ಇತ್ತೀಚಿನ ದಿನಗಳಲ್ಲಿ ಮೂಲವ್ಯಾಧಿ ಅನ್ನೋದು ಬಹು ದೊಡ್ಡ ಸಮಸ್ಯೆ ಆಗಿದೆ ಇಂದು ನಾವು ಅದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳೋಣ. ಅಂದರೆ, ಮೂಲವ್ಯಾಧಿ ಗೆ ಕಾರಣ ಹಾಗೂ ಅದಕ್ಕೆ ಮನೆಮದ್ದುಗಳು ಏನು ಅಂತ ನೋಡೋಣ. ನಾವು ತಿಳಿಸುವ ಈ ಔಷಧಿಗಳನ್ನು ನೀವು ಮನೆಯಲ್ಲಿಯೇ ಮಾಡಿ ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಮೂಲವ್ಯಾಧಿ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಅದು ಹೇಗೆ ಅಂತ ನೋಡೋಣ.
ಮೊದಲಿಗೆ ಎರಡು ಪೀಸ್ ಕೆಂಪು ಅಥವಾ ಬಿಳಿ ಕಲ್ಲುಸಕ್ಕರೆ, ಎರಡು ಸ್ಪೂನ್ ಅಷ್ಟು ಒಣ ದ್ರಾಕ್ಷಿ ಹಾಗೂ ಒಂದು ಸ್ಪೂನ್ ಅಷ್ಟು ಕಾಮಕಸ್ತೂರಿ ಬೀಜ. ಎರಡು ಬೇರೆ ಬೇರೆ ಲೋಟಕ್ಕೆ ನೀರನ್ನು ಹಾಕಿ ಎರಡು ಲೋಟಕ್ಕೆ ಒಂದೊಂದೂ ಕಲ್ಲುಸಕ್ಕರೆ ಹಾಕಿ ನಂತರ ಒಂದು ಲೋಟಕ್ಕೆ ಒಣ ದ್ರಾಕ್ಷಿ ಹಾಗೂ ಇನ್ನೊಂದು ಲೋಟಕ್ಕೆ ಕಾಮಕಸ್ತೂರಿ ಬೀಜ ಹಾಕಿ ರಾತ್ರಿ ನೇನೆಸಿಡಬೇಕು. ಅಥವಾ ಕಲ್ಲುಸಕ್ಕರೆ ದ್ರಾಕ್ಷಿ ಹಾಗೂ ಕಾಮಕಸ್ತೂರಿ ಬೀಜ ಮೂರನ್ನು ಒಟ್ಟಿಗೆ ನೆನೆಸಿಟ್ಟರು ತಿಂದರೆ ಇಲ್ಲ. ರಾತ್ರಿ ಮಲಗುವಾಗ ನೇನೆಸಿಟ್ಟರೆ ಬೆಳಗಾಗುವ ವೇಳೆಗೆ ಕಲ್ಲುಸಕ್ಕರೆ ಕರಗುತ್ತದೆ. ನಂತರ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಬೇಕು.
ನಮ್ಮ ದೇಹಕ್ಕೆ ಉಷ್ಣ ಹೆಚ್ಚು ಆದಾಗ ಆಸಿಡಿಟಿ ಆಗಿ ಮೂಲವ್ಯಾಧಿ ಆಗತ್ತೆ ಹಾಗಾಗಿ ಆದಷ್ಟು ನಮ್ಮ ದೇಹವನ್ನು ತಂಪಾಗಿ ಇಟ್ಟುಕೊಳ್ಳಬೇಕು. ಮೇಲೆ ತಿಳಿಸಿದ ಮೂರು ಪದಾರ್ಥಗಳು ಸಹ ಮಾನವನ ದೇಹಕ್ಕೆ ತುಂಬಾ ಒಳ್ಳೆಯದು. ಈ ಮನೆ ಮದ್ದನ್ನು ೧೫/೨೦ ದಿನ ನಿರಂತರವಾಗಿ ಮಾಡಿದರೆ ಮೂಲವ್ಯಾಧಿ ಸಂಪೂರ್ಣ ಗುಣವಾಗುತ್ತದೆ.
