ಸಾಮಾನ್ಯವಾಗಿ ಎಲ್ಲರಿಗೂ ಕೂಡ ಸೌದಿ ಅರೇಬಿಯಾದ ವಿಶ್ವವಿಖ್ಯಾತ ಬುರ್ಜ್ ಅಲ್ ಅರಬ್ ಅಂತರಾಷ್ಟ್ರೀಯ ಹೋಟೆಲ್ ಬಗ್ಗೆ ತಿಳಿದೇ ಇದೆ. ಐಷಾರಾಮಿ ಹೋಟೆಲಿನ ಮೇಲ್ದರ್ಜೆಯ ರೂಮಿನ ಒಂದು ದಿನದ ಸ್ಟೇ ಗಾಗಿ 24 ಸಾವಿರ ಡಾಲರ್ ತೆಗೆದುಕೊಳ್ಳುತ್ತದೆ ಈ ಹೋಟೆಲ್. ಈ ಹೋಟೆಲಿನ ಬಾಗಿಲು ಕನ್ನಡೀ ಚೌಕಟ್ಟು ಹಾಗೂ ಫ್ರೇಮ್ಗಳು ಎಲ್ಲವೂ ಕೂಡ ಬಂಗಾರದಿಂದ ರಚಿಸಲ್ಪಟ್ಟಿದೆ. ಹೋಟೆಲಿಗೆ ಹೋಗಿ ವಾಸ ಮಾಡಿ ಬಂದ ಎಲ್ಲರೂ ಹೋಟೆಲಿನ ಅಮೋಘ ನೋಟವನ್ನು ಹಂಚಿಕೊಂಡಿದ್ದಾರೆ.
ಇವರಲ್ಲಿ ಭಾರತೀಯರು ಕೂಡಾ ಇದ್ದಾರೆ. ಆದರೆ ಇದಕ್ಕಿಂತಲೂ ಐಷಾರಾಮಿಯಾಗಿರುವ ವಿಯೆಟ್ನಾಂ ದೇಶದ ರಾಜಧಾನಿಯಲ್ಲಿ ಇರುವ ಗೋಲ್ಡನ್ ಲೇಕ್ ಹೋಟೆಲ್ ಬಗ್ಗೆ ಹಲವಾರು ಜನರಿಗೆ ತಿಳಿದಿಲ್ಲ. ಈ ಹೋಟೆಲ್ ವಿಶ್ವದ ಮೊಟ್ಟ ಮೊದಲ ಗೋಲ್ಡ್ ಕೋಟೆಡ್ ಹೋಟೆಲ್ ಎಂದೇ ಪ್ರಸಿದ್ಧಿ ಪಡೆದಿದೆ. ಈ ಭವ್ಯ ಹೋಟೆಲ್ ನ ಭಾಹ್ಯ ರಚನೆ ಸಂಪೂರ್ಣವಾಗಿ ಶುದ್ಧವಾದ 24 ಕ್ಯಾರೆಟ್ ಗೋಲ್ಡ್ ಗಟ್ಟಿಯಿಂದ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಹೇಳುವುದಾದರೆ ಕಲ್ಲಿನ ಇಟ್ಟಿಗೆಗಳ ಮೇಲೆ ಬಂಗಾರದ ಸೆರಾಮಿಕ್ ನಿಂದಾ ಇದರ ಐದು ಸಾವಿರ ಚದರ್ ವಿಸ್ತೀರ್ಣ ಹೊಂದಿರುವ ಮುಂಭಾಗವನ್ನು ನಿರ್ಮಿಸಲಾಗಿದೆ ಎನ್ನುವ ಸುದ್ದಿ ಇತ್ತೀಚೆಗೆ ವರದಿಯಾಗಿದೆ.
ಏಷ್ಯಾದ ಸಮೃದ್ಧಿ ದೇಶಗಳಲ್ಲಿ ಒಂದಾದ ವಿಯೆಟ್ನಾಂ ನ ರಾಜಧಾನಿ ಹನವಿ ನಗರದಲ್ಲಿ ಈ ಐಷಾರಾಮಿ ಹೋಟೆಲ್ ಇದೆ. ಈ ನಗರದ GNO ಎನ್ನುವ ಸಮುದ್ರದ ದಂಡೆಯ ಮೇಲೆ ಈ ಹೋಟೆಲ್ ಅನ್ನು ನಿರ್ಮಿಸಲಾಗಿದೆ. ಇಲ್ಲಿನ ಹೋವಾ ಬಿನ್ ಗ್ರೂಪ್ ನ ಒಡೆತನದಲ್ಲಿ ಇರುವ ಈ ಹೋಟೆಲ್ ಇದು ಶುದ್ಧವಾದ 24 ಕ್ಯಾರೆಟ್ ಬಂಗಾರದಿಂದ ನಿರ್ಮಿಸಲಾದ ಈ ಹೋಟೆಲ್ ಬರೀ ತನ್ನ ರಚನೆಯಿಂದಲೆ ವಿಯೆಟ್ನಾಂ ಮಾತ್ರವಲ್ಲದೇ ಇಂದು ಇಡೀ ವಿಶ್ವದ ಗಮನ ಸೆಳೆದಿದೆ.
