2023 ರಲ್ಲಿ ಈ ರಾಶಿಯವರಿಗೆ ಶನಿ ಕಾಡಲಿದ್ದಾನೆ, ಶನಿಯ ವಕ್ರ ದೃಷ್ಟಿಯಿಂದ ಪಾರಾಗಲು ಏನ್ ಮಾಡಬೇಕು ತಿಳಿದುಕೊಳ್ಳಿ

0 6

Kannada astrology for shanideva: ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ನವಗ್ರಹಗಳಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎಂದರೆ ನ್ಯಾಯಾಧಾತ ಆಗಿರುವ ಶನಿಗ್ರಹ. ಒಂದು ಗ್ರಹದಿಂದ ಇನ್ನೊಂದು ಗ್ರಹಕ್ಕೆ ಚಲಿಸಲು ಬರೋಬ್ಬರಿ ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಸುದೀರ್ಘ ಅವಧಿಯ ನಂತರ ಕೊನೆಗೂ ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಇದೆ ಜನವರಿ 17ಕ್ಕೆ ಕಾಲಿಡಲಿದ್ದಾನೆ.

ಸದ್ಯಕ್ಕೆ ಮಿಥುನ ಹಾಗೂ ತುಲಾ ರಾಶಿಗಳಲ್ಲಿ (Lord Shani) ಶನಿಯ ಧೈಯ್ಯಾ ನಡೆಯುತ್ತಿದೆ. ಈಗ ಇದೇ ಜನವರಿ ಎಂದು ಶನಿ ರಾಶಿಯನ್ನು ಬದಲಾವಣೆ ಮಾಡುತ್ತಿರುವ ಕಾರಣದಿಂದಾಗಿ ಇವರು ಶನಿಯಿಂದ ಮುಕ್ತಿಯನ್ನು ಪಡೆಯಲಿದ್ದಾರೆ. ಆದರೆ ಈಗ ಶನಿದಶೆಯನ್ನು ಅನುಭವಿಸಲಿರುವವರು ಕರ್ಕ ಹಾಗೂ ವೃಶ್ಚಿಕ ರಾಶಿಯವರು.

ಶನಿಮಹಾತ್ಮ ತನ್ನ ಎರಡು ಸಮಸ್ಯೆಗಳಿಂದ ಕೆಲವೊಂದು ರಾಶಿಯವರಿಗೆ ಆಗಾಗ ಕಾಲಾನುಕ್ರಮದಲ್ಲಿ ಕಷ್ಟಗಳನ್ನು ನೀಡುತ್ತಾನೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದು ಬಂದಿದೆ. ದೈಯ್ಯಾ ಅಂದರೆ ಎರಡುವರೆ ವರ್ಷಗಳ ಕಾಲ ಯಾವ ರಾಶಿಯ ಮೇಲೆ ಶನಿ ಕರ್ಮಾನುಸಾರವಾಗಿ ವಕ್ರ ದೃಷ್ಟಿಯನ್ನು ಬೀರುತ್ತಾನೋ ಅವರಿಗೆ ಕಷ್ಟಗಳನ್ನು ನೀಡುತ್ತಾನೆ. ಇನ್ನು ಸಾಡೇಸಾತಿ ಎಂದರೆ ಶನಿ ಏಳುವರೆ ವರ್ಷಗಳ ಕಾಲ ಕೆಲವೊಂದು ರಾಶಿಯವರಿಗೆ ಅವರ ಕರ್ಮ ಫಲಾನುಸಾರವಾಗಿ ಕಷ್ಟಗಳನ್ನು ನೀಡುತ್ತಾನೆ ಎಂಬುದಾಗಿ ತಿಳಿದುಬಂದಿದೆ.

ವಕ್ರ ದೃಷ್ಟಿಯನ್ನು ಬೀದಿದರೂ ಕೂಡ ಆ ರಾಶಿಯವರು ತಮ್ಮ ಜೀವನದಲ್ಲಿ ಸರಿಯಾಗಿದ್ದರೆ ಶನಿ ಮಹದೇವ ಅದಕ್ಕೆ ಸರಿಯಾಗಿ ಫಲವನ್ನು ನೀಡುತ್ತಾನೆ. ಹೀಗಾಗಿ ಈ ಸಮಯದಲ್ಲಿ ಕರ್ಕ ಹಾಗೂ ವೃಶ್ಚಿಕ ರಾಶಿಯವರು ತಮ್ಮ ಅಹಂ ಸ್ವಭಾವವನ್ನು ಬಿಡಬೇಕು. ಸುಖ ಸುಮ್ಮನೆ ಬೇರೆಯವರ ಮೇಲೆ ನಿಮ್ಮ ನಾಲಿಗೆಯನ್ನು ಹರಿ ಬಿಡಬಾರದು. ಕೆಲಸಗಳನ್ನು ಕಠಿಣ ಪರಿಶ್ರಮದಿಂದ ಮಾಡಬೇಕು.

ನೈತಿಕವಲ್ಲದ ಕೆಲಸಗಳನ್ನು ಯಾವತ್ತೂ ಕೂಡ ಮಾಡಲು ಹೋಗಬೇಡಿ ಶನಿ ಇದನ್ನು ಸಹಿಸುವುದಿಲ್ಲ. ಯೋಗ ಧ್ಯಾನ ಹಾಗೂ ವ್ಯಾಯಾಮಗಳನ್ನು ಮಾಡಿಕೊಂಡು ಆರೋಗ್ಯವನ್ನು ಹದ್ದು ಬಸ್ತಿನಲ್ಲಿಟ್ಟುಕೊಳ್ಳಬೇಕು. ಆರೋಗ್ಯದ ಸಮಸ್ಯೆ ಕಾಡುವಂತಹ ಸಾಧ್ಯತೆ ಹೆಚ್ಚಾಗಿದೆ ಜಾಗೃತೆ ಆಗಿರಿ.

ಹೆಚ್ಚಾಗಿ ಕೋಪವನ್ನು ಮಾಡಿಕೊಳ್ಳಲು ಹೋಗಬೇಡಿ ದೊಡ್ಡ ಮಟ್ಟದ ಅನಾಹುತ ಸಂಭವಿಸಬಹುದು. ಪರಿಹಾರಕ್ಕಾಗಿ ಅಶ್ವತ್ತ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಹಚ್ಚಬೇಕು. ಅನುಕೂಲವಾದಲ್ಲಿ ಬಡವರಿಗೆ ಹಾಗೂ ಅಶಕ್ತರಿಗೆ ಅವರಿಗೆ ಬೇಕಾಗಿರುವಂತಹ ಸಹಾಯವನ್ನು ಮಾಡಿ ಪುಣ್ಯ ಸಂಪಾದನೆಯನ್ನು ಮಾಡಿಕೊಳ್ಳಿ. ಇಷ್ಟು ಮಾತ್ರವಲ್ಲದೆ ಸಾಧ್ಯವಾದಲ್ಲಿ ಪ್ರತಿದಿನ ಸಂಜೆ ಸುಂದರ ಕಾಂಡವನ್ನು ಪಠಿಸಿ. ಇವೆರಡು ರಾಶಿಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೇ ಈ ಕ್ರಮಗಳನ್ನು ಶನಿಯ ಪ್ರಕೋಪದಿಂದ ಪಾರಾಗಲು ಬಳಸಿ.

Leave A Reply

Your email address will not be published.