ಕೆಲವು ದಿನಗಳಿಂದ ಕೊರೋನ ವೈರಸ್ ದೇಶದಾದ್ಯಂತ ಭೀಕರ ಪರಿಣಾಮವನ್ನು ಉಂಟುಮಾಡಿತು ಇದೀಗ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದು ಲಾಕ್ ಡೌನ್ ಅನ್ ಲಾಕ್ ಮಾಡಲಾಗುತ್ತಿದೆ ಆದರೂ ಮೊದಲಿನ ಜೀವನಕ್ಕೆ ಮರಳಲು ಸಧ್ಯ ಆಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಹೋಗುವವರಿಗೆ ಸ್ವಂತ ವಾಹನ ಖರೀದಿಸುವ ಅವಶ್ಯಕತೆಯಿದೆ. ಹಣವಿಲ್ಲದ ಇಂಥ ಪರಿಸ್ಥಿತಿಯಲ್ಲಿ ಸ್ವಂತ ವಾಹನ ಖರೀದಿಸುವುದು ದೂರದ ಮಾತು ಆದರೆ ಈ ಸಮಸ್ಯೆಗೆ ಡ್ರೂಮ್ ಆನ್ಲೈನ್ ವೇದಿಕೆ ದ್ವಿಚಕ್ರ ವಾಹನದ ಮೇಲೆ ಆಫರ್ ಕೊಡುವ ಮೂಲಕ ಜನರಿಗೆ ನೆರವಾಗಿದೆ. ಹಾಗಾದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಕೊರೋನ ವೈರಸ್ ದೇಶದಾದ್ಯಂತ ದಿನೇ ದಿನೇ ಹರಡುತ್ತಿದ್ದು ಇದೀಗ ಒಂದು ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ ಆದರೆ ಮನಬಂದಂತೆ ಗುಂಪು ಸೇರುವಂತಿಲ್ಲ ಇಂತಹ ಪರಿಸ್ಥಿತಿಯಲ್ಲಿ ಸ್ವಂತ ವಾಹನ ಖರೀದಿಸುವುದು ಅನಿವಾರ್ಯವಾಗಿದೆ. ಹಣವಿರುವವರಿಗೆ ಸ್ವಂತ ವಾಹನ ಖರೀದಿಸುವುದು ದೊಡ್ಡ ವಿಷಯವೇನಲ್ಲ ಆದರೆ ಲಾಕ್ ಡೌನ್ ಕಾರಣದಿಂದ ಕೆಲಸ ಕಳೆದುಕೊಂಡು ಆದಾಯ ಇಲ್ಲದೆ ಇರುವವರು ಸ್ವಂತ ವಾಹನ ಖರೀದಿಸುವುದು ಅಸಾಧ್ಯ. ಈ ಸಮಸ್ಯೆಗೆ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಪ್ರಸಿದ್ಧವಾಗಿರುವ ಹೋಂಡಾ ಕಂಪನಿ ವಾಹನವೊಂದರ ಮೇಲೆ ಭಾರಿ ಆಫರ್ ನೀಡುತ್ತಿದೆ. ಆಫರ್ ಅಡಿಯಲ್ಲಿ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಹೋಂಡಾ ಆಕ್ಟೀವಾ ಗಾಡಿಯನ್ನು ಕೇವಲ 25 ಸಾವಿರ ರೂಪಾಯಿಗೆ ಖರೀದಿಸಬಹುದಾಗಿದೆ. ಡ್ರೂಮ್ ಎಂಬ ಆನ್ಲೈನ್ ವೇದಿಕೆಯಲ್ಲಿ ಆಫರ್ ಲಭ್ಯವಿದೆ. ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಹಾಗೂ ಖರೀದಿಗೆ ಪ್ರಸಿದ್ಧಿಯಾಗಿರುವ ಡ್ರೂಮ್ ಈ ಕೊಡುಗೆಯನ್ನು ನೀಡಿದೆ.
