ಸಕ್ಕರೆ ಕಾಯಿಲೆ ಇರುವವರು ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ಯಾವುದೇ ಮಾತ್ರೆ ಔಷಧಿಗಳು ಇಲ್ಲದೆಯೇ ಬರೀ ಯೋಗಾಸನ ಮಾಡುವುದರಿಂದ ನಾವು ಸಂಪೂರ್ಣವಾಗಿ ಸಕ್ಕರೆ ಕಾಯಿಲೆಯನ್ನು ಹೇಗೆ ಗುಣಮುಖ ಮಾಡಿಕೊಳ್ಳಬಹುದು ಅನ್ನೋದನ್ನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ಒಂದೊಂದು ತಾಸು ಈ ಯೋಗಾಸನಗಳನ್ನು ಮಾಡುವುದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುವುದು ಅಲ್ಲಾ ಸಂಪೂರ್ಣವಾಗಿ ಗುಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದರಿಂದ ಒಂದೇ ಒಂದು ತಿಂಗಳಲ್ಲಿ ಫಲಿತಾಂಶವನ್ನು ಕಾಣಬಹುದು. ಇದು ಕುಳಿತು ಮಾಡುವ ಆಸನ ಆಗಿದ್ದು , ನೇರವಾಗಿ ಕಾಲು ಚಾಚಿ ಕುಳಿತುಕೊಂಡು ಎರಡೂ ಕೈಗಳನ್ನು ಹಿಂದಕ್ಕೆ ಇಟ್ಟುಕೊಂಡು ಮೂಗಿನಿಂದ ಶ್ವಾಸ ಬಿಟ್ಟು , ತೆಗೆದುಕೊಳ್ಳುತ್ತಾ ಎರಡೂ ಭುಜಗಳನ್ನು ಎಡಕ್ಕೆ ಮತ್ತು ಬಲಕ್ಕೆ ಸಾಧ್ಯ ಆದಷ್ಟು ತಿರುಗಿಸಬೇಕು. ಈ ರೀತಿ ಮಾಡುವುದರಿಂದ ಹೊಟ್ಟೆಯ ಭಾಗದಲ್ಲಿ ಕರುಳಿನಲ್ಲಿ ಜೀರ್ಣ ಆಗದೇ ಇರುವ ಕೊಬ್ಬಿನ ಅಂಶದ ಪರ್ದಾರ್ಥಗಳು ಜೀರ್ಣ ಆಗಲು ಸಹಾಯಕಾರಿ ಆಗಿ ಮಲ ಮೂತ್ರ ದ ಮೂಲಕ ಹೊರಗೆ ಹೋಗುವುದು. ಈ ಮೂಲಕ ಸಕ್ಕರೆ ಕಾಯಿಲೆ ಕಡಿಮೆ ಮಾಡಿಕೊಳ್ಳಬಹುದು.

ಎರಡನೆಯದಾಗಿ ವಕ್ರಾಸನ. ಇದನ್ನು ಕೂಡಾ ಕುಳಿತು ಮಾಡುವ ಆಸನ ಆಗಿದ್ದು , ಕಾಲು ಚಾಚಿ ನೇರವಾಗಿ ಕುಳಿತುಕೊಂಡು , ಬಲಗಾಲನ್ನು ಮಡಚಿ ಎಡ ಕೈ ಇಂದ ಪ್ರೆಶರ್ ಕೊಡಬೇಕು. ಸಾಧ್ಯ ಆದರೆ ಪಾದವನ್ನು ಮುಟ್ಟಬೇಕು. ನಂತರ ಎಡಗಾಲಿನಿಂದ ಸಹ ಮಡಚಿ ಇಟ್ಟಕೊಂದು ಬಲಗೈ ಇಂದ ಪಾದ ಮುಟ್ಟಬೇಕು. ಇದರಿಂದ ಹೊಟ್ಟೆಯಲ್ಲಿ ಗರ್ಭಕೋಶಕ್ಕೆ ಉತ್ತಮ ವ್ಯಾಯಾಮ . ಇನ್ಸುಲಿನ್ ಉತ್ಪತ್ತಿ ಆಗಲೂ ಸಹ ಸಹಾಯಕಾರಿ. ಕರುಳಿನಲ್ಲಿ ಜೀರ್ಣ ಆಗದೇ ಇರುವ ಪದಾರ್ಥಗಳು ಜೀರ್ಣ ಆಗಿ ಮಲ ಮೂತ್ರ ಸರಿಯಾಗಿ ಆಗುವಂತೆ ಮಾಡುವುದು.

