ಮನುಷ್ಯ ದಿನೆ ದಿನೇ ಬದಲಾಗುತ್ತಿದ್ದಾನೆ ಅವನು ಬದಲಾದಂತೆ ಅವನ ಜೀವನ ಶೈಲಿ ಹಾಗೂ ಆಹಾರ ಶೈಲಿ ಕೂಡ ಬದಲಾವಣೆಯತ್ತ ಸಾಗುತ್ತದೆ, ಚಿನ್ನ ಬೆಳ್ಳಿ ತಟ್ಟೆಗಿಂತ ಬಾಳೆಲೆ ಊಟ ಬೆಸ್ಟ್ ಅನ್ನುತ್ತದೆ ಆಯುರ್ವೇದ. ಹೌದು ಹಿಂದಿನ ದಿನಗಳಲ್ಲಿ ಬಾಳೆಯ ಪ್ರಯೋಜನವನ್ನು ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದರು ಬಾಳೆ ಎಲೆ ಬಾಳೆ ಹಣ್ಣು ಬಾಳೆ ದಿಂಡು ಈ ಎಲ್ಲವು ಕೂಡ ಮನುಷ್ಯನ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೊಂದಿವೆ.
ಬಾಳೆಲೆ ಊಟ ಅನ್ನೋದು ಇತ್ತೀಚಿನ ದಿನಗಳಲ್ಲಿ ಮದುವೆ ಊಟದಲ್ಲಿ ಅಥವಾ ಯಾವುದೇ ಶುಭ ಕಾರ್ಯಗಳಲ್ಲಿ ಬಳಸುತ್ತಾರೆ ಇನ್ನು ಕೆಲವು ಹೋಟಲ್ ಗಳಲ್ಲಿ ಲಭ್ಯವಿದೆ ಬಾಳೆಲೆ ಊಟ. ಹೌದು ವಿಷ್ಯಕ್ಕೆ ಬರೋಣ ಬಾಳೆಲೆ ಊಟ ಆರೋಗ್ಯಕ್ಕೆ ಹೇಗೆ ಸಹಕಾರಿ ಯಾಕೆ ಬಾಳೆಲೆ ಊಟ ಮಾಡಿದ್ರೆ ಒಳ್ಳೆಯದು ಅನ್ನೋದು ನಿಮಗೆ ಮುಂದೆ ತಿಳಿಯುತ್ತದೆ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಕೂಡ ಹಂಚಿಕೊಳ್ಳಿ.
ಮೊದಲನೆಯದಾಗಿ ಬಾಳೆಲೆ ಊಟ ರೋಗಗಳನ್ನು ನಿಯಂತ್ರಿಸುತ್ತದೆ ಹಾಗೂ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತದೆ, ಬಾಳೆಲೆ ಊಟ ಮಾಡುವುದರಿಂದ ಅಜೀರ್ಣತೆ ಮುಂತಾದ ಸಮಸ್ಯೆಗಳು ಕಾಡೋದಿಲ್ಲ ಅಷ್ಟೇ ಅಲ್ಲದೆ ಈ ಬಾಳೆಲೆಯಲ್ಲಿಇಜಿಸಿಜಿಯಂಥ ಪಾಲಿಫಿನಾಲ್ಸ್ ಹೇರಳವಾಗಿರುತ್ತವೆ. ಈ ಪಾಲಿಫಿನಾಲ್‌ಗಳು ನ್ಯಾಚುರಲ್ ಆ್ಯಂಟಿ ಆಕ್ಸಿಡೆಂಟ್ಸ್ ಆಗಿದ್ದು, ಕ್ಯಾನ್ಸರ್‌ನಂಥ ಕಾಯಿಲೆ ಹರಡುವ ಕೋಶಗಳ ವಿರುದ್ಧ ಅದು ಹೋರಾಡುತ್ತದೆ, ಈ ಎಲೆಯ ಮೇಲೆ ಆಹಾರವನ್ನು ಬಡಿಸಿದಾಗ, ಆಹಾರವು ಈ ಆ್ಯಂಟಿ ಆಕ್ಸಿಡೆಂಟ್‌ಗಳನ್ನು ಹೀರಿಕೊಂಡು ಅದನ್ನು ಆಹಾರ ಸೇವಿಸುವ ನಮ್ಮ ದೇಹಕ್ಕೆ ಒದಗಿಸುತ್ತವೆ.
ಇನ್ನು ಬಾಳೆಲೆ ಊಟವನ್ನು ಮಾಡುವುದರಿಂದ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದ್ದು, ಅವುಗಳ ಮೇಲಿನ ವ್ಯಾಕ್ಸ್ ಕೋಟಿಂಗ್ ಎಲೆ ಕೊಳಕಾಗದಂತೆ ನೋಡಿಕೊಳ್ಳುತ್ತದೆ, ಇದು ವಾಟರ್ ಪ್ರೂಫ್ ಕೂಡಾ ಜೊತೆಗೆ ಕೀಟಾಣುಗಳನ್ನು ಕೊಲ್ಲುವ ಕೆಲಸವನ್ನೂ ಮಾಡುತ್ತದೆ. ಅಂದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅಷ್ಟೇ ಅಲಲ್ದೆ ಬಾಳೆಲೆ ಊಟವನ್ನು ಮಾಡುವುದರಿಂದ ಹಾರ ರುಚಿ ನೀಡುತ್ತದೆ. ಆದ್ದರಿಂದ ಬಾಳೆಲೆ ಊಟ ಮಾಡಿ ದೇಹಕ್ಕೆ ಉತ್ತಮದವ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.