110ಸಿಸಿಯ ಸೆಕೆಂಡ್ ಹ್ಯಾಂಡ್ ಆ್ಯಕ್ಟೀವಾ ಕೇವಲ 18ಸಾವಿರ ಕಿಲೋ ಮೀಟರ್ ಓಡಿದ್ದು, ಸುಸ್ಥಿತಿಯಲ್ಲಿದೆ. 2013ನೇ ಸಾಲಿನ ಮಾದರಿಯಾಗಿರುವ ಈ ವಾಹನ ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ಗೆ 55 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಆದ್ದರಿಂದ ಇದಕ್ಕೆ ಬೇಡಿಕೆ ಹೆಚ್ಚಿದೆ. ಆಟೋ ಮತ್ತು ಕಿಕ್ ಸ್ಟಾರ್ಟ್, 10ಇಂಚು ಅಗಲದ ಚಕ್ರ, ಆ್ಯಂಟಿ ಥೆಫ್ಟ್ ಅಲರಾಮ್ ಸೇರಿದಂತೆ ಬಹುತೇಕ ಎಲ್ಲಾ ಸೌಲಭ್ಯಗಳು ಉತ್ತಮವಾಗಿದೆ. ಗಾಡಿಗೆ ವರ್ಷವಾಗಿದ್ದರೂ ನಿರ್ವಹಣೆ ಚೆನ್ನಾಗಿರುವ ಕಾರಣ ಹೊಸದರಂತೆಯೇ ಕಾಣುತ್ತದೆ ಅಲ್ಲದೆ ದೆಹಲಿಯ ರಸ್ತೆಗಳಲ್ಲಿ ಅಡ್ಡಾಡಿರುವ ಬೈಕ್ ಇದಾಗಿದ್ದು, ಕಚ್ಚಾ ರಸ್ತೆಗಳಲ್ಲಿ ಓಡಿಸಿರದ ಕಾರಣ ಹೆಚ್ಚು ಸುಸಜ್ಜಿತವಾಗಿದೆ ಎನ್ನುವುದು ಮಾರಾಟಗಾರರ ಮಾತು. ಒಂದುವೇಳೆ ಈ ಬೈಕ್ ಕೊಳ್ಳಲು ನಿಮಗೆ ಆಸಕ್ತಿ ಇದ್ದರೆ ಭಾರಿ ಪೈಪೋಟಿಯ ನಡುವೆ ಪ್ರಯತ್ನಿಸಬೇಕಾಗಿದೆ. ಸೆಕೆಂಡ್ ಹ್ಯಾಂಡ್ ಆ್ಯಕ್ಟೀವಾ ಗಾಡಿಯನ್ನು ಮಾರಾಟಕ್ಕಿಟ್ಟಿರುವ ಡ್ರೂಮ್ ಜಾಲತಾಣದಲ್ಲಿ ಹೆಚ್ಚಿನ ವಿವರಗಳು ಲಭ್ಯವಿದ್ದು ಅಲ್ಲಿಗೆ ಭೇಟಿ ನೀಡಿ ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸಿ.
ಯಾವುದೇ ಸಂದರ್ಭದಲ್ಲಿ ಸೆಕೆಂಡ್ ಹ್ಯಾಂಡ್ ವಾಹನ ಕೊಳ್ಳುವಾಗ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುವುದು ಅತ್ಯಗತ್ಯವಾಗಿದ್ದು, ಆರ್ಸಿ ಯಾರ ಹೆಸರಿನಲ್ಲಿ ಇರುತ್ತದೆಯೋ ಅವರೊಂದಿಗೆ ನೇರ ವ್ಯವಹಾರ ನಡೆಸಿ ಅಲ್ಲದೆ ಯಾವುದೇ ಕಾರಣಕ್ಕೂ ಕಾನೂನಿನ ಅಡೆತಡೆಗಳನ್ನು ನಿವಾರಿಸಿಕೊಳ್ಳದೆ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡಬೇಡಿ ಇದರಿಂದ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಈಗಾಗಲೆ ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್ ಪಡೆದಿರುವ ಹೋಂಡಾ ಆಕ್ಟೀವಾ ಗಾಡಿಯ ಮೇಲೆ ಇಷ್ಟು ದೊಡ್ಡ ಆಫರ್ ಕೊಡುತ್ತಿರುವುದು ಆಶ್ಚರ್ಯವೆನಿಸುತ್ತದೆ ಆದರೂ ಇದು ಸತ್ಯ. ಒಟ್ಟಿನಲ್ಲಿ ಕೊರೋನ ವೈರಸ್ ನಿಂದ ತತ್ತರಿಸಿದ ಜನರಿಗೆ ಇದೀಗ ಲಾಕ್ ಡೌನ್ ಅನ್ ಲಾಕ್ ಆಗಿದ್ದು ಕೆಲಸಕ್ಕೆ ಹೋಗುವವರಿಗೆ ಸ್ವಂತ ವಾಹನ ಅವಶ್ಯವಿದ್ದು ಡ್ರೂಮ್ ಆನ್ಲೈನ್ ವೇದಿಕೆ ಮೂಲಕ ನಿಮಗೆ ರಕ್ಷಣೆಯನ್ನು ಒದಗಿಸುವ ಸ್ವಂತ ಗಾಡಿಯನ್ನು ಖರೀದಿಸಿ. ಈ ಮಾಹಿತಿ ಈ ಸಂದರ್ಭದಲ್ಲಿ ಬಹಳ ಉಪಯುಕ್ತವಾಗಿದ್ದು ಪ್ರತಿಯೊಬ್ಬರಿಗೂ ತಿಳಿಸಿ, ಹಾಗೆಯೇ ಡ್ರೂಮ್ ವೇದಿಕೆಯ ಅತ್ಯುತ್ತಮ ಆಫರ್ ಅನ್ನು ಸರಿಯಾಗಿ ಬಳಸಿಕೊಳ್ಳಿ.