ಈ ಎಕ್ಕದ ಗಿಡವನ್ನ ನಾವು ಸರ್ವೇ ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪ್ರತಿದಿನ ಕಾಣುತ್ತಿರುತ್ತೇವೆ, ಆದರೆ ಇದನ್ನ ನಾವು ಇದು ಒಂದು ಸಾಮಾನ್ಯ ಗಿಡವಷ್ಟೇ ಎಂದು ತಿಳಿದಿರುತ್ತೇವೆ, ಆದರೆ ಅದು ತಪ್ಪು ಈ ಎಕ್ಕದ ಗಿಡದಲ್ಲಿ ಹಲವು ವಿಶೇಷತೆಗಳಿವೆ. ಈ ಎಕ್ಕದ ಗಿಡದಲ್ಲಿ ಎರಡು ಬಗೆಗಳಿವೆ, ಒಂದು ಬಿಳಿ ಎಕ್ಕದ ಗಿಡ, ಇನ್ನೊಂದು ಕೆಂಪು ಬಣ್ಣದ ಎಕ್ಕದ ಗಿಡ. ಇದರಲ್ಲಿ ಬಿಳಿ ಬಣ್ಣದ ಎಕ್ಕದ ಗಿಡಕ್ಕೆ ಬಹಳ ವಿಶೇಷವಾದ ಸ್ಥಾನಮಾನವಿದೆ.
ನಮ್ಮ ಹಿಂದೂ ಪುರಾಣದಲ್ಲಿ ಈ ಗಿಡಕ್ಕೆ ವಿಶೇಷ ಸ್ಥಾನಮಾನವಿದೆ, ರಥಸಪ್ತಮಿಯ ದಿನದಂದು ಈ ಎಕ್ಕದ ಗಿಡದ ಎಲೆಗಳನ್ನ ಧರಿಸಿ ನದಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಮ್ಮ ಹಿಂದೂ ಪುರಾಣ ಹೇಳುತ್ತದೆ. ಬಿಳಿ ಎಕ್ಕದ ಗಿಡದ ಎಲೆಗಳನ್ನ ವಿಶೇಷವಾಗಿ ಗಣೇಶ ಪೂಜೆಗೆಂದು ಬಳಸುತ್ತಾರೆ, ಬಿಳಿ ಎಕ್ಕದ ಗಿಡ ಹೆಚ್ಚಾಗಿ ಕಂಡುಬರುವುದಿಲ್ಲ. ಈ ಎಕ್ಕದ ಗಿಡದ ಎಲೆಗಳನ್ನ ಆಗಿನ ಕಾಲದಲ್ಲಿ ಆಯುರ್ವೇದದ ಔಷಧವಾಗಿ ಬಳಸುತಿದ್ದರು. ಈ ಗಿಡವು ನಮ್ಮ ದೇಹದ ಚರ್ಮ ಮತ್ತು ಮೂಳೆಗಳ ಸಮಸ್ಯೆಗಳಿಗೆ ರಾಮಬಾಣವಿದ್ದಂತೆ. ಈ ಗಿಡದ ಎಲೆಗಳಿಗೆ ಸ್ವಲ್ಪ ಉಪ್ಪು ಬೆರೆಸಿ ನುಣ್ಣಗೆ ರುಬ್ಬಿ ಮೂಳೆಗಳ ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಗಾಯಗಳಿದ್ದರೆ ಇದರ ಎಲೆಗಳನ್ನ ಒಣಗಿಸಿ ಅದನ್ನ ಪುಡಿ ಮಾಡಿಟ್ಟುಕೊಂಡು ಗಾಯಗಳ ಮೇಲೆ ಹಚ್ಚಿದರೆ ಎಂತಹ ಗಾಯಗಳಾಗಿದ್ದರು ಬೇಗ ಗುಣವಾಗುತ್ತವೆ.
ಈ ಗಿಡದ ಬೇರನ್ನ ನಾವು ಮಲಗುವ ದಿಂಬಿನ ಕೆಳಗೆ ಇಟ್ಟು ಮಲಗಿದರೆ ಕೆಟ್ಟ, ಹಾಗೂ ಭಯ ಬೀಳಿಸುವಂತಹ ಕನಸುಗಳು ಬೀಳುವುದಿಲ್ಲ, ಹಾಗೂ ಹೀಗೆ ಮಾಡುವುದರಿಂದ ಗ್ರಹ ದೋಷಗಳು ಸಹ ನಿವಾರಣೆಯಾಗುತ್ತವೆ. ಪುರಾಣಗಳ ಪ್ರಕಾರ ಬಿಳಿ ಎಕ್ಕದ ಗಿಡದ ಬೇರಿನಲ್ಲಿ ಗಣಪತಿ ನೆಲೆಸಿದ್ದಾನೆ ಎಂಬುದಾಗಿದೆ, ಆದ್ದರಿಂದ ಬಿಳಿ ಎಕ್ಕದ ಗಿಡವನ್ನ ಹಿಂದೂಗಳು ಈಗಲೂ ಸಹ ಪೂಜೆ ಮಾಡುತ್ತಾರೆ. ಈ ಗಿಡದ ಹಾಲು ವಿಷವಾದರೂ ಇದು ಸೌಂದರ್ಯಕ್ಕೆ ಬಹಳ ಉಪಯುಕ್ತಕಾರಿ. ಈ ಗಿಡದ ಎಲೆಯಿಂದ ಬರುವ ಹಾಲಿಗೆ ಸ್ವಲ್ಪ ಅರಿಶಿಣವನ್ನ ಬೆರೆಸಿ ಕಣ್ಣಿಗೆ ತಾಗದಂತೆ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಚಿಂತಿಸದಿರಿ ಒಂದೆ ಕರೆ ಮೂಲಕ ಪರಿಹಾರ ಕಂಡುಕೊಳ್ಳಿ. ಕರೆ ಮಾಡಿ 9845559493 ಸಮಸ್ಯೆ ಎಷ್ಟೇ ಕಠಿಣವಾದರೂ 2 ದಿನದಲ್ಲಿ ಪರಿಹಾರ ನೀಡುತ್ತೇವೆ. ಎಂ ಪಿ ಶರ್ಮ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