ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳ ನೀವು ಅದರ ಬಗ್ಗೆ ಕೇಳಿದ್ದೀರಿ ನೋಡಿದ್ದೀರಿ ಅಲ್ಲಿಗೆ ಹೋಗಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿರುತ್ತಿರಿ. ಹಾಗಾದರೆ ಮಂಜುನಾಥ ದೇವರು ಧರ್ಮಸ್ಥಳಕ್ಕೆ ಬಂದು ನೆಲೆಸಿದ್ದು ಹೇಗೆ ಯಾಕೆ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಅವರನ್ನು ದೇವರು ಎಂದು ಕರೆಯುತ್ತಾರೆ ಎಂಬ ಈ ಎಲ್ಲ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಧರ್ಮಸ್ಥಳ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಧಾರ್ಮಿಕ ತಾಣ ಮಂಜುನಾಥ ಸ್ವಾಮಿ ನೆಲೆಸಿರುವ ಈ ಊರು ಬಹಳ ಪ್ರಸಿದ್ಧ ಊರು. ಶ್ರವಣ ಬೆಳಗೊಳದ ಬಾಹುಬಲಿ ಮೂರ್ತಿ ಯನ್ನ ಹೊಂದಿರುವ ಒಂದು ಅದ್ಭುತ ತಾಣವಾಗಿದೆ. ಈ ಧರ್ಮಸ್ಥಳ ಕ್ಷೇತ್ರಕ್ಕೆ ಸುಮಾರು ಏಳು ನೂರು ವರ್ಷಗಳ ಇತಿಹಾಸವಿದೆ ನೇತ್ರಾವತಿ ನದಿಯ ದಡದಲ್ಲಿರುವ ಈ ದೇವಸ್ಥಾನದ ಆರಾಧ್ಯ ದೇವರು ಶ್ರೀ ಮಂಜುನಾಥ ಸ್ವಾಮಿ. ಮಂಜುನಾಥ ಸ್ವಾಮಿ ಇಲ್ಲಿಗೆ ಹೇಗೆ ಬಂದರು ಎಂಬುದಕ್ಕೆ ಒಂದು ಕುತೂಹಲಕಾರಿ ಕಥೆ ಇದೆ.
ಧರ್ಮಸ್ಥಳದ ಹಿಂದಿನ ಹೆಸರು ಕುಡುಮಾ ಎಂದು ಇಂದಿನ ನೆಲಾಡಿ ಬೀದಿಯಲ್ಲಿ ಭೀಮಣ್ಣ ಪರಗಡೆ ಮತ್ತು ಅಮ್ಮು ಬಲ್ಲಾಳಿ ಎಂಬ ಗಂಡ ಹೆಂಡತಿ ವಾಸವಾಗಿದ್ದರು ಈ ಇಬ್ಬರು ಗಂಡ ಹೆಂಡತಿ ಅಪಾರವಾದ ದೈವ ಭಕ್ತರಾಗಿದ್ದರು ಒಂದು ದಿನ ಇವರ ಮನೆಗೆ ನಾಲ್ಕು ಜನ ಅತಿಥಿಗಳು ಬರುತ್ತಾರೆ ಈ ಗಂಡ ಹೆಂಡತಿ ಇಬ್ಬರೂ ಮನೆಗೆ ಬಂದವರನ್ನು ತುಂಬಾ ಚೆನ್ನಾಗಿ ಅತಿಥಿ ಸತ್ಕಾರ ಮಾಡಿ ಚೆನ್ನಾಗಿ ನೋಡಿಕೊಳ್ಳುತ್ತಾರೆ ಅವರು ಬಂದ ದಿನವೇ ಅದ್ಭುತವಾದ ಪವಾಡ ನಡೆದು ಹೋಗುತ್ತದೆ.
