ಜಗತ್ತಿನಾದ್ಯಂತ ಕರೋನ ತಾಂಡವ ಆಡುತ್ತಾ ಇರುವುದು ತಿಳಿದಿದೆ. ಇದು ನಮ್ಮ ಭಾರತಕ್ಕೂ ಏನು ಹೊರತಾಗಿ ಇಲ್ಲ. ಈಗಾಗಲೇ ಕರೋನ ಭಾರತಕ್ಕೆ ಲಗ್ಗೆ ಇಟ್ಟು ಒಂದು ತಿಂಗಳ ಮೇಲೆ ಆಗಿದೆ. ಇದು ದೇಶದಲ್ಲಿ ಹೆಚ್ಚು ವ್ಯಾಪಕ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಮೊದಲು ಒಂದು ದಿನದ ಕರ್ಫ್ಯೂ ಮಾಡುವುದರ ಮೂಲಕ ಕರೋನ ತಡೆಯಲು ಪ್ರಾರಂಭಿಸಿ ನಂತರ ಮಾರ್ಚ್ 31ರ ವರೆಗೆ ಒಂದು ವಾರದ ಅವಧಿಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿತ್ತು. ಒಂದು ವಾರದಲ್ಲಿ ಕರೋನ ತಡೆಯಲು ಅಥವಾ ಸೋಂಕಿತ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಅಸಾಧ್ಯ ಎಂದು ಲಾಕ್ ಡೌನ್ ಅನ್ನು ಏಪ್ರಿಲ್ ಹದಿನಾಲ್ಕರ ವರೆಗೆ ಅಂದ್ರೆ ಮತ್ತು ಎರಡು ವಾರ ಮುಂದೂಡಿತು. ಹಾಗಾದರೆ ಎಪ್ರಿಲ್ 14 ರ ನಂತರ ಏನಾಗತ್ತೆ? ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಇಲ್ಲಿಗೆ ಮುಗಿಯತ್ತ ಅಥವಾ ಮುಂದುವರಿಯುತ್ತಾ? ಅಷ್ಟರೊಳಗೆ ಈ ವೈರಾಣು ಕಂಟ್ರೋಲ್ ಗೆ ಬರತ್ತಾ ಈಗ ನಮ್ಮ ದೇಶದ ಪರಿಸ್ಥಿತಿ ಹೇಗಿದೆ? ಒಂದುವೇಳೆ ಈ ವೈರಾಣು ಕಂಟ್ರೋಲ್ಗೆ ಬರದೆ ಇದ್ದರೆ ಏನಾಗುತ್ತೆ ಮುಂದೆ ಏನು ಮಾಡಬಹುದು ಅನ್ನೋ ಪ್ರಶ್ನೆ ಕುತೂಹಲ ನಮ್ಮೆಲ್ಲರಲ್ಲೂ ಇದ್ದೆ ಇದೆ. ಇದರ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ.
ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರ ಕೂಡ ಬೇಗ ಎಚ್ಚೆತ್ತುಕೊಂಡಿದೆ. ಪರಿಸ್ಥಿತಿಯ ಆಧಾರದ ಮೇಲೆ ವೇಗವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಆದರೆ ಎಲ್ಲರ ಮನದಲ್ಲಿ ಇರುವುದು ಇಪ್ಪತ್ತೊಂದು ದಿನಗಳ ನಂತರ ಏನು ಎಂಬ ಪ್ರಶ್ನೆ. ಚೀನಾ, ಇಟಲಿ, ಅಮೆರಿಕ ದೇಶಗಳಲ್ಲಿ ಈ ಕರೋನ ಮಹಾ ಮಾರಿ ತನ್ನ ಅಟ್ಟ ಹಾಸ ಮೆರೆಯುತ್ತಿದೆ. ದಿನಕಳೆದಂತೆ ಸಾವಿರಾರು ಕರೋನ ಪ್ರಕರಣಗಳು ದಾಖಲಾಗುತ್ತಿವೆ ಮರಣಗಳು ಸಹ ಹೆಚ್ಚುತ್ತಲೇ ಇದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿನ ಜನರು ಹಾಗೂ ಸರ್ಕಾರ ಬಹಳ ತಡವಾಗಿ ಸ್ಪಂದಿಸಿದ್ದು. ಇದರ ಪರಿಣಾಮ ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿರುವುದು. ಇದನ್ನ ಗ್ರಹಿಸಿದ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆ ದೇಶಗಳ ಹಾಗೆ ನಮ್ಮ ದೇಶ ಆಗಬಾರದು ಎಂದು ಇಪ್ಪತ್ತೊಂದು ದಿನಗಳ ಲಾಕ್ ಡೌನ್ ಜಾರಿಗೆ ತಂದರು.
