ಪೋಸ್ಟಲ್ ಇನ್ಸೂರೆನ್ಸ್ ಪಾಲಿಸಿ ಮಾಡಿಸಿಕೊಂಡರೆ ನಮ್ಮ ಜೀವನಕ್ಕೆ ಹಣದ ಕೊರತೆಯಾಗುವುದಿಲ್ಲ. ಹಾಗಾದರೆ ಪಾಲಿಸಿಯ ಹೆಸರು, ಹೇಗೆ ಪರ್ಚೇಸ್ ಮಾಡಬೇಕು ಹಾಗೂ ಅದರ ರೂಲ್ಸ್ ಮತ್ತು ಕಂಡೀಷನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಪೋಸ್ಟಲ್ ಇನ್ಸೂರೆನ್ಸ್ ಪ್ಲಾನ್ ಗೆ ಸಬಂಧಿಸಿದ ಪಾಲಿಸಿ ಜಾಯಿಂಟ್ ಲೈಪ್ ಇನ್ಸೂರೆನ್ಸ್ ಅಥವಾ ಯುಗಲ್ ಸುರಕ್ಷಾ ಯೋಜನೆ ಅಥವಾ ಪಾಲಸಿ. ಈ ಪಾಲಸಿಯನ್ನು ಗಂಡ ಅಥವಾ ಹೆಂಡತಿ ಪರ್ಚೇಸ್ ಮಾಡಿದರೆ ಇಬ್ಬರಿಗೂ ಇನ್ಸೂರೆನ್ಸ್ ಅಪ್ಲೈ ಆಗುತ್ತದೆ. ಈ ಪಾಲಸಿ ಪರ್ಚೇಸ್ ಮಾಡಲು ಕೆಲವು ಅರ್ಹತೆಗಳಿರಬೇಕು. ಕನಿಷ್ಟ ಇಬ್ಬರಿಗೂ 21 ವರ್ಷ ಕಂಪ್ಲೀಟ್ ಆಗಿರಬೇಕು. ಗರಿಷ್ಟ 45 ವರ್ಷದ ಒಳಗಿರಬೇಕು. ಮಿನಿಮಮ್ ಸಮ್ಅಸ್ಯೂರ್ಡ್ 20,000 ರೂಪಾಯಿ ಮ್ಯಾಕ್ಸಿಮಮ್ ಸಮ್ಅಸ್ಯೂರ್ಡ್ 50 ಲಕ್ಷ ರೂಪಾಯಿ, ನೀವು 50 ಲಕ್ಷ ರೂಪಾಯಿ ಒಳಗಿನ ಸಮ್ ಅಸ್ಯೂರ್ಡ್ ಸೆಲೆಕ್ಟ್ ಮಾಡಿಕೊಳ್ಳಬೇಕು.

ಮಿನಿಮಮ್ ಪಾಲಿಸಿ ಟರ್ಮ್ 5 ವರ್ಷ, ಮ್ಯಾಕ್ಸಿಮಮ್ ಪಾಲಿಸಿ ಟರ್ಮ್ 20 ವರ್ಷಗಳು. ಈ ಪಾಲಿಸಿ ಪರ್ಚೇಸ್ ಮಾಡಿದರೆ ಮಂಥ್ಲಿ ಪ್ರೀಮಿಯಂ ಪೇ ಮಾಡಬೇಕಾಗುತ್ತದೆ. ಪಾಲಿಸಿ ಪರ್ಚೇಸ್ ಮಾಡಿ ಮೂರು ವರ್ಷಗಳಾಗಿ ಪ್ರೀಮಿಯಂ ತುಂಬುವುದು ಪೆಂಡಿಂಗ್ ಇದ್ದರೆ 6 ತಿಂಗಳು ಅವಕಾಶ ಕೊಡುತ್ತಾರೆ, 6 ತಿಂಗಳುಗಳಲ್ಲಿ ಪ್ರೀಮಿಯಂ ಕಟ್ಟಿಲ್ಲ ಎಂದರೆ ನಿಮ್ಮ ಪಾಲಿಸಿ ಲ್ಯಾಪ್ಸ್ ಆಗುವ ಚಾನ್ಸ್ ಇರುತ್ತದೆ. ನೀವು ಪಾಲಿಸಿ ಪರ್ಚೇಸ್ ಮಾಡಿ ಮೂರು ವರ್ಷದವರೆಗೂ ಪ್ರೀಮಿಯಂ ಕಟ್ಟಿ ನಂತರ ಪ್ರೀಮಿಯಂ ಪೆಂಡಿಂಗ್ ಇದ್ದರೆ 12 ತಿಂಗಳು ರಿವ್ಯೂವಲ್ ಪೀರಿಯಡ್ ಇರುತ್ತದೆ. ಈ ಪಾಲಿಸಿ ಪರ್ಚೇಸ್ ಮಾಡಿ ಮೂರು ವರ್ಷ ಪ್ರೀಮಿಯಮ್ ಪೇ ಮಾಡಿದ ನಂತರ ಲೋನ್ ಫೆಸಿಲಿಟಿ ಇರುತ್ತದೆ.

ಒಬ್ಬ ವ್ಯಕ್ತಿ 25 ವರ್ಷ ವಯಸ್ಸಾಗಿದ್ದು ಅವರ ಹೆಂಡತಿಗೆ 23 ವರ್ಷ ವಯಸ್ಸಾಗಿದೆ ಅವರು ಈ ಪಾಲಿಸಿ ಪರ್ಚೇಸ್ ಮಾಡಿದರೆ. 10 ಲಕ್ಷ ರೂಪಾಯಿ ಸಮ್ ಅಸ್ಯೂರ್ಡ್, ಪಾಲಿಸಿ ಟೆರ್ಮ್ 20 ವರ್ಷ ಸೆಲೆಕ್ಟ್ ಮಾಡಿಕೊಂಡರೆ. ಅವರು ಪ್ರತಿ ತಿಂಗಳು 4,166 ರೂಪಾಯಿ ಪ್ರೀಮಿಯಂ ಕಟ್ಟಬೇಕು. ಈಗ ಈ ಪಾಲಿಸಿಯಲ್ಲಿ ಪ್ರತಿ 1,000 ರೂಪಾಯಿಗೆ 58 ರೂಪಾಯಿ ಬೋನಸ್ ಸಿಗುತ್ತದೆ. ಅವರು 20 ವರ್ಷಗಳ ಪಾಲಿಸಿ ಟೆರ್ಮ್ ಸೆಲೆಕ್ಟ್ ಮಾಡಿಕೊಂಡಿರುವುದರಿಂದ ಅವರಿಗೆ 45 ವರ್ಷವಾದಾಗ ಪಾಲಿಸಿ ಮೆಚ್ಯೂರಿಟಿ ಆಗುತ್ತದೆ. ಅವರು 10 ಲಕ್ಷ ರೂಪಾಯಿ ಸಮ್ ಅಸ್ಸ್ಯೂರ್ಡ್ ತೆಗೆದುಕೊಂಡಿರುವುದರಿಂದ ಅವರಿಗೆ ಬೋನಸ್ 10 ಲಕ್ಷ ರೂಪಾಯಿ ಬರುತ್ತದೆ. ಅವರಿಗೆ ಟೋಟಲ್ ಮೆಚ್ಯೂರಿಟಿ ಅಮೌಂಟ್ 20 ಲಕ್ಷ ರೂಪಾಯಿ ಆಗುತ್ತದೆ ಅಂದರೆ 20 ಲಕ್ಷ ರೂಪಾಯಿಯನ್ನು ಪಾಲಿಸಿ ಹೋಲ್ಡರ್ ಗೆ ಕೊಡುತ್ತಾರೆ.

ಒಂದು ವೇಳೆ ಪಾಲಿಸಿ ಹೋಲ್ಡರ್ ಮರಣ ಹೊಂದಿದರೆ ಅವರು ಎಷ್ಟು ವರ್ಷ ಪ್ರೀಮಿಯಮ್ ಪೇ ಮಾಡಿದ್ದಾರೋ ಅದಕ್ಕೆ ಬೋನಸ್ ರೇಟ್ ಅನ್ನು ಕ್ಯಾಲ್ಕುಲೇಷನ್ ಮಾಡಿ ಬಂದ ಅಮೌಂಟ್ ಅನ್ನು ಪಾಲಿಸಿ ಹೋಲ್ಡರ್ ನ ನಾಮಿನಿಗೆ ಕೊಡುತ್ತಾರೆ. ಟ್ಯಾಕ್ಸ್ ಬೆನಿಫಿಟ್ ನೋಡುವುದಾದರೆ ನೀವು ಕಟ್ಟುವ ಪ್ರೀಮಿಯಮ್ ಗೆ ಅಂಡರ್ ಸೆಕ್ಷನ್ 80c ಅಪ್ಲೈ ಆಗುತ್ತದೆ. ಪಾಲಿಸಿ ಮೆಚ್ಯೂರಿಟಿ ಆದಾಗ ಅಂಡರ್ ಸೆಕ್ಷನ್ 10d ಅಪ್ಲೈ ಆಗುತ್ತದೆ ಹೀಗಾಗಿ ಟ್ಯಾಕ್ಸ್ ಫ್ರೀ ಇರುತ್ತದೆ. ನೀವು ಪಾಲಿಸಿ ಪರ್ಚೇಸ್ ಮಾಡಿ ಪ್ರೀಮಿಯಮ್ ಪೇ ಮಾಡಿ ನಂತರ ಈ ಪಾಲಿಸಿಯ ಟರ್ಮ್ಸ್ ಮತ್ತು ಕಂಡೀಷನ್ ಇಷ್ಟ ಆಗದೆ ಇದ್ದರೆ ಮೂರು ವರ್ಷದ ನಂತರ ನೀವು ಆ ಪಾಲಿಸಿಯನ್ನು ಸರಂಡರ್ ಮಾಡಿದರೆ ನಿಮ್ಮ ಪಾಲಿಸಿ ಕ್ಯಾನ್ಸಲ್ ಆಗಿ ನೀವು ಡೆಪಾಸಿಟ್ ಮಾಡಿದ ಹಣವನ್ನು ವಾಪಸ್ ಕೊಡುತ್ತಾರೆ. ಕೆಲವು ಕಾರಣಕ್ಕೆ ಸ್ವಲ್ಪ ಹಣವನ್ನು ಕಟ್ ಮಾಡಿ ಉಳಿದ ಹಣವನ್ನು ವಾಪಸ್ ಕೊಡುತ್ತಾರೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *