ಕೊರೊನಾ ಸೂತಕದ ಛಾಯೆಯಿಂದ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಿರುವುದರ ಜತೆಗೆ ಸಣ್ಣ ಪ್ರಮಾಣದ ವ್ಯಾಪಾರ ವಹಿವಾಟುಗಳೂ ಸ್ಥಗಿತಗೊಂಡಿವೆ. ಕೆಲಸ ಅರಸಿ ಪಟ್ಟಣ ಸೇರಿದ್ದವರೆಲ್ಲ ಗ್ರಾಮಗಳಿಗೆ ಮರಳಿ ಉದ್ಯೋಗ ಕಳೆದುಕೊಂಡು ಪರದಾಡುತ್ತಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸಣ್ಣದಾಗಿ ಆರಂಭಗೊಳ್ಳುವ ಅಣಬೆ ಬೇಸಾಯ ಬದುಕು ಕಟ್ಟಿಕೊಡುತ್ತಿದೆ. ಕೆಲವರು ತಮ್ಮ ಕುಟುಂಬದ ನಿರ್ವಹಣೆಯ ದೃಷ್ಟಿಯಿಂದ ಅಣಬೆ ಬೆಳೆಯುತ್ತಿದ್ದರೆ ಇನ್ನೂ ಕೆಲವರು ಉದನ್ನೆ ಉದ್ದಿಮೆಯಾಗಿ ಪ್ರಾರಂಭಿಸಿದ್ದಾರೆ. ಇದೇ ರೀತಿ ಅಣಬೆ ಉದ್ಯೋಗ ಮಾಡುತ್ತಾ ತಿಂಗಳಿಗೆ ಲಕ್ಷಾಂತರ ಹಣ ಗಳಿಸಲು ಸಹಾಯವಾಗುವ ಅಣಬೆ ಬೇಸಾಯದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಇದು ರೈತರಿಗೆ, ಗೃಹಿಣಿಯರಿಗೆ ಮತ್ತು ನಿರುದ್ಯೋಗಿಗಳಿಗೆ ಉತ್ತಮ ಬೇಸಾಯ ಎಂದೇ ಹೇಳಬಹುದು. ಅಣಬೆಯನ್ನು ಬೆಳೆಯನ್ನು ಕೃಷಿ ಭೂಮಿಯೇ ಬೇಕಂತೇನೂ ಇಲ್ಲ ನಮ್ಮ ನಮ್ಮ ಮನೆಯ ತಾರಸಿ ಅಥವಾ ಪಕ್ಕದಲ್ಲಿ ಖಾಲಿ ಇದ್ದ ಜಾಗವಾದರೂ ಅಲ್ಲಿ ಅಣಬೆ ಬೆಳೆಯಬಹುದು. ಜಾಗದಲ್ಲಿ ಒಂದು ಶೆಡ್ ನಿರ್ಮಾಣ ಮಾಡಿಕೊಂಡು ಪ್ರತೀ ತಿಂಗಳೂ ಕೈತುಂಬ ಹಣ ಸಂಪಾದನೆ ಮಾಡಬಹುದು.

ಅಣಬೆಯಲ್ಲಿ ಸಾಕಷ್ಟು ಪ್ರೊಟೀನ್ ಗಳು ಜೀವಸತ್ವಗಳು , ವಿಟಮಿನ್ ಡಿ ಇರುತ್ತದೆ ಹಾಗೆ ಇದರಲ್ಲಿ ಶರ್ಕರ ಪಿಷ್ಟ ಬಹಳ ಕಡಿಮೆ ಇರುವುದರಿಂದ ಮಧುಮೇಹಿಗಳಿಗೆ ಉತ್ತಮ ಆಹಾರ. ಹಾಗೂ ಮಕ್ಕಳು ಮತ್ತು ಗರ್ಭಿಣಿಯರಿಗೆ ಸಹ ಉತ್ತಮ ಆಹಾರ ಇದು. ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಅಣಬೆ ಅಥವಾ ಮಶ್ರೂಮ್ ಇದನ್ನು ನಾವು ಬಳಕೆ ಮಾಡುವುದು ಕಡಿಮೆ. ಆದರೆ ಇದರ ಬಳಕೆ ವಿದೇಶಗಳಲ್ಲಿ ಹೆಚ್ಚಾಗಿಯೇ ಇದೆ ಇತ್ತೀಚೆಗೆ ಭಾರತದಲ್ಲಿ ಕೂಡಾ ಮಶ್ರೂಮ್ ಬೇಡಿಕೆ ಹೆಚ್ಚಾಗುತ್ತಾ ಇದೇ. ಈ ಬೇಡಿಕೆಗೆ ಅನುಗುಣವಾಗಿ ಅಣಬೆ ವ್ಯವಸಾಯವನ್ನು ಮಾಡಿ ಹಣ ಗಳಿಸಬಹುದು. ಹಾಗಾದರೆ ಅಣಬೆ ಬೇಸಾಯ ಮಾಡುವ ಕ್ರಮ ಹೇಗೆ ಎನ್ನುವುದನ್ನು ನೋಡೋಣ.

