ಪುಣೆಯಲ್ಲಿನ ಹರಾಜು ಮಾರುಕಟ್ಟೆಯಲ್ಲಿ ಗುಣಮಟ್ಟ ಹಾಗೂ ಉತ್ತಮ ಮಾಂಸಕ್ಕೆ ಹೆಸರುವಾಸಿಯಾಗಿರುವ ಮ್ಯಾಡ್ಗಿಯಾಲ್ ಕುರಿ 70 ಲಕ್ಷಕ್ಕೆ ಮಾರಾಟವಾಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಮಾಂಸದ ಗುಣಮಟ್ಟಕ್ಕೆ ಹೆಸರುವಾಸಿಯಾದ ಮದಾಗ್ಯಾಲ್ ತಳಿಯ ಕುರಿಗೆ 70 ಲಕ್ಷ ರೂಪಾಯಿ ಬೇಡಿಕೆ ಬಂದಿದೆ. ಉತ್ತಮ ಮೈಕಟ್ಟು ಹೊಂದಿದ ಮದಾಗ್ಯಾಲ್ ತಳಿಯ ಕುರಿಗೆ ಬಹಳ ಬೇಡಿಕೆ ಬಂದಿದೆ. ಇದು ಎತ್ತರವಾಗಿದ್ದು , ಇತರ ತಳಿಗಿಂತ ಹೆಚ್ಚಿನ ಬೆಳವಣಿಗೆಯನ್ನು ಹೊಂದಿರುತ್ತದೆ. ರಾಜ್ಯದ ಪಶು ಸಂಗೋಪನಾ ಇಲಾಖೆ ಅಕಾರಿಗಳು ಈ ವಿಷಯವನ್ನು ಖಾತ್ರಿಪಡಿಸಿದ್ದು, ಹಲವಾರು ವಿಶೇಷತೆಗಳಿಂದ ಕೂಡಿರುವ ಈ ತಳಿಯ ಕುರಿ ಬೆಳವಣಿಗೆಗೆ ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಕೂಡಾ ಈ ವಿಶಿಷ್ಟ ತಳಿಯನ್ನು ಹೆಚ್ಚಿಸುವ ಸಲುವಾಗಿ ಹೆಚ್ಚಿನ ಒತ್ತು ನೀಡುತ್ತಿದೆ. ಸಧ್ಯ ಸಾಂಗ್ಲಿ ಜಿಲ್ಲೆಯ ಒಂದರಲ್ಲೇ ಒಂದೂವರೆ ಲಕ್ಷ ಮದಾಗ್ಯಾಲ್ ತಳಿಯ ಕುರಿಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಗೆ ದೇಶದ ನಾನಾ ಭಾಗಗಳಿಂದ ಕುರಿಗಳನ್ನು ತರಲಾಗುತ್ತದೆ. ವಿಶೇಷವಾದ ಮದಾಗ್ಯಾಲ್ ತಳಿಯ ಕುರಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಎರಡು ಕುರಿಗಳು ಭಾರೀ ಬೆಲೆಗೆ ಅಂದರೆ ಸರಿಸುಮಾರು 1.5 ಕೋಟಿಗೆ ಮಾರಾಟವಾಗಿವೆ ಎಂದು ವರದಿಯಾಗಿದೆ.
ಸಾಂಗ್ಲಿಯ ಜಾಟ್ ತಹಸಿಲ್ ಗ್ರಾಮದ ಬಾಬು ಮೆಟ್ಕಾರಿ 200ಕ್ಕೂ ಹೆಚ್ಚು ಕುರಿಗಳನ್ನು ಹೊಂದಿದ್ದು, ಅದರಲ್ಲಿ ಮ್ಯಾಡ್ಗಿಯಾಲ್ ಕುರಿಗೆ ಲಕ್ಷಗಟ್ಟಲೆ ಬೇಡಿಕೆ ಸಿಕ್ಕಿರುವುದು ನನಗೆ ಅಚ್ಚರಿ ಜತೆಗೆ ಖುಷಿಗೆ ಪಾರವೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ. ನಾನು ಮಾರಾಟ ಮಾಡಿದ ಮ್ಯಾಡ್ಗಿಯಾಲ್ ಕುರಿಗಳಿಗೆ ಸರ್ಜಾ ಮತ್ತು ಮಾರು ಎಂದು ಹೆಸರಿಟ್ಟಿದ್ದೆ. ನಾನು ಪಕ್ಕಾ ಮೋದಿ ಅವರ ಅಭಿಮಾನಿಯಾಗಿದ್ದು, ಅವರ ಪ್ರಾಬಲ್ಯವನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಜಾತ್ರೆಯಲ್ಲಿ ಖರೀದಿದಾರನೊಬ್ಬ ಈ ತಳಿಯ ಕುರಿಗಳಲ್ಲಿ ಒಂದನ್ನು ಖರೀದಿಸಲು ಮುಂದಾದಾಗ ಮಾಲೀಕರು ಆಶ್ಚರ್ಯ ಪಟ್ಟಿದ್ದರು. ಈ ಕುರಿಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇರುವುದರಿಂದ ಈ ತಳಿಯ ಕುರಿಗಳನ್ನು ಸರ್ಜಾ ಎಂದು ಕರೆಯುತ್ತಾರೆ. ಇದರ ಮರಿಗಳು ಕೂಡಾ ಐದರಿಂದ ಹತ್ತು ಲಕ್ಷಕ್ಕೂ ಮಾರಾಟ ಆಗುತ್ತವೆ. ಆದರೆ ಈ ಮದಗ್ಯಾಲ್ ಕುರಿಗಳು ಮಾಲೀಕರ ಕುಟುಂಬಕ್ಕೆ ಅದೃಷ್ಟ ತಂದುಕೊಟ್ಟಿದ್ದು, ಅವುಗಳನ್ನು ಮಾರಾಟ ಮಾಡಲು ತನಗೆ ಇಷ್ಟ ಇಲ್ಲ ಎಂದು ಮಾಲೀಕರು ಹೇಳುತ್ತಾರೆ.
ಒಂದು ಪ್ರಾಣಿಗೆ ಇಷ್ಟೊಂದು ಹಣವನ್ನು ಯಾರು ಕೊಡುತ್ತಾರೆ. ಮುಕ್ತ ಮಾರುಕಟ್ಟೆಯಿಂದಾಗಿ ನನಗೆ ಈ ಲಾಭ ಸಿಕ್ಕಿದೆ ಎಂದು ಸರ್ಕಾರದ ಯೋಜನೆಯನ್ನು ಕೊಂಡಾಡಿದ್ದಾರೆ. ಹಾಗೂ ಮಹಾರಾಷ್ಟ್ರ ಕುರಿ ಮತ್ತು ಮೇಕೆ ಅಭಿವೃದ್ದಿ ನಿಗಮದ ಸಹಾಯಕ ನಿರ್ದೇಶಕ ಡಾಕ್ಟರ್ ಸಚಿನ್ ತಕಾಡೆ ಅವರು ಮದಾಗ್ಯಾಲ ತಳಿಯ ವಿಶೇಷ ಗುಣಗಳು, ಅದರ ಉಪಯುಕ್ತತೆ ಗೆ ಹೆಚ್ಚಿನ ಬೇಡಿಕೆ ಇದ್ದು , ಇಲಾಖೆಯು ಈ ತಳಿಯನ್ನು ಪುನರುಜ್ಜೀವನ ಗಳಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.