ಇನ್ನೊಂದು ಗಟ್ಟಿ ಅವಲಕ್ಕಿ ಅದರ ಬದಲು ಮೂಲಂಗಿ ಇವೆರಡನ್ನೂ ಒಂದು ದಿನ ಅವಲಕ್ಕಿ ಒಂದು ದಿನ ಮೂಲಂಗಿ ಹೀಗೂ ಬಳಸಬಹುದು. ಕಾಲು ಕಪ್ ಅಷ್ಟು ದಪ್ಪ ಅವಲಕ್ಕಿಯನ್ನು ಚೆನ್ನಾಗಿ ತೊಳೆದು ಒಂದು ಕಪ್ ನೀರು ಹಾಕಿ ಅರ್ಧ ಗಂಟೆ ನೆನೆಸಿಡಿ. ನಂತರ ಮೇಲಿನ ನೀರನ್ನು ತೆಗೆದು ಅವಲಕ್ಕಿ ಮೊಸರು ಸೇರಿಸಿ ತಿನ್ನಬೇಕು. ಅವಲಕ್ಕಿ ದೇಹಕ್ಕೆ ತುಂಬಾ ತಂಪು. ಆದರೆ ಮೂಲವ್ಯಾಧಿ ಇರುವವರು ಹುಳಿ ಪದಾರ್ಥಗಳನ್ನು ತಿನ್ನಬೇಡಿ ಇದರಿಂದ ಮೂಲವ್ಯಾಧಿ ಮತ್ತು ಹೆಚ್ಚಾಗುತ್ತೆ. ಹೀಗೆ ಮೊಸರಿನ ಜೊತೆ ಮೂಲಂಗಿಯ ತುರಿಯನ್ನು ಸೇರಿಸಿ ತಿನ್ನಬಹುದು ಅದಕ್ಕೆ ಉಪ್ಪನ್ನು ಸೇರಿಸಿಕೊಳ್ಳಬೇಕು. ಆದಷ್ಟು ಖಾರದ ಪದಾರ್ಥಗಳು ಅದರಲ್ಲೂ ಹಸಿಮೆಣಸಿನ ಕಾಯಿ ಬಳಸಲೇ ಬಾರದು ಇದರಿಂದಲೂ ಸಹ ಹೆಚ್ಚಾಗುತ್ತದೆ. ಈ ಎರಡು ಆಹಾರಗಳನ್ನು ಮಧ್ಯಾಹ್ನ ಅಥವಾ ರಾತ್ರಿ ಊಟಕ್ಕೂ ಅರ್ಧ ಗಂಟೆ ಮೊದಲು ತಿನ್ನಬೇಕು. ಆದಷ್ಟು ಮಸಾಲೆ ಪದಾರ್ಥಗಳನ್ನು ತಿನ್ನಬಾರದು. ಶುಂಠಿ ಬೆಳ್ಳುಳ್ಳಿಯನ್ನು ಸಹ ಬಿಡಬೇಕು.
ನಾವು ಮೇಲೆ ತಿಳಿಸಿದ ಮನೆಮದ್ದುಗಳು ಕೆಲವು ಡಾಕ್ಟರಗಳು ಸಹ ಸಲಹೆ ನೀಡುತ್ತಾರೆ. ಚೆನ್ನಾಗಿ ಹೆಚ್ಚು ನೀರನ್ನ ಕುಡಿತಾ ಇರಬೇಕು. ಮೂಲಂಗಿ ಸೊಪ್ಪಿನ ಪಲ್ಯವನ್ನು ಸಹ ಊಟದಲ್ಲಿ ಬಳಸಬಹುದು ಇದು ಕೂಡ ಒಳ್ಳೆಯದು. ಊಟಕ್ಕೂ ಮೊದಲು ಒಂದು ಲೋಟ ತೆಳು ಮಜ್ಜಿಗೆಗೆ ಅರ್ಧ ಚಮಚ ಜೀರಿಗೆ ಪುಡಿ ಸೇರಿಸಿ ಕುಡಿಯಬೇಕು ಇದು ತಂಪು. ಹಾಗೆ ರಾತ್ರಿ ಮಲಗುವಾಗ ಪಚ್ಚ ಬಾಳೆ ಹಣ್ಣು/ ಪಪಾಯ ಹಣ್ಣು ತಿಂದರೆ ಮೋಷನ್ ಸರಿಯಾಗಿ ಆಗುತ್ತೆ. ಹಾಗೆ ರಾಗಿ ಜೋಳ ಕೂಡ ದೇಹಕ್ಕೆ ಒಳ್ಳೆಯದು ರಾಗಿ ಗಂಜಿ ಅಂಬಲಿಗಳನ್ನು ಸಹ ಸೇವಿಸಬಹುದು. ಹಾಗೆ ಹಸಿ ಮೆಣಸಿನ ಕಾಯಿ, ನಾನ್ ವೆಜ್ ಪದಾರ್ಥಗಳು ಮೊಟ್ಟೆ ಇವುಗಳನ್ನು ತಿನ್ನುವುದು ಬಿಡಬೇಕು. ಮೇಲೆ ತಿಳಿಸಿದ ಸುಲಭವಾದ ಮನೆ ಮದ್ದುಗಳನ್ನು ಮಾಡುವುದರಿಂದ ಮೂಲವ್ಯಾಧಿಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