ಈ ಹೋಟೆಲಿನ ಬಾಗಿಲು, ಕಿಟಕಿ, ಶೌಚಾಲಯ ಹೀಗೆ ಪ್ರತಿಯೊಂದು ಕೂಡಾ ಶುದ್ಧವಾದ ಬಂಗಾರದಿಂದ ರಚಿಸಲ್ಪಟ್ಟಿದೆ. ಇನ್ನು ಈ ಹೋಟೆಲ್ ನ ಮ್ಯಾನೇಜ್ಮೆಂಟ್ ಹೇಳುವ ಪ್ರಕಾರ, ಈ ಹೋಟೆಲ್ ಇದು ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ ಬಂಗಾರದಿಂದ ನಿರ್ಮಿತವಾದ ಹೋಟೆಲ್ ಆಗಿದೆಯಂತೆ. ಇನ್ನು ವಿಯೆಟ್ನಾಂ ಇದು ಒಂದು ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾದ ದೇಶ ಆಗಿದ್ದು, ಇಲ್ಲಿನ ಮೂಲ ಆದಾಯ ಪ್ರವಾಸಿ ತಾಣಗಳಾಗಿವೆ. ಜನರನ್ನು ಆಕರ್ಷಿಸುವುದರ ಸಲುವಾಗಿ ಈ ಹೋಟೆಲ್ ಅನ್ನು ಬಂಗಾರದಿಂದ ನಿರ್ಮಿಸಿರಬಹುದು.
ಇದು ಜನರನ್ನು ರಂಜಿಸಲು ಮಾತ್ರ ಅಲ್ಲದೇ ದೇಶದ ಆರ್ಥಿಕತೆಯನ್ನು ಕೂಡಾ ಉತ್ತಮಗೊಳಿಸಬಹುದು ಎನ್ನುವುದು ಅವರ ನಂಬಿಕೆ. ಪ್ರವಾಸಿಗರನ್ನು ಆಕರ್ಷಿಸಲು, ಹಾಗೂ ಅವರ ಹಿತಾಸಕ್ತಿಗಾಗಿ ಹೋಟೆಲ್ ಮ್ಯಾನೇಜ್ಮೆಂಟ್ ಸದಾ ಸಿದ್ಧವಾಗಿಯೆ ಇರುತ್ತದೆ. ಈ ಹೋಟೆಲ್ ರೂಮಿನ ಒಂದು ದಿನದ ಚಾರ್ಜ್ 250 ಡಾಲರ್ ನಿಂದ ಆರಂಭಿಸಿ 20 ಸಾವಿರ ಡಾಲರ್ ವರೆಗೂ ಕೂಡಾ ಇದೆ. ಅಂದರೆ ನಮ್ಮ ಭಾರತೀಯ ರೂಪಾಯಿಯ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 15 ಲಕ್ಷ ರೂಪಾಯಿ.
ಮೂರು ತಿಂಗಳುಗಳ ಲಾಕ್ ಡೌನ್ ನಂತರದಲ್ಲಿ ಈಗ ಮತ್ತೆ ತೆರೆಯಲಾಗಿರುವ ಈ ಹೋಟೆಲ್ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದರ ಚೆಲುವು ಹಾಗೂ ಆಡಂಭರಕ್ಕೆ ಮೂಕ ವಿಸ್ಮಿತರಾಗಿರುವ ಜನರು ಈಗಾಗಲೇ ಮುಗಿಬೀಳುತ್ತಿದ್ದಾರೆ. ಈ ಮೂಲಕ ಗೋಲ್ಡನ್ ಲೇಕ್ ಹೋಟೆಲ್ ಇದು ತನ್ನ ಐಷಾರಾಮಿ ಸೌಲಭ್ಯಗಳಲ್ಲಿ ಅರಬ್ ನ ಪೋರ್ಚುಗಲ್ ಅರಬ್ ಹೋಟೆಲಿಗೆ ಸಹ ಸವಾಲನ್ನು ಹಾಕಿದೆ.