ಆ ನಾಲ್ವರು ಅತಿಥಿಗಳು ಧರ್ಮ ದೇವತೆ ಗಳ ರೂಪದಲ್ಲಿ ಭಿಮಣ್ಣ ಪರಗಡೆ ಅವರ ಕನಸಿನಲ್ಲಿ ಕಾಣಿಸಿಕೊಂಡರು ಮತ್ತು ತಾವೆಲ್ಲರೂ ಈ ಮನೆಯಲ್ಲಿ ನೆಲೆಸುವ ಆಸೆ ವ್ಯಕ್ತ ಪಡಿಸಿದರು ಇನ್ನು ಅವರ ಆಸೆಯನ್ನು ನೆರವೇರಿಸಲು ಭೀಮಣ್ಣ ದಂಪತಿಗಳು ಆ ಮನೆಯನ್ನು ಕಾಲಿ ಮಾಡಿ ಅದನ್ನು ಅವರಿಗೆ ಬಿಟ್ಟು ಕೊಟ್ಟರು. ಈ ರೀತ ಕಾಳುರಾಹು ಪುರುಷ ದೈವ ಕಲರ್ಕೈ ಸ್ತ್ರೀ ದೈವ ಕುಮಾರಸ್ವಾಮಿ ಪುರುಷ ದೈವ ಕನ್ಯಾಕುಮಾರಿ ಸ್ತ್ರೀ ದೈವ ಅಂದಿನಿಂದ ಈ ಮನೆಯಲ್ಲಿ ನೆಲೆನಿಂತರು ಮತ್ತು ಭೀಮಣ್ಣ ಅಲ್ಲಿ ಗುಡಿಯನ್ನು ಕಟ್ಟಿಸಿ ನಿತ್ಯ ಪೂಜೆಗೆ ಅರ್ಚಕರನ್ನು ನೇಮಿಸಿದರು.
ಈ ಘಟನೆ ನಡೆದ ನಂತರ ಒಬ್ಬ ಶಿವ ಯೋಗಿಗಳು ಅಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಸೂಚಿಸಿದರು ಮತ್ತು ಧರ್ಮ ದೇವತೆಗಳು ಇದನ್ನೇ ಹೇಳಿದರು. ಕದ್ರಿಯಲ್ಲಿರುವ ಮಂಜುನಾಥ ಲಿಂಗವನ್ನು ತರಲು ಭೀಮಣ್ಣ ತನ್ನ ಪ್ರತಿನಿಧಿಯಾಗಿ ಅಣ್ಣಪ್ಪ ಸ್ವಾಮಿಯನ್ನು ಕಾಳುಹಿಸುತ್ತಾರೆ. ಅಣ್ಣಪ್ಪ ಸ್ವಾಮಿ ಮಂಜುನಾಥ ನನ್ನು ಕುಡುಮಾಕ್ಕೆ ತರುವಷ್ಟರಲ್ಲಿ ಪವಾಡವೇ ನಡೆದಿತ್ತು ಅಲ್ಲಿ ನೆಲೆಸಿದ್ದ ಧರ್ಮ ದೇವತೆಗಳು ಮಂಜುನಾಥ ಲಿಂಗ ಬರುವಷ್ಟರಲ್ಲಿ ಅವನಿಗಾಗಿ ದೇವಾಲಯವನ್ನು ಕಟ್ಟಿ ಮುಗಿಸಿದ್ದರು. ಇಂತಹ ಧರ್ಮ ಕ್ಷೇತ್ರ ಇಗ ವಿದ್ಯೆ ಅನ್ನ ಆರೋಗ್ಯ ಮತ್ತು ಅಭಯ ದಾನದ ಮೂಲಕ ಚತುರ್ಧಾನ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ ಇವೆಲ್ಲವೂ ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಲೇ ಇದೆ.
ಈ ಭಾಗದಲ್ಲಿ ಜನರು ವಿರೇಂದ್ರ ಹೆಗ್ಗಡೆ ಅವರಿಗೆ ತಂದೆಯಷ್ಟೆ ಗೌರವವನ್ನು ಕೊಡುತ್ತಾರೆ.ವಿರೇಂದ್ರ ಹೆಗ್ಗಡೆ ಅವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಇಲ್ಲಿ ಸೇವೆಯನ್ನು ಸಲ್ಲಿಸಲು ಪ್ರಾರಂಭಿಸಿದ್ದರು ಇವರಿಗಿಂತ ಮೊದಲು ಇವರ ಮನೆತನದ ಹಲವಾರು ಧರ್ಮಾಧಿಕಾರಿಗಳು ಸೇವೆಯನ್ನು ಸಲ್ಲಿಸಿದ್ದಾರೆ.
