Wooden Stove: ಮಹಿಳೆಯರ ಮೆಚ್ಚಿನ ಜಾಗ ಅಡಿಗೆ ಮನೆ. ಕೆಲಸ ಸುಲಭ ಮಾಡಿಕೊಳ್ಳಲು ಹೊಸ ಹೊಸ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಬಳಸುತ್ತಾರೆ. ಜನಗಳು ವಿದೇಶಿ ಕಂಪನಿಯ ಉತ್ಪನ್ನಗಳನ್ನು ಬಳಸುವ ಬದಲು ಸ್ವದೇಶಿ ನಿರ್ಮಿತ ಉತ್ಪನ್ನಗಳನ್ನು ಹೆಚ್ಚು ಬಳಕೆ ಮಾಡುವುದರಿಂದ ನಮ್ಮ ದೇಶದ ವಹಿವಾಟಿಗೆ ಸಹಾಯವಾಗುತ್ತದೆ. ಇನ್ನು ಅಡಿಗೆ ಮಾಡಲು ಅಡಿಗೆ ಅನಿಲ ತುಂಬ ಅತ್ಯಗತ್ಯ. ಆದರೆ ಸಿಲಿಂಡರ್ ದರ ದಿನ ಕಳೆದಂತೆ ದುಬಾರಿ ಆಗುತ್ತಿದೆ. ಇದಕ್ಕೆ ಪರ್ಯಾಯವಾಗಿ ವುಡನ್ ಸ್ಟವ್ ( wooden stove ) ಬಳಕೆ ಮಾಡುವುದರಿಂದ ಹಣವನ್ನು ಕೂಡ ಉಳಿತಾಯ ಮಾಡಬಹುದು. ಬದುಕಿನ ಜಂಜಾಟದಲ್ಲಿ ಈಗಿನ ಕಾಲದಲ್ಲಿ ಸೌದೆ ಒಲೆಯನ್ನು ಯಾರು ಬಳಸುವರು. ಆದರೂ ಈ ಸ್ಟವ್ ಬಗ್ಗೆ ಒಮ್ಮೆ ಕೇಳಿ.

ಏನಿದು ವುಡನ್ ಸ್ಟವ್ ನೋಡೋಣ ಬನ್ನಿ :-ವುಡನ್ ಸ್ಟವ್ ಇದರಲ್ಲಿ ಎರಡು ವಿಧ. ಒಂದು ರೆಗ್ಯುಲರ್ ಮತ್ತೊಂದು ಹೆವಿ ಡ್ಯೂಟಿ. ಎರಡರಲ್ಲಿನ ವ್ಯತ್ಯಾಸಗಳನ್ನು ನೋಡುವುದಾದರೆ. ರೆಗ್ಯುಲರ್’ನಲ್ಲಿ 3 ತಿಂಗಳ ವಾರಂಟಿ, ಸ್ಟವ್ ತುದಿಯಲ್ಲಿ ಯಾವ ಫೋಲ್ಡಿಂಗ್ ಇರುವುದಿಲ್ಲ, ಬೆಲೆ ಕಡಿಮೆ ಹಾಗೆ ತೂಕ ಕೂಡ ಕಮ್ಮಿ. ಹೆವಿ ಡ್ಯೂಟಿನಲ್ಲಿ 6 ತಿಂಗಳ ವಾರಂಟಿ ಮತ್ತು ಸ್ಟವ್ ತುದಿಯಲ್ಲಿ ಫ್ಲೋಡಿಂಗ್ ಇರುತ್ತದೆ. ಹೆಸರಿಗೆ ತಕ್ಕಂತೆ ಸ್ವಲ್ಪ ತೂಕ ಜಾಸ್ತಿ ಇರುತ್ತದೆ ಹಾಗೂ ಬೆಲೆ ಕೂಡ ಸಲ್ಪ ಹೆಚ್ಚು ಇರುತ್ತದೆ.

