ಚಿಕ್ಕ ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಕೆ ಮಾಡಬಾರದು ಎಂದು ಹೇಳುತ್ತೇವೆ. ಮಕ್ಕಳು ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ ಅವರ ಮೇಲೆ ಕೋಪ ಮಾಡಿಕೊಂಡು ಮೊಬೈಲ್ ಕಿತ್ತುಕೊಂಡು ಬಿಡುತ್ತೇವೆ . ಆದರೆ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳದೆ ಮೊಬೈಲ್ನಲ್ಲಿ ಇರುವಂತಹ ಉಪಯೋಗಗಳ ಬಗ್ಗೆ ತಿಳಿಸಿ ಹೇಳಿದರೆ ಅವರಿಗೆ ಅರ್ಥವಾಗುತ್ತದೆ. ಇದೇ ರೀತಿ ಮೊಬೈಲ್ ನೋಡುತ್ತಲೇ ಮೊಬೈಲ್ ನಮಗೆ ಕೂಡ ಕೆಲವೊಮ್ಮೆ ಉಪಯೋಗಕ್ಕೆ ಬರುತ್ತದೆ. ಆದರೆ ಅದು ಹೇಗೆ? ಏನಾಗಿದೆ? ಮೊಬೈಲ್ ನಿಂದಾ ಎನು ಉಪಯೋಗ ಆಗಿದೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಈ ಒಂದು ಘಟನೆ ನಡೆದಿದ್ದು ಇಂಗ್ಲೆಂಡ್ ದೇಶದ ಲಂಡನ್ ನಗರದಲ್ಲಿ. ಇಲ್ಲಿ ಮನೆಯ ಮುಂದೆ ರೋಮನ್ ಎನ್ನುವ ನಾಲ್ಕು ವರ್ಷದ ಹುಡುಗನೊಬ್ಬ ತನ್ನ ತಮ್ಮನ ಜೊತೆ ಆಟ ಆಡುತ್ತಿದ್ದ ಈ ಸಮಯದಲ್ಲಿ ರೋಮನ್ ಎಂಬ ಹುಡುಗನ ತಾಯಿ ಇದ್ದಕ್ಕಿದ್ದ ಹಾಗೆ ಪ್ರಜ್ಞೆ ತಪ್ಪಿ ಕೆಳಗುರುಳಿ ಬಿದ್ದರು. ಇದನ್ನು ಗಮನಿಸಿದ ರೋಮನ್ ತನ್ನ ತಾಯಿ ಸತ್ತು ಹೋಗಿದ್ದಾಳೆ ಎನ್ನುವುದನ್ನು ಗಮನಿಸಿ ಕೂಡಲೇ ತನ್ನ ಬುದ್ಧಿಯನ್ನು ಉಪಯೋಗಿಸಿ ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ಆಕೆಯ ಬೆರಳಿನ ಸಹಾಯದಿಂದ ಸ್ಕ್ರೀನ್ ಓಪನ್ ಮಾಡಿ ಸಿರಿ ಆಪ್ ಓಪನ್ ಮಾಡಿ ಅದರ ಸಹಾಯದಿಂದ ಇಂಗ್ಲೆಂಡ್ನ ಎಮರ್ಜೆನ್ಸಿ ನಂಬರ್ 911 ಗೆ ಫೋನ್ ಮಾಡಿದ.