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯವು ದಾನ ಧರ್ಮಕ್ಕೇ ಪ್ರಸಿದ್ಧವಾಗಿದೆ. ಭಕ್ತರಿಗೆ ನೈಜ ಧಾರ್ಮಿಕ ಸಾಂಸ್ಕೃತಿಕ ಕೇಂದ್ರವಾಗಿದ್ದು ಯಕ್ಷಗಾನ ಚರಿತ್ರೆಯನ್ನು ಅಲಂಕರಿಸಿದೆ. ಭಕ್ತರು ನೇತ್ರಾವತಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಬಹಿರಂಗ ಶುದ್ಧಿ ಯೊಂದಿಗೆ ದೇವಸ್ಥಾನ ಪ್ರವೇಶ ಮಾಡಿ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ಅಂತರಂಗ ಶುದ್ಧಿ ಯೊಂದಿಗೆ ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ಹೊಂದುತ್ತಾರೆ.ಜೊತೆಗೆ ತಮ್ಮ ದುಃಖ ನೋವನ್ನು ಮರೆಯುತ್ತಾರೆ.
ಇನ್ನು ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳು ಯಾರು ಹಸಿವಿನಿಂದ ಹಿಂದಿರುಗ ಬಾರದೆಂದು ಪ್ರತಿನಿತ್ಯ ಇಲ್ಲಿ ಅನ್ನ ದಾಸೋಹವನ್ನು ನಡೆಸಲಾಗುತ್ತದೆ. ಅನ್ನಂ ಪರ ಬ್ರಂಹಮ್ ಅನ್ನಕ್ಕಿಂತ ಶ್ರೇಷ್ಟ ವಾದದ್ದು ಬೇರೊಂದಿಲ್ಲ ಎಂಬಂತೆ ಸುಸೂತ್ರವಾಗಿ ಸಹಸ್ರಾರು ಮಂದಿಗೆ ಏಕ ಕಾಲದಲ್ಲಿ ಅನ್ನದಾಸೊಹವನ್ನು ಇಲ್ಲಿ ಕಲ್ಪಿಸಲಾಗುತ್ತದೆ. ನಮ್ಮದೇಶದಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಸ್ವಾಮಿಯ ದರ್ಶನ ಮಾಡಲು ಭಕ್ತರು ಪ್ರತಿನಿತ್ಯ ಇಲ್ಲಿಗೆ ಧಾವಿಸುತ್ತಾರೆ.
ಸಾವಿರದ ಒಂಬೈನೂರಾ ಎಪ್ಪತ್ತೆರಡರಿಂದ ಇಂದಿನವರೆಗೆ ಸತತವಾಗಿ ಸಮಾಜದಲ್ಲಿ ವರದಕ್ಷಿಣೆ ಪಿಡುಗು ಮತ್ತು ಆಡಂಬರದ ಮದುವೆ ಸುಧಾರಣೆಗಾಗಿ ಸಾಮೂಹಿಕ ವಿವಾಹಗಳ್ಳನ್ನು ಇಲ್ಲಿ ಯಾವಾಗಲೂ ನಡೆಸಲಾಗುತ್ತದೆ. ಧರ್ಮಸ್ಥಳ ದೇವದ ವತಿಯಿಂದ ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ಪ್ರಾರ್ಥಮಿಕ ಶಾಲೆಯಿಂದ ಪ್ರಾರಂಭಿಸಿ ಉನ್ನತ ಶಿಕ್ಷಣವನ್ನು ನೀಡುವ ಸುಮಾರು ಐವತ್ತಕ್ಕಿಂತ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನೂ ಧರ್ಮಸ್ಥಳ ಸಂಸ್ಥೆ ನಡೆಸುತ್ತಿದೆ.
ಸ್ನೇಹಿತರೆ ಹೀಗೆ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಧಿಯಲ್ಲಿ ಹಲವಾರು ಧಾರ್ಮಿಕ ಚಟುವಟಿಕೆಗಳು ನಡೆಯುತ್ತಲೇ ಇವೆ ಜೀವನದಲ್ಲಿ ಒಮ್ಮೆಯಾದರೂ ನೀವು ಧರ್ಮಸ್ಥಳಕ್ಕೇ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದು ನೀವು ಪುನೀತರಾಗಲೇಬೇಕು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466