ನಿಮ್ಮ ಮನೆಯ ತಾರಸಿ ಮೇಲೆ ಎಲ್ಲಿಯಾದರೂ ಮೊದಲು ಒಂದು ಶೆಡ್ ನಿರ್ಮಾಣ ಮಾಡಿಕೊಳ್ಳಬೇಕು. ಇಲ್ಲಿ ತಂಪಾದ ಗಾಳಿ ಹಾಗೂ ಬೆಳಕು ಮಂದವಾಗಿ ಇರಬೇಕು. ನಂತರ ಅಣಬೆ ಬೇಸಾಯಕ್ಕೆ ಕೃಷಿ ತ್ಯಾಜ್ಯಗಳನ್ನು ಬಳಸಲಾಗುತ್ತದೆ. ಅಂದರೆ , ಒಣಗಿದ ಹುಲ್ಲು , ಗೋಧಿ ರಾಗಿ ಹುಲ್ಲುಗಳು ಜೋಳದ ದಂಟು ಇವುಗಳ ಬಳಕೆ ಮಾಡಲಾಗುತ್ತದೆ. ಈ ಕೃಷಿ ತ್ಯಾಜ್ಯಗಳನ್ನು ಸಣ್ಣದಾಗಿ ಕತ್ತರಿಸಿ ಇಡೀ ರಾತ್ರಿ ಎಂಟರಿಂದ ಹತ್ತು ತಾಸುಗಳ ಕಾಲ ನೆನೆ ಹಾಕಬೇಕು.

ಬೆಳಗ್ಗೆ ಈ ಹುಲ್ಲನ್ನು ಇನ್ನೊಮ್ಮೆ ಬಿಸಿ ನೀರಿಗೆ ಹಾಕಿ ಕುದಿಸಬೇಕು. ಹೀಗ ಮಾಡುವುದರಿಂದ ಹುಲ್ಲಿನಲ್ಲಿ ಇರುವಂತಹ ಬ್ಯಾಕ್ಟೀರಿಯಾಗಳು , ಕ್ರಿಮಿ ಕೀಟಗಳು ಸಾಯುತ್ತವೆ. ನಂತರ ಹುಲ್ಲನ್ನು ನೀರಿನಿಂದ ತೆಗೆದು ಅದನ್ನು ಒಂದು ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಬೇಕು ಇದರ ಜೊತೆಗೆ ಅಣಬೆ ಬೀಜಗಳನ್ನು ಸೇರಿಸಿ ಹಾಕಬೇಕು. ಹುಲ್ಲಿನ ಮಧ್ಯದಲ್ಲಿ ಅಣಬೆ ಬೀಜಗಳನ್ನು ಹಾಕಬಾರದು ಚೀಲದ ಸುತ್ತಲೂ ಒಂದು ಪದರು ಅಣಬೆ ಬೀಜ ಹಾಗೂ ಒಂದು ಪದರು ಹುಲ್ಲು ಹೀಗೆ ಹಾಕಬೇಕು. ಅಣಬೆ ಬೀಜಗಳನ್ನು ಪ್ಲಾಸ್ಟಿಕ್ ಬೀಜದ ಸುತ್ತಲೂ ಕಾಣಿಸುವ ಹಾಗೆ ಹಾಕಿಕೊಳ್ಳಬೇಕು.

ನಂತರ ಚೀಲವನ್ನು ಕಟ್ಟಿ ಇಡಬೇಕು. ಅಣಬೆಗೆ ಗಾಳಿ ಆಡಲು ಪ್ಲಾಸ್ಟಿಕ್ ಚೀಲಗಳು ಕಡ್ಡಿಯ ಸಹಾಯದಿಂದ ಅಲ್ಲಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಬೇಕು. ನಂತರ ಈ ಚೀಲಗಳನ್ನು ನಿಮ್ಮ ಶೆಡ್ ನಲ್ಲಿ ಇಡಬೇಕು. ಇದನ್ನು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಡಿಕೊಳ್ಳಬೇಕು. ನಂತರ ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಅಣಬೆ ಮೊಳಕೆ ಒಡೆಯುತ್ತದೆ. ನಂತರ ಪ್ಲಾಸ್ಟಿಕ್ ಚೀಲದಿಂದ ಅಣಬೆ ಹುಲ್ಲನ್ನು ಹೊರಗೆ ತೆಗೆದಿಟ್ಟು ಅದಕ್ಕೆ ಪ್ರತೀ ದಿನ ನೀರನ್ನು ಚಿಮುಕಿಸಬೇಕು. ಇದಾದ ಹತ್ತು ದಿನಗಳ ನಂತರ ಅಣಬೆ ಕತ್ತರಿಸಲು ಸರಿಯಾದ ಸಮಯ ಆಗಿರುತ್ತದೆ.

ಆ ಅಣಬೆಗಳನ್ನು ಕಟ್ ಮಾಡಿ ನಿಮ್ಮ ಹತ್ತಿರದ ಮಾರ್ಕೆಟ್ ನಲ್ಲಿ ಮಾರಾಟ ಮಾಡಬಹುದು. ಸಾಮಾನ್ಯವಾಗಿ ಅಣಬೆ ಬೀಜಗಳನ್ನು ಕೊಂಡುಕೊಳ್ಳಲು ಎಪ್ಪತ್ತೈದು ರೂಪಾಯಿ ಖರ್ಚಾದರೂ ಅಣಬೆಯನ್ನು ನೂರರಿಂದ ಇನ್ನೂರು ಮುನ್ನೂರು ರೂಪಾಯಿಗಳ ವರೆಗೂ ಮಾರಾಟ ಮಾಡಬಹುದು. ಇದರ ದರ ಬೆಳೆದ ಅಣಬೆಗಳು ಹೇಗೆ ಇರುತ್ತವೆ ಎನ್ನುವುದರ ಮೇಲೆ ಅವಲಂಬಿತವಾಗಿ ಇರುತ್ತದೆ. ಈ ರೀತಿಯಾಗಿ ಅತೀ ಕಡಿಮೆ ಖರ್ಚಿನಲ್ಲಿ ಅತೀ ಕಡಿಮೆ ಜಾಗದಲ್ಲಿ ಅಣಬೆ ಬೇಸಾಯ ಮಾಡಿ ಕೈತುಂಬಾ ಹಣ ಸಂಪಾದನೆ ಮಾಡಬಹುದು.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!