ಪುರುಷರಿಗೆ ಸಮಾನವಾಗಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಅದರಂತೆ ಕೃಷಿ ಕ್ಷೇತ್ರದಲ್ಲಿಯೂ ಕೂಡ ಬಹಳಷ್ಟು ಮಹಿಳೆಯರು ಸಾಧನೆ ಮಾಡಿದ್ದಾರೆ. ಪ್ರಗತಿಪರ ಮಹಿಳೆ ಪ್ರಶಸ್ತಿ ಪುರಸ್ಕೃತೆ ಲಕ್ಷ್ಮೀದೇವಮ್ಮ ಅವರು ಕೃಷಿಯಲ್ಲಿ ಮಾಡಿದ ಸಾಧನೆಯನ್ನು ಹಾಗೂ ಕೃಷಿಯ ಬಗ್ಗೆ ಅವರ ಮಾತುಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಹೊಸಕೋಟೆ ಗ್ರಾಮದ ಲಕ್ಷ್ಮೀದೇವಮ್ಮ ಅವರು ಭೂಮಿಯನ್ನು ದೇವರೆಂದು ತಿಳಿದು 30 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮ ರಾಜ್ಯ ಕಂಡ ಪ್ರಗತಿಪರ ಯಶಸ್ವಿ ಮಹಿಳೆಯರಲ್ಲಿ ಇವರು ಒಬ್ಬರು. ಅವರು 30 ವರ್ಷದ ಹಿಂದೆ 3 ಎಕರೆ ಜಮೀನನ್ನು ಖರೀದಿಸಿದರು. ಮೊದಲು ಅವರು ತಮ್ಮ ಜಮೀನಿನಲ್ಲಿ ಕುಂಬಳ ಬೆಳೆಯನ್ನು ಬೆಳೆದರು ನಂತರ ಕಬ್ಬು ಅನೇಕ ಬೆಳೆಗಳನ್ನು ಬೆಳೆದರು. ತೆಂಗು, ಅಡಿಕೆ, ಬಾಳೆ ಮರಗಳ ಮಧ್ಯದಲ್ಲಿ ಸುವರ್ಣ ಗಡ್ಡೆಯನ್ನು ಕೂಡ ಬೆಳೆಸಿದ್ದಾರೆ ಸುವರ್ಣಗಡ್ಡೆಯು 1ಗಡ್ಡೆ 10ರಿಂದ 12 ಕೆಜಿ ತೂಕವಿರುತ್ತದೆ.

ಲಕ್ಷ್ಮೀದೇವಮ್ಮ ಅವರು ಖಾಲಿ ಇರುವ ಜಾಗದಲ್ಲಿ ತರಕಾರಿಯನ್ನು ಸಹ ಬೆಳೆಸುತ್ತಿದ್ದಾರೆ ತರಕಾರಿಯಿಂದ ಸಣ್ಣ ಪ್ರಮಾಣದ ಆದಾಯ ಸಿಗುತ್ತದೆ. ಅವರು ಮನೆಯಲ್ಲಿ ಶೆಡ್ ನಿರ್ಮಿಸಿ ಕುರಿ ಸಾಕಾಣಿಕೆ ಮಾಡಿದ್ದಾರೆ, ನಾರಿ ಸುವರ್ಣ ಎಂಬ ಜಾತಿಯ ಕುರಿಗಳನ್ನು ಇವರು ಸಾಕಿದ್ದಾರೆ ಈ ತಳಿಯ ಒಂದು ಕುರಿ ಮೂರು ಮರಿಗಳನ್ನು ಹಾಕುತ್ತದೆ. ಹಸು, ಮೇಕೆ ಸಾಕಾಣಿಕೆ ಕೂಡ ಇವರು ಮಾಡುತ್ತಿದ್ದಾರೆ. ಮೇಕೆ ಸಾಕಾಣಿಕೆಗೆ ಅವರು 4ರಿಂದ 5ಸಾವಿರ ಬಂಡವಾಳ ಹಾಕಿ 15- 20,000 ಆದಾಯವನ್ನು ಪಡೆಯುತ್ತಾರೆ. ಕುರಿ, ಮೇಕೆಗಳಿಗೆ ಸರಿಯಾದ ಸಮಯಕ್ಕೆ ಆಹಾರ, ಲಸಿಕೆಗಳನ್ನು ಹಾಕಿಸುವುದರ ಮೂಲಕ ಒಳ್ಳೆಯ ಆದಾಯ ಪಡೆಯಬಹುದು ಎಂದು ಲಕ್ಷ್ಮೀದೇವಮ್ಮ ಅವರು ಹೇಳಿದ್ದಾರೆ.

