛಲ ಬಿಡದೆ, ಮೂರನೇ ಪ್ರಯತ್ನಕ್ಕೆ ಮುಂದಾಗಿದ್ದಾರೆ ಆದರೆ ಮೂರನೇ ಪ್ರಯತ್ನದ ವೇಳೆಗೆ ಇವರು ಗರ್ಭಿಣಿಯಾಗಿದ್ದಾರೆ. ತನ್ನ ನಿರ್ಧಾರದಿಂದ ಹಿಂದೆ ಸರಿಯದ ಅಶ್ವಿನಿ ಅವರು ಗರ್ಭಾವಸ್ಥೆಯಲ್ಲಿಯೇ ತನ್ನ ಹಾಗೂ ತನ್ನ ಕಂದನ ಪ್ರಾಣವನ್ನು ಪಣಕ್ಕಿಟ್ಟು ಪೊಲೀಸ್ ಫಿಜಿಕಲ್ ಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದಾರೆ.

ಕಲಬುರ್ಗಿಯ ಡಿಎಆರ್ ಮೈದಾನದಲ್ಲಿ ನಡೆದ ಪೊಲೀಸ್ ಸಬ್‌ಇನ್ಸ್​​ಪೆಕ್ಟರ್ ನೇಮಕಾತಿಯ ಫಿಜಿಕಲ್ ಟೆಸ್ಟ್‌ನಲ್ಲಿ 1.36 ನಿಮಿಷದಲ್ಲಿ 400 ಮೀಟರ್ ದೂರ ಓಡಿದ್ದಾರೆ. ಅರ್ಹತಾ ಮಾನದಂಡದ ಪ್ರಕಾರ 2 ನಿಮಿಷಗಳ ಒಳಗೆ 400 ಮೀಟರ್​ ದೂರ ಕ್ರಮಿಸಬೇಕಿತ್ತು. ಹೀಗೆ ಲಾಂಗ್​ ಜಂಪ್​, ಶಾಟ್​​ಪುಟ್​​ ಮತ್ತು 400 ಮೀಟರ್​ ಓಟವನ್ನು ಅಶ್ವಿನಿ ಅವರು ಕ್ಲೀಯರ್​ ಮಾಡಿದ್ದಾರೆ.​

ಫಿಜಿಕಲ್ ಟೆಸ್ಟ್​​ನಲ್ಲಿ ಪಾಲ್ಗೊಳ್ಳುವುದು ಬೇಡವೆಂದು ವೈದ್ಯರು ಸಲಹೆ ನೀಡಿದ್ದಾರೆ ಆದರೂ ಅಶ್ವಿನಿ ತನ್ನ ಜೀವ ಮಾತ್ರವಲ್ಲದೆ, ಕಂದನ ಜೀವ ಕೂಡಾ ಪಣಕ್ಕೆ ಇಟ್ಟು ಹೋರಾಡಿದ್ದಾರೆ. ಈ ಬಗ್ಗೆ ಈಶಾನ್ಯ ವಲಯ ಐಜಿಪಿ ಮನೀಶ್ ಕರ್ಬಿಕರ್ ಪ್ರತಿಕ್ರಿಯಿಸಿ, ನೇಮಕಾತಿಗೆ ಸಮಿತಿ ರಚಿಸಲಾಗಿದೆ.

ದೈಹಿಕ ಪರೀಕ್ಷೆಯಲ್ಲಿ ಗರ್ಭಿಣಿ ಇರುವುದು ಸಮಿತಿಯ ಗಮನಕ್ಕೆ ಬಂದಿಲ್ಲ. ಗರ್ಭಿಣಿಯರು ಪೊಲೀಸ್ ಫಿಜಿಕಲ್ ಟೆಸ್ಟ್‌‌ನಲ್ಲಿ ಪಾಲ್ಗೊಳ್ಳುವಂತಿಲ್ಲ ಎಂಬ ನಿಯಮವಿದೆ ಇದಕ್ಕೆ ಇಲಾಖೆ ಅನುಮತಿ ಕೂಡಾ ಕೊಡುವುದಿಲ್ಲ ಈ ಕಾರಣಕ್ಕಾಗಿ ಮಹಿಳೆಯರು ತಮ್ಮ ಗರ್ಭಾವಸ್ಥೆಯನ್ನು ಮುಚ್ಚಿಡುತ್ತಾರೆ ಎಂದಿದ್ದಾರೆ. ಅಶ್ವಿನಿ ಅವರು ದೃಢ ನಿರ್ಧಾರ ಮಾಡುವ ಮೂಲಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಆದರೆ ಎಲ್ಲಾ ಗರ್ಭಿಣಿ ಮಹಿಳೆಯರು ಇಂತಹ ನಿರ್ಧಾರ ತೆಗೆದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!