ಹಾಗಲಕಾಯಿ ರುಚಿಗೆ ಕಹಿ ಅನಿಸಬಹುದು ಆದ್ರೆ ಇದರಲ್ಲಿದೆ ದೇಹಕ್ಕೆ ಸಿಹಿ ನೀಡುವಂತ ಆರೋಗ್ಯಕಾರಿ ಗುಣಗಳು, ನೀವು ಹಾಗಲಕಾಯಿಯನ್ನು ಒಮ್ಮೊಮ್ಮೆ ಸೇವಿಸುತ್ತಿದ್ರೆ ಇದರ ಗುಣಗಳನ್ನು ತಿಳಿದುಕೊಳ್ಳಿ. ಹಾಗಲ ಕಾಯಿಯ ಸಿಹಿಗೊಜ್ಜು ಮಾಡಿಕೊಂಡು ನಿಯಮಿತವಾಗಿ ಸೇವಿಸುವುದರಿಂದ ರಕ್ತ ಶುದ್ಧಿಯಾಗುವುದು, ಕರುಳಿನ ಹುಣ್ಣು, ಮೂಲವ್ಯಾದಿ, ಕೆಮ್ಮು ನಿವಾರಣೆಯಾಗುತ್ತದೆ.
ಅಷ್ಟೇ ಅಲ್ಲದೆ ಇನ್ನು ಹಲವು ಉಪಯೋಗಗಳನ್ನು ಹಾಗಲಕಾಯಿ ಹೊಂದಿದೆ ಅವುಗಳ ಬಗ್ಗೆ ತಿಳಿಯೋಣ.. ಹೊಟ್ಟೆ ಹುಳು ಸಮಸ್ಯೆ ಅಂದ್ರೆ ಹೊಟ್ಟೆಯಲ್ಲಿ ಜಂತು ಹುಳಗಳು ಆಗುವಂತ ಸಂದರ್ಭದಲ್ಲಿ ಹಾಗಲಕಾಯಿ ರಸವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಜಂತು ಹುಳಗಳು ನಾಶವಾಗುತ್ತವೆ.
ದೇಹದಲ್ಲಿ ಬೊಜ್ಜು ಬೆಳೆದು ದೇಹದ ತೂಕ ಹೆಚ್ಚಾಗಿದೆ ಅನ್ನೋ ಚಿಂತೆಯಲ್ಲಿದ್ರೆ ಹಾಗಲಕಾಯಿ ನಿಮ್ಮ ಸಹಾಯಕ್ಕೆ ಬರಲಿದೆ ಹೇಗೆ ಅಂತೀರಾ? ಹಾಗಲಕಾಯಿಯನ್ನು ಸೇವನೆ ಮಾಡುವುದರಿಂದ ದೇಹದ ತೂಕ ಕಾಲಾನುಕ್ರಮೇಣ ಕಡಿಮೆಯಾಗುವುದು. ಮುಖದ ಮೇಲಿನ ಮೊಡವೆ ಸಮಸ್ಯೆಗೆ ಹಾಗಲಕಾಯಿ ಸೇವನೆ ಉತ್ತಮ ಮದ್ದು, ಮೊಡವೆಗಳ ಮೇಲೆ ಹಾಗಲಕಾಯಿ ರಸವನ್ನು ಹಚ್ಚುವುದರಿಂದ ಮೊಡವೆ ನಿವಾರಣೆಯಾಗುವುದು.
ಊಟಕ್ಕೂ ಮುಂಚೆ ಹಸಿ ಹಾಗಲಕಾಯಿಯನ್ನು ತಿಂದು ಊಟ ಮಾಡಿದರೆ ಸೇವನೆ ಮಾಡಿದಂತ ಆಹಾರ ಬೇಗನೆ ಜೀರ್ಣವಾಗುತ್ತದೆ. ಅಷ್ಟೇ ಯಾಕೆ ಮೂಲವ್ಯಾಧಿಯಿಂದ ನರಳುತ್ತಿರುವವರು ಮಜ್ಜಿಗೆಯಲ್ಲಿ ಹಾಗಲಕಾಯಿ ರಸವನ್ನ ಬೆರೆಸಿ ಪ್ರತಿದಿನ ಸೇವಿಸಿದರೆ ನೋವು ಮತ್ತು ಉರಿ ಕಡಿಮೆಯಾಗುತ್ತದೆ.
