ಗೋಡೆಯ ಮೇಲೆ ಹಲ್ಲಿ ಕಂಡರೆ ಹಾವು ಕಂಡಷ್ಟೇ ಭಯವಾಗುತ್ತದೆ. ಗೋಡೆಯ ಮೇಲೆ ಹಲ್ಲಿ ಹೇಗೇ? ಎಲ್ಲಿಂದ ಬರುತ್ತದೆ ಎಂದು ಗೊತ್ತಾಗೋದೆ ಇಲ್ಲ. ಗೋಡೆಯಲ್ಲಿ ತುಂಬಿಕೊಂಡಿರುವ ಹಲ್ಲಿಗಳ ಕಾಟವನ್ನು ತಡೆಯುವುದಾದರೂ ಹೇಗೆ? ಹಲ್ಲಿಗಳನ್ನು ಕೊಲ್ಲಲೆಂದು ನಾನಾ ಔಷಧಿಗಳನ್ನು ಕಂಡುಹಿಡಿಯಲಾಗಿದೆ. ಆದರೆ ನಾವು ಮನೆಯಲ್ಲೇ ಲಭ್ಯವಿರುವ ಪದಾರ್ಥಗಳನ್ನು ಬಳಸಿಕೊಂಡು ಹಲ್ಲಿಗಳನ್ನು ಬಹಳ ಸುಲಭವಾಗಿ ಓಡಿಸಬಹುದು.

ಮುಖ್ಯವಾದ ವಿಚಾರವೆಂದರೆ ಆಹಾರವನ್ನು ತೆರೆದಿಟ್ಟರೆ ಅದು ಹಲ್ಲಿಗಳಿಗೆ ಅಚ್ಚುಮೆಚ್ಚು. ಇದರಿಂದ ಮನೆಯಲ್ಲಿ ಹಲ್ಲಿಗಳು ಸಂತಾನೋತ್ಪತ್ತಿ ಮಾಡಲು ಸಹಾಯವಾಗುತ್ತದೆ. ಆದ್ದರಿಂದ ಉಳಿದಿರುವ ಆಹಾರವನ್ನು ಎಂದಿಗೂ ಮನೆಯಲ್ಲಿ ತೆರೆದಿಡಬೇಡಿ. ಇದು ನೊಣಗಳು ಮತ್ತು ಇರುವೆಗಳನ್ನು ಆಕರ್ಷಿಸುತ್ತದೆ. ಹಾಗೆಯೇ ಹಲ್ಲಿಗಳನ್ನು ಪರೋಕ್ಷವಾಗಿ ಆಕರ್ಷಿಸುತ್ತದೆ.

ಇನ್ನು ಹಲ್ಲಿಗಳು ಕೀಟಗಳನ್ನು ತಿನ್ನುತ್ತವೆ. ಹಲ್ಲಿಗಳು ಹಾವುಗಳಷ್ಟು ಅಪಾಯಕಾರಿಯಲ್ಲ, ಆದರೆ ಅವುಗಳು ನಾವು ತಿನ್ನುವ ಆಹಾರದಲ್ಲಿ ಬಿದ್ದರೆ ಮಾತ್ರ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಎಲ್ಲಿ ಹೋದರೂ ಹಲ್ಲಿಗಳ ಕಾಟ ತಪ್ಪುವುದಿಲ್ಲ. ಏಕೆಂದರೆ ಹಲ್ಲಿಗಳು ಕೂಡ ಎಲ್ಲಾ ಜಾಗದಲ್ಲಿ ಇರುತ್ತವೆ. ಈ ಲೇಖನದ ಮೂಲಕ ನಾವು ಹಲ್ಲಿಗಳನ್ನು ಓಡಿಸಲು ಕೆಲವು ಟಿಪ್ ಗಳನ್ನು ತಿಳಿದುಕೊಳ್ಳೋಣ.

ಯಾವುದೆ ಪ್ರಾಣಿಗಳನ್ನು ಪಕ್ಷಿಗಳನ್ನು, ಕ್ರಿಮಿ ಕೀಟಗಳನ್ನು ಕೊಲ್ಲುವ ಅಧಿಕಾರ ನಮಗೆ ಇರುವುದಿಲ್ಲ. ಭೂಮಿಯ ಮೇಲೆ ಮಾನವನ ವಾಸ ಆರಂಭ ಆಗುವುದಕ್ಕೂ ಮೊದಲೇ ಈ ಜೀವರಾಶಿಗಳು ಅಸ್ಥಿದ್ವದಲ್ಲಿ ಇದ್ದವು ಹಾಗಿದ್ದಾಗ ಅವರ ಜಾಗಕ್ಕೆ ನಾವು ಬಂದು ಅವರನ್ನೇ ಕೊಲ್ಲುವುದು ಸರಿಯಲ್ಲ ಹಾಗಾಗಿ ಹಲ್ಲಿಗಳು ನಮ್ಮ ಮನೆಯ ಹತ್ತಿರ ಸುಳಿಯದಂತೆ ಮಾಡಲು, ನಮ್ಮಿಂದ ದೂರ ಹೋಗುವಂತೆ ಮಾಡಲು ಕೊಳ್ಳುವುದನ್ನು ಬಿಟ್ಟು ಬೇರೆ ಕೆಲವು ಉಪಾಯಗಳಿವೆ.

