ಇಂದಿನ ಜೀವನ ಶೈಲಿ, ಆಹಾರ ಪದ್ಧತಿಯಿಂದಾಗಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ಅವುಗಳಲ್ಲಿ ಪಿತ್ತ ಸಮಸ್ಯೆಯು ಒಂದು ಪ್ರಮುಖ ಸಮಸ್ಯೆಯಾಗಿದೆ. ಎಲ್ಲರ ಮನೆಯ ಅಡುಗೆ ಮನೆಯಲ್ಲಿ ಸಾಂಬಾರು ಪದಾರ್ಥಗಳಲ್ಲಿ ಕೊತ್ತಂಬರಿಬೀಜ ಇದ್ದೆ ಇರುತ್ತದೆ. ಕೊತ್ತಂಬರಿ ಬೀಜದಿಂದ ಪಿತ್ತವನ್ನು ನಿವಾರಿಸಿಕೊಳ್ಳಬಹುದು.
ಹಾಗಾದರೆ ಪಿತ್ತ ನಿವಾರಣೆ ಮಾಡಿಕೊಳ್ಳಲು ಇರುವ ಮನೆಮದ್ದುಗಳು ಯಾವುವು ಹಾಗೂ ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.ಬಹಳಷ್ಟು ಜನರಿಗೆ ಪಿತ್ತವಿಕಾರ ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ಹುಳಿ ತೇಗು ಬರುವುದು, ಹೊಟ್ಟೆ ಉರಿ, ತಲೆಸುತ್ತು ಬರುವುದು ಮುಂತಾದ ಪಿತ್ತ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ಪಿತ್ತ ಉಂಟಾಗಲು ಕಾರಣವೆಂದರೆ ಅತಿಯಾದ ಚಹಾ ಕಾಫಿ ಕುಡಿಯುವುದು, ರಕ್ತದ ಒತ್ತಡ, ನಿದ್ರೆಗೆಡುವುದು, ಅನಿಯಮಿತ ಆಹಾರ ಸೇವನೆ, ಮದ್ಯಸೇವನೆ, ಧೂಮಪಾನ, ಉಪವಾಸ ಮಾಡುವುದು, ನೀರನ್ನು ಕಡಿಮೆ ಕುಡಿಯುವುದರಿಂದ ಪಿತ್ತ ಉಂಟಾಗುತ್ತದೆ. ಪಿತ್ತ ನಿವಾರಣೆಗೆ ಅನೇಕ ಮನೆಮದ್ದುಗಳಿವೆ. ಕೃಷ್ಣ ತುಳಸಿಯನ್ನು ಸೇವಿಸುವುದರಿಂದ ಪಿತ್ತ ನಿವಾರಣೆಯಾಗುತ್ತದೆ. ಜೀರಿಗೆ ಕಷಾಯಕ್ಕೆ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಕುಡಿಯುವುದರಿಂದ ಪಿತ್ತ ನಿವಾರಣೆ ಆಗುತ್ತದೆ.
ಪಿತ್ತವಿಕಾರ ಸಣ್ಣ ಪ್ರಮಾಣದಲ್ಲಿದ್ದರೆ ಮನೆ ಔಷಧಿ ಉಪಯುಕ್ತವಾಗಿರುತ್ತದೆ, ಬೇಗನೆ ನಿವಾರಣೆಯಾಗುತ್ತದೆ. ಕೊತ್ತಂಬರಿ ಬೀಜವನ್ನು ಸಣ್ಣದಾಗಿ ಪುಡಿಮಾಡಿಕೊಂಡು ಒಂದರಿಂದ ಎರಡು ಚಮಚ ಕೊತ್ತಂಬರಿ ಪುಡಿಯನ್ನು ಒಂದು ಪಾತ್ರೆಯಲ್ಲಿ ಎರಡು ಲೋಟ ನೀರಿಗೆ ಹಾಕಿ ಒಂದು ಲೋಟ ಆಗುವವರೆಗೆ ಕುದಿಸಬೇಕು.
ನಂತರ ಕುಡಿಯಬೇಕು ಇದರಿಂದ ಪಿತ್ತ ನಿವಾರಣೆ ಆಗುತ್ತದೆ. ಇನ್ನೊಂದು ವಿಧಾನವೆಂದರೆ ರಾತ್ರಿ ಮಲಗುವಾಗ ಬಿಸಿನೀರಿಗೆ 2 ಚಮಚ ಕೊತ್ತಂಬರಿ ಪುಡಿಯನ್ನು ಹಾಕಿ ಮುಚ್ಚಿಡಬೇಕು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೋಸಿಕೊಂಡು ಕುಡಿಯಬೇಕು. ಈ ರೀತಿ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪಿತ್ತವಿಕಾರ ಇರುವವರಿಗೂ ಸಹ ನಿವಾರಣೆಯಾಗುತ್ತದೆ. ಈ ಎರಡರಲ್ಲಿ ಯಾವುದಾದರೂ ಒಂದು ವಿಧಾನವನ್ನು ಅನುಸರಿಸಬಹುದು, ಹೀಗೆ ಹತ್ತರಿಂದ ಹದಿನೈದು ದಿವಸಗಳವರೆಗೆ ಮಾಡುತ್ತಾ ಬಂದರೆ ಪಿತ್ತವಿಕಾರ ನಿವಾರಣೆಯಾಗುತ್ತದೆ.
ಮನೆ ಮದ್ದಿನೊಂದಿಗೆ ಆಹಾರ ಪದಾರ್ಥಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಚಹಾ ಕಾಫಿಯನ್ನು ಬಹಳ ಕಡಿಮೆ ಕುಡಿಯಬೇಕು ಕುಡಿಯದಿದ್ದರೆ ಇನ್ನೂ ಒಳ್ಳೆಯದು. ದಾಳಿಂಬೆ, ಅನಾನಸ್, ನೇರಳೆ, ಬೇಲದ ಹಣ್ಣು ಇತರೆ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು, ಹಳ್ಳಿಗಳಲ್ಲಿ ಎಳೆಯ ಹಲಸಿನಕಾಯಿ ಸಿಗುತ್ತದೆ ಅದರಿಂದ ಪಲ್ಯ ಅಥವಾ ಸಾಂಬಾರು ತಯಾರಿಸಿ ಸೇವಿಸಬಹುದು, ಆಹಾರದಲ್ಲಿ ಸೊಪ್ಪುಗಳನ್ನು ಹೆಚ್ಚು ಸೇವಿಸಬೇಕು, ನೀರನ್ನು ಹೆಚ್ಚು ಕುಡಿಯಬೇಕು.
ಪ್ರತಿದಿನ ಊಟದ ನಂತರ ಸಣ್ಣ ಚೂರು ಶುಂಠಿಯನ್ನು ಚಪ್ಪರಿಸಿ ತಿನ್ನುವುದರಿಂದ ಪಿತ್ತ ನಿವಾರಣೆಯಾಗುತ್ತದೆ. ಈ ಮಾಹಿತಿಯು ಉಪಯುಕ್ತವಾಗಿದ್ದು ಎಲ್ಲರಿಗೂ ತಿಳಿಸಿ, ಪಿತ್ತ ನಿವಾರಣೆ ಮಾಡಿಕೊಂಡು ಆರೋಗ್ಯವಾಗಿರಿ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.