ರೋಮನ್ ಎಂಬ ಹುಡುಗ 911 ಈ ನಂಬರ್ಗೆ ಫೋನ್ ಮಾಡಿದಾಗ ಒಬ್ಬ ಮಹಿಳಾ ಉದ್ಯೋಗಿ ಫೋನ್ ಅಟೆಂಡ್ ಮಾಡಿದ್ದಾರೆ. ರೋಮನ್ ಮಹಿಳಾ ಉದ್ಯೋಗಿಯ ಬಳಿ ಅವರು ಮುಂದೆ ಮಾತನಾಡುವುದಕ್ಕೂ ಮೊದಲೇ ತನ್ನ ಹೆಸರು ರೋಮನ್, ತನ್ನ ತಾಯಿ ಮರಣ ಹೊಂದಿದ್ದಾರೆ ಎನ್ನುವುದಾಗಿ ತನ್ನ ವಿವರವನ್ನೆಲ್ಲ ನೀಡುತ್ತಾನೆ. ಇವನ ಮಾತು ಕೇಳಿ ಅಮೂಲ್ಯ ಉದ್ಯೋಗಿ ಇರೋ ಮನೆಗೆ ಕೇಳುತ್ತಾಳೆ ನಿನ್ನ ತಾಯಿ ಸತ್ತು ಹೋಗಿದ್ದಾಳೆ ಎಂದು ನೀನು ಹೇಗೆ ಹೇಳುವೆ ಎಂದು ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ ರೋಮನ್ ತನ್ನ ತಾಯಿಯ ಕಣ್ಣುಮುಚ್ಚಿಕೊಂಡಿದ್ದೆ ಉಸಿರಾಟ ಕೂಡ ಆಗುತ್ತಿಲ್ಲ ಎಂದು ಹೇಳುತ್ತಾನೆ. ಮಹಿಳಾ ಉದ್ಯೋಗಿ ಅದಕ್ಕೆ ನಿನ್ನ ತಾಯಿಯನ್ನು ಒಮ್ಮೆ ಜೋರಾಗಿ ಕೂಗುವುದು ಹೇಳುತ್ತಾಳೆ. ರೋಮನ್ ತಾನು ಎಷ್ಟೇ ಓದಿದರೂ ಕೂಡ ತನ್ನ ತಾಯಿ ಎದ್ದೇಳುತ್ತಲೇ ಇಲ್ಲ ಅಂತ ಹೇಳುತ್ತಾನೆ. ಹಾಗೂ ತಕ್ಷಣಕ್ಕೆ ರೋಮನ್ ಕಡೆಯಿಂದ ಅಡ್ರೆಸ್ ಪಡೆದ ಮಹಿಳಾ ಉದ್ಯೋಗಿ ನಿಮ್ಮ ಮನೆಗೆ ಈಗಲೇ ಪೊಲೀಸ್ ಕಳುಹಿಸುತ್ತೇನೆ ಎಂದು ಹೇಳಿದರು. ಅವರು ಹೇಳಿದ ಹದಿಮೂರು ನಿಮಿಷಕ್ಕೆ ರೋಮನ್ ಮನೆಯ ಬಾಗಿಲಿಗೆ ಆಂಬುಲೆನ್ಸ್ ಬಂದಿತ್ತು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸರಿಯಾದ ಚಿಕಿತ್ಸೆಯನ್ನು ಕೂಡ ನೀಡಲಾಗಿ ಆಕೆ ಬದುಕಿದ್ದರು. ತಾನು ಜನ್ಮ ಕೊಟ್ಟ ಮಗ ತನಗೆ ಪುನರ್ಜನ್ಮ ನೀಡಿದ್ದಾನೆ ಎಂದು ನಾಲ್ಕು ವರ್ಷದ ರೋಮನ್ ಎಂಬ ಹುಡುಗನ ತಾಯಿ ಮಗನನ್ನು ಅಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ. ಮುಂದುವರೆದ ಟೆಕ್ನೋಲಜಿಯಿಂದ ಬಹಳಷ್ಟು ಉಪಯೋಗಗಳು ಕೂಡ ಇವೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು. ಹಾಗಾಗಿ ಮೊಬೈಲ್ಬಳಕೆ ಮಾಡುವುದನ್ನು ಸರಿಯಾದ ಸಮಯದಲ್ಲಿ ಮಾತ್ರ ಬಳಸಿಕೊಳ್ಳುವುದನ್ನು ನಾವು ಮಕ್ಕಳಿಗೆ ತಿಳಿಸಿಕೊಟ್ಟರೆ ಇಂತಹ ಸಂದರ್ಭಗಳಲ್ಲಿ ಉಪಯೋಗವಾಗುತ್ತದೆ. ರೋಮನ್ ನಾಲ್ಕು ವರ್ಷದ ಚಿಕ್ಕ ಹುಡುಗನ ಆದರೂ ಕೂಡ ಆ ಸಮಯದಲ್ಲಿ ಅವನ ಚಾಣಾಕ್ಷತನವನ್ನು ಮೆಚ್ಚಲೇಬೇಕು.