ಮೂರನೆಯದಾಗಿ ಪವನ ಮುಕ್ತಾಸನ. ಇದನ್ನು ಮೊದಲು ಶವಾಸನ ಮಾಡಿಕೊಂಡು ಉಸಿರಾಡುತ್ತ , ಒಂದು ಕಾಲನ್ನು ಮಡಚಿ ಮೊಣಕಾಲ ಬಳಿ ಕೈ ಇಂದ ಹಿಡಿದುಕೊಂಡು , ಶ್ವಾಸ ಬಿಡುತ್ತಾ ನಮ್ಮ ತಲೆಯನ್ನು ಮೊಣಕಾಲಿಗೆ ತಾಗಿಸಬೇಕು. ಇದೇ ರೀತಿ ಇನ್ನೊಂದು ಕಾಲಿಗೂ ಕೂಡಾ ಮಾಡಬೇಕು. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಹೊಟ್ಟೆಯ ಭಾಗಕ್ಕೆ ಹೆಚ್ಚು ಪ್ರೆಶರ್ ನೀಡಬೇಕು. ಮೂವತ್ತು ಮೂವತ್ತೈದು ವರ್ಷಗಳ ಒಳಗೆ ಡಯಾಬಿಟಿಸ್ ಬಂದವರು ಎರಡೂ ಕಾಲುಗಳನ್ನು ಒಟ್ಟಿಗೆ ಮೇಲಕ್ಕೆ ಮಡಚಿ ತಲೆಯನ್ನು ತಾಗಿಸುವ ಪ್ರಯತ್ನವನ್ನು ಮಾಡಬಹುದು. ಬೆನ್ನು ನೋವು ಮತ್ತು ಅಲ್ಸರ್ ಸಮಸ್ಯೆ ಇದ್ದವರು ಇದನ್ನು ಮಾಡಬಾರದು. ಈ ಆಸನವನ್ನು ಮಾಡುವುದರಿಂದ ನಮ್ಮ ದೇಹದಲ್ಲಿ ತಾನಾಗಿಯೇ ಇನ್ಸುಲಿನ್ ಉತ್ಪತ್ತಿ ಆಗುವುದು ಹಾಗೂ ಹೊಟ್ಟೆಯ ಇತರೆ ಸಮಸ್ಯೆಗಳೂ ಸಹ ನಿವಾರಣೆ ಆಗುವುದು.

ನಾಲ್ಕನೆಯದಾಗಿ ಸೇತುಬಂಧ ಆಸನ. ಶವಾಸನ ಮಾಡಿಕೊಂಡು , ಮೂರು ಅಡಿಗಳಷ್ಟು ಕಾಲನ್ನು ಅಗಲಿಸಿಕೊಂಡು, ಕೈ ನೇರವಾಗಿ ಇಟ್ಟುಕೊಂಡು ಸಾಧ್ಯ ಆದಷ್ಟು ನಿಧಾನವಾಗಿ ಹೊಟ್ಟೆಯ ಭಾಗವಾನ್ನು ಆದಷ್ಟು ಮೇಲಕ್ಕೆ ಎತ್ತಬೇಕು ಒಂದೆರಡು ಸೆಕೆಂಡ್ ಬಿಟ್ಟು , ಕೆಳಗೆ ಒಂದು ಮತ್ತೆ ಇದೆ ರೀತಿ ಮಾಡಬೇಕು. ಆಸನಗಳನ್ನು ಮಾಡುವಾಗ ಮೂಗಿನಿಂದಲೆ ಶ್ವಾಸ ತೆಗೆದುಕೊಳ್ಳುವುದು ಮತ್ತು ಬಿಡುವುದು ಮಾಡಬೇಕು. ಈ ಒಂದು ಆಸನ ಡಯಾಬಿಟಿಸ್ ಮತ್ತು ಬೆನ್ನು ನೋವು ಇರುವವರಿಗೆ ಕೂಡಾ ಒಳ್ಳೆಯದು.
ಈ ಆಸನಗಳು ತುಂಬಾ ಸುಲಭವಾಗಿದ್ದು ಇಪ್ಪತ್ತೊಂದು ದಿನಗಳ ಕಾಲ ಪ್ರತೀ ದಿನ ಒಂದು ಗಂಟೆ ಮಾಡುವುದರಿಂದ ಸಂಪೂರ್ಣವಾಗಿ ಸಕ್ಕರೆ ಕಾಯಿಲೆಯನ್ನು ಗುಣ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!