ಹಸು ಸಾಕಾಣಿಕೆ ಮಾಡುವುದರಿಂದ ಅವುಗಳ ಸಗಣಿಯಿಂದ ಉತ್ಕೃಷ್ಟ ಗೊಬ್ಬರ ಸಿಗುತ್ತದೆ, ಆ ಗೊಬ್ಬರವನ್ನು ತಮ್ಮ ಜಮೀನಿಗೆ ಹಾಕಿಸುತ್ತಾರೆ ಇದರಿಂದ ಬೆಳೆಯು ಉತ್ತಮವಾಗಿ ಬರುತ್ತದೆ. ಹೊರಗಡೆ ಇನ್ನೊಬ್ಬರ ಕೆಳಗೆ ಕೆಲಸ ಮಾಡಿಕೊಂಡು ಸಂಬಳ ತೆಗೆದುಕೊಳ್ಳುವುದಕ್ಕಿಂತ ಕೃಷಿ ಮಾಡುತ್ತಾ, ಸ್ವತಂತ್ರವಾಗಿ ಸರ್ಕಾರಿ ಅಧಿಕಾರಿಗಳಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದೇವೆ ಎಂದು ಲಕ್ಷ್ಮೀದೇವಮ್ಮ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಇಷ್ಟೇ ಅಲ್ಲದೆ ಅವರು ಕೋಳಿ ಸಾಕಾಣಿಕೆಯನ್ನು ಮಾಡಿದ್ದಾರೆ ನಾಟಿ ಕೋಳಿಗೆ ಹೆಚ್ಚು ಬೇಡಿಕೆ ಇದ್ದು ಮೂರು ತಿಂಗಳು ಸಾಕಿದರೆ 200 ರೂಪಾಯಿ ಬೆಲೆ ಬಾಳುತ್ತದೆ. ಕೃಷಿ ಸಚಿವರು ಲಕ್ಷ್ಮೀದೇವಮ್ಮ ಅವರ ಜಮೀನಿಗೆ ಭೇಟಿ ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೀದೇವಮ್ಮ ಅವರು ತಮ್ಮ ಭೂಮಿಯ ಸುತ್ತ ತೇಗ ಮರಗಳನ್ನು ಬೆಳೆಸಿದ್ದಾರೆ ಒಂದು ಮರದಿಂದ 50,000ರೂ ಆದಾಯ ಸಿಗುತ್ತದೆ. ಕೊರೋನಾ ವೈರಸ್ ಬಂದಿರುವ ಕಾರಣ ಹೊರಗಡೆ ಕೆಲಸ ಮಾಡುತ್ತಿರುವವರು ತಮ್ಮ ಊರಿಗೆ ಬಂದು ಕುರಿಸಾಕಾಣಿಕೆ ಮಾಡುತ್ತಿದ್ದಾರೆ ಅವರಿಗೆ ಲಕ್ಷ್ಮೀದೇವಮ್ಮ ಅವರು ಮೊದಲು ಸಣ್ಣಪ್ರಮಾಣದಲ್ಲಿ ಪ್ರಾರಂಭಿಸಿ ನಂತರ ಹೆಚ್ಚಿನ ಪ್ರಮಾಣದಲ್ಲಿ ಸಾಕಾಣಿಕೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಕೃಷಿಯು ನಮ್ಮ ಜೀವನದ ಕನ್ನಡಿ, ಭೂಮಿತಾಯಿಯನ್ನು ಗೌರವಿಸಬೇಕು ಎಂದು ಹೇಳಿದರು. ಅವರಿಗೆ ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!