ಶೌಚಾಲಯದ ವಿಷಯದ ಬಗ್ಗೆ ಮಾತನಾಡಲೂ ಕೂಡಾ ಮುಜುಗರ ಪಡುತ್ತಾರೆ. ಶೌಚಾಲಯದ ಬಗ್ಗೆ ವಿಚಾರಿಸಿದಾಗಲಂತೂ ಇದೆ ಎನ್ನುವುದನ್ನು ಬಿಟ್ಟರೆ ಬೇರೆ ಹೇಳಲು ಮುಜುಗರ. ಆದರೆ ಶೌಚಾಲಯಗಳು ಮನೆಯಷ್ಟೆ ಮುಖ್ಯವಾದುದು. ಆದರೆ ಇಲ್ಲಿ ಕೆಲವು ವಿಚಿತ್ರ ಎನ್ನುವಂತಹ ಶೌಚಾಲಯದ ಪರಿಚಯ ಮಾಡಿಕೊಡಲಾಗಿದೆ. ಅದೆನೆಂದು ನಾವು ತಿಳಿಯೋಣ.
ಚೀನಾದಲ್ಲಿ ಏನೆನು ಸಂಶೋಧನೆ ಮಾಡುತ್ತಾರೊ ತಿಳಿಯದು ಆದರೆ ಇಲ್ಲಿ ಬುಲ್ಲೆಟ್ ಪ್ರೂಫ್ ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಆದರೆ ಶೌಚಾಲಯಕ್ಕೆ ಯಾಕೆ ಬುಲ್ಲೆಟ್ ಪ್ರೂಪ್ ಎಂಬುದು ತಿಳಿದಿಲ್ಲ. ಯೂರೋಪ್ ನ ಕೆಲವು ದೇಶಗಳಲ್ಲಿ ರಸ್ತೆಯ ಮದ್ಯದಲ್ಲಿ ಒಂದು ಪಾಪ್ ಅಪ್ ಶೌಚಾಲಯ ನಿರ್ಮಿಸಲಾಗಿದೆ. ತುಂಬಾ ಅರ್ಜೆಂಟ್ ಆದಾಗ ರಸ್ತೆ ಬದಿಯ ಒಂದು ಬಟನ್ ಒತ್ತಿದರೆ ಸಾಕು ಪ್ರತ್ಯಕ್ಷವಾಗುತ್ತದೆ ಈ ಶೌಚಾಲಯ. ಇನ್ನೊಂದು ಶೌಚಾಲಯ ಬಗ್ಗೆ ಕೇಳಿದರೆ ಆಶ್ಚರ್ಯ ಪಡುತ್ತಿರಾ. ಮೂವತ್ತು ಮಿಲಿಯನ್ ಡಾಲರ್ ವೆಚ್ಚದಲ್ಲಿ ಒಂದು ಪೈವ್ ಸ್ಟಾರ್ ಹೋಟೆಲ್ ನಲ್ಲಿ ಗೋಲ್ಡನ್ ಶೌಚಾಲಯ ಮಾಡಿದ್ದಾರೆ. ಇದು ಇರುವುದು ಹಾಂಕಾಂಗ್ ನಲ್ಲಿ ಇದೆ. ಈ ಹೋಟೆಲ್ ನಲ್ಲಿ ಬಹಳ ಜನ ರೂಮ್ ತೆಗೆದುಕೊಳ್ಳುವುದು ಈ ಗೊಲ್ಡನ್ ಶೌಚಾಲಯದ ಕಾರಣದಿಂದಲೆ ಅಂತೆ. ಇಲ್ಲೊಂದು ವಿಚಿತ್ರ ರೀತಿಯ ಶೌಚಾಲಯ ನಿರ್ಮಿಸಲಾಗಿದೆ. ಶೌಚಾಲಯದ ಒಳಗಡೆ ಕುಳಿತವರು ಹೊರಗಿನ ಜನರನ್ನು ನೋಡಬಹುದು ಆದರೆ ಒಳಗಿರುವವರನ್ನು ಹೊರಗೆ ಇರುವವರು ನೋಡಲು ಸಾಧ್ಯವಿಲ್ಲ. ಇದರ ಹೆಸರು ಸಿ ಥ್ರೂ ಶೌಚಾಲಯ ಎಂದು.
ಪ್ಲೋಟಿಂಗ್ ಶೌಚಾಲಯ ಒಂದು ಅಮೇರಿಕಾದಲ್ಲಿ ಇದೆಯಂತೆ. ತುಂಬಾ ಹಣವಿದ್ದರೆ ಇದನ್ನು ಉಪಯೋಗಿಸಬಹುದಂತೆ. ಒಂದು ಸಲ ಈ ಶೌಚಾಲಯ ಬಳಸಲು ಐದು ನೂರು ಡಾಲರ್ ತೆಗೆದುಕೊಳ್ಳುತ್ತಾರೆ. ಫ್ಲೋಟಿಂಗ್ ಶೌಚಾಲಯದ ವಿಶೇಷ ಎಂದರೆ ಸಮುದ್ರದ ನೀರಲ್ಲಿ ತೇಲುತ್ತಾ ಶೌಚಾಲಯ ಬಳಸಬಹುದು. ಇದೊಂದು ಏಳು ಅಂತಸ್ತಿನ ಶೌಚಾಲಯ. ಮಹಿಳೆಯರಿಗೆ, ಪುರುಷರಿಗೆ, ಮಕ್ಕಳಿಗೆ ಹಾಗೂ ಕೈ ತೊಳೆಯಲು ಬೇರೆ ಬೇರೆ ಅಂತಸ್ತುಗಳನ್ನು ಹೊಂದಿದೆ. ಇದು ಇರುವುದು ಜಪಾನ್ ನಲ್ಲಿ. ಇದಕ್ಕೆಂದೆ ಜಪಾನ್ ಕ್ರಿಯೇಟಿವ್ ದೇಶ ಎನ್ನವುದು. ಎಲ್ಲರೂ ಜೆಮ್ಸ್ ಬಾಂಡ್ ಎಂದರೆ ಗನ್ ಹಿಡಿಯುವುದು ನಲೊಡಿದ್ದೆವೆ ಆದರೆ ಇಲ್ಲೊಂದು ಕಡೆ ಜೆಮ್ಸ್ ಬಾಂಡ್ ಶೌಚಾಲಯವಿದೆ. ಇದರ ಒಳಗೆ ಹೋಗಲು ಜೆಮ್ಸ್ ಬಾಂಡ್ ರೀತಿಯಲ್ಲಿಯೆ ಹಂತಗಳನ್ನು ಗೆದ್ದು ಹೋಗಬೇಕಂತೆ. ಅರ್ಜೆಂಟ್ ಆದವರ ಪರಿಸ್ಥಿತಿ ಹೇಳಲು ಸಾಧ್ಯವಿಲ್ಲ. ಜಪಾನ್ ನಲ್ಲಿ ತಯಾರಾದ ಮತ್ತೊಂದು ಬಗೆಯ ಶೌಚಾಲಯ ಎಂದರೆ ಸಮುದ್ರದ ಸುಂದರ ದೃಶ್ಯಗಳನ್ನು ನೋಡುತ್ತಾ ಶೌಚಾಲಯ ಬಳಸುವುದು. ಈ ಶೌಚಾಲಯ ಬಳಸಲು ಇನ್ನೂರು ಡಾಲರ್ ಕೊಡಬೇಕಂತೆ.
ಚೀನಾದಲ್ಲಿ ಒಂದು ಕಟ್ಟಡವಿದೆ. ಹೊರಗಿನಿಂದ ನೋಡಲು ತುಂಬಾ ಸುಂದರವಾಗಿ ಕಾಣುತ್ತದೆ. ಆದರೆ ಅದು ಶೌಚಾಲಯವಂತೆ. ಈ ಕಟ್ಟಡದಲ್ಲಿ ನೂರಕ್ಕೂ ಹೆಚ್ಚು ಶೌಚಾಲಯ ಇದೆಯಂತೆ. ಮೊಬೈಲ್, ಲಾಪ್ ಟಾಪ್ ಗೆ ಹಾಕುವಂತೆ ಶೌಚಾಲಯಕ್ಕೂ ಪಾಸ್ವರ್ಡ್ ಹಾಕಬೇಕಾದಂತಹ ಶೌಚಾಲಯ ಕಟ್ಟಿದ್ದಾರೆ. ಎಂಟು ಲೆಟರ್ ಪಾಸ್ವರ್ಡ್ ನೀಡಲಾಗುತ್ತದೆ ಅದನ್ನು ಶೌಚಾಲಯದ ಒಳಗೆ ಹೋಗುವ ಮುನ್ನ ಹಾಕಬೇಕು. ಪಾಸ್ವರ್ಡ್ ನೆನಪಿಟ್ಟುಕೊಳ್ಳಬೇಕು. ಮರೆತರೆ ಏನಾಗುತ್ತದೆಯೋ ತಿಳಿದಿಲ್ಲ. ಮಳೆಯಿಂದ ಸಂಗ್ರಹಿಸಿದ ನೀರಿನ್ನು ಮಾತ್ರ ಬಳಸುವ ಶೌಚಾಲಯ ಇಲ್ಲಿದೆ. ಇದಕ್ಕೆ ಅರ್ಬನ್ ಎಕೊಲೊಜಿ ಶೌಚಾಲಯ ಎನ್ನುತ್ತಾರೆ. ಇಲ್ಲೊಂದು ಶೌಚಾಲಯ ಯಾರಾದರೂ ಒಳಗೆ ಹೋದ ಕೂಡಲೆ ಮಾಯವಾಗುತ್ತದೆ. ಇದಕ್ಕೆ ಡಿಸ್ಸಪಿಯರಿಂಗ್ ಶೌಚಾಲಯ ಎನ್ನುತ್ತಾರೆ. ಅಂಟಾರ್ಟಿಕದಲ್ಲಿ ಒಂದು ವಿಶೇಷ ಬಾತ್ರೂಮ್ ಮಾಡಲಾಗಿದೆ. ಅಂಟಾರ್ಟಿಕಾದಲ್ಲಿ ಬಹಳ ಚಳಿ ಇರುವ ಕಾರಣ ಬೆಂಕಿ ಬಾತ್ರೂಮ್ ಅನ್ನು ನಿರ್ಮಿಸಲಾಗಿದೆ. ಬಾತ್ರೂಮ್ ನ ಶೆಡ್ ನ ಕೆಳಗೆ ಬೆಂಕಿ ಹಾಕಲಾಗುತ್ತದೆ. ಅದಕ್ಕೆ ಇದನ್ನು ಬೆಂಕಿ ಬಾತ್ರೂಮ್ ಎನ್ನುತ್ತಾರೆ. ಅತ್ಯಂತ ದುಬಾರಿ ಬಾತ್ರೂಮ್ ಎಂದು ಇಬಿಬಿ ಬಾತ್ರೂಮ್ ಅನ್ನು ಕರೆಯಲಾಗುತ್ತದೆ. ಇದನ್ನು ಬಳಸಬೇಕಾದರೆ ಸಾವಿರ ಡಾಲರ್ ನೀಡಬೇಕಾಗುತ್ತದೆ. ಪ್ರಪಂಚದ ಅತಿ ಬೆಲೆಬಾಳುವ ವಸ್ತುಗಳನ್ನು ಈ ಬಾತ್ರೂಮ್ ನಲ್ಲಿ ಬಳಸಲಾಗಿದೆ. ಇಟಲಿಯಲ್ಲಿ ಬಾರ್ 89 ಶೌಚಾಲಯ ನಿರ್ಮಿಸಲಾಗಿದೆ. ಇಲ್ಲಿ ಶೌಚಾಲಯದ ಒಳಗೆ ಬಾರ್ ನ ವ್ಯವಸ್ಥೆ ಕೂಡಾ ಇದೆ.
ಇನ್ನು ಯಾವ ತರಹದ ಶೌಚಾಲಯದ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಏನೇನೂ ವಿಚಿತ್ರಗಳನ್ನು ಸೃಷ್ಟಿ ಮಾಡುತ್ತಾರೆ ಗೊತ್ತಿಲ್ಲ. ಶೌಚಾಲಯಗಳನ್ನು ವಿಶಿಷ್ಠವಾಗಿ ನಿರ್ಮಿಸುವ ಕಲೆ ಬೇರೆ ಬೇರೆ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ.