ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಹಿಂದೆ ದೇಶೀಯ ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿತ್ತು ಆ ನಂತರ ಬಳಕೆಗೆ ಬಂದ ಕ್ರಾಸ್ ಬ್ರೀಡ್ ತಳಿಗಳು ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದಾಗಿ ಈ ಉದ್ಯಮ ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಾ ಬಂದಿದೆ ಉತ್ತಮ ಜಾತಿಯ ಕೋಳಿಗಳಿಂದ ಅಧಿಕ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿದೆ ಈ ಕೋಳಿಗಳ ಮಾಂಸ ಮೃದು ಹಾಗೂ ರುಚಿಕರ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..
ಅಧಿಕ ಪ್ರೊಟಿನ್ ಹಾಗೂ ಕಡಿಮೆ ಕೊಬ್ಬು ಹೊಂದಿದ ಶಕ್ತಿವರ್ಧಕ ಆಹಾರ ಇವುಗಳ ಸಾಕಣೆ ಅತ್ಯಂತ ಸುಲಭ ಹಾಗೂ ಸರಳ. ಕೆಲವೇ ದಿನಗಳ ತರಬೇತಿ ಅಥವಾ ಅನುಭವದೊಂದಿಗೆ ಇದನ್ನು ಪ್ರಾರಂಭಿಸಬಹುದು. ಇದರೊಂದಿಗೆ ತಜ್ಞರ ಸಲಹೆ ಮುನ್ನೆಚ್ಚರಿಕೆ ಮಾರುಕಟ್ಟೆಯ ವ್ಯವಹಾರ ಅತೀ ಮುಖ್ಯ ನಾವು ಈ ಲೇಖನದ ಮೂಲಕ ಬಿ ವಿ 380ಕೋಳಿ ಸಾಕಾಣಿಕೆಯ ಬಗ್ಗೆ ತಿಳಿದುಕೊಳ್ಳೋಣ.
ಬೀ ವಿ 380ಕೋಳಿಯ ಸಾಕಾಣಿಕೆ ಯಿಂದ ಲಾಭವೇ ಹೆಚ್ಚು ಹೊರತು ನಷ್ಟ ಅನುಭವಿಸುವ ಸಾಧ್ಯತೆ ಇರುವುದಿಲ್ಲ ಹಾಗೂ ರವಿಕುಮಾರ ಎಂಬ ಕೋಳಿ ಸಾಕಾಣಿಕೆಕಾರರು ಇನ್ನೂರ ನಲವತ್ತು ಕೋಳಿಗಳನ್ನು ಸಾಕುತ್ತಿದ್ದು ಸುಮಾರು ಎರಡು ನೂರಾ ಮೊಟ್ಟೆಗಳು ಸಿಗುತ್ತದೆ ಹಾಗೆ ನೂರು ಕೋಳಿ ಸಾಕಾಣಿಕೆಯನ್ನ ಮಾಡಿದಾಗ ಸುಮಾರು ಎಂಬತ್ತು ಕೋಳಿ ಮೊಟ್ಟೆ ಸಿಗುತ್ತದೆ ಹಾಗೂ ಪ್ರೋಟೀನ್ ಗಳನ್ನು ಸರಿಯಾಗಿ ನೀಡಿದಾಗ ಮಾತ್ರ ಹೆಚ್ಚು ಇಳುವರಿ ಪಡೆಯಬಹುದು
ಹಾಗೆ ಹೊಲದಲ್ಲಿ ಸಿಗುವ ಎಲ್ಲಾ ಎಲೆಗಳನ್ನು ಹಾಕಬೇಕು ಹಾಗೂ ಕೋಳಿಗಳಿಗೆ ಫೀಡ್ ಗಳನ್ನು ಕಡಿಮೆ ಮಾಡಬಾರದು ಏಕೆ ಎಂದರೆ ಮೊಟ್ಟೆಗಳ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ರವಿಕುಮಾರ ಅವರು ಹಳ್ಳಿಗಳಲ್ಲಿ ಆರು ರೂಪಾಯಿಗೆ ಒಂದು ಮೊಟ್ಟೆಯನ್ನು ಮಾರಾಟ ಮಾಡುತ್ತಾರೆ ಹಾಗೂ ಸಿಟಿಯಲ್ಲಿ ಎಂಟು ಹತ್ತು ರೂಪಾಯಿಗೆ ಒಂದು ಮೊಟ್ಟೆಯನ್ನು ಮಾರಾಟ ಮಾಡುತ್ತಾರೆ ಹಾಗೂ ಒಂದು ಮೊಟ್ಟೆಗೆ ಮೂರು. ರೂಪಾಯಿಯಷ್ಟು ಖರ್ಚು ಬರುತ್ತದೆ. ಒಂದು ದಿನಕ್ಕೆ ಏಳು ನೂರು ರೂಪಾಯಿಯಂತೆ ಲಾಭ ಸಿಗುತ್ತದೆ
