ಪ್ರಪಂಚದಲ್ಲಿ ಅನೇಕ ಪ್ರವಾಸಿ ತಾಣಗಳಿವೆ ಕೆಲವು ಭಯಾನಕವಾಗಿವೆ, ಇನ್ನು ಕೆಲವು ಸುಂದರವಾಗಿವೆ. ಹಾಗಾದರೆ ಪ್ರಪಂಚದ ಭಯಾನಕ, ರೋಮಾಂಚನಕಾರಿ, ಸಾಹಸಿಗರಿಗೆ ಪ್ರಿಯವಾದ ತಾಣಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಕ್ಲಿಫ್ ಆಫ್ ಮದರ್ ಐಲ್ಯಾಂಡ್ ಇಲ್ಲಿಗೆ ಪ್ರತಿ ವರ್ಷ ಸಾವಿರಾರು ಜನರು ಬರುತ್ತಾರೆ. ಕೆಲವರು ಮುಂದೆ ಹೆಜ್ಜೆ ಇಡಲು ಭಯಪಡುತ್ತಾರೆ ಇನ್ನು ಕೆಲವರು ಇಲ್ಲಿಗೆ ಹೇಗೆ ಬಂದೆವು ಎಂದು ಅಳುತ್ತಾರೆ. ಐಲ್ಯಾಂಡ್ ಸಮುದ್ರತೀರವನ್ನು ನೋಡಲು ಬಹಳ ಅದ್ಭುತವಾಗಿದೆ ಹಾಗೆಯೇ ಭಯಾನಕವಾಗಿದೆ. ಇಲ್ಲಿರುವ ಬೆಟ್ಟಗಳಲ್ಲಿ ಸಹಜ ಸ್ಥಿತಿಯಲ್ಲಿ ನಿರ್ಮಾಣಗೊಂಡಿರುವ ರೋಡ್ಸ್ ಗಳಿವೆ. ಈ ರೋಡಿನಲ್ಲಿ ಎಂಟು ಕಿಲೋಮೀಟರ್ ವರೆಗೂ ಸೈಕಲ್ ತುಳಿಯಬಹುದು. ಪ್ರತಿವರ್ಷ ಬಹಳಷ್ಟು ಜನರು ಇಲ್ಲಿಗೆ ಬರುತ್ತಾರೆ ಆದರೆ ಬಂದವರಲ್ಲಿ ಅರ್ಧ ಜನ ಡ್ರಾಪ್ ಮಾಡುತ್ತಾರೆ. ವಾಲ್ಕೆನೊ ಬೋರ್ಡಿಂಗ್ ಇದೊಂದು ಅಗ್ನಿಪರ್ವತವಾಗಿದ್ದು ಕೆಲವರು ಬೋರ್ಡ್ ಮೇಲೆ ಕುಳಿತು ಅಗ್ನಿಪರ್ವತದ ಬೆಟ್ಟದ ಮೇಲಿಂದ ಜಾರುತ್ತಾ ಕೆಳಗೆ ಬರುತ್ತಾರೆ. ಹೀಗೆ ಜಾರುವಾಗ ಗಂಟೆಗೆ 90 ಕಿಲೋಮೀಟರ್ ಸ್ಪೀಡ್ ಇರುತ್ತದೆ. ಇದನ್ನು ವಾಲ್ಕೆನೊ ಬೋರ್ಡಿಂಗ್ ಎಂದು ಕರೆಯುತ್ತಾರೆ. ಅಗ್ನಿಪರ್ವತ ಯಾವಾಗ ಬೇಕಾದರೂ ಸ್ಪೋಟ ಆಗಬಹುದು.
ಡೇವಿಲ್ಸ್ ಫೂಲ್ ಇದು ವಿಕ್ಟೋರಿಯಾ ಫಾಲ್ಸ್ ನ ಅಂಚಿನಲ್ಲಿ ಇದೆ. ವಿಕ್ಟೋರಿಯಾ ಪಾಲ್ಸ್ ನ ಅಗಲ ಸೆವೆನ್ ಕಿಲೋಮೀಟರ್, ಆಳ 104 ಮೀಟರ್. ಪ್ರಪಂಚದ ಅತಿ ದೊಡ್ಡ ಜಲಪಾತಗಳಲ್ಲಿ ಒಂದಾದ ವಿಕ್ಟೋರಿಯಾ ಫಾಲ್ಸ್ ನ ಅಂಚಿನಲ್ಲಿ ಈಜಿದರೆ ಅದೊಂದು ಭಯಾನಕ ಅನುಭವ. ಒಂದು ಸಣ್ಣ ತಪ್ಪಾದರೂ ಜೀವಕ್ಕೆ ಆಪತ್ತು ಬರುತ್ತದೆ. ಒಂದಾನೊಂದು ಕಾಲದಲ್ಲಿ ದೇವಾನುದೇವತೆಗಳು ಇಲ್ಲಿಗೆ ಬಂದು ಸ್ನಾನ ಮಾಡುತ್ತಿದ್ದರು ಎಂದು ಅಲ್ಲಿನ ಸ್ಥಳೀಯರು ನಂಬಿದ್ದಾರೆ. ಇಲ್ಲಿಗೆ ಯಾರಿಗೂ ನೇರವಾಗಿ ಬರಲು ಪ್ರವೇಶವಿಲ್ಲ, ಪ್ರದೇಶದ ಬಗ್ಗೆ ತಿಳಿದುಕೊಂಡಿರುವವರು ಒಬ್ಬರು ನಿಮ್ಮ ಜೊತೆ ಬರುತ್ತಾರೆ ಅವರು ಮಾರ್ಗದರ್ಶನ ನೀಡುತ್ತಾರೆ. ಟೋರ್ ಟುಂಗಾ ನಾರ್ವೆ ಇಲ್ಲಿರುವ ಒಂದು ಬೆಟ್ಟದ ಅಂಚಿನಲ್ಲಿ ಒಂದು ಅದ್ಭುತವಾದ ಕಲ್ಲು ಇರುತ್ತದೆ. ಇದು ಸಮುದ್ರ ಮಟ್ಟಕ್ಕೆ 1.1 ಕಿಲೋಮೀಟರ್ ಎತ್ತರದಲ್ಲಿ ಇರುತ್ತದೆ. ಗಾಳಿಯಲ್ಲಿ ತೇಲುತ್ತಿರುವ ಹಾಗೆ ಕಾಣುತ್ತಿರುವ ಇಲ್ಲಿಗೆ ಹೋಗುವುದು ಅಷ್ಟು ಸುಲಭವಲ್ಲ. ಬಹಳ ಕಷ್ಟಪಟ್ಟು ಈ ಬೆಟ್ಟವನ್ನು ಹತ್ತಬೇಕು. ಕಲ್ಲುಬಂಡೆ ಜಾರುತ್ತದೆ ಕೆಲವು ಕಡೆ ಸಾಹಸ ಮಾಡಬೇಕಾಗುತ್ತದೆ. ಕೆಲವರು ಭಯವಾಗಿ ಅರ್ಧಕ್ಕೆ ನಿಲ್ಲಿಸುತ್ತಾರೆ ಇನ್ನು ಕೆಲವರು ಪ್ರಾಣವನ್ನು ಪಣವಾಗಿಟ್ಟು ಬೆಟ್ಟವನ್ನು ಏರುತ್ತಾರೆ.