ಈ ಸ್ಟವ್ ಬಳಕೆ ಮಾಡುವುದು ಹೇಗೆ ಎಂದು ನೋಡೋಣ :-ಚಿಕ್ಕ ಚಿಕ್ಕ ಮರದ ತುಂಡುಗಳನ್ನು ಮೊದಲಿಗೆ ಸ್ಟವ್ ಒಳಗೆ ತುಂಬುವುದು ಹಾಗೂ ಪೇಪರ್ ಸಹಾಯದಿಂದ ಒಲೆ ಹೊತ್ತಿಸಬಹುದು. ಈ ಒಲೆ ಸಿಲಿಂಡರ್ ಸ್ಟವ್ ರೀತಿಯೇ ಉರಿಯುವುದು. ಅದಕ್ಕೆ, ಸಹಾಯ ಮಾಡುವುದು ವಿದ್ಯುತ್. ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಸ್ಟವ್ ಖರೀದಿ ಸಮಯದಲ್ಲಿ ಒಂದು ಚಾರ್ಜರ್ ಮತ್ತು ಕನೆಕ್ಟರ್ ನೀಡಿರುತ್ತಾರೆ. ಒಂದು ವೇಳೆ ವಿದ್ಯುತ್ ಇಲ್ಲ ಎಂದರೆ ಸೋಲಾರ್ ಸಹಾಯದಿಂದ ಒಲೆ ಉರಿಯುತ್ತದೆ, ಅದಕ್ಕೂ ಅನುಕೂಲ ಇಲ್ಲ ಎನುವುದಾದರೆ ಕೇವಲ ಎರಡು ಶೇಲ್ ಬಳಕೆ ಮಾಡಿ ಸ್ಟವ್ ಉರಿಸಬಹುದು. ಇನ್ನು ಮೊಬೈಲ್ ಪವರ್ ಬ್ಯಾಂಕ್ ಹಾಗೂ ವಾಹನಗಳ ಬ್ಯಾಟರಿ ಬಳಸಿ ಒಲೆ ಉರಿಸಲು ಸಾಧ್ಯವಿದೆ.

ಈ ಒಲೆಯ ಮೇಲೆ 2೦ ರಿಂದ 25 ಕೆಜಿ ಭಾರ ಇಡಬಹುದು. ಇನ್ನು ವಿದ್ಯುತ್ ಹಾಗೂ ಸ್ಟವ್ ನಡುವೆ ಯಾವ ರೀತಿ ಸಂಬಂಧ ಇರುವುದಿಲ್ಲ ಇದರ ಮಧ್ಯ ಫ್ಯಾನ್ ರೀತಿ ಅಡವಳಿಸಲಾಗಿದೆ ಇದು ಸ್ಟವ್ ಮತ್ತು ಕರೆಂಟ್ ನಡುವೆ ಅಂತರ ಇಡುತ್ತದೆ ಆದರಿಂದ ಸ್ಟವ್ ಜಾಸ್ತಿ ಬಿಸಿಯಾದರೂ ವಿದ್ಯುತ್ ಅಪಾಯ ತರುವುದಿಲ್ಲ.

ಬಳಕೆ ಮಾಡುವುದರಿಂದ ಇರುವ ಪ್ರಯೋಜನಗಳು :- ಸೌದೆ ಬಳಕೆ ಪರಿಸರ ಸ್ನೇಹಿ ಹಾಗೂ ಪರಿಸರ ರಕ್ಷಣೆ ಮಾಡುವುದು, ಸಿಲಿಂಡರ್’ಗೆ ₹1,1೦೦ ಕೊಡುವ ಬದಲು ಸೌದೆ ಖರೀದಿ ಮಾಡಲು ₹2೦೦ ಕೊಟ್ಟರೆ ಮಿಕ್ಕ ಹಣ ಉಳಿತಾಯವಾಗುತ್ತದೆ. ಆರೋಗ್ಯ ಕೂಡ ಇದರಿಂದ ಉತ್ತಮವಾಗಿ ಇರುತ್ತದೆ. ಕಟ್ಟಿಗೆ ಖರೀದಿಸಲು ನಗರ ಪ್ರದೇಶ ಜನರಿಗೆ ಖರ್ಚು ಬರುತ್ತದೆ ಆದರೆ ರೈತರಿಗೆ ಯಾವ ಖರ್ಚು ಬರುವುದಿಲ್ಲ.

