ಆತ್ಮೀಯ ಓದುಗರೇ ಇಲ್ಲಿ ತಿಳಿಸಲು ಬಯಸುತ್ತಿರುವ ವಿಷಯ ಏನು ಅಂದ್ರೆ ನಮ್ಮ ಭಾರತದ ದೇವಾಲಯಗಳನ್ನು ಹಿಂದಿನ ಕಾಲದಿಂದಲೂ ಕೂಡ ಎತ್ತರದ ಪ್ರದೇಶಗಳಲ್ಲಿ ಹೆಚ್ಚಾಗಿ ನಿರ್ಮಿಸುತ್ತಾರೆ ಯಾಕೆ ಅನ್ನೋದು ಇಲ್ಲಿದೆ ನೋಡಿ. ನಿಮಗೆ ನಿಜಕ್ಕೂ ಈ ಮಾಹಿತಿ ಇಷ್ಟವಾಗಿದ್ದೆ ಆದಲ್ಲಿ ಮರೆಯದೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ. ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ತನ್ನಲ್ಲಿ ಹಲವಾರು ಜಾತಿ-ಧರ್ಮಗಳನ್ನು ಹೊಂದಿರುವ ಪವಿತ್ರವಾದ ನಾಡು ನಮ್ಮ ಭಾರತ ದೇಶ. ಈ ದೇಶದ ಮಣ್ಣಿನ ಪ್ರತಿಯೊಂದು ಕಣಕಣಗಳಲ್ಲೂ ನಮ್ಮ ಹಿಂದಿನ ಇತಿಹಾಸವನ್ನು ಸಾರುವ ಚರಿತ್ರೆಯನ್ನು ಈ ಪುಣ್ಯಭೂಮಿ ಹೊಂದಿದೆ ಎಂದರೆ ತಪ್ಪಾಗಲಾರದು ಹಲವಾರು ಅದ್ಭುತವಾದ ಇತಿಹಾಸವನ್ನು ಹೊಂದಿರುವ ಈ ನಮ್ಮ ಪುಣ್ಯ ಭೂಮಿ ಅನಾದಿಕಾಲದಿಂದಲೂ ಹಿಂದೂ ಸಂಸ್ಕೃತಿ ಪರಂಪರೆಯನ್ನು ಪ್ರತಿಬಿಂಬಿಸುತ್ತ ಹಿಂದು ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಪದ್ಧತಿಗಳನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬರುತ್ತಿರುವ ಜಗತ್ತಿನ ಏಕೈಕ ರಾಷ್ಟ್ರ ನಮ್ಮ ಭಾರತ ದೇಶ.
ಸನಾತನ ಕಾಲದಿಂದ ಹಿಡಿದು ಇಂದಿನವರೆಗೂ ಭಾರತ ಹಲವಾರು ದೇವಸ್ಥಾನಗಳನ್ನು ತನ್ನಲ್ಲಿ ಅಡಕವಾಗಿಸಿಕೊಂಡಿದೆ. ಆದಿ ಕಾಲದಿಂದಲೂ ನಮಗಿರುವ ದೇವರ ಮೇಲಿನ ನಂಬಿಕೆ, ಶ್ರದ್ಧೆ, ಭಕ್ತಿ ನಾವು ಆಚರಿಸುವ ಹಬ್ಬ, ಜಾತ್ರೆಗಳು ಇವೆಲ್ಲ ನಮ್ಮ ಪೂರ್ವಜರು ದೇವಾಲಯಗಳನ್ನು ನಿರ್ಮಿಸಲು ಕಾರಣ ಎನ್ನಬಹುದು. ಭಾರತದಲ್ಲಿ ನಾವು ಹಲವಾರು ಪ್ರಸಿದ್ಧ ದೇವಾಲಯಗಳನ್ನು ಕಾಣಬಹುದು ಹಿಂದಿನ ಕಾಲದಲ್ಲಿ ದೇವಾಲಯಗಳು ಗೋಪುರ, ವಿಜಯಸ್ತಂಭ, ಗರ್ಭಗುಡಿ, ಸುಕನಾಸಿ, ನವರಂಗ, ರಂಗಮಂಟಪ, ಮತ್ತು ವಿಶೇಷವಾದ ಕೆತ್ತನೆಗಳುಳ್ಳ ಕಂಬಗಳು ಹಾಗೂ ಸೂಕ್ಷ್ಮಾತಿಸೂಕ್ಷ್ಮ ಕುಸುರಿ ಕೆತ್ತನೆ ಕೆಲಸಗಳು ಇವುಗಳನ್ನೆಲ್ಲ ಹೊಂದಿರುವ ಒಂದು ರೀತಿ ಪರಿಪೂರ್ಣ ದೇವಾಲಯ ವಾಗಿರುತ್ತಿತ್ತು. ಶತಶತಮಾನಗಳ ಹಿಂದಿನ ಸೂಕ್ಷ್ಮವಾದ ದೇವಾಲಯಗಳ ಕೆತ್ತನೆಗಳಿಗೆ ಶಿಲ್ಪಿಗಳಿಗೆ ನಾವೆಷ್ಟೇ ಮೆಚ್ಚುಗೆ ವ್ಯಕ್ತಪಡಿಸಿದರು ಅದು ಕಡಿಮೆಯೇ.
ಹಿಂದಿನ ಕಾಲದಲ್ಲಿ ದೇವಾಲಯಗಳನ್ನು ಎತ್ತರದ ಪ್ರದೇಶಗಳಲ್ಲಿ ಅಂದರೆ ಎತ್ತರದ ಗುಡ್ಡ ಮತ್ತು ಬೆಟ್ಟ ಪ್ರದೇಶಗಳಲ್ಲಿ ಹೆಚ್ಚೆಚ್ಚು ನಿರ್ಮಿಸುತ್ತಿದ್ದರು ಕಾರಣ ಹಲವಾರು ಇರಬಹುದು. ಏನೆಂದರೆ 1 ಜನರಲ್ಲಿರುವ ಅಹಂಕಾರ ಅಂಧಕಾರ ಗಳನ್ನು ತೊಳೆಯುವ ಸಲುವಾಗಿ ಎತ್ತರದ ಪ್ರದೇಶಗಳಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುತ್ತಿತ್ತು ಏಕೆಂದರೆ ನಾವು ಮನುಷ್ಯರಲ್ಲಿ ಕೆಲವೊಂದು ಸಲ ತಾನೇ ದೊಡ್ಡವನು ನನಗಿಂತ ದೊಡ್ಡವರು ಇನ್ನಾರೂ ಇಲ್ಲ ಎಂಬ ಅಹಂಕಾರ ಮನೋಭಾವನೆಯನ್ನು ಕಾಣುತ್ತೇವೆ ಅಂತಹ ಅಹಂಕಾರವನ್ನು ಹೋಗಲಾಡಿಸುವುದರ ಸಲುವಾಗಿ ನಮಗಿಂತಲೂ ದೊಡ್ಡವನು ಎತ್ತರದಲ್ಲಿ ದೇವರು ಒಬ್ಬನಿದ್ದಾನೆ ಎಂಬುದನ್ನು ಅರ್ಥೈಸಿಕೊಳ್ಳುವ ಸಲುವಾಗಿ ಎತ್ತರದ ಪ್ರದೇಶಗಳಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುತ್ತಿತ್ತು.
ಅಷ್ಟೇ ಅಲ್ಲದೆ ಎತ್ತರದ ಪ್ರದೇಶಗಳಲ್ಲಿ ದೇವಾಲಯಗಳನ್ನು ನಿರ್ಮಿಸುವುದರಿಂದ ಏಕಾಗ್ರತೆ ಹೆಚ್ಚಾಗಿ ನಾವು ಧ್ಯಾನಕ್ಕೆ ಕೂರಬಹುದು ದೇವಾಲಯದೊಳಗಿನ ತಂಪಾದ ಪ್ರಶಾಂತವಾದ ವಾತಾವರಣ ಅಲ್ಲಿ ಕುಳಿತು ಮಾಡುವ ಧ್ಯಾನದಿಂದ ನಮಗೆ ಮನಶಾಂತಿ ನೆಮ್ಮದಿ ಎರಡು ದೊರೆಯುತ್ತದೆ ಇನ್ನೊಂದ್ ಎಂದರೆ ಎತ್ತರದ ಪ್ರದೇಶದ ದೇವಾಲಯಗಳಿಗೆ ಮೇಲೆ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುವುದರಿಂದ ನಮ್ಮ ದೇಹಕ್ಕೂ ಸಹ ವ್ಯಾಯಾಮ ವಾದಂತೆ ಆಗುತ್ತದೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಎತ್ತರದ ಪ್ರದೇಶಗಳಲ್ಲಿ ದೇವಾಲಯಗಳ ಕೋಟೆಗಳನ್ನು ನಿರ್ಮಾಣ ಮಾಡುತ್ತಿದ್ದರು ಕಾರಣ ಶತ್ರುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಮತ್ತು ದೇವಾಲಯ, ಕೋಟೆಗಳಲ್ಲಿ ರಾಜರು ತಮ್ಮ ಅಪಾರವಾದ ಸಂಪತ್ತುಗಳನ್ನು ಅವುಗಳ ರಕ್ಷಣೆಯ ಸಲುವಾಗಿ ದೇವಾಲಯಗಳಲ್ಲಿ ದೇವರ ಕೆಳಕ್ಕೆ ಇಟ್ಟಿರುತ್ತಿದ್ದರು ಹಾಗೊಂದು ವೇಳೆ ಅದನ್ನು ಕದಿಯಲು ಕಳ್ಳರು ಶತ್ರುಗಳು ಏನಾದರೂ ಬಂದರೆ ದೇವಾಲಯಗಳ ಅಥವಾ ಕೋಟೆಗಳ ಮೇಲೆ ನಿಂತಿರುವ ಕಾವಲು ಸೈನಿಕರಿಗೆ ತಿಳಿದು ಆದಷ್ಟು ಬೇಗ ಅವರ ಗಮನಕ್ಕೆ ಬಂದು ಎಚ್ಚೆತ್ತುಕೊಳ್ಳುತ್ತಿದ್ದರು.
