Kannada News: ಇಂದಿನ ಕಾಲದಲ್ಲಿ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಜೀವನ ನಡೆಸಿಕೊಂಡು ಹೋಗುವವರು ಬಹಳ ಕಡಿಮೆ ಹಾಗಾಗಿ ಎಲ್ಲಿ ನೋಡಿದರಲ್ಲಿ ಸಮಾಜ ವಿದ್ರೋಹಿ ಘಟನೆಗಳು ನಡೆಯುತ್ತಿವೆ ಜನರು ಸ್ವಾರ್ಥಿಗಳಾಗುತ್ತಿದ್ದಾರೆ ಇಂತಹ ಸ್ವಾರ್ಥತನವೂ ಪರರ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ ಮತ್ತು ಸಮಾಜದಲ್ಲಿ ನಡೆಯಬಹುದಾದ ಅಹಿತಕರ ಘಟನೆಗಳಿಗೆ ಕಾರಣವಾಗುತ್ತದೆ.

ಇನ್ನೊಬ್ಬ ತನ್ನ ಪ್ರೇಯಸಿಗಾಗಿ ತನ್ನ ಪತ್ನಿಯ ಒಡವೆಯನ್ನು ಮಾರಾಟ ಮಾಡಿದ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ ಚೆನ್ನೈನ 40 ವರ್ಷದ ಶೇಖರ್ ಎಂಬ ವ್ಯಕ್ತಿ ತನ್ನದೇ ಆದ ಫೈನಾನ್ಸ್ ಒಂದನ್ನು ನಡೆಸಿಕೊಂಡು ಹೋಗುತ್ತಿದ್ದ ಈತನಿಗೆ ಒಬ್ಬ ಸಹೋದರ ಕೂಡ ಇದ್ದು ಇವರಿಬ್ಬರಿಗೂ ಮದುವೆಯಾಗಿತ್ತು ಎರಡು ವರ್ಷಗಳ ಹಿಂದೆ ಶೇಖರ ಪತ್ನಿ ಜಗಳ ಮಾಡಿಕೊಂಡು ಮನೆಯಿಂದ ಹೊರ ಹೋಗಿದ್ದಳು ಈಗ ಸದ್ಯದಲ್ಲಿ ಆಕೆ ಮನೆಗೆ ವಾಪಸ್ ಆಗಿದ್ದಳು.

ಒಮ್ಮೆ ಇವರ ಮನೆಯಲ್ಲಿ ಅಕಸ್ಮಾತ್ ಆಗಿ ಶೇಖರ್ ಪತ್ನಿಯ ಚಿನ್ನಾಭರಣಗಳು ಕಾಣೆಯಾಗಿದ್ದವು ಜೊತೆಗೆ ಶೇಖರ್ನ ತಮ್ಮ ರಾಜೇಶನ ಪತ್ನಿಯ ಕೆಲವು ಒಡವೆಗಳು ಸಹ ನಾಪತ್ತೆಯಾಗಿದ್ದವು ಇದರ ಬಗ್ಗೆ ಪುನಃ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಪೊಲೀಸರು ಈ ಬಗ್ಗೆ ತನಿಖೆ ನಡೆಸುವ ಮುನ್ನ ಶೇಖರ್ ನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು ಈ ಕುರಿತು ತನಿಖೆ ನಡೆಸಿದಾಗ ಶೇಖರ ಸ್ವತಃ ಆತನೇ ಚಿನ್ನವನ್ನು ಕದ್ದಿರುವುದಾಗಿ ತಿಳಿದುಬಂತು ಅಷ್ಟೇ ಅಲ್ಲದೆ ಈತ ಕೇಸರಿ ಪುರಂನಲ್ಲಿ ವಾಸ ಮಾಡುವ ಸ್ವಾತಿ ಎಂಬ 22 ವರ್ಷದ ಯುವತಿಯೊಂದಿಗೆ ಸಂಬಂಧವನ್ನು ಹೊಂದಿದ್ದ ಎಂದು ಬೆಳಕಿಗೆ ಬಂದಿದೆ. ಈತ ಆತನ ಹೆಂಡತಿಯ ಎಲ್ಲಾ ಒಡವೆಗಳನ್ನು ಆಕೆಗೆ ನೀಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ..ಮಗ ಸಾವನ್ನಪ್ಪಿದ ಕೆಲವೇ ದಿನದಲ್ಲಿ ಮಗನ ಹೆಂಡತಿಯನ್ನೇ ಮದುವೆಯಾದ, ನಗುತ್ತಲೇ ಒಪ್ಪಿಗೆ ನೀಡಿದ ಸೊಸೆ, ಮುಂದೆ ಆಗಿದ್ದೇನು?

Leave a Reply

Your email address will not be published. Required fields are marked *