ಜಗತ್ತಿನಲ್ಲಿರುವ ಅತಿ ಆರೋಗ್ಯಕರ ಆಹಾರಗಳಲ್ಲಿ ಬಾದಾಮಿ ಪ್ರಮುಖ ಸ್ಥಾನ ಪಡೆಯುತ್ತದೆ ಇವುಗಳಲ್ಲಿ ಅದ್ಭುತ ಆರೋಗ್ಯಕರ ಪ್ರಯೋಜನಗಳಿವೆ ಉತ್ತಮ ಹೃದಯದ ಆರೋಗ್ಯಕ್ಕೂ ಬಾದಾಮಿಗೂ ನಿಕಟ ಸಂಬಂಧ ಇರುವುದನ್ನು ಸಂಶೋಧನೆಗಳು ಈಗಾಗಲೇ ಸಾಬೀತುಗೊಳಿಸಿವೆ ಮಧುಮೇಹಿಗಳೂ ಬಾದಾಮಿಯನ್ನು ಸುರಕ್ಷಿತವಾಗಿ ಸೇವಿಸಬಹುದು ಒಣ ಬಾದಾಮಿಯ ಸೇವನೆಗಿಂತಲೂ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುವುದು ಅತ್ಯುತ್ತಮ.
ನೆನೆಸಿಟ್ಟಸಿ ಬಾದಾಮಿ ಸೇವನೆ ಭಾರತೀಯರಿಗೆ ಹೊಸದೇನೂ ಅಲ್ಲ.ಭಾರತದಲ್ಲಿ ರಾತ್ರಿ ನೆನೆಸಿಟ್ಟ್ ಬಾದಾಮಿಯನ್ನು ತಿನ್ನುವುದು ಒಂದು ಸಂಪ್ರದಾಯದಂತೆ ಬಹುತೇಕ ಎಲ್ಲಾ ಕುಟುಂಬಗಳಲ್ಲಿಯೂ ನಡೆಸಿಕೊಂಡು ಬರಲಾಗುತ್ತಿದೆ ನಮ್ಮ ಅಮ್ಮಂದಿರು ಮತ್ತು ಅಜ್ಜಿಯಂದಿರು ಈ ವಿಧಾನವನ್ನು ಹಿಂದಿನವರಿಂದ ಕಲಿತು ಬಂದು ತಮ್ಮ ಕುಟುಂಬದ ಕಿರಿಯರಿಗೂ ತಿನ್ನಿಸುವ ಮೂಲಕ ಈ ಸಂಪ್ರದಾಯವನ್ನು ಜೀವಂತವಾಗಿ ಇರಿಸಿದ್ದಾರೆ. ನಾವು ಈ ಲೇಖನದ ಮೂಲಕ ಬಾದಾಮಿಯ ಪ್ರಾಮುಖ್ಯತೆಯನ್ನು ತಿಳಿಯೋಣ.
ವಾತ ವಾನ್ನು ನಿಯಂತ್ರಿಸುವ ಶಕ್ತಿ ಬಾದಾಮಿಗೆ ಇದೆ ಹಾಗೆ ವಾತದ ಕಾರಣದಿಂದಾಗಿ ಗಂಟು ನೋವು ಕಂಡಬರುತ್ತದೆಯೋ ಅವರಿಗೆ ಹಾಗೂ ಡ್ರೈ ಸ್ಕಿನ್ ನ ತೊಂದರೆಯನ್ನು ಕಡಿಮೆ ಮಾಡುತ್ತದೆ ಡೈಯೇಶನ್ ಯಾರಿಗೆ ಜಾಸ್ತಿ ಇರುತ್ತದೆಯೋ ಆಗ ಹತ್ತರಿಂದ ಹನ್ನೆರಡು ಬಾದಾಮಿ ತಿನ್ನಬೇಕು ಜ್ವರ ಬಂದಾಗ ಅಂದರೆ ಡೈಯೇಶನ್ ಕಡಿಮೆ ಇದ್ದಾಗ ಬಾದಾಮಿಯನ್ನು ತಿನ್ನಬಾರದು
ಯಾವಾಗಲೂ ಬಾದಾಮಿಯನ್ನು ತಿನ್ನುವಾಗ ರಾತ್ರಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ತಿನ್ನಬೇಕು ಹಾಗೆ ಕಾಲು ಒಡಿಯುದು ಕೂದಲು ಉದುರುವುದು ಈ ತರದ ವಾತದ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಬಾದಾಮಿಯಲ್ಲಿ ಹಲವಾರು ಅಗತ್ಯ ಪೋಷಕಾಂಶಗಳಿವೆ ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಪ್ರೋಟೀನ್ ವಿಟಮಿನ್ ಇ ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳಿವೆ ಇವೆಲ್ಲವೂ ಬಾದಾಮಿ ಒಣಗಿದ್ದಾಗ ಲಭಿಸುವುದಕ್ಕಿಂತ ಹೆಚ್ಚಾಗಿ ನೆನೆಸಿಟ್ಟು ಹಸಿಯಾದಾಗ ಲಭಿಸುತ್ತವೆ.
ಬಾದಾಮಿಗಳಲ್ಲಿ ವಿಟಮಿನ್ ಇ ಸಮೃದ್ದ ಪ್ರಮಾಣದಲ್ಲಿದೆ. ಈ ವಿಟಮಿನ್ ಇ ನಮ್ಮ ಚರ್ಮ ಮತ್ತು ಕೂದಲಿನ ಪೋಷಣೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ. ಬಾದಾಮಿಯಲ್ಲಿರುವ ವಿಟಮಿನ್ ಇ ನಿಮ್ಮ ಚರ್ಮವನ್ನು ನಯವಾಗಿ ಮತ್ತು ಸೊಂಪಾಗಿಸಲು ನೆರವಾಗುತ್ತದೆ. ಚರ್ಮಕ್ಕೆ ಬಾದಾಮಿ ಎಣ್ಣೆಯನ್ನು ಬಳಸುವುದರಿಂದಲೂ ಹೆಚ್ಚಿನ ಪ್ರಯೋಜನ ಪಡೆಯಬಹುದು.
ಕೂದಲಿನ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾ ಬಾದಾಮಿ ನೆರವಾಗುತ್ತದೆ. ವಿಶೇಷವಾಗಿ ಕೂದಲು ಉದುರುವಿಕೆಯ ತೊಂದರೆ ಇರುವ ವ್ಯಕ್ತಿಗಳಿಗೆ ಬಾದಾಮಿ ಎಣ್ಣೆ ಹೆಚ್ಚಿನ ನೆರವುಬಾದಾಮಿಯ ಗುಣಗಳಲ್ಲಿ ಅತ್ಯುತ್ತಮ ಪ್ರಯೋಜನವೆಂದರೆ ಮೆದುಳಿನ ಕ್ಷಮತೆ ಹೆಚ್ಚಿಸುವುದು. ಈ ಬಗ್ಗೆ ನಡೆಸಿದ ಕೆಲವಾರು ಅಧ್ಯಯನಗಳಲ್ಲಿ ಬಾದಾಮಿಯನ್ನು ನಿತ್ಯವೂ ಬೆಳಗ್ಗಿನ ಆಹಾರವಾಗಿ ಸೇವಿಸುವ ವ್ಯಕ್ತಿಗಳ ಮೆದುಳಿನ ಕ್ಷಮತೆ ಉಳಿದವರಿಗಿಂತ ಹೆಚ್ಚಿರುತ್ತದೆ ಎಂದು ಕಂಡುಕೊಳ್ಳಲಾಗಿದೆ.
ಬಾದಾಮಿಯಲ್ಲಿರುವ ವಿಟಮಿನ್ ಇ ಮೆದುಳಿನ ತಾರ್ಕಿಕ, ಸ್ಮರಣಾ ಮತ್ತು ಚಿಂತನಾ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ ಹಾಗೂ ಮರೆಗುಳಿತನವನ್ನು ಇಲ್ಲವಾಗಿಸುತ್ತದೆ. ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಹೆಚ್ಚಿನ ಸ್ಮರಣ ಶಕ್ತಿಯ ಅಗತ್ಯವಿರುವ ಕಾರಣದಿಂದಲೇ ತಾಯಂದಿರುವ ಮಕ್ಕಳಿಗೆ ತಪ್ಪದೇ ಬಾದಾಮಿಯನ್ನು ತಿನ್ನಿಸುತ್ತಾರೆ.ಕೊಲೆಸ್ಟ್ರಾಲ್ ಮಟ್ಟಗಳನ್ನು ಉತ್ತಮಗೊಳಿಸುತ್ತದೆ
ನಮ್ಮ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ಬೇಕೇ ಬೇಕು. ಆದರೆ ಇದರಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಗಳೆಂಬ ಎರಡು ಬಗೆ ಗಳಿರುತ್ತವೆ. ಇವೆರಡೂ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಎಂಬ ಇನ್ನೊಂದು ಬಗೆಯ ಕೊಬ್ಬುಗಳು ಒಂದು ಅನುಪಾತದಲ್ಲಿದ್ದಾಗಲೇ ಉತ್ತಮ ಅರೋಗ್ಯ ಪಡೆಯಲು ಸಾಧ್ಯವಾಗುತ್ತದೆ ಬಾದಾಮಿಯಲ್ಲಿರುವ ಪೋಷಕಾಂಶಗಳು ಈ ಸಮತೋಲನವನ್ನು ಸಾಧಿಸಲು ಹೆಚ್ಚಿನ ನೆರವು ನೀಡುತ್ತದೆ ಅಂದರೆ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಲು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲು ನೆರವಾಗುತ್ತದೆ
ಇದರಿಂದ ಹೃದಯದ ಮೇಲಿನ ಹೊರೆ ತಗ್ಗುತ್ತದೆ ಹಾಗೂ ತನ್ಮೂಲಕ ಹೃದಯದ ಕ್ಷಮತೆ ಮತ್ತು ಆರೋಗ್ಯ ಎರಡೂ ಹೆಚ್ಚುಪ್ರಮುಖವಾಗಿದೆ ವಿಶೇಷವಾಗಿ ಅಧಿಕ ರಕ್ತದೊತ್ತಡದ ತೊಂದರೆ ಇರುವ ವ್ಯಕ್ತಿಗಳು ನಿತ್ಯವೂ ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಬೆಳಿಗ್ಗೆ ಸೇವಿಸುವ ಮೂಲಕ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ ಕೇವಲ ಹೃದಯ ಮತ್ತು ಮೆದುಳಿಗೆ ಮಾತ್ರವಲ್ಲ, ಒಟ್ಟಾರೆ ಆರೋಗ್ಯಕ್ಕೆ ಬಾದಾಮಿ ಉತ್ತಮವಾಗಿದೆ ಬಾದಾಮಿ ಕೆಲವು ಬಗೆಯ ಕ್ಯಾನ್ಸರ್ ಗಳನ್ನೂ ತಡೆಯುತ್ತದೆ ಎಂದು ಕಂಡುಕೊಳ್ಳಲಾಗಿದೆ.