ನಾವು ತೆಗೆದುಕೊಳ್ಳುವ ಆಹಾರವು ಪ್ರೊಟೀನ್ ಯುಕ್ತವಾಗಿದ್ದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಾಲ್ಕು ರೀತಿಯ ಪ್ರೊಟೀನ್ ಯುಕ್ತ ಬೆಳಗಿನ ಉಪಹಾರವನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.
ಮೊದಲನೇ ಉಪಹಾರ ಪನ್ನೀರ್ ಬುರ್ಜಿ ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಎಣ್ಣೆ, ಒಂದು ಈರುಳ್ಳಿ, ಒಂದು ಮೆಣಸು, ಉಪ್ಪು, ಒಂದು ಟೊಮೆಟೊ, ಮೆಣಸಿನ ಪುಡಿ, ಅರಿಶಿಣ, ಪನ್ನೀರ್. ಮಾಡುವ ವಿಧಾನ ಮೊದಲು ಒಂದು ಪಾತ್ರೆಗೆ 1 ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಕಾದ ನಂತರ ಹೆಚ್ಚಿಕೊಂಡ ಈರುಳ್ಳಿ, ಮೆಣಸು, ರುಚಿಗೆ ಬೇಕಾದಷ್ಟು ಉಪ್ಪನ್ನು ಹಾಕಿ ನಂತರ ಟೊಮೆಟೊ, ಅರ್ಧ ಚಮಚ ಮೆಣಸಿನ ಪುಡಿ, ಕಾಲು ಸ್ಪೂನ್ ಅರಿಶಿಣ ಹಾಕಿ 4-5 ನಿಮಿಷ ಫ್ರೈ ಮಾಡಿದ ನಂತರ ಪನ್ನೀರ್ ಹಾಕಿ ಒಂದು ನಿಮಿಷ ಬೇಯಿಸಿ ಟೋಸ್ಟ್ ಮಾಡಿದ ಬ್ರೆಡ್ ನೊಂದಿಗೆ ಸವಿಯಲು ರುಚಿಯಾಗಿರುತ್ತದೆ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದು. ಎರಡನೇಯ ಬೆಳಗಿನ ಉಪಹಾರ ಓಟ್ಸ್ ಮಾಡುವ ವಿಧಾನ ಒಂದು ಪಾತ್ರೆಗೆ ಓಟ್ಸ್ ಮತ್ತು ಹಾಲನ್ನು ಹಾಕಿ ಕುದಿಸಿ ನಂತರ ಇನ್ನೊಂದು ಬೌಲಿಗೆ ಹಾಕಿದ ನಂತರ 1ಚಮಚ ಪೀನಟ್ ಬಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಒಂದು ಸ್ಪೂನ್ ದಾಲ್ಚಿನಿ ಪುಡಿ, ಖರ್ಜೂರ ಹಾಕಿ ಸವಿದರೆ ರುಚಿ ಆಗಿರುತ್ತದೆ ಹಾಗೂ ಆರೋಗ್ಯಕ್ಕೆ ಬಹಳ ಉಪಯುಕ್ತ ಆಹಾರವಾಗಿದೆ.
ಮೂರನೇಯ ಉಪಾಹಾರ ದೋಸೆ ಮಾಡುವ ವಿಧಾನ ಎರಡು ಸ್ಪೂನ್ ಇಡ್ಲಿ ಮಾಡುವ ಅಕ್ಕಿ, ಎರಡು ಸ್ಪೂನ್ ಉದ್ದಿನಬೇಳೆ, ಎರಡು ಸ್ಪೂನ್ ಹೆಸರುಬೇಳೆ, ಎರಡು ಸ್ಪೂನ್ ತೊಗರಿ ಬೇಳೆ, ಎರಡು ಸ್ಪೂನ್ ಡ್ರೈ ಸೋಯಾ ಬೀನ್ಸ್, ಎರಡು ಸ್ಪೂನ್ ಕಡಲೆಬೇಳೆ, ಎರಡು ಸ್ಪೂನ್ ಹೆಸರು ಕಾಳು, ಒಂದು ಸ್ಪೂನ್ ಶೇಂಗಾ, ಒಂದು ಸ್ಪೂನ್ ಬಾದಾಮಿ, ಒಂದು ಸ್ಪೂನ್ ಗೋಡಂಬಿ, ಒಂದು ಸ್ಪೂನ್ ಪಿಸ್ತಾ ಇವುಗಳನ್ನು ತೊಳೆದು ನೀರಿನಲ್ಲಿ 5 ತಾಸು ನೆನೆಸಿಡಬೇಕು. ನಂತರ ಇವುಗಳನ್ನು ಗ್ರೈಂಡ್ ಮಾಡಿಕೊಳ್ಳಬೇಕು ಇದಕ್ಕೆ ಕಟ್ ಮಾಡಿದ ಈರುಳ್ಳಿ, 3 ಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಒಂದು ಸ್ಪೂನ್ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಸ್ಪೂನ್ ಅರಿಶಿಣ, ಒಂದು ಸ್ಪೂನ್ ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಕಾವಲಿಗೆ ಎಣ್ಣೆ ಹಚ್ಚಿ ಒಂದು ದೊಡ್ಡ ಸ್ಪೂನ್ ನಲ್ಲಿ ಹಿಟ್ಟನ್ನು ಕಾವಲಿಯ ಮೇಲೆ ದೋಸೆಯಂತೆ ಹಾಕಿ ಎಣ್ಣೆ ಹಾಕಬೇಕು ದೋಸೆ ಬೆಂದ ನಂತರ ತೆಗೆಯಬೇಕು, ಇದನ್ನು ಚಟ್ನಿ, ತುಪ್ಪದೊಂದಿಗೆ ಸವಿಯಬೇಕು. ನಾಲ್ಕನೇಯ ಉಪಹಾರ ಮಿಕ್ಸ್ ಸಲಾಡ್ ಮಾಡುವ ವಿಧಾನ, ಒಂದು ಪಾತ್ರೆಯಲ್ಲಿ ಒಂದು ಕಪ್ ಮೊಳಕೆ ಬಂದ ಹೆಸರುಕಾಳು, ಅರ್ಧ ಕಪ್ ತುರಿದ ಕ್ಯಾರೆಟ್ ತುರಿ, ಅರ್ಧ ಕಪ್ ದಾಳಿಂಬೆ, ಒಂದು ಮೆಣಸು, ಎರಡು ಸ್ಪೂನ್ ಕಾಯಿತುರಿ, ಕೊತ್ತಂಬರಿ ಸೊಪ್ಪು, ಕಾಲು ಸ್ಪೂನ್ ಲಿಂಬು ರಸ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸವಿಯಬೇಕು ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ನಾಲ್ಕು ಆರೋಗ್ಯಕರ ಪ್ರೊಟೀನ್ ಯುಕ್ತ ಬೆಳಗಿನ ಉಪಹಾರ ಮಾಡುವ ವಿಧಾನವನ್ನು ಎಲ್ಲರಿಗೂ ತಿಳಿಸಿ.