ಇಪ್ಪತ್ತೊಂದು ದಿನಗಳ ಕಾಲ ಲಾಕ್ ಡೌನ್ ಜಾರಿಗೆ ತರಲು ಮೂರು ಮುಖ್ಯ ಕಾರಣಗಳಿವೆ ಅವುಗಳೆಂದರೆ, ಈ ವೈರಾಣು ಹೆಚ್ಚಾದರೆ ಚಿಕಿತ್ಸೆಗೆ ಬೇಕ್ಕಾದ ವೈದ್ಯಕೀಯ ಸೌಲಭ್ಯಗಳು ನಮ್ಮ ದೇಶದಲ್ಲಿ ಲಭ್ಯ ಇಲ್ಲದೆ ಇರುವುದು. ಜನ ಸಂಖ್ಯೆ ಮತ್ತು ವಿಸ್ತೀರ್ಣ ಎರಡು ರೀತಿಯಲ್ಲಿ ನಮ್ಮ ದೇಶ ದೊಡ್ಡದು. ಇದರಿಂದ ಪರಿಸ್ಥಿತಿ ಕೈ ಮೀರಿ ಹೋದರೆ ನಿಯಂತ್ರಿಸಲು ಅಸಾಧ್ಯ. ಬೇರೆ ದೇಶಗಳ ಹಾಗೆ ಇಲ್ಲಿ ಮರಣದ ಸಂಖ್ಯೆ ಹೆಚ್ಚಾದರೆ ಜನ ಭಯಕ್ಕೆ ಒಳಗಾಗುತ್ತಾರೆ. ಇದರಿಂದ ಪರಿಸ್ಥಿತಿ ಇನ್ನೂ ಹದಗೆಡುತ್ತದೆ. ಅದಕ್ಕಾಗಿ ಅತಿ ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ನಮ್ಮ ದೇಶದಲ್ಲಿ ಜನಸಂಖ್ಯೆಗೆ ಹೋಲಿಸಿದರೆ, ವೈದ್ಯರ ಸಂಖ್ಯೆ, ವೈದ್ಯಕೀಯ ಸೌಲಭ್ಯಗಳು ಮತ್ತು ಆಸ್ಪತ್ರೆಗಳ ಸಂಖ್ಯೆಯೂ ಕಡಿಮೆ. ವೈದ್ಯಕೀಯ ಉಪಕರಣಗಳನ್ನು ಬೇರೆ ದೇಶದಿಂದ ತರಿಸುವುದಕ್ಕು ಸಹ ಸಾಧ್ಯವಿಲ್ಲ. ಯಾಕೆ ಅಂದ್ರೆ ಅಲ್ಲಿನ ಪರಿಸ್ಥಿತಿಯೂ ಸಹ ಹದಗೆಟ್ಟಿದೆ. ಇಂತಹ ಹಲವಾರು ಕಾರಣಗಳಿಂದ ನಮ್ಮ ಕೇಂದ್ರ ಸರ್ಕಾರ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡಿದೆ.
ಜನವರಿ ಕೊನೆಯ ವಾರದಲ್ಲಿ ಯೆ ಈ ಕರೋನ ಜಗತ್ತಿನಾದ್ಯಂತ ಹರಡಲು ಪ್ರಾರಂಭಿಸಿತು. ಒಂದು ತಿಂಗಳ ಹಿಂದೆಯೇ ನಮ್ಮ ದೇಶದಲ್ಲಿ ಲಾಕ್ ಡೌನ್ ಮಾಡಿದ್ರೆ ಚೆನ್ನಾಗಿ ಇರುತ್ತಿತ್ತು ಎಂದು ಕೆಲವು ಜನ ಅಭಿಪ್ರಾಯ ಪಟ್ಟಿದ್ದಾರೆ. ಒಂದು ತಿಂಗಳ ಹಿಂದೆಯೇ ನಮ್ಮ ದೇಶದಲ್ಲಿ ಲಾಕ್ ಡೌನ್ ಮಾಡಿದ್ರೆ ಜನ ಆತಂಕಕ್ಕೆ ಒಳಗಾಗುತ್ತಾರೆ ಅಂತ ತಿಳಿದ ಕೇಂದ್ರ ಸರ್ಕಾರ ಜನರಿಗೆ ಈ ವೈರಾನುವೀನ ತೀವ್ರತೆ ತಿಳಿದ ಮೇಲೆ ಲಾಕ್ ಡೌನ್ ಜಾರಿಗೆ ತಂದಿದೆ ಎಂಬುದನ್ನು ನಾವು ಗಮನಿಸಬೇಕು.