ಮೆಂತ್ಯೆಯನ್ನು ಹೀಗೆ ಬಳಸಿ ಕೊಲೆಸ್ಟ್ರಾಲ್, ಹಾಗು ಮುಖದ ಮೇಲಿನ ಕಪ್ಪು ಕಲೆ, ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಿಕೊಳ್ಲಬಹುದು
ಇತ್ತೀಚಿನ ದಿನಗಳಲ್ಲಿ ಬೊಜ್ಜು ನಿವಾರಣೆ ಹೇಗೆ ಮಾಡಿಕೊಳ್ಳೋದು ಅನ್ನೋದೇ ಒಂದು ಚಿಂತೆಯಾಗಿಬಿಟ್ಟಿದೆ ಕೆಲವರಿಗೆ, ಆದ್ರೆ ನಿಮ್ಮ ಮನೆಯಲ್ಲಿರುವ ಮೆಂತ್ಯೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಣೆ ಮಾಡಿಕೊಳ್ಳಬಹುದು. ಮನುಷ್ಯನ ದೇಹದಲ್ಲಿ ಕೊಲೆಸ್ಟ್ರಾಲ್ ಇರಬೇಕು ಆದ್ರೆ ಅನಗತ್ಯವಾದ ಕೊಲೆಸ್ಟ್ರಾಲ್ ದೇಹಕ್ಕೆ ಹಲವು ರೋಗಗಳನ್ನು ತರುವಂತೆ ಮಾಡುತ್ತದೆ ಇದನ್ನು ಹೇಗೆ ನಿಯಂತ್ರಿಸಿಕೊಳ್ಳಬಹುದು ಅನ್ನೋದನ್ನ ಮುಂದೆ ನೋಡಿ..
ಮನೆಯಲ್ಲಿರುವ ಮೆಂತ್ಯೆ ಕಾಳನ್ನು ನೀರಲ್ಲಿ ಬೆರಸಿ ಸೇವನೆ ಮಾಡೋದ್ರಿಂದ ಬೊಜ್ಜು ನಿವಾರಣೆ ಮಾಡಿಕೊಳ್ಳಬಹುದು ಅದು ಹೇಗೆ ಅಂದರೆ, ಸ್ವಲ್ಪ ಒಣ ಮೆಂತ್ಯೆಯನ್ನು ಹುರಿದುಕೊಂಡು ಅದು ತಣ್ಣಗಾದ ಮೇಲೆ ಅದನ್ನು ಮೆತ್ತಗಿನ ಪುಡಿ ಮಾಡಿಕೊಳ್ಳಿ, ನಂತರ ಅದನ್ನು ಗಾಳಿಯಾಡದ ಒಂದು ಬಾಟಲಿನಲ್ಲಿ ಇಟ್ಟುಕೊಂಡು ದಿನಕ್ಕೆ ಎರಡು ಬಾರಿಯಂತೆ ಪ್ರತಿದಿನ ಒಂದು ಗ್ಲಾಸ್ ನೀರಿನಲ್ಲಿ ಆ ಪುಡಿಯನ್ನು ಬೆರಸಿ ಸೇವನೆ ಮಾಡಬೇಕು.
ಅಷ್ಟೇ ಅಲ್ಲದೆ ಮೆಂತ್ಯೆ ಸೊಪ್ಪನ್ನು ಊಟದಲ್ಲಿ ನಿಯಮಿತವಾಗಿ ಸೇವನೆ ಮಾಡುತ್ತ ಇದ್ರೆ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬೇಗನೆ ನಿವಾರಣೆ ಮಾಡಿಕೊಳ್ಳುವುದರ ಜೊತೆಗೆ ಉತ್ತಮ ಆರೋಗ್ಯವನ್ನು ಪಡೆಯಬಹುದು.
ಮೆಂತ್ಯೆಯನ್ನು ಹೀಗೆ ಬಳಸಿ ಮುಖದ ಮೇಲಿನ ಕಪ್ಪು ಕಲೆಗಳನ್ನು ಕಡಿಮೆ ಮಾಡಿಕೊಳ್ಳಬಹುದು, ಹೇಗೆಂದರೆ ಮೆಂತ್ಯೆ ಎಲೆಗಳನ್ನು ರುಬ್ಬಿ ಪೇಸ್ಟ್ ತರಹ ಮಾಡಿ ಮುಖದ ಮೇಲಿನ ಕಪ್ಪುಕಲೆಗಳ ಮೇಲೆ ಹಚ್ಚಿ ೧೦ ರಿಂದ ೧೫ ನಿಮಿಷದ ನಂತರ ಮುಖ ತೊಳೆದು ಕೊಳ್ಳಬೇಕು ಹೀಗೆ ವಾರದಲ್ಲಿ ೩-೪ ಬಾರಿ ಮಾಡಬೇಕು.
ಕೂದಲು ಉದುರುವುದನ್ನು ನಿಯಂತ್ರಿಸುವ ಮೆಂತ್ಯೆ:ಮೆಂತ್ಯೆ ಪುಡಿಯನ್ನು ನೆನಸಿ ಪೇಸ್ಟ್ ತರಹ ಮಾಡಿಕೊಂಡು ಕೂದಲಿನ ಪ್ಯಾಕ್ ಮಾಡಿಕೊಳ್ಳೋದ್ರಿಂದ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ, ಹಾಗು ಇದರಲ್ಲಿರುವ ಪೊಟ್ಯಾಶಿಯಂ ಅಂಶ ಕೂದಲನ್ನು ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ.