Ultimate magazine theme for WordPress.

22 ವಯಸ್ಸಿನ ಯುವತಿ ಎಮ್ಮೆ ಸಾಕಣೆ ಮಾಡುವ ಮೂಲಕ ತಿಂಗಳಿಗೆ 6ಲಕ್ಷದವರೆಗೆ ಆದಾಯ

0 3

ಮಹಾರಾಷ್ಟ್ರದ ಶ್ರದ್ಧಾ ಧವನ್ ಎಂಬ ೨೨ ವರ್ಷ ವಯಸ್ಸಿನ ಯುವತಿ ತನ್ನ ಪರಿವಾರದ ಕಡೆಯಿಂದ ಹಾಲು ಉತ್ಪಾದನಾ ಘಟಕವನ್ನು ಪ್ರಾರಂಭಿಸಿ ಪ್ರಸ್ತುತ ಪ್ರತೀ ತಿಂಗಳು ಆರು ಲಕ್ಷದವರೆಗೆ ಆದಾಯ ಗಳಿಸುವಷ್ಟು ಸಂಪಾದನೆ ಮಾಡುತ್ತಿದ್ದಾಳೆ. ಇದರ ಕುರಿತಾಗಿ ಈ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅಹಮ್ಮದ್ ನಗರದ ನಿಗೊಜ್ ಗ್ರಾಮದ ಶ್ರದ್ಧಾ ಧವನ್ ಎಂಬ ೨೨ ವರ್ಷ ವಯಸ್ಸಿನ ಯುವತಿ ತನ್ನ ಪರಿವಾರದ ಕಡೆಯಿಂದ ಹಾಲು ಉತ್ಪಾದನಾ ಘಟಕದಲ್ಲಿ ಪ್ರತೀ ತಿಂಗಳು ೮೦ ಎಮ್ಮೆಗಳನ್ನು ಸಾಕಿ ಅವುಗಳಿಂದ ೪೫೦ ಲೀಟರ್ ಹಾಲು ಸಂಗ್ರಹಿಸಿ ಇದರಿಂದ ಬಂದ ಹಣದಿಂದ ಎರಡು ಮಹಡಿಯ ಕೊಟ್ಟಿಗೆಯನ್ನು ನಿರ್ಮಿಸಿದ್ದಾರೆ. ಶ್ರದ್ಧಾ ಧವನ್ ಅವಳ ಪರಿವಾರದ ಕೊಟ್ಟಿಗೆಯಲ್ಲಿ 6 ಎಮ್ಮೆಗಿಂತ ಹೆಚ್ಚಿನ ಎಮ್ಮೆಗಳು ಇರಲಿಲ್ಲ. ಅಹಮ್ಮದ್ ನಗರದಿಂದ ೬೦ km ದೂರದಲ್ಲಿ ಇರುವ ನಿಗೊಜ್ ಗ್ರಾಮದ ೨೧ ವಯಸ್ಸಿನ ಸಂಬಂಧಿಕರು ಒಬ್ಬರು ನೆನಪಿಸಿಕೊಂಡು ಹೇಳುವಂತೆ ೧೯೯೮ ರಲ್ಲಿ ಅವರ ಪರಿವಾರದ ಕೊಟ್ಟಿಗೆಯಲ್ಲಿ ಕೇವಲ ಒಂದೇ ಒಂದು ಎಮ್ಮೆ ಇದ್ದಿತ್ತು. ಸತ್ಯವಾನ್ ಎಂಬ ಹೆಸರಿನ ಶ್ರದ್ಧಾ ತಂದೆ ಒಂದು ಕಾಲದಲ್ಲಿ ಎಮ್ಮೆ ದಲ್ಲಾಳಿ ಆಗಿದ್ದರು. ಆದರೆ ಕಾರಣಾಂತರದಿಂದ ಹಲವಾರು ಅಂಗವೈಫಲ್ಯತೆಯಿಂದ ಬಳಲುತ್ತಿದ್ದ ಶ್ರದ್ಧಾ ತಂದೆಗೆ ತಾನೇ ಸ್ವತಃ ಮನೇ ಮನೆಗೂ ಹೋಗಿ ಹಾಲು ಹಾಕುವುದು ಕಷ್ಟ ಆಗುತ್ತಿತ್ತು. ೨೦೧೧ ರಲ್ಲಿ ಎಲ್ಲವೂ ಬದಲಾಯಿತು ಈ ಎಲ್ಲಾ ಜವಾಬ್ದಾರಿಯನ್ನೂ ತನ್ನ ಮಗಳಾದ ಶ್ರದ್ಧಾ ಗೆ ವಹಿಸಿದರು.

