ಜ್ಯೋತಿಷ್ಯಶಾಸ್ತ್ರ ಎನ್ನುವುದು ಸಮುದ್ರವಿದ್ದಂತೆ ಕೆಲವರು ಜ್ಯೋತಿಷ್ಯ ಶಾಸ್ತ್ರವನ್ನು ಬಹಳ ನಂಬುತ್ತಾರೆ ಇನ್ನು ಕೆಲವರು ಅದನ್ನು ಮೂಢನಂಬಿಕೆ ಎನ್ನುತ್ತಾರೆ. ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರ ಎನ್ನುವುದು ಒಂದು ಪ್ರಮುಖ ಭಾಗವಾಗಿದೆ. ಇತ್ತೀಚೆಗೆ ನಿಧನರಾದ ಪುನೀತ್ ರಾಜಕುಮಾರ್ ಅವರ ಜೀವನದ ರಹಸ್ಯ ಸಂಖ್ಯಾಶಾಸ್ತ್ರವನ್ನು ಒಳಗೊಂಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸಂಖ್ಯಾಶಾಸ್ತ್ರವನ್ನು ಭಾರತದಲ್ಲಿ ಮಾತ್ರವಲ್ಲದೆ ಅನೇಕ ದೇಶಗಳಲ್ಲಿ ನಂಬುತ್ತಾರೆ ಹಾಗೆಯೇ ಕೆಲವರು ಸಂಖ್ಯಾಶಾಸ್ತ್ರವನ್ನು ನಂಬುವುದಿಲ್ಲ. ನಂಬರ್ ಗೇಮ್ ಎನ್ನುವುದು ನಮ್ಮ ಜೀವನದಲ್ಲಿ ಕೆಲವು ವಿಚಿತ್ರ ಸನ್ನಿವೇಶಗಳನ್ನು ಸೃಷ್ಟಿಸುವುದಂತು ನಿಜವಾಗಿದೆ. ಚಿತ್ರರಂಗಕ್ಕೆ 2020 ಮತ್ತು 2021 ಕರಾಳ ವರ್ಷಗಳಾಗಿದೆ.

ಒಂದು ವರ್ಷದಲ್ಲಿ ಚಿಕ್ಕ ವಯಸ್ಸಿನ ಅದ್ಭುತ ನಟರನ್ನು ನಾವು ಕಳೆದುಕೊಂಡಿದ್ದೇವೆ. ಸಣ್ಣ ವಯಸ್ಸಿನಲ್ಲಿ ವಿಧಿಯಾಟಕ್ಕೆ ಬಲಿಯಾದ ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಹಾಗೂ ಮೊನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ ಪುನೀತ್ ರಾಜಕುಮಾರ್ ಈ ಮೂರು ನಟರು ಹುಟ್ಟಿದ್ದು 17ನೇ ತಾರೀಖಿನಂದು. ಈ ವಿಷಯದ ಬಗ್ಗೆ ಈಗಾಗಲೆ ಸಾಕಷ್ಟು ಚರ್ಚೆ ನಡೆದಿದೆ.

ಪುನೀತ್ ರಾಜಕುಮಾರ್ ಅವರ ಜೀವನದಲ್ಲಿ ನಡೆದಿರುವ ಘಟನೆಗಳು ನಿಗೂಢವಾಗಿದೆ ಕಾಕತಾಳೀಯವಾದರೂ ಕೆಲವರು ಅಪ್ಪು ಜೀವನದ ರಹಸ್ಯ, ಅವರ ಸಾವಿನ ಬಗ್ಗೆ ಮುನ್ಸೂಚನೆ ಕೊಡುವಂತಿತ್ತು ಎಂದು ಹೇಳುತ್ತಾರೆ. ಪುನೀತ್ ರಾಜಕುಮಾರ್ ಅವರು ಹುಟ್ಟಿದ್ದು 1975 ಮಾರ್ಚ್ 17ರಂದು ಅವರು ಮರಣ ಹೊಂದಿದ್ದು ಅಕ್ಟೋಬರ್ 29ರಂದು. 17 ಮತ್ತು 29ನ್ನು ಒಟ್ಟುಗೂಡಿಸಿದರೆ ಬರುವ ಮೊತ್ತ 46 ಆಗಿದೆ. ಪುನೀತ್ ಅವರು ತಮ್ಮ 46ನೆ ವಯಸ್ಸಿನಲ್ಲಿ ಅಗಲಿರುವ ಕಾರಣ ಅವರು ಜನಿಸಿದ ದಿನಾಂಕ ಮತ್ತು ಮರಣ ಹೊಂದಿದ ದಿನಾಂಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಸಂಖ್ಯಾಶಾಸ್ತ್ರ ಎನ್ನುವುದು ಪುನೀತ್ ಅವರ ಜೀವನದಲ್ಲಿ ಹಾಸುಹೊಕ್ಕಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಪುನೀತ್ ಅವರ ಕೊನೆಯ ಚಿತ್ರವಾದ ಯುವರತ್ನ ಚಿತ್ರ ಅವರ 29ನೇ ಚಿತ್ರವಾಗಿತ್ತು ಆದ್ದರಿಂದ ಈ ಚಿತ್ರದಲ್ಲಿ ಅವರ ಬೈಕ್ ಸಂಖ್ಯೆ 29 ಆಗಿತ್ತು. ಕೆಎ 01 ಪಿಎಸ್ 0029 ಎಂದು ಅದರಲ್ಲಿ ಉಲ್ಲೇಖವಿದ್ದು ನಂಬರ್ ಒನ್ ನಟ ಮತ್ತು 29 ನೇ ಚಿತ್ರ ಎಂಬುದನ್ನು ಬಿಂಬಿಸುತ್ತದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಅವರು ಸಿನಿಮಾದಲ್ಲಿ ಬಳಸಿದ ಕೋಟ್ ಹಿಂದಗಡೆ 29 ಎಂದು ಬರೆದಿತ್ತು ಅಲ್ಲದೆ ಜಾಕಿ ಚಿತ್ರದಲ್ಲಿ ಅವರ ಬೈಕ್ ನಂಬರ್ 29 ಆಗಿತ್ತು. ಅಕ್ಟೋಬರ್ 29ರಂದು ಅವರು ಮರಣ ಹೊಂದಿರುವುದು ವಿಪರ್ಯಾಸ. ಪುನೀತ್ ಅವರ ಸಾವಿನ ಕುರಿತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ ಅವರ ಅಂತಿಮದರ್ಶನಕ್ಕೆ 25 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಪುನೀತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!