ಕಿರುತೆರೆಯಿಂದ ಹಿರಿತೆರೆವರೆಗೆ ನಟಿಸಿ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ ಅದಿತಿ ಪ್ರಭುದೇವ್ ಅವರು ಬೇಡಿಕೆಯ ನಟಿಯಾಗಿ, ಕನ್ನಡತಿಯಾಗಿ ಜನರ ಮನಸನ್ನು ಗೆದ್ದಿದ್ದಾರೆ. ಅದಿತಿ ಅವರಿಗಿರುವ ಹಳ್ಳಿಯ ಪ್ರೇಮದ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಕಿರುತೆರೆಯಲ್ಲಿ ನಟಿಸಿ ಸಿನಿಪ್ರಿಯರ ಮನೆಗೆದ್ದು ಬಣ್ಣದ ಲೋಕದಲ್ಲಿ ಮಿಂಚಿದ ಅನೇಕ ಕಲಾವಿದರಲ್ಲಿ ಅದಿತಿ ಪ್ರಭುದೇವ್ ಅವರು ಕೂಡ ಒಬ್ಬರಾಗಿದ್ದಾರೆ. ಅದಿತಿ ಪ್ರಭುದೇವ್ ಅವರು ಎಂಬಿಎ ಪದವೀಧರೆಯಾಗಿದ್ದಾರೆ ಅಕಸ್ಮಾತ್ತಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರು.
ಎಂಬಿಎ ಓದುತ್ತಿರುವಾಗ ಅದಿತಿ ಅವರು ಪಾಕೆಟ್ ಮನಿಗಾಗಿ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಿದ್ದರು. ಆ ಸಮಯದಲ್ಲಿ ಅವರಿಗೆ ಅನೇಕರು ನೀವು ಯಾಕೆ ನಟಿಸಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು ಅವರ ಮಾತನ್ನು ಕೇಳಿ ಕೇಳಿ ಅದಿತಿ ಅವರಿಗೂ ತಾನು ನಟಿಸಬೇಕೆಂಬ ಆಸೆ ಮೂಡಿತು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಗುಂಡ್ಯಾನ ಹೆಂಡತಿ ಎಂಬ ಧಾರಾವಾಹಿಯಲ್ಲಿ ನಾಯಕಿ ಕಮಲಿ ಆಗಿ ನಟಿಸಿದ್ದಾರೆ. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನಾಗಕನ್ನಿಕೆ ಎಂಬ ಧಾರಾವಾಹಿಯಲ್ಲಿ ಶಿವಾನಿಯಾಗಿ ನಟಿಸಿದ ಅವರು ಫೇಮಸ್ ನಟಿಯಾಗಿ ಹೊರಹೊಮ್ಮಿದ್ದರು.
ನಂತರ ರಂಗನಾಯಕಿ, ಬ್ರಹ್ಮಚಾರಿ, ಬಜಾರ್, ಧೈರ್ಯಂ, ಒಂಭತ್ತನೇ ದಿಕ್ಕು, ಚಾಂಪಿಯನ್, ಗಜಾನನ ಗ್ಯಾಂಗ್, ಭಗವಾನ್ ಶ್ರೀ ಕೃಷ್ಣ ಪರಮಾತ್ಮ, ಸಿಂಗ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಸಬೇಕೆಂಬ ಸಣ್ಣ ಕನಸನ್ನು ಕಂಡವಳಲ್ಲ ನಾನು, ಅಚಾನಕ್ಕಾಗಿ ಕಿರುತೆರೆಯಲ್ಲಿ ನಟಿಸಿ ಇಂದು ಹಿರಿತೆರೆಯಲ್ಲಿ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ, ಹಿರಿತೆರೆಯಲ್ಲಿ ನನಗೆ ಅವಕಾಶಗಳು ಸಿಗಲು ಕಾರಣ ಕಿರುತೆರೆ ಎಂದು ಅದಿತಿ ಅವರು ಹೇಳಿಕೊಂಡಿದ್ದಾರೆ.
ಸಿಂಪಲ್ ಸುಂದರಿ ಅದಿತಿ ಪ್ರಭುದೇವ್ ಅವರು ಇತ್ತೀಚೆಗೆ ತಮ್ಮ ಹಳ್ಳಿಗೆ ಹೋಗಿ ಹೊಲಗದ್ದೆಗಳಲ್ಲಿ ಸಮಯ ಕಳೆದ ವಿಡಿಯೋ ಸಖತ್ ವೈರಲ್ ಆಗಿದೆ. ದಾವಣಗೆರೆಯಲ್ಲಿರುವ ತಮ್ಮ ಹಳ್ಳಿಯ ಹೊಲಕ್ಕೆ ಹೋಗಿ ರೈತರೊಂದಿಗೆ ತಾವು ಕೂಡ ನೇಗಿಲನ್ನು ಹಿಡಿದರು. ಹೊಲದಲ್ಲಿ ರೈತರು ಟ್ರ್ಯಾಕ್ಟರ್ ಮೂಲಕ ಬೀಜವನ್ನು ಬಿತ್ತನೆ ಮಾಡುತ್ತಿರುವಾಗ ಅದಿತಿ ಅವರು ಕೂಡ ಟ್ರ್ಯಾಕ್ಟರ್ ಓಡಿಸುತ್ತಾರೆ.
ಅವರ ಹೊಲದಲ್ಲಿ ಒಂದು ಕೆರೆಯಿದ್ದು ಅದಿತಿ ಅವರ ತಮ್ಮಂದಿರು ಮೀನಿಗೆ ಊಟ ಹಾಕುತ್ತಿರುವಾಗ ಅದಿತಿ ಅವರು ಮೀನಿಗೆ ಊಟ ಹಾಕುತ್ತಾರೆ. ಅದಿತಿ ಅವರು ನಾನು ಆಯ್ಕೆ ಮಾಡಿಕೊಂಡ ಕ್ಷೇತ್ರ ಬೇರೆಯಾಗಿದ್ದರೂ, ನಾನು ಹಳ್ಳಿಗೆ ಹೋದಾಗ ಅಲ್ಲಿರುವ ಒಂದೆರಡು ದಿನ ಪ್ರಕೃತಿಯ ಸೌಂದರ್ಯವನ್ನು ಸಂತೋಷದಿಂದ ಅನುಭವಿಸುತ್ತೇನೆ.
ಎಲ್ಲರಿಗೂ ತಮ್ಮದೆ ಆದ ತೋಟ ಇರಬೇಕು ಎಂದು ಕನಸಿರುತ್ತದೆ, ಅದೇ ರೀತಿ ನನಗೂ ಕೂಡ ನನ್ನದೆ ಆದ ತೋಟ ಇರಬೇಕೆಂಬ ಕನಸಿದೆ ಮುಂದೊಂದು ದಿನ ಅದು ಈಡೇರಬಹುದು ಎಂದು ತಮ್ಮ ಹಳ್ಳಿಯ ಬಗ್ಗೆ, ಹಳ್ಳಿಯ ಸೊಗಡಿನ ಬಗ್ಗೆ ಸಂತೋಷದಿಂದ ಹೇಳಿಕೊಂಡಿದ್ದಾರೆ.