ಲಿಂಗಾಯಿತ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಯಡಿಯೂರು ಕರ್ನಾಟಕದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. 15 ನೇ ಶತಮಾನದಲ್ಲಿದ್ದ ಲಿಂಗಾಯಿತ ಮತದ ಪರಮ ಸಂತರಾದ ತೋಂಟದ ಸಿದ್ದಲಿಂಗಯ್ಯನವರ ನಿರ್ವಿಕಲ್ಪ ಶಿವಯೋಗ ಸಮಾಧಿಯನ್ನು ನಾವು ಈ ದೇವಸ್ಥಾನದಲ್ಲಿ ಕಾಣಬಹುದು. ಅದರ ಕುರಿತಾಗಿ ಪುಟ್ಟ ಮಾಹಿತಿ ಈ ಲೇಖನದಲ್ಲಿ.
ಯಡಿಯೂರು ಸಿದ್ದಲಿಂಗೇಶ್ವರ ದೇವಸ್ಥಾನ ಕರ್ನಾಟಕ ರಾಜ್ಯದ ಕುಣಿಗಲ್ ತಾಲ್ಲೂಕಿನ ಯಡಿಯೂರ ಪಟ್ಟಣದಲ್ಲಿದೆ. ಯಡಿಯೂರು ಇದು ರಾಜ್ಯದ ರಾಜಧಾನಿ ಬೆಂಗಳೂರಿನಿಂದ 91 ಕಿಲೋಮೀಟರ್ ದೂರದಲ್ಲಿದ್ದು ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ನಗರಗಳಿಂದ ಸುಮಾರು ನಾಲ್ಕು 427 ಕಿಲೋಮೀಟರ್ ದೂರದಲ್ಲಿದೆ. ಕಲಬುರ್ಗಿಯಿಂದ ಸುಮಾರ 615 ಕಿಲೋಮೀಟರ್ ಹಾಗೂ ಮೈಸೂರಿನಿಂದ 127 ಕಿಲೋಮೀಟರ್ ದೂರದಲ್ಲಿದೆ ಹಾಗೂ ಶಿವಮೊಗ್ಗದಿಂದ ಸುಮಾರು 211 ಕಿಲೋಮೀಟರ್ ದೂರದಲ್ಲಿದೆ.
ಪ್ರತಿವರ್ಷ ಮಹಾಶಿವರಾತ್ರಿ ಹಾಗೂ ಯುಗಾದಿ ಹಬ್ಬದ ಸಂದರ್ಭದಲ್ಲಿ ಯಡಿಯೂರು ಸಿದ್ದಲಿಂಗೇಶ್ವರ ಸನ್ನಿಧಿಯಲ್ಲಿ ಉತ್ಸವಗಳು ಬಾಳಷ್ಟು ಅದ್ಧೂರಿಯಾಗಿ ನಡೆಯುತ್ತದೆ. ದ್ರಾವಿಡ ಶೈಲಿಯಲ್ಲಿ ಕಾಲಕ್ರಮೇಣ ಅಂದರೆ 15ನೇ ಅಥವಾ 16ನೇ ಶತಮಾನದಲ್ಲಿ ನಿರ್ಮಿತವಾದ ಕಲ್ಲು ಮಂಟಪದಿಂಡ 1970 ರಲ್ಲಿ ನಿರ್ಮಿತವಾದ ರಾಜಗೋಪುರ ದವರಿಗೆ ವಿಸ್ತಾರಗೊಂಡ ಸುಂದರ ಹಾಗು ವಿಶಾಲ ದೇವಾಲಯವನ್ನು ನಾವಿಲ್ಲಿ ಕಾಣಬಹುದು. ಇಲ್ಲಿ ತ್ರಿಕಾಲ ರುದ್ರಾಭಿಷೇಕ ಹಾಗೂ ಪೂಜೆ ಪುನಸ್ಕಾರಗಳಿಂದ ಭಕ್ತಾದಿಗಳು ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಯನ್ನು ಆರಾಧನೆ ಮಾಡುತ್ತಾರೆ. ಈ ದೇವಸ್ಥಾನವು ದ್ರಾವಿಡಿಯನ್ ಶೈಲಿಯಲ್ಲಿದ್ದು ಇಲ್ಲಿ ಆರು ಚಕ್ರದ ಕಲ್ಲಿನ ರಥವಿದೆ. ವರ್ಷಕ್ಕೆ ಒಂದು ಸಾರಿ ಅಂದರೆ ಮಾರ್ಚ್ ಎಪ್ರಿಲ್ ನಲ್ಲಿ ರಥದ ಹಬ್ಬ ಇಡೀ ರಾತ್ರಿ ನಡೆಯುತ್ತದೆ. ಮಹಾಶಿವರಾತ್ರಿಯಂದು ಸಹಸ್ರ ರುದ್ರಾಭಿಷೇಕ ನಡೆಯುತ್ತದೆ. ಯುಗಾದಿಯಲ್ಲಿ ಸಿದ್ಧಾಲಿಂಗೇಶನವರು ಸಮಾಧಿ ತೆಗೆದುಕೊಂಡ ಸೂಚಕವಾಗಿ ಈ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಸಹಸ್ರ ಕಮಲ ಪೂಜೆಯ , ಲಕ್ಷ ಬಿಲ್ವಾರ್ಚನೆ ಪೂಜೆಗಳನ್ನು ಸಹ ನೆರವೇರಿಸಲಾಗುತ್ತದೆ. ಪ್ರತಿ ಹುಣ್ಣಿಮೆಯಂದು ಕುಂಬಾಭಿಷೇಕ ನಡೆದರೆ ದೀಪಾವಳಿಯಂದು ಲಕ್ಷದೀಪೋತ್ಸವ ವನ್ನು ಆಯೋಜಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಾಲಯದ ಗೋಪುರವು ಎಣ್ಣೆ ದೀಪಗಳಿಂದ ಕಂಗೊಳಿಸುತ್ತದೆ. ಈ ದೇವಾಲಯವು ಭಕ್ತಾದಿಗಳ ದರ್ಶನಕ್ಕಾಗಿ ಬೆಳಗ್ಗೆ 4 ಗಂಟೆಯಿಂದ 8.30 ರವರೆಗೆ ತೆಗೆದಿರುತ್ತದೆ. ಯುಗಾದಿ ನಂತರದ ಏಳನೇ ದಿನದಲ್ಲಿ ನಡೆಯುವ ರಥೋತ್ಸವದ ಸಮಯದಲ್ಲಿ ದೇವರ 24 ಗಂಟೆಗಳ ಕಾಲವೂ ತೆರೆದೇ ಇರುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡಿದರೆ ಇಲ್ಲಿರುವಂತಹ ಅದ್ಭುತವಾದ ಆನೆಯನ್ನು ಸಹ ನೋಡಲೇಬೇಕು.