ತಾಯಿಯಾಗುವುದು ಒಂದು ಸುಂದರ ಅನುಭವ. ತಾಯ್ತಾನ ಎನ್ನುವ ಪಡದಲ್ಲಿಯೇ ಒಂದು ಹಿತವಿದೆ. ಈ ಅನುಭವದ ಬಗ್ಗೆ ವರ್ಣಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ. ಆದರೆ ಕೆಲವೊಮ್ಮೆ ಕೆಲವೊಂದು ಕಾರಣಗಳಿಂದ ತಾಯಿಯಾಗಲು ಸಾಧ್ಯವಾಗುವುದಿಲ್ಲ. ಇದು ನಿಜಕ್ಕೂ ಬೇಸರದ ವಿಚಾರ. ಈ ಬಂಜೆತನ ಎನ್ನುವುದು ಇತ್ತೀಚಿನ ದಿನಗಲ್ಲಿ ಸಾಮಾನ್ಯ ಎನ್ನುವ ರೀತಿಯಾಗಿದೆ. ಈ ಸಮಸ್ಯೆಗೆ ಪರಿಹಾರ ಪಡೆಯಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಹೆಚ್ಚಿನ ಜನರಿಗೆ ಆಯುರ್ವೇದದಲ್ಲಿ ಸಹ ಬಂಜೆತನ ಪರಿಹಾರಕ್ಕೆ ಮಾರ್ಗಗಳಿದೆ ಎಂದು ತಿಳಿದಿಲ್ಲ.
ಬಂಜೆತನದ ಸಮಸ್ಯೆಗೆ ಕಾರಣಗಳು ಹಲವಾರಿದೆ,ಬಂಜೆತನಕ್ಕೆ ಒಂದೇ ಕಾರಣವಿಲ್ಲ, ಆದರೆ ಮುಟ್ಟಿನ ಸಮಾಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ PCOD ಸಹ ಅಂದರೆ ಬಂಜೆತನದ ಸಮಸ್ಯೆಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಹಾರ್ಮೋನ್ ಏರಿಳಿತಗಳು ಸಹ ಸಾಕಷ್ಟು ಸಾಮಾನ್ಯವಾಗಿದ್ದು, ಇದು ಮತ್ತೊಂದು ಕಾರಣ. ಎಂಡೊಮೆಟ್ರಿಯಾಸಿಸ್ ಅಥವಾ ಫೈಬ್ರಾಯ್ಡ ಸಮಸ್ಯೆ ಸೇರಿದಂತೆ ಇಂದಿನ ಜೀವನಶೈಲಿ ಸಹ ಕಾರಣವಾಗಬಹುದು..
ಆಯುರ್ವೇದದಲ್ಲಿ ಗಿಡಮೂಲಿಕೆಗಳ ಮತ್ತು ನೈಸರ್ಗಿವಾಗಿ ಸಿಗುವ ವಸ್ತುಗಳನ್ನು ಬಳಸಿ ಔಷದಿಗಳನ್ನು ನೀಡಲಾಗುತ್ತದೆ. ಈ ಔಷಧಗಳ ಮೂಲಕವೇ ಬಂಜೆತನ ನಿವಾರಿಸಲಾಗುತ್ತದೆ. ಯಾವುದೇ ರಾಸಾಯನಿಕಯುಕ್ತ ಔಷಧಿಗಳಿಲ್ಲದೆ ಆಯುರ್ವೇದ ನಿಮಗೆ ಪರಿಹಾರ ನೀಡುತ್ತದೆ. ಯಾವುದೇ ಮಾತ್ರೆ ಔಷಧಿಗಳು ಕಾರ್ಯ ನಿರ್ವಹಿಸದಿದ್ದಲ್ಲಿ ಪಂಚಕರ್ಮ ಚಿಕಿತ್ಸೆಯನ್ನೂ ಸಹ ನೀಡಲಾಗುತ್ತದೆ. ಆಯುರ್ವೇದದಲ್ಲಿ ಯಾವುದೇ ಸರ್ಜರಿ ಮಾಡಲಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇದು ಆರ್ಥಿಕವಾಗಿ ಹೊರೆಯಾಗುವುದಿಲ್ಲ, ಬೇರೆ ಸರ್ಜರಿ ಮತ್ತು ಚಿಕಿತ್ಸೆಗೆ ಲಕ್ಷ ಲಕ್ಷ ಹಣದ ಅವಶ್ಯಕತೆ ಇರುತ್ತದೆ ಆದರೆ ಆಯುರ್ವೇದ ಔಷದಿಗಳಿಗೆ ಹೆಚ್ಚು ಹಣ ಬೇಕಾಗುವುದಿಲ್ಲ.