ಜರಾ ಬೋಲ್ಟೆನ್ ನಾರ್ವೆ ಇದು ನೋಡಲು ಬಹಳ ಸುಂದರವಾಗಿದೆ ಅಷ್ಟೇ ಭಯಂಕರವಾಗಿದೆ. ಎರಡು ದೊಡ್ಡ ಬೆಟ್ಟಗಳ ನಡುವೆ ಒಂದು ಕಲ್ಲು ಇರುತ್ತದೆ ಅದರ ಮೇಲೆ ನಿಂತು ಕ್ಯಾಮೆರಾ ಕಡೆ ನೋಡುತ್ತಾ ಸ್ಮೈಲ್ ಮಾಡುತ್ತಾ ಫೋಟೋ ತೆಗೆಸಿಕೊಳ್ಳಬಹುದು ಆದರೆ ಯಾವುದೇ ಕಾರಣಕ್ಕೂ ಕೆಳಗೆ ನೋಡಬಾರದು, ಒಂದು ವೇಳೆ ನೋಡಿದರೆ ಕೈಕಾಲು ಶೇಕ್ ಆಗುತ್ತದೆ. ಇಲ್ಲಿ ಫೋಟೋ ತೆಗೆಸಿಕೊಳ್ಳಬೇಕೆಂದರೆ ಧೈರ್ಯ ಇರಬೇಕು. ಎಲಿಫೆಂಟ್ ಕಿಂಗ್ಡಮ್ ಥೈಲ್ಯಾಂಡ್ ಈ ಪ್ರದೇಶ ಭಯಂಕರವಾದ ಮೊಸಳೆಗಳಿಂದ ತುಂಬಿದೆ. ಇಲ್ಲಿ ಒಂದು ಕೆರೆ ಇದೆ ಅದರ ತುಂಬಾ ಮೊಸಳೆಗಳಿವೆ. ಈ ಕೆರೆಯಲ್ಲಿ ಪಂಜರದಂತಿರುವ ದೋಣಿಯಲ್ಲಿ ಪ್ರವಾಸಿಗರು ಹೋಗಬೇಕು ಹೀಗೆ ಹೋಗುವಾಗ ಮೊಸಳೆಗಳಿಗೆ ಆಹಾರ ಕೊಡುತ್ತಾರೆ. ಕೆಲವು ಕಾರಣಗಳಿಂದ ಇದನ್ನು ಶೆಡ್ ಡೌನ್ ಮಾಡಿದ್ದಾರೆ.
ಮಸಾಯಿ ಮಾರಾ ಸಫಾರಿ ಕೀನ್ಯಾದ ಮಸಾಯಿ ಮಾರಾ ನ್ಯಾಷನಲ್ ಪಾರ್ಕ್ ನಲ್ಲಿ ಈ ಸಫಾರಿ ಇದೆ. ಇದೊಂದು ಭಯಾನಕ ಸಫಾರಿ ಇಲ್ಲಿ ಸಫಾರಿ ಹೋಗುವಾಗ ಭಯಾನಕವಾದ ಕಾಡುಪ್ರಾಣಿಗಳನ್ನು ನೇರವಾಗಿ ನೋಡಬಹುದು, ಅವು ಬೇಟೆಯಾಡುವುದನ್ನು ನೇರವಾಗಿ ನೋಡಬಹುದು. ಕೆಲವೊಮ್ಮೆ ಅವು ಪ್ರವಾಸಿಗರ ಮೇಲೆ ಅಟ್ಯಾಕ್ ಮಾಡಬಹುದು ಆದ್ದರಿಂದ ಇದನ್ನು ಡೇಂಜರ್ ಸಫಾರಿ ಎಂದು ಹೇಳುತ್ತಾರೆ. ಇಲ್ಲಿ ಮಸಾಯಿ ಜನಾಂಗದವರು ಇರುತ್ತಾರೆ ಇವರಿಗೆ ಕಾಡು ಪ್ರಾಣಿಗಳೆಂದರೆ ಭಯವೇ ಇಲ್ಲ ಸಿಂಹದ ಎದುರು ನಿಲ್ಲುತ್ತಾರೆ, ಅವು ಬೇಟೆಯಾಡಿದ ಮಾಂಸವನ್ನು ಕಬಳಿಸುತ್ತಾರೆ. ಚೀನಾದಲ್ಲಿರುವ ಗ್ಲಾಸ್ ಬ್ರಿಡ್ಜ್ ಇದು ಕೂಡ ಭಯಾನಕವಾದ ಪ್ರದೇಶವಾಗಿದೆ.