ಕಾರನ್ನು ನೋಡಿದರೆ ಬಹಳಷ್ಟು ಜನರಿಗೆ ಖರೀದಿಸಬೇಕು ತಾವು ಕಾರಿನಲ್ಲಿ ಪ್ರಯಾಣಿಸಬೇಕು ಎಂದು ಅನಿಸುತ್ತದೆ. ಟಾಟಾ ಸಂಸ್ಥೆಯು ಟಿಯಾಗೊ ಎಂಬ ಕಾರನ್ನು ಬಿಡುಗಡೆ ಮಾಡಿದೆ. ಈ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೋಡೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ
ಟಾಟಾ ಸಂಸ್ಥೆಯ ಕಾರುಗಳು ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಲು ಸಿದ್ಧವಾಗಿವೆ. ಗ್ಲೋಬಲ್ ಕ್ರಾಸ್ ಟೆಸ್ಟ್ ನಲ್ಲಿ ಐದಕ್ಕೆ ನಾಲ್ಕು ಅಂಕ ಪಡೆದಿರುವ ಟಿಯಾಗೋ ಫೇಸ್ಲಿಫ್ಟ್ ಮಾದರಿಯ ಕಾರನ್ನು ಇತ್ತೀಚಿಗಷ್ಟೆ ಟಾಟಾ ಸಂಸ್ಥೆ ಬಿಡುಗಡೆ ಮಾಡಿದೆ. ಈ ಕಾರು ಕೇವಲ ಪೆಟ್ರೋಲ್ ಇಂಜಿನ್ ನಲ್ಲಿ ಮಾತ್ರ ಲಭ್ಯವಾಗುತ್ತದೆ.
ಟಾಟಾ ಟಿಯಾಗೋ ಎಕ್ಸ್ ಇ, ಎಕ್ಸ್ ಟಿ ಎಂಬ ವೇರಿಯಂಟ್ ಹೊಂದಿದ್ದು ಮ್ಯಾನ್ಯುವೆಲ್ ಹಾಗೂ ಆಟೋಮೆಟಿಕ್ ಟ್ರಾನ್ಸಾಕ್ಷನ್ ನಲ್ಲಿ ಲಭ್ಯವಿದೆ. ನಮ್ಮ ದೇಶದಲ್ಲಿ ಬಹಳಷ್ಟು ಜನರು ತಮಗೆ ಇಷ್ಟವಾದ ಕಾರನ್ನು ತಮಗಿಷ್ಟವಾದ ಕಲರ್ ನಲ್ಲಿ ಖರೀದಿ ಮಾಡುತ್ತಾರೆ ಆ ಕಾರಣಕ್ಕಾಗಿ ಟಾಟಾ ಟಿಯಾಗೊ ಕಾರು ಆರು ಕಲರ್ ನಲ್ಲಿ ಲಭ್ಯವಿದೆ, ಯೆಲ್ಲೋ, ರೆಡ್, ವೈಟ್, ಸಿಲ್ವರ್, ಗ್ರೇ ಹಾಗೂ ಬ್ಲೂ ಕಲರ್ ಗಳಲ್ಲಿ ಲಭ್ಯವಿದೆ.
1.2 ಲೀಟರ್ ನ ತ್ರಿ ಸಿಲೆಂಡರ್ ಪೆಟ್ರೋಲ್ ಎಂಜಿನ್ ಅನ್ನು ಈ ಕಾರು ಹೊಂದಿದೆ. ಎಂಜಿನ್ ಸುಮಾರು 86 ಪಿಎಚ್ಪಿ ಪವರ್ ಹೊಂದಿದೆ. ಈ ಮೊದಲು ಇದೆ ಇಂಜಿನ್ ಹೊಂದಿದ್ದರು ಈ ಇಂಜಿನ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ನಗರ ಪ್ರದೇಶಗಳಲ್ಲಿ 16 ಕಿಮೀ ಹೆದ್ದಾರಿಗಳಲ್ಲಿ 23.84 ಕಿಮೀ ಮೈಲೇಜ್ ಕೊಡುತ್ತದೆ. ಟಿಯಾಗೋ ಫೇಸ್ಲಿಫ್ಟ್ ಕಾರಿನ ಉದ್ದವನ್ನು 3,766ಎಂಎಂ ನಷ್ಟು ಹೆಚ್ಚು ಮಾಡಲಾಗಿದೆ, 1,677 ಎಂಎಂ ಅಗಲ ಹೊಂದಿದೆ
ಅಲ್ಲದೆ ಈ ಕಾರು ಉತ್ತಮ ಟೈಯರ್ ಗಳನ್ನು ಹೊಂದಿದೆ. ಟಿಯಾಗೊ ಕಾರು ಸೇಫ್ಟಿ ವಿಷಯದಲ್ಲಿ ಹೆಚ್ಚು ಉತ್ತಮವಾಗಿದೆ. ಪೂರ್ತಿ ಪ್ರಮಾಣದಲ್ಲಿ ಸ್ಟ್ಯಾಂಡರ್ಡ್ ಸೇಫ್ಟಿಯನ್ನು ಹೊಂದಿರುವ ಈ ಕಾರಿನ ಡಿಸೈನ್ ಬಹಳ ಚೆನ್ನಾಗಿದೆ. ಈ ಕಾರಿನ ಹೆಡ್ ಲ್ಯಾಂಪ್ ಹಿಂದಿಗಿಂತಲೂ ಶಾರ್ಪ್ ಆಗಿದೆ, ಪ್ರೀಮಿಯಂ ಲುಕ್ ಕೊಡುತ್ತದೆ.
ಈ ಕಾರಿನ ಇಂಟೀರಿಯರ್ ನೋಡುವುದಾದರೆ ಉತ್ತಮವಾಗಿದೆ. ಸೀಟ್, ಡಿಜಿಟಲ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ವ್ಯೂ, ಯುಎಸ್ಬಿ ಚಾರ್ಜಿಂಗ್ ವ್ಯವಸ್ಥೆಯನ್ನು, ಆಡಿಯೋಗಾಗಿ ನಾಲ್ಕು ಸ್ಪೀಕರ್ ಗಳು, ಪವರ್ ವಿಂಡೋಸ್, ಎಸಿ, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್ ಡ್ಯೂಯೆಲ್ ಏರ್ಬ್ಯಾಗ್, ವಾಯ್ಸ್ ಕಂಟ್ರೋಲ್, ಅಜಸ್ಟೇಬಲ್ ಹೆಡ್ ಲೈಟ್ ಹೊಂದಿದೆ.
ಟಿಯಾಗೊ ಕಾರಿನ ಬೆಲೆ 4.60 ಲಕ್ಷದಿಂದ 6.60 ಲಕ್ಷದವರೆಗೆ ಇರುತ್ತದೆ. ಕಾರು ಖರೀದಿಸುವವರು ಈ ಕಾರನ್ನು ಖರೀದಿಸಬಹುದು. ಈ ಮಾಹಿತಿಯನ್ನು ತಪ್ಪದೆ ಕಾರು ಪ್ರಿಯರಿಗೆ ತಿಳಿಸಿ.