ಮೊಟ್ಟೆಯ ಗಾತ್ರ ಹೆಚ್ಚು ಬೇಕು ಅಂತ ಇದ್ದರೆ ಫೀಡ್ ಅನ್ನ ಜಾಸ್ತಿ ಕೊಡಬೇಕು ಜಾಸ್ತಿ ಕೆಲಸ ಇರುವುದಿಲ್ಲ ಬೆಳಿಗ್ಗೆ ಕೋಳಿಗಳಿಗೆ ಫೀಡ್ ಹಾಕಿದರೆ ಮತ್ತೆ ಸಾಯಂಕಾಲ ಮತ್ತೆ ಕೋಳಿಗಳಿಗೆ ಫೀಡ್ ಹಾಕಿದರೆ ಆಯಿತು ಕೆಲಸದಲ್ಲಿ ಯಾವುದೇ ರಿಸ್ಕ್ ಇರುವುದಿಲ್ಲ ಮತ್ತು ಈ ಕೋಳಿಗಳಿಗೆ ರೋಗ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಯಾಕೆ ಅಂದರೆ ಹದಿನೈದು ದಿನಕೊಮ್ಮೆ ಶುಂಠಿ ಬೆಳ್ಳುಳ್ಳಿ ಬೆಲ್ಲದ ನೀರನ್ನು ಕೊಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಮೊದಲು ಕೋಳಿಯನ್ನು ಕೇರಳ ದಿಂದ ಐದು ನೂರು ರೂಪಾಯಿಯಂತೆ ಕೊಟ್ಟು ರವಿಕುಮಾರ್ ಅವರು ತಂದಿದ್ದರು ಇದು ಒಂದು ಬಾರಿ ಹಣವನ್ನು ತೊಡಗಿಸಿಕೊಂಡರೆ ಲೈಫ್ ಟೈಮ್ ಇನ್ಕಮ್ ಬರುತ್ತದೆ ಹಾಗೆ ಕೋಳಿಗಳಿಗೆ ಫುಡ್ ಅನ್ನು ಸಗಿಯಾಗಿ ಹಾಕಬೇಕು ಯಾಕೆ ಅಂದ್ರೆ ಕೋಳಿಗಳಿಗೆ ಹಸಿವೆ ಆದಾಗ ಮೊಟ್ಟೆಗಳನ್ನೇ ತಿಂದು ಬಿಡುತ್ತದೆ
ತಿಂಗಳಿಗೆ ಇಪ್ಪೈತೈದಕ್ಕು ಹೆಚ್ಚು ಇಳುವರಿ ಪಡೆಯಬಹುದು ಕೋಳಿಗಳಿಗೆ ಉತ್ತಮ ಸಮತೋಲನ ವಾಗಿರುವ ಆಹಾರವನ್ನು ವೈಜ್ಞಾನಿಕ ರೀತಿಯಲ್ಲಿ ತಿನ್ನಿಸಬೇಕು ಆಗ ಮಾತ್ರ ಕೋಳಿಗಳಿಂದ ಅಧಿಕ ಉತ್ಪಾದನೆ ಮೊಟ್ಟೆ ಮತ್ತು ಮಾಂಸ ಪಡೆಯಲು ಸಾಧ್ಯ ಈ ಕೋಳಿಗಳು ಪ್ರತಿ 25 ತಾಸಿಗೆ ಒಂದು ಮೊಟ್ಟೆಯಿಡುತ್ತವೆ Video Credit For ಕೃಷಿ ಬೆಳಕು
ಫಾರ್ಮ್ ಕೋಳಿಗಳಿಗಿಂತ ಇವು ಭಿನ್ನವಾಗಿದ್ದು, ನೋಡಲು ಊರ ನಾಟಿ ಕೋಳಿಯಂತೆ ಕಾಣುತ್ತವೆ ಕೃಷಿ ಭೂಮಿ ಇದ್ದವರೇ ಕೋಳಿ ಸಾಕಾಣಿಕೆ ಮಾಡಬೇಕು ಅಂತೇನು ಇಲ್ಲ ಕೋಳಿ ಸಾಕಾಣಿಕೆ ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಉದ್ಯಮ ಇದಾಗಿದೆ ಭೂಮಿ ಇಲ್ಲದವರಿಗೂ ಕೋಳಿ ಸಾಕಾಣಿಕೆ ಲಾಭದಾಯಕ ಉದ್ಯಮ ಕಡಿಮೆ ಖರ್ಚಿನಲ್ಲಿ ಮತ್ತು ಸುಲಭವಾಗಿ ಕೈಗೊಳ್ಳಬಹುದಾಗಿದೆ.