ನೀರು ನಮ್ಮ ದೇಹಕ್ಕೆ ಅತ್ಯವಶ್ಯಕವಾಗಿ ಬೇಕು. ನಾವು ಕುಡಿಯುವ ನೀರು ಶುದ್ಧವಾಗಿರಬೇಕು ಹಾಗೂ ನೀರಿನಲ್ಲಿರುವ ಅಗತ್ಯ ಪೋಷಕಾಂಶಗಳು ದೇಹಕ್ಕೆ ದೊರೆಯಬೇಕು ಆದರೆ ಇತ್ತೀಚಿನ ದಿನಗಳಲ್ಲಿ ನಾವು ಫಿಲ್ಟರ್ ನೀರನ್ನು ಹೆಚ್ಚು ಕುಡಿಯುತ್ತಿದ್ದೇವೆ.
ಫಿಲ್ಟರ್ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ. ಹಾಗಾದರೆ ಫಿಲ್ಟರ್ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಯಾವ ರೀತಿ ಹಾನಿಕಾರಕ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಹಳ್ಳಿಯೇ ಇರಲಿ ನಗರವಿರಲಿ ಜನರು ಫಿಲ್ಟರ್ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದಾರೆ. ಫಿಲ್ಟರ್ ನೀರು ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣದಿಂದ ಎಲ್ಲರೂ ಫಿಲ್ಟರ್ ನೀರನ್ನು ಕುಡಿಯುತ್ತಾರೆ ಆದರೆ ಫಿಲ್ಟರ್ ನೀರು ಕುಡಿಯುವುದು ಅತಿಯಾದರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಫಿಲ್ಟರ್ ನೀರು ಜೀವಕ್ಕೆ ಹಾನಿಕಾರಕವಾಗುತ್ತದೆ ಎಂದು ಖುದ್ದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಫಿಲ್ಟರ್ ವಾಟರ್ ನಲ್ಲಿ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುವುದರೊಂದಿಗೆ ಅಗತ್ಯವಾಗಿ ಬೇಕಾಗಿರುವ ಉಪ್ಪಿನಂಶ, ಕ್ಯಾಲ್ಸಿಯಂ, ಮೆಗ್ನೀಷಿಯಂನಂತಹ ಅಗತ್ಯ ಪೋಷಕಾಂಶಗಳು ಸಹ ಸಾಯುತ್ತವೆ. ಸರ್ಕಾರ ಶುದ್ಧ ನೀರಿನ ಘಟಕ ಎಂಬ ಹೆಸರಿನಲ್ಲಿ ಆರ್ವೋ ಫಿಲ್ಟರ್ ಪ್ಲಾಂಟ್ ಗಳನ್ನು ಸ್ಥಾಪಿಸಿದೆ.
ಕಡಿಮೆ ಬೆಲೆಗೆ ಫಿಲ್ಟರ್ ನೀರು ಸಿಗುತ್ತದೆ ಆದರೆ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಈ ನೀರನ್ನು ಅತಿಯಾಗಿ ಕುಡಿಯುವುದರಿಂದ ಅಗತ್ಯ ಪೋಷಕಾಂಶಗಳು ಸಿಗದೆ ಅನಾರೋಗ್ಯಕ್ಕೆ ಒಳಗಾಗುವುದರಲ್ಲಿ ಯಾವುದೆ ಸಂದೇಹವಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯರು ವಾಟರ್ ಫಿಲ್ಟರ್ ಉದ್ಯಮ ಮಾಫಿಯವಾಗಿ ಮಾರ್ಪಾಡಾಗಿದೆ ಹೀಗಾಗಿ ಅವರು ಉದ್ಯಮಕ್ಕೆ ಧಕ್ಕೆ ಉಂಟುಮಾಡುವ ಅಧ್ಯಯನವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲೂ ಕೂಡ ಫಿಲ್ಟರ್ ನೀರನ್ನು ಕುಡಿಯುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಮಣ್ಣಿನ ಮಡಿಕೆಗಳಲ್ಲಿ ಅಥವಾ ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುತ್ತಿದ್ದರು. ಮಣ್ಣಿನ ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದರಿಂದ ಆರೋಗ್ಯ ಹೆಚ್ಚುತ್ತದೆ.
ಆಧುನಿಕತೆಯತ್ತ ನಾವು ಸಾಗುತ್ತಾ ಹಳೆಯ ಪದ್ಧತಿಗಳನ್ನು ಬಿಡುತ್ತಿದ್ದೇವೆ ಇದರಿಂದ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಇನ್ನು ಮುಂದಾದರೂ ಫಿಲ್ಟರ್ ನೀರನ್ನು ಕುಡಿಯುವುದು ಬಿಟ್ಟು ಮಣ್ಣಿನ ಮಡಕೆ ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯೋಣ.