ಹೌದು ಈರುಳ್ಳಿ ನಮ್ಮ ದೇಹಕ್ಕೆ ಬೇಕಾಗುವ ಅಗತ್ಯದ ಪೋಷಕಾಂಶಗಳನ್ನು ಕೊಡುವಂತದ್ದು ಆಗಿದೆ. ಈ ಈರುಳ್ಳಿಯನ್ನು ಈ ರೀತಿಯಲ್ಲಿ ಬಳಸಿದರೆ ನಿಮ್ಮ ದೇಹಕ್ಕೆ ಯಾವೆಲ್ಲ ಆರೋಗ್ಯಕಾರಿ ಲಾಭಗಳಿವೆ ಗೋತ್ತಾ? ನಿಜಕ್ಕೂ ಅಚ್ಚರಿ ಪಡುತ್ತೀರ ಇದನ್ನು ಬಳಸಿ ನೋಡಿದರೆ.
ಈರುಳ್ಳಿಯ ವಿಶೇಷತೆ ಏನು ? ಈರುಳ್ಳಿಗಳು ಸಲ್ಫ್ಯೂರಿಕ್ ಕಾಂಪೌಂಡ್ಸ್ಗಳಲ್ಲಿ ಹೇರಳವಾಗಿದೆ. ಮನುಷ್ಯನ ದೇಹದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ಕೊಂದು ರಕ್ತವನ್ನು ಶುದ್ಧೀಕರಿಸುತ್ತದೆ. ನಿಮ್ಮ ಮನೆಯ ಕೋಣೆಯಲ್ಲಿ ಈರುಳ್ಳಿ ಇಡುವುದರಿಂದ ವೈರಸ್ಗಳು, ಜೀವಾಣು, ಮತ್ತು ರಾಸಾಯನಿಕಗಳ ಗಾಳಿಯನ್ನು ವಿಮುಕ್ತಿಗೊಳಿಸುತ್ತದೆ..
ಇಷ್ಟೊಂದು ವಿಶೇಷತೆಯನ್ನು ಹೊಂದಿರುವಂತ ಈರುಳ್ಳಿಯನ್ನು ಮಲಗುವ ಮುನ್ನ ತಳಪಾದಕ್ಕೆ ಕಟ್ಟಿಕೊಂಡು ಮಲಗುವುದರಿಂದ ಏನೆಲ್ಲಾ ಲಾಭವಿದೆ ಅನ್ನೋದನ್ನ ತಿಳಿಯೋಣ ಬನ್ನಿ.
ಈರುಳ್ಳಿಯನ್ನು ತಳಪಾದಕ್ಕೆ ರೌಂಡ್ ಶೇಪ್ ನಲ್ಲಿ ಕತ್ತರಿಸಿ ಕಟ್ಟಿಕೊಂಡರೆ ದೇಹದೊಳಗೆ ವಿಷಕಾರಿ ಅಂಶ ಪ್ರವೇಶಿಸುವುದಿಲ್ಲ.ಈ ಉಪಾಯದಿಂದ ಶೀತ ಕೂಡ ಕಡಿಮೆಯಾಗುತ್ತದೆ.
ಹೊಟ್ಟೆಯೊಳಗಿನ ಆಮ್ಲ ತೆಗೆದು ಹಾಕುತ್ತದೆ, ಹೊಟ್ಟೆ ಸೋಂಕು, ಮೂತ್ರಪಿಂಡದ ಕಲ್ಲು ನಿವಾರಣೆಯಾಗುತ್ತದೆ. ಕಿವಿನೋವು ಶಮನವಾಗುತ್ತದೆ, ಇದರಿಂದ ಊದಿಕೊಂಡಿರುವ ಗ್ರಂಥಿಯು ಮೊದಲಿನ ಸ್ಥಿತಿಗೆ ಬರುತ್ತದೆ. ಅಷ್ಟೇ ಅಲ್ಲದೆ ಕಾಲಿನ ದುರ್ವಾಸನೆ ನಿವಾರಣೆಗೂ ಇದು ಉತ್ತಮ.
ಇನ್ನು ಹಸಿ ಈರುಳ್ಳಿ ಸೇವನೆ ಮಾಡುವುದರಿಂದ ಶರೀರದಲ್ಲಿ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ. ಕೆಲವರಂತೂ ಹಸಿ ಈರುಳ್ಳಿಯನ್ನು ಊಟದ ಜೊತೆಗೆ ಸೇವನೆ ಮಾಡುವ ಅಭ್ಯಾಸ ಮಾಡಿರುತ್ತಾರೆ ಇದು ಕೂಡ ಒಳ್ಳೆಯದು, ಆದ್ರೆ ಅತಿಯಾದರೆ ಅಮೃತವು ಕೂಡ ವಿಷ ಅನ್ನೋದು ನಿಮಗೆ ಗೊತ್ತಿರಲಿ ಯಾಕೆಂದರೆ ಅತಿಯಾದರೆ ಅನಾರೋಗ್ಯ ಸಮಸ್ಯೆ ಕಾಡಬಹುದು ಹಾಗಾಗಿ ಮಿತವಾಗಿ ಸೇವನೆ ಮಾಡಿ ಹಿತವಾದ ಅರೋಗ್ಯ ನಿಮ್ಮದಾಗಿಸಿಕೊಳ್ಳಿ.