ಬಯಲುಶೌಚಕ್ಕೆ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಕುಖ್ಯಾತಿ ಪಡೆದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಶೌಚಾಲಯದ ಮಹತ್ವ, ಜಾಗೃತಿ, ಅರಿವು ಮೂಡಿಸುವ ನಿಟ್ಟಿನಲ್ಲಿ ಭಾರತದ ಸಾಧನೆ ಪ್ರಶಂಸನೀಯವಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯದ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ ಶೌಚಾಲಯ ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ ಧನಸಹಾಯವನ್ನೂ ನೀಡುತ್ತಿದೆ. ಇದಕ್ಕಾಗಿ ಅಭಿಯಾನದ ಮೂಲಕ ಐದು ವರ್ಷಗಳಲ್ಲಿ ಕೋಟಿಗೆಟ್ಟಲೇ ಶೌಚಾಲಯ ನಿರ್ಮಿಸುವ ಗುರಿ ಹೊಂದಲಾಗಿದೆ. ಆದ್ದರಿಂದ ನಾವು ಇಲ್ಲಿ ಶೌಚಾಲಯ ನಿರ್ಮಾಣ ಮಾಡುವ ಬಗ್ಗೆ ಸರ್ಕಾರದ ಅನುದಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಲಾಪ್ ಟಾಪ್ ನಲ್ಲಿ ವೆಬ್ ಬ್ರೌಸರ್ ಓಪನ್ ಮಾಡಿಕೊಂಡು ಅಲ್ಲಿ ಐ.ಎಚ್.ಎಚ್.ಎಲ್. ಎಂದು ಸರ್ಚ್ ಕೊಡಬೇಕು. ನಂತರ ಅಲ್ಲಿ ಇಂಡಿವಿಜುಲ್ ಲಾಟರಿನ್ ಹೌಸ್ ಹೋಲ್ಡ್ ಅಪ್ಲಿಕೇಶನ್ ಎಂದು ಕಾಣುತ್ತದೆ. ನಂತರದಲ್ಲಿ ಅದರ ಮೇಲೆ ಕ್ಲಿಕ್ ಮಾಡಬೇಕು. ಬಲ ಬದಿಯಲ್ಲಿ ನ್ಯೂ ಅಪ್ಲಿಕೆಂಟ್ ಮೇಲೆ ಕ್ಲಿಕ್ ಮಾಡಬೇಕು. ನಂತರದಲ್ಲಿ ಆಧಾರ್ ಕಾರ್ಡ್ ನಲ್ಲಿ ಹೇಗೆ ಮಾಹಿತಿ ಇರುತ್ತದೆಯೋ ಹಾಗೆ ತುಂಬಬೇಕು. ನಂತರ ಮೊಬೈಲ್ ನಂಬರ್ ಕೊಡಬೇಕು. ಹಾಗೆಯೇ ರನ್ನಿಂಗ್ ಇರುವ ಇಮೇಲ್ ಐಡಿ ಕೊಡಬೇಕು. ನಂತರ ಅಲ್ಲಿರುವ ವಿವರ ತುಂಬಿ ಕ್ಯಾಪ್ಚರ್ ಕೋಡ್ ಕೊಟ್ಟು ಹೋಮ್ ಪೇಜ್ ಒಪನ್ ಮಾಡಬೇಕು.
ನಂತರದಲ್ಲಿ ಲಾಗಿನ್ ಐಡಿ ಕೊಟ್ಟು ಲಾಗಿನ್ ಆಗಬೇಕು. ನಂತರದಲ್ಲಿ ಒಂದಷ್ಟು ವಿವರಗಳನ್ನು ತುಂಬಬೇಕು. ಅಂದರೆ ಜಿಲ್ಲೆ ಯಾವುದೆಂದು ಸೆಲೆಕ್ಟ್ ಮಾಡಬೇಕು. ನಂತರ ಊರಿನ ಹೆಸರು ಯಾವುದೆಂದು ಸೆಲೆಕ್ಟ್ ಮಾಡಬೇಕು. ನಂತರದಲ್ಲಿ ಆಧಾರ್ ಕಾರ್ಡ್ ನಲ್ಲಿ ಇರುವಂತೆ ವಿವರಗಳನ್ನು ಕೊಡಬೇಕು. ನಂತರದಲ್ಲಿ ಬ್ಯಾಂಕ್ ನ ಐಎಫ್ಎಸ್ಸಿ ಕೋಡ್ ಕೊಡಬೇಕು. ಹಾಗೆಯೇ ಬ್ಯಾಂಕ್ ಅಕೌಂಟ್ ನಂಬರ್ ಕೊಡಬೇಕು. ನಂತರ ಅಪ್ಲೈ ಎಂದು ಕೊಡಬೇಕು. ಆಗ ರಿಜಿಸ್ಟ್ರೇಷನ್ ನಂಬರ್ ಬರುತ್ತದೆ. ಇದನ್ನು ಒಂದು ಪ್ರಿಂಟ್ ತೆಗೆದುಕೊಳ್ಳಬೇಕು. ನಂತರ ಹೋಮ್ ಪೇಜ್ ಗೆ ಬಂದು ಲಾಗಿನ್ ಆಗಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ಐಎಚ್ಎಚ್ಎಲ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ರಿಜಿಸ್ಟ್ರೇಷನ್ ನಂಬರ್ ಕಾಣುತ್ತದೆ. ಯಾವುದೇ ಅನುಮಾನಗಳು ಇದ್ದರೂ ಕಾಂಟೆಕ್ಟ್ ಅಸ್ ಎನ್ನುವ ಮೇಲೆ ಕ್ಲಿಕ್ ಮಾಡಿದರೆ ಫೋನ್ ನಂಬರ್ ದೊರಕುತ್ತದೆ. ಇದರಿಂದ ಮಾಹಿತಿಯನ್ನು ಪಡೆಯಬಹುದು. ಒಟ್ಟು 132 ಲಕ್ಷ ಕೋಟಿಯನ್ನು ಶೌಚಾಲಯ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಇದು ಜಗತ್ತಿನ ಯಾವುದೇ ದೇಶದಲ್ಲಿ ಯಾವುದೇ ಸರ್ಕಾರ ಐದು ವರ್ಷದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಹಾಕಿಕೊಂಡ ಅತಿದೊಡ್ಡ ಗುರಿ. ಆದ್ದರಿಂದ ಭಾರತದಲ್ಲಿ ಶೌಚಾಲಯ ಕ್ರಾಂತಿ ನಡೆಯುತ್ತಿದೆ ಎಂದು ಜಗತ್ತು ಗುರುತಿಸಿದೆ.
ಒಂದು ವರದಿಯ ಪ್ರಕಾರ 2018 ರ ಡಿಸೆಂಬರ್ ಒಳಗೆ ಈ ಗುರಿ ಮುಟ್ಟುವ ಸಾಧ್ಯತೆಗಳು ಹೆಚ್ಚಿವೆ. ಭಾರತದ ಗ್ರಾಮೀಣ ವ್ಯಾಪ್ತಿಯಲ್ಲಿ ಜನರಿಗೆ ಉದ್ಯೋಗ ನೀಡಲು ಆರಂಭಿಸಿದ್ದ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಿಸುವುದನ್ನೂ ಸೇರಿಸಿದ್ದು ಹೆಚ್ಚು ಅನುಕೂಲವಾಗಿದೆ. ಭಾರತ ಸರ್ಕಾರ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸುವ ಆಂದೋಲನವನ್ನೇ ಮಾಡುತ್ತಿದೆ. ಶೌಚಾಲಯ ನಿರ್ಮಾಣದ ಬಗೆಗಿನ ಕಳಕಳಿ ಭಾರತದಲ್ಲಿ ಚಲನಚಿತ್ರಕ್ಕೂ ಸ್ಫೂರ್ತಿಯಾಗಿದೆ. ನಟ ಅಕ್ಷಯ್ಕುಮಾರ್ ಅಭಿನಯದ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಭಾರೀ ಸದ್ದು ಮಾಡಿತ್ತು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466