ನನ್ನ ತಂದೆಗೆ ಬೈಕ್ ಹೊಡೆಯಲು ಸಹ ಅಸಾಧ್ಯವಾಗಿತ್ತು ಹಾಗೂ ನನ್ನ ತಮ್ಮ ಜವಾಬ್ಧಾರಿ ವಹಿಸಿಕೊಳ್ಳಲು ಆತ ಇನ್ನೂ ಚಿಕ್ಕವನಾಗಿದ್ದ ಆದ್ದರಿಂದ ೧೧ ನೇ ವಯಸ್ಸಿನಲ್ಲಿ ನಾನೇ ಆ ಜವಾಬ್ಧಾರಿಯನ್ನು ವಹಿಸಿಕೊಂಡೆ. ಆದರೂ ನನಗೆ ಈ ಕೆಲಸ ತುಂಬಾ ವಿಚಿತ್ರ ಹಾಗೂ ವಿಶಿಷ್ಟ ಎನಿಸುತ್ತಿತ್ತು. ಏಕೆಂದರೆ ನಮ್ಮ ಊರಿನಲ್ಲಿ ಯಾವುದೇ ಹೆಣ್ಣುಗಳ ಈ ರೀತಿಯ ದೊಡ್ಡ ಜವಾಬ್ಧಾರಿಯನ್ನು ವಹಿಸಿಕೊಂಡು ಇರಲಿಲ್ಲ”. ಎಂದು ಶ್ರದ್ಧಾ ಹೇಳುತ್ತಾರೆ.

ಬೆಳಗಿನ ಜಾವದಲ್ಲಿ ಶ್ರದ್ಧಾ ಸ್ನೇಹಿತೆಯರು ಶಾಲೆಗೆ ಹೋಗಲು ತಯಾರಿಯಾಗುವ ಸಂದರ್ಭದಲ್ಲಿ ಇವಳು ಹಾಲು ತೆಗೆದುಕೊಂಡು ಹೋಗುವ ಬೈಕನ್ನು ತೆಗೆದುಕೊಂಡು ಊರಿನಲ್ಲಿ ಹಾಗೂ ಹಲವಾರು ಡೈರಿಗಳಿಗೆ ಹಾಲನ್ನು ಹಂಚುತ್ತಿದ್ದಳು. ಈ ಒಂದು ಜವಾಬ್ದಾರಿಯೂ ಅವಳಿಗೆ ತನ್ನ ವಿಧ್ಯಾಭ್ಯಾಸದ ಜೊತೆಗೆ ನಿರ್ವಹಿಸಲು ಬಹಳ ಕಷ್ಟ ಆಗುತ್ತಿತ್ತು. ಆದರೂ ಸಹ ತನ್ನ ಛಲ ಬಿಡದೇ ವಿದ್ಯಾಭ್ಯಾಸವನ್ನು ಮುಂದುವರೆಸಿಕೊಂಡು ತನ್ನ ತಂದೆ ವಹಿಸಿದ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ಅದರ ಪ್ರತಿಫಲ ಎನ್ನುವಂತೆ ಶ್ರದ್ಧಾ ತನ್ನ ತಂದೆಯ ಜೊತೆಗೂಡಿ ಈಗ ಇಡೀ ಜಿಲ್ಲೆಗೆ ಎರಡು ಮಹೈದ್ಯ ಬೃಹತ್ ಕೊಟ್ಟಿಗೆಯನ್ನು ನಿರ್ಮಿಸಿ ಅಲ್ಲಿ ೮೦ ಎಮ್ಮೆಗಳನ್ನು ಸಾಕುತ್ತಿದ್ದಾರೆ. ಹಾಗೂ ಇದರಿಂದ ಇವರ ಕುಟುಂಬಕ್ಕೆ ಪ್ರತೀ ತಿಂಗಳು ಆರು ಲಕ್ಷ ರೂಪಾಯಿ ಆದಾಯ ಬರುತ್ತಿದೆ.

೨೦೧೭ ರಲ್ಲಿ ಗುಜರಾತಿನ ಒಬ್ಬ ದಲ್ಲಾಳಿ ಆಕಳು ಮಾರಲು ಬಂದಾಗ ತಂದೆಯನ್ನೂ ಜೊತೆಗೆ ಕರೆದುಕೊಂಡು ಹೋಗಿದ್ದ ಶ್ರದ್ಧಾ ಅಲ್ಲಿಂದ ಮನೆಗೆ ಹಿಂದಿರುಗುವಾಗ ಆಕೆಯ ತಂದೆ ಯಾವ ಹಸುವನ್ನು ಕೊಯೇಬೇಕು ಎಂದು ಕೇಳಿದಾಗ ಶ್ರದ್ಧಾ ಹಾಗೂ ಆಕೆಯ ತಂದೆಯ ಆಯ್ಕೆ ಒಂದೇ ಆಗಿತ್ತು. ಆಗ ಆ ಸಂದರ್ಭದಲ್ಲಿ ನನಗೆ ಹಸುಗಳ ಬಗ್ಗೆ ಒಳ್ಳೆಯ ಜ್ಞಾನ ಬಂದಿದೆ ಎನ್ನುವುದು ಅರ್ಥ ಆಯಿತು ಹಾಗೂ ಈ ಕೆಲಸವನ್ನು ನಿರ್ವಹಿಸುವ ಹೊಣೆಗಾರಿಕೆ ಬಂದಿದೆ ಎನ್ನುವುದು ತಿಳಿಯಿತು. ೨೦೨೦ ರಲ್ಲಿ ಶ್ರದ್ಧಾ ಫಿಸಿಕ್ಸ್ ವಿಷಯದಲ್ಲಿ ಪದವಿ ಪಡೇದಿದ್ದಾಳೆ. ಅವಳು ಆನ್ಲೈನ್ ಗೆಸ್ಟ್ ಲೆಕ್ಚರ್ ಆಗಿಯೂ ಸಹ ಕಾರ್ಯ ನಿರ್ವಹಿಸುತ್ತಾ ಇದ್ದಾಳೆ. ತನ್ನ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಶ್ಟು ದೊಡ್ಡವಳು ತಾನಲ್ಲ ಎಂದು ಅನಿಸುತ್ತಿತ್ತು ಅವಳಿಗೆ ಈ ಪಾರಿವಾರಿಕ ಡೈರಿ ಬಿಸ್ನೆಸ್ ಯಾವ ಅವಕಾಶಗಳನ್ನು ಕೊಡುತ್ತದೆ ಎಂಬ ಅರಿವು ಇರಲಿಲ್ಲ, ಆದರೂ ಅವಳ ಕುಟುಂಬದವರು ಸೇರಿ ಸಾವಯವ ಡೈರಿ ಹಾಗೂ ಅದರ ಉತ್ಪನ್ನಗಳನ್ನು ತಯಾರಿಸಿ ಗೆಲುವು ಪಡೆದರು. ಶ್ರದ್ಧಾ ತಾಯಿ ಹಾಗೂ ತಮ್ಮ ಸಂತೋಷದಿಂದ ಈ ಒಂದು ಕೆಸಲದಲ್ಲಿ ತನಗೆ ಬಹಳ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಅವರು ಹೇಳುತ್ತಾರೆ. ಹಾಗೆಯೇ ತನ್ನ ತಂದೆ ಇದನ್ನೆಲ್ಲ ವಹಿಸದೆ ಇದ್ದರೆ ಇಷ್ಟೊಂದು ತಿಳುವಳಿಕೆ ತನಗೆ ಬರಲು ಸಾಧ್ಯ ಇರಲಿಲ್ಲ ಎಂದು ಹೇಳುತ್ತಾರೆ ಶ್ರದ್ಧಾ. ಇಷ್ಟು ಚಿಕ್ಕ ವಯಸ್ಸಿಗೇ ಇಷ್ಟು ಸಾಧನೆ ಮಾಡಿದ ಶ್ರದ್ಧಾ ಅವರಿಗೆ ಒಂದು ಮೆಚ್ಚುಗೆ ನೀಡಲೇಬೇಕು.

Leave A Reply

Your email address will not be published.