ಈ ಸಣ್ಣ ಸರೀಸೃಪಗಳನ್ನು ಕೊಲ್ಲದೆ, ಮನೆಯಿಂದ ಹೊರಗೆ ಓಡಿಸುವುದಕ್ಕೆ ಕೆಲವು ಸರಳ ಮನೆಮದ್ದುಗಳನ್ನು ಕೊಡುತ್ತಿದ್ದೇವೆ ನೋಡಿ. ಪೆಪ್ಪರ್ ಸ್ಪ್ರೇ ಬಳಸಿಕಾಳುಮೆಣಸು ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಇರುತ್ತದೆ. ಈ ಕಾಳು ಮೆಣಸು ಹಲ್ಲಿಗಳಿಗೆ ಕಿರಿ ಕಿರಿ ಉಂಟು ಮಾಡುತ್ತದೆ. ಹಾಗೆಯೇ ಅವುಗಳಿಗೆ ಅಲರ್ಜಿ ಉಂಟುಮಾಡುತ್ತದೆ. ಪೆಪ್ಪರ್ ಸ್ಪ್ರೇ ಹಲ್ಲಿಯ ದೇಹದ ಮೇಲೆ ಸುಡುವ ಅನುಭವವನ್ನು ಉಂಟುಮಾಡುತ್ತದೆ. ಇದರಿಂದ ಹಲ್ಲಿಗಳು ದೂರವಿರುತ್ತವೆ.

ಹಲ್ಲಿಯನ್ನು ಓಡಿಸಲು ಇನ್ನೊಂದು ಸುಲಭವಾದ ಔಷಧ ಎಂದರೆ, ಈರುಳ್ಳಿ ಮತ್ತು ಕಹಿಬೇವಿನ ಸೊಪ್ಪು. ಇವೆರಡನ್ನೂ ಜಜ್ಜಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿ ಹಲ್ಲಿ ಬರುವ ಜಾಗದಲ್ಲಿ, ಕಿಟಕಿಯಲ್ಲಿ, ಮೂಲೆಗಳಲ್ಲಿ, ಕಪಾಟು ಮುಂತಾದ ಜಾಗದಲ್ಲಿ ಇಡಬೇಕು. ಇವೆರಡೂ ಪದಾರ್ಥಗಳನ್ನು ಮಿಶ್ರಣ ಮಾಡಿದಾಗ ಬರುವ ವಾಸನೆಯನ್ನು ತಡೆದುಕೊಳ್ಳುವ ಶಕ್ತಿ ಹಲ್ಲಿಗಳಿಗೆ ಇರುವುದಿಲ್ಲ ಅವು ಓಡಿ ಹೋಗುತ್ತವೆ.

ಮುಖ್ಯವಾಗಿ ಗಮನಿಸಬೇಕಾದ ವಿಷಯ ಎಂದರೆ, ಈ ಔಷಧೀಯ ಅವಧಿ ಒಂದು ವಾರದವರೆಗೆ ಇರುತ್ತದೆ. ಒಂದು ವಾರದ ನಂತರ ಇದರ ವಾಸನೆ ಹೋಗುತ್ತದೆ ಆಗ ಮತ್ತೆ ಹಲ್ಲಿ ಬರುವ ಸಾಧ್ಯತೆ ಇರುತ್ತದೆ. ಆಗ ಮತ್ತೆ ಹೀಗೇ ಉಂಡೆಗಳನ್ನು ಮಾಡಿ ಇಡಬೇಕು. ಈ ಉಂಡೆಗಳನ್ನು ನಂತರ ಗಿಡಗಳಿಗೆ ಗೊಬ್ಬರವಾಗಿ ಕೂಡಾ ಬಳಕೆ ಮಾಡಬಹುದು. ಯಾವುದೇ ಅಡ್ಡಪರಿಣಾಮ ಇದರಿಂದ ಇಲ್ಲಾ

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!