ಉದಾಹರಣೆಗೆ ಛತ್ರಪತಿ ಶಿವಾಜಿ ಮಹಾರಾಜರ ಕೋಟೆಗಳು, ಚಾಮುಂಡೇಶ್ವರಿ ದೇವಾಲಯ ಇನ್ನೂ ಹತ್ತು ಹಲವಾರು ಎತ್ತರ ಪ್ರದೇಶಗಳಲ್ಲಿರುವ ದೇವಾಲಯಗಳು ಮತ್ತು ಕೋಟೆಗಳು ನಮ್ಮ ಭಾರತ ದೇಶದಲ್ಲಿ ಇವೆ. ಇನ್ನೊಂದು ಎತ್ತರ ಪ್ರದೇಶಗಳಲ್ಲಿ ದೇವಾಲಯಗಳನ್ನು ನಿರ್ಮಿಸುವುದರಿಂದ ಪ್ರವಾಹದ ಸಂದರ್ಭದಲ್ಲಿ ಅತ್ಯಂತ ಉಪಕಾರವಾಗುತ್ತಿತ್ತು ಹೇಗೆಂದರೆ ಎತ್ತರದ ಪ್ರದೇಶಗಳಿಗೆ ಪ್ರವಾಹದ ನೀರು ಹೊಕ್ಕುವ ಸಂದರ್ಭ ಕಡಿಮೆ ಹಾಗಾಗಿ ಜನರು ಎತ್ತರದ ಪ್ರದೇಶಗಳಾದ ಕೋಟೆ ದೇವಾಲಯಗಳನ್ನು ತಮ್ಮ ಆಶ್ರಯ ತಾಣವನ್ನಾಗಿ ಸಿ ಕೊಳ್ಳುತ್ತಿದ್ದರು.
ಇಂತಹ ಹಲವಾರು ದೇವಾಲಯಗಳು ಅಥವಾ ಕೋಟೆಗಳು ಅಪಾಯದ ಸಂದರ್ಭದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಸಲುವಾಗಿ ತುಂಬಾ ಸಹಾಯಕಾರಿಯಾಗಿದೆ. ಹಾಗೂ ಅವುಗಳ ವೈಶಿಷ್ಟ್ಯತೆಯಿಂದ, ಕೆತ್ತನೆ ಕಲಾಕುಸುರಿ ಗಳಿಂದ ಅಪಾರ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಿ ಪ್ರವಾಸಿತಾಣಗಳು ಆಗಿದೆ. ಅಲ್ಲದೆ ಎತ್ತರದ ದೇವಾಲಯಗಳು ನಮ್ಮ ಭಾರತೀಯ ಸಂಸ್ಕೃತಿ ಸಂಪ್ರದಾಯ ಪರಂಪರೆಯನ್ನು ಸಹ ಎತ್ತರದ ಶಿಖರಕ್ಕೇರಿಸಿದೆ. ಭಾರತ ತನ್ನ ಸಂಸ್ಕೃತಿ ಸಂಪ್ರದಾಯ ಪರಂಪರೆ ಇವುಗಳಿಂದಲೇ ಇಂದು ವಿಶ್ವಗುರು ಭಾರತ ಎಂದೆನಿಸಿ ಕೊಳ್ಳುತ್ತಿರುವುದು ಎಂದರೆ ತಪ್ಪೆನಿಸಲಾರದು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466