Ballary: ಬಳ್ಳಾರಿ ಜಿಲ್ಲಾ ಪಂಚಾಯತ್ ನೇಮಕಾತಿ 2023 ಅಟೆಂಡರ್ (attender) ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದಾರೆ. ಪುರುಷ ಮತ್ತು ಮಹಿಳೆಯರು ಈ ಅರ್ಜಿಯನ್ನು ಸಲ್ಲಿಸಬಹುದು.
ಸಂಸ್ಥೆಯ ಹೆಸರು: ಬಳ್ಳಾರಿ ಜಿಲ್ಲಾ ಪಂಚಾಯತ್
ಪೋಸ್ಟ್ ವಿವರಗಳು: ಮಲ್ಟಿ ಪರ್ಪಸ್ ವರ್ಕರ್,
ಮಸಾಜಿಸ್ಟ್ ಒಟ್ಟು ಹುದ್ದೆಗಳ ಸಂಖ್ಯೆ : 06
ಸಂಬಳ: 10300 – 15821
ಉದ್ಯೋಗ ಸ್ಥಳ: ಬಳ್ಳಾರಿ – ಕರ್ನಾಟಕ
ಅಪ್ಲಿಕೇಶನ್ ಮೋಡ್: ಆಫ್ಲೈನ್
ಪೋಸ್ಟ್ ಹೆಸರು-ಪೋಸ್ಟ್ ಗಳ ಸಂಖ್ಯೆ
ಬಹುಪಯೋಗಿ ಕೆಲಸಗಾರ-2
ಆಯುಷ್ ಮೆಡಿಸಿನ್ ವಿತರಕರು-1
ಮಸಾಜಿಸ್ಟ್-1
ಕ್ಷರಸೂತ್ರ ಅಟೆಂಡರ್-1
ಸ್ತ್ರೀರೋಗ ಶಾಸ್ತ್ರದ ಅಟೆಂಡರ್-1
ಬಳ್ಳಾರಿ ಜಿಲ್ಲಾ ಪಂಚಾಯತ್ ವಿದ್ಯಾರ್ಹತೆ ವಿವರಗಳು:
ಬಳ್ಳಾರಿ ಜಿಲ್ಲಾ ಪಂಚಾಯತ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 7,10ನೇ, ಡಿಪ್ಲೋಮಾವನ್ನ ಪೂರ್ಣಗೊಳಿಸಿರಬೇಕು.
ಬಹುಪಯೋಗಿ ಕೆಲಸಕ್ಕೆ ಎಸ್ ಎಸ್ ಎಲ್ ಸಿ ಮುಗಿಸಿರಬೇಕು ಇವರಿಗೆ 10300 ತಿಂಗಳದ ವೇತನವಾಗಿ ಕೊಡುತ್ತಾರೆ. ಆಯುಷ್ ಮೆಡಿಸಿನ್ ವಿತರಕರಾಗಲು ಎಸೆಸೆಲ್ಸಿ ಅಥವಾ ಡಿಪ್ಲೋಮಾ ಮುಗಿಸಿರಬೇಕು ಮತ್ತು 15821 ಸಂಬಳವಾಗಿರುತ್ತದೆ. ಮಸಾಜಿಸ್ಟ್ ಮಹಿಳೆಯೇ ಬೇಕು ಮತ್ತು 7ನೇ ತರಗತಿ ಪಾಸ್ ಆಗಿರಬೇಕು. ಕ್ಷರಸೂತ್ರ ಅಟೆಂಡರ್ ಮತ್ತು ಸ್ತ್ರೀರೋಗ ಅಟೆಂಡರ್ ಆಗಲು ಎಸ್‍ಎಸ್‍ಎಲ್‍ಸಿ ಪಾಸ್ ಆಗಿರಬೇಕು. ಮಸಾಜಿಸ್ಟ ಮಹಿಳೆ, ಕ್ಷರಸೂತ್ರ ಅಟೆಂಡರ್, ಸ್ತ್ರೀರೋಗ ಶಾಸ್ತ್ರದ ಅಟೆಂಡರ್ ಇವರಿಗೆ 11356 ವೇತನವನ್ನು ನೀಡಲಾಗುವುದು.
ಮಸಾಜಿಸ್ಟ್ -1(ಮಹಿಳೆ), ಕ್ಷರಸ್ತೋತ್ರ ಅಟೆಂಡರ್, ಗೈನೆಕಾಲಜಿ ಅಟೆಂಡರ್: ಅಭ್ಯರ್ಥಿಗಳು ಆಯುಷ್ ಆಸ್ಪತ್ರೆ/ಕ್ಲಿನಿಕ್ ನಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು
ಅರ್ಜಿ ಶುಲ್ಕ: ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಇದನ್ನೂ ಓದಿ..ಬೆಂಗಳೂರು ಮೆಟ್ರೋದಲ್ಲಿ ಕೆಲಸ ಖಾಲಿಯಿದೆ ಆಸಕ್ತರು ಅರ್ಜಿಹಾಕಿ, ಸಂಬಳ 40 ಸಾವಿರ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ದಾಖಲೆಗಳೊಂದಿಗೆ ಜಿಲ್ಲಾ ಆಯುಷ್ ಕಛೇರಿ, ಕೆಎಂಎಫ್ ನಂದಿನಿ ಡೈರಿ ಎದುರು, ಕೊಳಗಲ್ಲು ರಸ್ತೆ ಬಳ್ಳಾರಿ- 583101 ಇಲ್ಲಿಗೆ ಕಳಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಈಗಾಗಲೇ ಪ್ರಾರಂಭವಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 20, 2023.