ಬಹಳಷ್ಟು ರೈತರು ಕೃಷಿಯಲ್ಲಿ ಹಳೆಯ ವ್ಯವಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆ ಬೆಳೆದು ಆದಾಯ ಗಳಿಸಲಾಗದೆ ಆತ್ಮಹ ತ್ಯೆ ಮಾಡಿಕೊಳ್ಳುತ್ತಾರೆ. ಹಾವೇರಿ ಜಿಲ್ಲೆಯ ರೈತರೊಬ್ಬರು ಕೃಷಿಯಲ್ಲಿ ಆಧುನಿಕ ಪದ್ಧತಿಯನ್ನು ಅಳವಡಿಸಿ ಆದಾಯ ಗಳಿಸಿರುವ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಕೃಷಿಯನ್ನು ವಿಜ್ಞಾನ ಎಂದು ಕರೆಯಬಹುದು. ಕೃಷಿಯಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿ ಹೊಸ ರೀತಿಯಲ್ಲಿ ಪ್ರತಿಫಲ ಪಡೆದು ಹೆಚ್ಚಿನ ಲಾಭ ಪಡೆಯಬಹುದು. ಕೃಷಿಯಲ್ಲಿ ಬೆವರು ಸುರಿಸಿ ಕಷ್ಟ ಪಟ್ಟರೆ ಸಾಕಾಗುವುದಿಲ್ಲ, ಬುದ್ದಿಯನ್ನು ಉಪಯೋಗಿಸಬೇಕಾಗುತ್ತದೆ.
ಹೀಗೆ ಮಾಡಿದ್ದಲ್ಲಿ ಇತರರಿಗೆ ಮಾದರಿಯಾಗಿ ನಷ್ಟವಿಲ್ಲದೆ ಕೃಷಿ ಮಾಡಬಹುದು. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಎರವಡಿ ಗ್ರಾಮದ ಪರಮೇಶ್ವರ್ ಎಂಬ ರೈತ ತಮ್ಮ ಬಳಿ ಇರುವ 20 ಎಕರೆ ಜಮೀನಿನಲ್ಲಿ ಹಿಂದಿನ ಕಾಲದ ಪದ್ಧತಿಯನ್ನು ಅಳವಡಿಸಿಕೊಂಡು ಅವರು ಪ್ರತಿ ವರ್ಷ ಹತ್ತಿ ಹಾಗೂ ಗೋವಿನ ಜೋಳ ಬೆಳೆಯನ್ನು ಬೆಳೆಯುತ್ತಿದ್ದರು.
ಬೆಳೆ ಬೆಳೆಯಲು ಉಪಯೋಗಿಸಿದ ಹಣದಲ್ಲಿ ಅರ್ಧ ಹಣ ಕೂಡ ವಾಪಸ್ ಬರುತ್ತಿರಲಿಲ್ಲ ಇದರಿಂದ ಪರಮೇಶ್ವರ್ ಅವರು ಕಂಗಾಲಾಗಿದ್ದರು. ಆಗ ಅವರು ಕೃಷಿ ವಿಜ್ಞಾನಿ ಆಗಿರುವ ಅಶೋಕ ಅವರ ಸಲಹೆ ಪಡೆದು ಪರಮೇಶ್ವರ್ ಅವರು ಉತ್ತಮ ತಳಿಯ ಸಿಹಿ ಮೆಕ್ಕೆಜೋಳದ ಬೀಜಗಳನ್ನು ಎಲ್ಲಿ ಸಿಗುತ್ತದೆ ಎಂಬ ಮಾಹಿತಿಯನ್ನು ಪಡೆದು ಥೈಲೆಂಡ್ ದೇಶದಿಂದ ಸಿಹಿ ಮೆಕ್ಕೆ ಜೋಳದ ಬೀಜಗಳನ್ನು ತರಿಸಿ ತಮ್ಮ ಒಂದಷ್ಟು ಜಾಗದಲ್ಲಿ ಸಿಹಿ ಮೆಕ್ಕೆ ಜೋಳದ ಬೀಜವನ್ನು ಹಾಕಿದರು.
65 ದಿನಗಳಲ್ಲಿ ಫಸಲು ಕೊಡುವ ಸಿಹಿ ಮೆಕ್ಕೆ ಜೋಳ ಇಂದು ಪರಮೇಶ್ವರ್ ಅವರ ಕೈ ಹಿಡಿದಿದೆ. ಒಂದು ಮೆಕ್ಕೆ ಜೋಳಕ್ಕೆ 7 ರೂಪಾಯಿಯಂತೆ ಬೆಂಗಳೂರಿನ ಮಳಿಗೆಯೊಂದು ಪರಮೇಶ್ವರ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಒಂದು ಸಲಹೆ, ಒಂದು ನಿರ್ಧಾರದಿಂದ ಪರಮೇಶ್ವರ್ ಅವರ ಜೀವನದಲ್ಲಿ ಹೊಸ ಭರವಸೆಯನ್ನು ಮೂಡಿದೆ.
ರೈತರು ತಮ್ಮ ಜಮೀನಿನಲ್ಲಿ ಹಳೆಯ ಬೇಸಾಯ ಪದ್ಧತಿಯನ್ನು ಬಿಟ್ಟು ಹೊಸ ರೀತಿಯ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ಬೆಳೆಗಳನ್ನು, ಉತ್ತಮ ತಳಿಯ ಬೀಜಗಳನ್ನು ಉಳುಮೆ ಮಾಡಿದರೆ ಉತ್ತಮ ಇಳುವರಿ ಪಡೆದು ಹೆಚ್ಚಿನ ಆದಾಯ ಗಳಿಸಬಹುದು.
ರೈತರು ತಮ್ಮ ಯೋಚನೆಗಳನ್ನು ಬದಲಾಯಿಸಿಕೊಳ್ಳಬೇಕು. ನಮ್ಮ ದೇಶದ ಬೆನ್ನೆಲುಬು ರೈತರ ಏಳ್ಗೆಯು ನಮ್ಮೆಲ್ಲರ ಏಳ್ಗೆಯಾಗಿದೆ. ಈ ಮಾಹಿತಿಯು ಉಪಯುಕ್ತವಾಗಿದ್ದು ಎಲ್ಲಾ ರೈತ ಬಾಂಧವರಿಗೂ ತಪ್ಪದೇ ತಿಳಿಸಿ.