ಮೊದಲು ಒಂದು ದಿನದ ಮಟ್ಟಿಗೆ ಲಾಕ್ ಡೌನ್ ಜಾರಿಗೆ ತಂದು ಅದರ ಜವಾಬ್ಧಾರಿಯನ್ನು ಆಯಾ ರಾಜ್ಯ ಸರ್ಕಾರಕ್ಕೆ ನೀಡಲಾಗಿತ್ತು. ಆದರೆ ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದನ್ನು ತಿಳಿದ ಕೇಂದ್ರ ಸರ್ಕಾರ ಇಡೀ ದೇಶವನ್ನೇ ಇಪ್ಪತ್ತೊಂದು ದಿನಗಳ ಕಾಲ ಲಾಕ್ ಡೌನ್ ಮಾಡತ್ತೆ. ಆದ್ರೆ ಎಪ್ರಿಲ್ ಇಪ್ಪತ್ತೊಂದರ ನಂತರ ಸಹ ಇದು ಕಂಟ್ರೋಲ್ ಆಗುವ ಸಾಧ್ಯತೆ ಇಲ್ಲ ಹಾಗಾಗಿ ಇನ್ನು ಕೆಲವು ದಿನ ಲಾಕ್ ಡೌನ್ ಅನ್ನು ಮುಂದುವರೆಸಬೇಕು ಎಂದು ಕೆಲವು ಜನ ಅಭಿಪ್ರಾಯ ಪಟ್ಟಿದ್ದಾರೆ. ಈ ಇಪ್ಪತ್ತೊಂದು ದಿನದಲ್ಲಿ ವೈರಾಣು ಎಷ್ಟರ ಮಟ್ಟಿಗೆ ಕಂಟ್ರೋಲ್ ಗೆ ಬಂದಿದೆ ಎಂಬುದರ ಮೇಲೆ ಮುಂದಿನ ನಿರ್ಧಾರ.
ಅಮೆರಿಕ ಇಟಲಿ ಅಂತಹ ಶ್ರೀಮಂತ ರಾಷ್ಟ್ರಗಳಲ್ಲಿ ಈ ಮಹಾ ಮಾರಿ ಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಪರಿಸ್ಥಿತಿ ನಮ್ಮ ದೇಶಕ್ಕೆ ಬರಬಾರದು ಅಂತ ನಮ್ಮ ಪ್ರಧಾನಿ ಮೋದಿ ಅವರು ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಇದ್ದಾರೆ. ಒಂದುವೇಳೆ ಅಮೆರಿಕಾ ಕೂಡಾ ಇಂತಹ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ ಈಗಿನ ಸ್ಥಿತಿ ಬರುತ್ತಿರಲಿಲ್ಲ. ನಮ್ಮ ಅದೃಷ್ಟವೋ ಎಂಬಂತೆ ಕೇಂದ್ರ ಸರ್ಕಾರ ಇದರ ಬಗ್ಗೆ ವೇಗವಾಗಿ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಮುಂದಿನ ದಿನಗಳಲ್ಲಿ ಈ ವೈರಾಣು ಎಷ್ಟರ ಮಟ್ಟಿಗೆ ಕಂಟ್ರೋಲ್ ಗೆ ಬರತ್ತೆ ಅನ್ನೋ ಆಧಾರದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ನಾವು ಈಗ ಹೋರಾಡುತ್ತಾ ಇರುವುದು ಯಾವುದೇ ವ್ಯಕ್ತಿಯ ಜೊತೆ ಅಲ್ಲ ಯಾವುದೇ ಶಸ್ತ್ರಾಸ್ತ್ರಗಳ ಜೊತೆಯೂ ಅಲ್ಲ. ನಾವು ಹೋರಾಡುತ್ತಾ ಇರುವುದು ಮತ್ತು ಹೋರಾಡಬೇಕಾಗಿರುವುದು ಕಣ್ಣಿಗೆ ಕಾಣದ ವೈರಾನುವಿಣ ವಿರುದ್ಧ. ಇದು ಭಾರತೀಯರಿಗೆ ಒಂದು ಸುವರ್ಣಾವಕಾಶ ವೇ ಸರಿ. ನಾವು ಗಡಿಯಲ್ಲಿ ಹೋಗಿ ದೇಶ ಸೇವೆ ಮಾಡುವುದೇನು ಇಲ್ಲ. ನಮಗಾಗಿ ನಮ್ಮ ದೇಶದ ಸೈನಿಕರು ವೈದ್ಯರು ಪೊಲೀಸರು ಹಗಲು ರಾತ್ರಿ ಎನ್ನದೆ ಊಟ ನಿದ್ರೆ ಇಲ್ಲದೆ ದುಡಿಯುತ್ತಾ ಇದ್ದಾರೆ. ನಾವು ಸಹ ಅವರೊಂದಿಗೆ ಕೈ ಜೋಡಿಸಿ ನಮ್ಮಿಂದಾದ ಸಹಾಯ ಮಾಡೋಣ. ನಾವು ಮಾಡಬೇಕಾಗಿರುವುದು ಇಷ್ಟೇ ನಾವೇನು ಶಸ್ತ್ರಾಸ್ತ್ರಗಳನ್ನು ಹಿಡಿದು ಯುದ್ಧ ಭೂಮಿಯಲ್ಲಿ ಹೋರಾಡಬೇಕಿಲ್ಲ. ನಾವೇ ಇಂದು ಶಸ್ತ್ರ ವಾಗಿ ನಮ್ಮ ಮನೆಯಲ್ಲಿಯೇ ಇದ್ದು ಕಣ್ಣಿಗೆ ಕಾಣದ ಶತ್ರು ಈ ಕರೋನ ವೈರಾಣುವಿನ ವಿರುದ್ಧ ಹೋರಾಡು ನಮ್ಮ ದೇಶವನ್ನು ಕಾಪಾಡಿಕೊಳ್ಳೋಣ.