WWE ನ ಸೂಪರ್ ಸ್ಟಾರ್ ಎಂದು ರೋಮನ್ ರೇನ್ಸ್ ನ್ನು ಕರೆಯಲಾಗುತ್ತದೆ. ಇವನನ್ನು ವ್ರೆಸ್ಟ್ಲಿಂಗ್ ನಲ್ಲಿ ಬ್ಲಾಕ್ ಡಾಗ್ ಎಂದು ಕರೆಯಲಾಗುತ್ತದೆ.ಇಲ್ಲಿ ನಾವು ರೋಮನ್ ರೇನ್ಸ್ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ರೋಮನ್ ರೇನ್ಸ್ ನ ನಿಜವಾದ ಹೆಸರು ಲೇಟಿ ಜೋಸೆಫ್. ಇವರು ಹುಟ್ಟಿದ್ದು ಅಮೆರಿಕದ ಫ್ಲೋರಿಡಾದಲ್ಲಿ.ಮೇ 25 1985ರಲ್ಲಿ ಇವರು ಜನಿಸಿದರು.ಇವರಿಗೆ ರಗ್ಬೀ ಎಂದರೆ ಬಹಳ ಇಷ್ಟವಾಗಿತ್ತು.ಇವರ ತಂದೆಯ ಹೆಸರು ಶಿಖಾ.ಅವರೂ ಕೂಡ ಒಬ್ಬ ರೆಸ್ಲರ್.WWE ಯಲ್ಲಿ ಸ್ಟಾರ್ ಆಗಿದ್ದವರು. ರೋಮನ್ ರೇನ್ಸ್ ನ ಸಂಬಂಧಿಕರ ಪಟ್ಟಿ ಬಹಳ ದೊಡ್ಡ ಇದೆ. ಅವರಲ್ಲಿ ಇನ್ನೊಬ್ಬ ವ್ಯಕ್ತಿಯ ಹೆಸರು ರಾಕ್. ರಾಕ್ ಯಾರಿಗೆ ತಿಳಿದಿಲ್ಲ.
2006 ರಿಂದ 3ವರ್ಷಗಳ ಕಾಲ ರಗ್ಬೀ ಟೀಮ್ ನಲ್ಲಿ ಆಡುತ್ತಾರೆ. ಇವರು 2007ರಲ್ಲಿ ರಗ್ಬೀ ಆಟಕ್ಕೆ ಗುಡ್ ಬೈ ಹೇಳುತ್ತಾರೆ.ಏಕೆಂದರೆ WWE ಯ ಕಡೆ ಮುಖ ಮಾಡುತ್ತಾರೆ.2010ರಲ್ಲಿ WWEಯಲ್ಲಿ ರೋಮನ್ ರ ಜೊತೆ ಒಪ್ಪಂದ ಮಾಡಿಕೊಳ್ಳುತ್ತಾರೆ.ತರಬೇತಿಗಾಗಿ ಅವರನ್ನು FCWಗೆ ಹಾಕಲಾಗುತ್ತದೆ.ಆಗ ಇವರಿಗೆ ರೋಮನ್ ಲೀಕಿ ಎಂದು ಕರೆಯಲಾಗುತ್ತಿತ್ತು. ಆಗ ಲೀಕಿ ಎಂದೇ ಪ್ರಸಿದ್ದರಾಗಿದ್ದರು.2011ರಲ್ಲಿ ತ್ರಿಬ್ಬಲ್ ಥ್ರೆಡ್ ಮ್ಯಾಚ್ ನಲ್ಲಿ ಇವರು ಗೆದ್ದು ಚಾಂಪಿಯನ್ ಆಗುತ್ತಾರೆ. WWEನಲ್ಲಿ FCW ವನ್ನು NXT ಎಂದು ಬದಲಾಯಿಸಲಾಯಿತು.
ಆಗ ರೋಮನ್ ಲೀಕಿಯ ಹೆಸರು ರೋಮನ್ ರೇನ್ಸ್ ಎಂದು ಬದಲಾಗುತ್ತದೆ. ಈ NXTಯು ಹೊಸ ಟೀಮ್ ತಯಾರಿ ಮಾಡುತ್ತದೆ. ಆ ಟೀಮ್ ನ ಹೆಸರು ಶೀಲ್ಡ್.ಇದೇ ಟೀಮ್ ನಿಂದ ರೇನ್ಸ್ ಅವರು ಅತಿ ಹೆಚ್ಚು ಪ್ರಖ್ಯಾತಿ ಆಗುತ್ತಾರೆ.2012ರಲ್ಲಿ ಇವರು 6ಜನರನ್ನು ಸೋಲಿಸುತ್ತಾರೆ. ಇದರಿಂದಾಗಿ ಎಲ್ಲರಿಗೂ ಇವರು ಇಷ್ಟವಾಗತೊಡಗಿದರು.ನಂತರ ಮತ್ತೊಂದು ಸೀಸನ್ ನಲ್ಲಿ ಆರ್ಭಟಿಸಿ ಗೆಲ್ಲುತ್ತಾರೆ.ಮೊದಲ ಬಾರಿ WWE ಯ ಚಾಂಪಿಯನ್ ಆಗುತ್ತಾರೆ.
2015ರಲ್ಲಿ ನಂತರ ನಡೆದ ರಸಲ್ಮೇನಿಯಾದಲ್ಲಿ ತ್ರಿಬ್ಬಲ್ಎಚ್ ಜೊತೆ ರೋಮನ್ ರೇನ್ಸ್ ಕಣಕ್ಕಿಳಿದು ಗೆದ್ದು ಬೀಗುತ್ತಾರೆ.ನಂತರ ಇಂಟರ್ ಕಾಂಟಿನೆಂಟಿಯಲ್ ಬೇರೆ ಬೇರೆಯ ಚಾಂಪಿಯನ್ ಶಿಪ್ ಗಳನ್ನು ಗೆಲ್ಲುತ್ತಾರೆ.ಕಳೆದ ಬಾರಿ ನಡೆದ ಸಮ್ಮರ್ ಸ್ಲಾಮ್ ನಲ್ಲಿ ರೋಮನ್ ಗೆಲುವು ಸಾಧಿಸಿದ್ದಾರೆ.ಇವರಿಗೆ ಜಗತ್ತಿನ ಮೂಲೆ ಮೂಲೆಯಲ್ಲಿ ಫಾನ್ಸ್ ಇದ್ದಾರೆ.ಇವರ ಸಂಬಳ 36ಕೋಟಿ 17ಲಕ್ಷ.ಇವರ ಪತ್ನಿಯ ಹೆಸರು ಗಲೀನಾ.ಇವರಿಗೆ ಮೂರು ಮಕ್ಕಳು ಇದ್ದಾರೆ.ನಂತರ ಇವರು WWE ನಿಂದ ಹೊರಗೆ ಬಂದರು. ಕಾರಣ ಇವರಿಗೆ ಕ್ಯಾನ್ಸರ್ ಇತ್ತು. ಲ್ಯೂಕೆಮಿಯಾ ಇವರನ್ನು 6ವರ್ಷದಿಂದ ಕಾಡುತ್ತಿತ್ತು.ಆದರೆ ನಂತರ ಇದರಿಂದ ಗೆದ್ದು ಮತ್ತೆ WWEಗೆ ವಾಪಸ್ ಆಗುತ್ತಾರೆ.