ಕಳೆದ ಎರಡು ದಶಕಗಳಲ್ಲಿ ನಮ್ಮ ಜಗತ್ತು ಕಂಡ ಬದಲಾವಣೆ ಹೇಳತೀರದ್ದು. ಹೊಸ ಹೊಸ ಆವಿಷ್ಕಾರಗಳು ಮನುಷ್ಯನ ಜೀವನವನ್ನು ಸುಲಭಗೊಳಿಸುವ ಪ್ರಯತ್ನಕ್ಕೆ ಎಂದೇ ನಡೆಯುತ್ತಿರುತ್ತವೆ. ನಮ್ಮ ಭೂಮಂಡಲದಲ್ಲಿ ದಿನದಿಂದ ದಿನಕ್ಕೆ ಸಾವಿರಾರು ಸಂಶೋಧನೆಗಳು ನಡೆಯುತ್ತಲೇ ಇರುತ್ತವೆ, ಇಡೀ ಜಗತ್ತು ವೇಗವಾಗಿ ಮುನ್ನುಗ್ಗುತ್ತಿದೆ. ಇತ್ತೀಚೆಗೆ ನಡೆದ ಹೊಸ ಆವಿಷ್ಕಾರ ಎಂದೇ ಹೇಳಬಹುದು ಇದನ್ನು ಇನ್ನೇನು ಬೆಂಗಳೂರು ಮೂಲದ ಕಾರ್ ಕಂಪನಿಯ ಕಡೆಯಿಂದ ಬರಲಿದೆ ಬರೋಬ್ಬರಿ 504 ಕಿಲೊಮೀಟರ್ ಮೈಲೇಜ್ ಕೊಡುವ ಕಾರು.

ಮುಖ್ಯವಾಗಿ ಮರುಬಳಕೆ ಮಾಡಲಾಗದ ಶಕ್ತಿಗಳ ಬಳಕೆಗಿಂತ ಮರುಬಳಕೆ ಮಾಡಲಾಗುವ ಶಕ್ತಿಗಳ ವಿನಿಮಯಕ್ಕೆ ಜಗತ್ತು ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತಿದೆ. ಹಾಗಾಗಿ ಎಲೆಕ್ಟ್ರಿಕಲ್ ಕಾರುಗಳ ಉತ್ಪಾದನೆ ಈಗ ಹೆಚ್ಚಿನ ಮಹತ್ವವನ್ನು ಪಡೆದ ವಿಷಯವಾಗಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ ಡೀಸೆಲ್ ಪೆಟ್ರೋಲ್ ನಂತಹ ಇಂಧನಗಳು ಖಾಲಿಯಾಗುವ ಹಂತವನ್ನು ತಲುಪಿದ್ದು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಅನಿವಾರ್ಯವಾಗಿದೆ. ಕೆಲವು ದೇಶಗಳು ಈ ರಂಗದಲ್ಲಿ ಕ್ಷಿಪ್ರ ಸಾಧನೆಯನ್ನು ಕೂಡ ಈಗಾಗಲೇ ಮಾಡಿವೆ. ಅದರಲ್ಲೂ ಮುಖ್ಯವಾಗಿ ಮೈಲೇಜ್ ವಿಷಯಕ್ಕೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ. ಇದೀಗ ನಮ್ಮ ಭಾರತದ ಪ್ರೈವೇಗ್ ಡೈನಮಿಕ್ ಕಂಪನಿ ಒಂದು ಅದ್ಭುತ ಕಾರನ್ನು ಉತ್ಪಾದಿಸಿದೆ, ಅದರ ಹೆಸರು ಎಕ್ಸ್ಟೆಂಗಷನ್ ಎಂಕೆ1 . ಈ ಕಾರಿನ ಬಗ್ಗೆ ನೀವು ಕೇಳಿದರೆ ನಿಜಕ್ಕೂ ಮೂಗಿನ ಮೇಲೆ ಬೆರಳಿಡುತ್ತಿರಿ.

ಈ ಕಾರು ಬರೋಬ್ಬರಿ ಒಮ್ಮೆ ಚಾರ್ಜ್ ಮಾಡಿದರೆ 504 ಕಿಲೋಮೀಟರುಗಳಷ್ಟು ಮೈಲೇಜ್ ನೀಡುತ್ತದೆ. 4ಸೀಟುಗಳನ್ನು ಹೊಂದಿರುವ ಈ ಕಾರು 196 ಕಿಲೋಮೀಟರ್ ಅಷ್ಟು ಸ್ಪೀಡಿನಲ್ಲಿ ಚಲಿಸಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಕಾರು ಮುಂದಿನ ವರ್ಷ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕಾರು ತಯಾರಿಕಾ ಕಂಪನಿಯು ದೆಹಲಿ ಬೆಂಗಳೂರು ಚೆನ್ನೈ ಅಂತಹ ಮುಖ್ಯ ಮಹಾನಗರಗಳನ್ನು ಗುರಿಯಾಗಿಸಿಕೊಂಡು ಮಾರುಕಟ್ಟೆಗೆ ತರುವ ಚಿಂತನೆಯಲ್ಲಿ ಇದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!