ಸೌದೆಯ ಗಾತ್ರ ಸಣ್ಣದು ಇದ್ದಷ್ಟು ಒಳ್ಳೆಯದು ಅಡಿಗೆ ಮದ್ಯದಲ್ಲಿ ಸ್ಟೀವ್ ಮತ್ತು ಪಾತ್ರೆ ನಡುವೆ ಇರುವ ಸ್ಪೇಸ್’ನಿಂದ ಸೌದೆ ಹಾಕಬಹುದು. ಸ್ಟವ್ ಮೇಲೆ ದೊಡ್ಡ ದೊಡ್ಡ ಪಾತ್ರೆಗಳಿಂದ ಅಡಿಗೆ ಮಾಡ್ಬೇಕು ಅಂತ ಅಂದ್ರೆ ಸ್ಟವ್ ಹೊರಗೆ ಇಡಲು ಒಂದು ಸ್ಟ್ಯಾಂಡ್ ತೆಗೆದುಕೊಂಡರೆ ಸಾಕು ಸಮಾರಂಭದಲ್ಲಿ ಕೂಡ ಈ ಸ್ಟವ್ ಬಳಕೆ ಮಾಡಬಹುದು.

ಬೆಂಕಿಯ ಉರಿಯನ್ನು ಹೈ ಫ್ಲೇಮ್ ಮತ್ತು ಲೋ ಫ್ಲೇಮ್ ಮಾಡಲು ಸ್ಟವ್ ಕೆಳಗಡೆ ಸ್ವಿಚ್ ನೀಡಲಾಗಿದೆ ಅಲ್ಲೇ ಪ್ಲಗ್ ಪಾಯಿಂಟರ್ ಕೂಡ ಇರುವುದು. ಸ್ಟವ್ ಹಚ್ಚುವುದಕ್ಕೆ ಯಾವುದೇ ರೀತಿಯ ಇಂಧನ ( ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ. ) ಬಳಕೆ ಮಾಡುವುದು ನಿಷೇದ. ಪ್ಲಾಸ್ಟಿಕ್ ಬಳಕೆ ಮಾಡಿದರೆ ಸ್ಟವ್ ಹಾಳಾಗುತ್ತದೆ.

ವುಡನ್ ಸ್ಟವ್ 6 ವೊಲ್ಟ್ಸ್ ಡೈರೆಕ್ಟ್ ಕರೆಂಟ್ ( ಡಿ.ಸಿ. ) ವಿದ್ಯುತ್’ನಲ್ಲಿ ಕೆಲಸ ಮಾಡುತ್ತದೆ, 12 ವೊಲ್ಟ್ಸ್ ಡೈರೆಕ್ಟ್ ಕರೆಂಟ್ ( ಡಿ.ಸಿ. ) ಬಳಸಿದರೆ ಇದು ಕೆಲಸ ಮಾಡುವುದಿಲ್ಲ ಮತ್ತು ಹಾಳಾಗುತ್ತದೆ. ವುಡನ್ ಸ್ಟವ್ ರೆಗ್ಯುಲರ್ ಬೆಲೆ ₹2,900 ಮತ್ತು ಹೆವಿ ಡ್ಯೂಟಿ ಬೆಲೆ ₹3,200, ಕಮರ್ಷಿಯಲ್ ಸ್ಟವ್ ಹೋಟೆಲ್ ಬ್ಯುಸಿನೆಸ್ ಮಾಡುವವರಿಗೆ ಇದರ ಬೆಲೆ ₹7,900.

ಕರ್ನಾಟಕ ಯಾವುದೇ ಜಿಲ್ಲೆಯಲ್ಲಿ ಇದ್ದರು ಕೂಡ ಟ್ರಾನ್ಸ್ಪೋರ್ಟ್ ಚಾರ್ಜಸ್ ₹80. ಇನ್ನು , ಕಮರ್ಷಿಯಲ್ ಸ್ಟವ್ ಟ್ರಾನ್ಸ್ಪೋರ್ಟ್ ಚಾರ್ಜಸ್ ₹180ಕ್ಕೆ ಮನೆ ಬಾಗಿಲಿಗೆ ಆನ್ಲೈನ್ ಮೂಲಕ ಡೆಲಿವರಿ ಕೊಡುವರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ. ದೊಡ್ಡಿ ಗ್ರಾಮ. ಇದು ದೇಶಿ ಪ್ರೋಡಕ್ಸ್ ಅವರ ವಿಳಾಸ. ಆನ್ಲೈನ್ ಪೇಮೆಂಟ್ ಮಾಡಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಬಹುದು ಜೊತೆಗೆ ವಾರಂಟಿ ಮತ್ತು ಗ್ಯಾರಂಟಿ ಸಹ ನೀಡಲಾಗುವುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *