ಪಟಾಕಿ ಹಚ್ಚುವುದು ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟ. ಪಟಾಕಿ ಹಚ್ಚುವುದು ಪರಿಸರಕ್ಕೆ ಒಳ್ಳೆಯದಲ್ಲ ಆದರೂ ಪಟಾಕಿ ಹಚ್ಚುವ ಆಸೆ ಕಡಿಮೆಯಾಗುವುದಿಲ್ಲ. ಪ್ರಪಂಚದ ದೊಡ್ಡ ಪಟಾಕಿ ಯಾವುದು ಹಾಗೂ ಪಟಾಕಿ ಆಕಾಶದಲ್ಲಿ ಬಣ್ಣ ಬಣ್ಣವಾಗಿ ಹೇಗೆ ಸ್ಪೋಟವಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
2014, ಸಪ್ಟೆಂಬರ್ 9 ರಂದು ಜಪಾನಿನ ಉನ್ಶಿಯಲ್ಲಿ ನಡೆಯುವ ಕಟಕೈ ಮನ್ಸೂರ ಉತ್ಸವದಲ್ಲಿ ಅತಿದೊಡ್ಡ ವೈಮಾನಿಕ ಪಟಾಕಿಯನ್ನು ಸಿಡಿಸಲಾಗುತ್ತದೆ. ಪ್ರತಿವರ್ಷ ಸಪ್ಟೆಂಬರ್ 9 ಮತ್ತು 10 ರಂದು ನಡೆಯುವ ಉತ್ಸವದಲ್ಲಿ ಪಟಾಕಿಯನ್ನು ಒಂದು ದೊಡ್ಡ ಪೈಪಿನಲ್ಲಿ ಲೋಡ್ ಮಾಡಿ ಆಕಾಶದಲ್ಲಿ ಸಿಡಿಸಲಾಗುತ್ತದೆ. ಈ ಪಟಾಕಿ ಸಿಡಿಯುವ ದೃಶ್ಯ ನೋಡಿದರೆ ವರ್ಣರಂಜಿತವಾಗಿ ಬಹಳ ಖುಷಿಯಾಗುತ್ತದೆ. ಈ ಪಟಾಕಿ ಸುಮಾರು 2,700 ಅಡಿ ಎತ್ತರದಲ್ಲಿ ಸಿಡಿಯುತ್ತದೆ. ಈ ಪಟಾಕಿ ತೂಕ ಸುಮಾರು 460 ಕೆ.ಜಿ ಇರುತ್ತದೆ ಹಾಗೂ ಇದರ ಸುತ್ತಳತೆ 47 ಇಂಚು. ಪ್ರತಿವರ್ಷ ಡಿಸೆಂಬರ್ 31 ರಂದು ದುಬೈನಲ್ಲಿರುವ ಪ್ರಪಂಚದ ಅತಿ ಎತ್ತರದ ಕಟ್ಟಡವಾದ ಬೂರ್ಜಕಲೀಫ್ ಇದರ ಎತ್ತರ 2,716 ಅಡಿ. ಈ ಕಟ್ಟಡದ ಪ್ರತಿಯೊಂದು ಕಡೆಯಿಂದ ಮತ್ತು ಮೇಲಿನಿಂದ ಪಟಾಕಿ ಸಿಡಿಸುವ ಪ್ರದರ್ಶನ ನಡೆಯುತ್ತದೆ. ಈ ಕಟ್ಟಡದ ಮೇಲೆ ಪಟಾಕಿ ಸಿಡಿಸುವ ದೃಶ್ಯ ನೋಡಲು ಬಹಳ ಮನಮೋಹಕವಾಗಿರುತ್ತದೆ. 2013 ರ ಹೊಸ ವರ್ಷದ ಸಮಯದಲ್ಲಿ 6 ನಿಮಿಷದಲ್ಲಿ 4,79,651 ಪಟಾಕಿಗಳನ್ನು ಸಿಡಿಸಿ ದಾಖಲೆ ಮಾಡಿದ್ದಾರೆ.
2018 ರ ಹೊಸ ವರ್ಷದಲ್ಲಿ ದುಬೈನಲ್ಲಿ ಗ್ರೋಸಿ ಎಂಬ ಅತಿದೊಡ್ಡ ಪಟಾಕಿಯನ್ನು ಸಿಡಿಸಿ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಈ ಪಟಾಕಿಯ ತೂಕ 1,089 ಕೆ.ಜಿ, ಇದರ ಸುತ್ತಳತೆ 57 ಇಂಚು. ಪ್ರತಿವರ್ಷ ನಯಾಗರ ಫಾಲ್ಸ್ ನಲ್ಲಿ ಫೈರ್ ವರ್ಕ್ ಶೋ ನಡೆಯುತ್ತದೆ. 2008 ರಲ್ಲಿ 3.5 ಕಿ.ಮೀ ಉದ್ದದಲ್ಲಿ ಫೈರ್ ವರ್ಕ್ ವಾಟರ್ ಫಾಲ್ ಸೃಷ್ಟಿಯಾಗುತ್ತದೆ ಇದು ನೋಡಲು ಬಹಳ ಅಮೇಜಿಂಗ್ ಆಗಿ ಇರುತ್ತದೆ. ಈ ಶೋ ನಡೆಸಲು ಕೋಟ್ಯಾಂತರ ರೂಪಾಯಿಯನ್ನು ಖರ್ಚು ಮಾಡಲಾಗುತ್ತದೆ. ಸ್ಕೈ ಶಾಟ್ ಪಟಾಕಿಯು 5 ಭಾಗಗಳನ್ನು ಹೊಂದಿರುತ್ತದೆ. ಮೊದಲ ಭಾಗವಾದ ಇದರ ಬೋಡಿಯನ್ನು ಪೇಪರ್ ನಿಂದ ತಯಾರಿಸುತ್ತಾರೆ, ಇದು ಒಂದು ಪೈಪನಂತೆ ಇರುತ್ತದೆ.
ಎರಡನೇ ಭಾಗ ಇದರ ಕೆಳಗೆ ಮಣ್ಣಿನಿಂದ ಮಾಡಿದ ಒಂದು ಲೇಯರ್ ಇರುತ್ತದೆ. ಈ ಲೇಯರ್ ಮೇಲೆ ಮೂರನೇ ಭಾಗ ಸ್ಫೋಟದ ವಸ್ತು ಗನ್ ಪೌಡರ್ ಇರುತ್ತದೆ. ಇದರ ಮೇಲೆ ನಾಲ್ಕನೇ ಭಾಗ ಪಟಾಕಿ ಉಂಡೆ ಇರುತ್ತದೆ ಅಂದರೆ ಶೆಲ್ ಎನ್ನುವರು ಇದರ ಒಳಗೆ ಸ್ಫೋಟದ ವಸ್ತು ಇರುತ್ತದೆ. ಕೊನೆಯ ಭಾಗ ಉರಿಯುವ ಬತ್ತಿ. ಬತ್ತಿಗೆ ಬೆಂಕಿ ತಾಗಿಸಿದಾಗ ಮಣ್ಣಿನ ಮೇಲಿನ ಸ್ಫೋಟದ ವಸ್ತುವನ್ನು ಸೇರಿ ಸ್ಫೋಟವಾಗುತ್ತದೆ ಆಗ ಶೆಲ್ ವೇಗವಾಗಿ ಆಕಾಶದ ಕಡೆ ಹೋಗುತ್ತದೆ ನಂತರ ಈ ಶೆಲ್ ಫ್ಯೂಸ್ ನ ಸಹಾಯದಿಂದ ಸ್ಪೋಟವಾಗುತ್ತದೆ. ಈ ಶೆಲ್ ಒಳಗೆ ಸ್ಪೋಟದ ವಸ್ತು ಹಾಗೂ ಅದರ ಸುತ್ತ ಪಟಾಕಿ ಬಾಲ್ ಇಟ್ಟಿರುತ್ತಾರೆ. ಈ ಬಾಲ್ ಅನ್ನು ಕೆಮಿಕಲ್ಸ್ ನಿಂದ ತಯಾರಿಸಲಾಗುತ್ತದೆ ಆದ್ದರಿಂದ ಅವು ಬೇರೆ ಬೇರೆ ಬಣ್ಣಗಳಿಂದ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಕ್ಯಾಲ್ಶಿಯಂ ಕ್ಲೋರೈಡ್ ನಿಂದ ಮಾಡಿದ ಬಾಲ್ ಆರೆಂಜ್ ಬಣ್ಣದಲ್ಲಿ ಉರಿಯುತ್ತದೆ ಈ ರೀತಿ ಬೇರೆ ಬೇರೆ ಬಾಲ್ ಬೇರೆ ಬೇರೆ ಬಣ್ಣದಲ್ಲಿ ಉರಿಯುತ್ತದೆ. ಈ ಬಾಲ್ ಗಳನ್ನು ಶೆಲ್ ಒಳಗೆ ಯಾವ ಶೇಪ್ ನಲ್ಲಿ ಇಟ್ಟಿರುತ್ತಾರೆ ಅದೇ ಶೇಪ್ ನಲ್ಲಿ ಪಟಾಕಿ ಸ್ಫೋಟವಾಗುತ್ತದೆ, ಅಲ್ಲದೇ ಆಕಾಶದಲ್ಲಿ ಹಾರ್ಟ್, ಸರ್ಕಲ್ ಹೀಗೆ ಬೇರೆ ಬೇರೆ ಶೇಪ್ ನಲ್ಲಿ ಸ್ಫೋಟವಾದರೆ ನೋಡಲು ಎರಡು ಕಣ್ಣು ಸಾಲುವುದಿಲ್ಲ.