ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಗೋವಾ ಕೂಡಾ ಒಂದಾಗಿದೆ. ಇಲ್ಲಿ ಬೀಚ್ ಗಳು , ಸುಂದರವಾದ ಕಟ್ಟಡಗಳು ದೇವಾಲಯಗಳು ಗೋವಾದಲ್ಲಿ ನೋಡಬಹುದಾದಂತಹ ಪ್ರವಾಸಿ ತಾಣಗಳಾಗಿವೆ. ಗೋವಾದ ಪ್ರಮುಖ ಆರ್ಥಿಕತೆಯ ಮೂಲ ಎಂದರೆ ಅದು ಪ್ರವಾಸೋದ್ಯಮವೇ ಆಗಿದೆ. ಇನ್ನು ಪ್ರಮುಖವಾಗಿ ಗೋವಾ ಇಲ್ಲಿ ಇರುವ ಬೀಚ್ ಗೆ ಅತ್ಯಂತ ಪ್ರಸಿದ್ಧವಾಗಿದೆ. ಕಲಂಗುಟ್ , ಕೋಲ್ವಾ, ಡೋನಾ ಪೌಲಾ , ವೆಗಾಗೋರ್ , ಆರಾಮ್ ಬೋಲ್ , ಫೋಲೊಲೆಮ್ ಇವು ಅಲ್ಲಿನ ಪ್ರಮುಖ ಬೀಚ್ ಆಗಿದ್ದು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಹಾಗಾಗಿ ಗೋವಾ ಅಂದಾಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಸುಂದರವಾದ ಕಡಲ ತೀರ , ಮರಳು , ಹೊಳೆಯುವ ನೀಲಿ ಬಣ್ಣದ ನೀರು, ಹಸಿರು ಗದ್ದೆಗಳು ಮತ್ತು ತೆಂಗಿನ ಮರದ ಚಿತ್ರ ಎಲ್ಲರ ಕಣ್ಮನ ಸೆಳೆಯುತ್ತವೆ. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಗೋವಾದಲ್ಲಿ ವಿಶೇಷವಾದ ಕಡಲ ತೀರವಿದೆ. ಅದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದಲ್ಲಿ ಈ ಕೆಳಗೆ ನೋಡೋಣ.
ಈ ಒಂದು ಕಡಲ ತೀರವನ್ನು ನೋಡಲು ಜನರು ಸಾಕಷ್ಟು ದೂರದಿಂದ ಬರುತ್ತಾರೆ. ಆ ಬೀಚ್ ನ ಹೆಸರು ಬಟರ್ ಫ್ಲೈ ಬೀಚ್. ಇದು ಗೋವಾದ ಕೆನಕೊಣ ಪ್ರದೇಶದ ಕೊಲಲೇಮ್ ನ ದಕ್ಷಿಣ ದಿಕ್ಕಿಗೆ ಇದೆ. ಈ ಬಟರ್ ಫ್ಲೈ ಬೀಚನ್ನು ಹನಿಮೂನ್ ಬೀಚ್ ಎಂದೇ ಕರೆಯುತ್ತಾರೆ. ಇದು ಗೋವಾದಲ್ಲಿ ಇರುವ ಅತ್ಯಂತ ಏಕಾಂತ ಕಡಲ ತೀರಗಳಲ್ಲಿ ಒಂದಾಗಿದೆ. ಇನ್ನು ಈ ಬೀಚ್ ನ ವಿಶೇಷ ಎಂದರೆ ಇಲ್ಲಿ ಯಾವುದೇ ವಾಹನಗಳು ನೇರವಾಗಿ ಹೋಗಲು ಆಗುವುದಿಲ್ಲ. ಇಲ್ಲಿ ಹೋಗಲು ವಾಹನಗಳ ಬದಲು ದೋಣಿಯ ಮೂಲಕ ಹೋಗಬೇಕು. ಇನ್ನು ಈ ಒಂದು ಬೀಚನ್ನು ಬಟರ್ ಫ್ಲೈ ಬೀಚ್ ಎಂದು ಕರೆಯಲು ಕಾರಣ ಏನು ಎಂದು ನೋಡುವುದಾದರೆ , ಈ ಬೀಚ್ ನ ಸುತ್ತಮುತ್ತಲೂ ಇರುವ ಮರ ಗಿಡಗಳಲ್ಲಿ ಚಿಟ್ಟೆಗಳು ಹೆಚ್ಚಾಗಿ ಇದ್ದು ಇಲ್ಲಿ ಆಶ್ರಯ ಪಡೆದಿವೆ.
ಇಲ್ಲಿ ಚಿಟ್ಟೆಗಳನ್ನು ಮಾತ್ರವಲ್ಲದೆ ಹಲವಾರು ರೀತಿಯ ಗೋಲ್ಡ್ ಫಿಶ್ ಇವುಗಳನ್ನು ಸಹ ನೋಡಬಹುದು. ಇನ್ನು ಇದರ ಹೆಸರೇ ಸೂಚಿಸುವ ಹಾಗೆ ಇದು ಸುಂದರ ಚಿಟ್ಟೆಗಳ ನೆಲೆಯಾಗಿದೆ ಅಷ್ಟೇ ಅಲ್ಲದೆ ಎಡಿ ಮತ್ತು ವಿಶೇಷವಾದ ಗೋಲ್ಡ್ ಫಿಷ್ ಗಳಿಂದ ಕೂಡಾ ಕೂಡಿದೆ. ಸಮುದ್ರ ಆರ್ಚಿನ್ ರೆಡ್ ಫಿಶ್ ಗಳೂ ಸಹ ಇಲ್ಲಿ ಇರುವುದರಿಂದ ಈ ತಾಣ ಬಹಳಷ್ಟು ಸುಂದರವಾಗಿ ಕಾಣಿಸುತ್ತದೆ. ಗೋವಾದ ಈ ಬಟರ್ ಫ್ಲೈ ಬೀಚ್ ನಲ್ಲಿ ಡಾಲ್ಫಿನ್ ಗಳನ್ನು ಸಹ ಕಾಣಬಹುದು. ಗೋವಾದಲ್ಲಿ ಡಾಲ್ಫಿನ್ ಗಳನ್ನು ನೋಡಲು ಬೇರೆ ಹೆಚ್ಚು ಸ್ಥಳಗಳು ಇದ್ದರೂ ಸಹ ಈ ಬಟರ್ ಫ್ಲೈ ಬೀಚ್ ನಲ್ಲಿ ಡಾಲ್ಫಿನ್ ಗಳನ್ನು ಹಾಗೂ ಸುಂದರವಾದ ಶಾಂತವಾದ ಬೀಚ್ ನಲ್ಲಿ ಆಟವಾಡುವುದನ್ನು ನೋಡುವುದೇ ಒಂದು ಮೋಜು. ಇಲ್ಲಿನ ಇನ್ನೊಂದು ಅದ್ಭುತ ಎಂದರೆ ಸೂರ್ಯಾಸ್ತ ನೋಡುವುದು. ಈ ಬೀಚ್ ನಲ್ಲಿ ದೋಣಿ ಸವಾರಿ ಮಾಡಿ ಸೂರ್ಯಾಸ್ತ ನೋಡಬಹುದು. ಅಷ್ಟೇ ಅಲ್ಲದೆ ಸಮುದ್ರದ ಸುತ್ತಲೂ ಇರುವ ಅರಣ್ಯ ಸುತ್ತುವುದು ಚಾರಣ ಕೂಡಾ ಮಾಡಬಹುದು.
ಇನ್ನು ಗೋವಾದ ಬಟರ್ ಫ್ಲೈ ಬೀಚ್ ಇದನ್ನು ಒಂದು ರಹಸ್ಯಮಯ ಬೀಚ್ ಎಂದೇ ಪರಿಗಣಿಸಲಾಗಿದೆ. ಏಕೆಂದರೆ ಈ ಬೀಚ್ ತಲುಪಲು ಯಾವುದೇ ವಾಹನದ ಸೌಲಭ್ಯ ಇಲ್ಲ ಹಾಗೂ ಯಾವುದೇ ದ್ವಿ ಚಕ್ರ ವಾಹನಗಳೂ ಸಹ ಹೋಗುವುದಿಲ್ಲ. ಒಂದುವೇಳೆ ನೀವು ಬಟರ್ ಫ್ಲೈ ಬೀಚ್ ಅಲ್ಲಿಗೆ ಹೋಗಲು ನಿರ್ಧರಿಸಿದರೆ ಮೊದಲು ಪೋಲಲೆಮ್ ಬೀಚ್ ತಲುಪಲು ಕ್ಯಾಬ್ ಇಲ್ಲವೇ ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬೇಕು. ನಂತರ ದೋಣಿ ವಿಹಾರ ಮಾಡಿಕೊಂಡು ಬಟರ್ ಫ್ಲೈ ಬೀಚ್ ತಲುಪಬಹುದು. ಇಲ್ಲಿ ನೇರವಾದ ವಾಹನ ವ್ಯವಸ್ಥೆ ಇಲ್ಲದ ಕಾರಣ ಅಷ್ಟೊಂದು ಜನರು ಅಲ್ಲಿಗೆ ಹೋಗುವುದಿಲ್ಲ. ಜನಸಂಖ್ಯೆ ವಿರಳವಾಗಿ ಇರುವುದರಿಂದ ಈ ಸ್ಥಳದಲ್ಲಿ ಪಾರ್ಟಿ ಮಾಡಲೂಬಹುದು. ಇನ್ನು ಇದು ದಂಪತಿಗಳಿಗೆ ಅಂತೂ ಹೇಳಿ ಮಾಡಿಸಿದ ಉತ್ತಮ ಬೀಚ್ ಆಗಿದೆ ಅದಕ್ಕಾಗಿಯೇ ಇದನ್ನು ಹನಿಮೂನ್ ಬೀಚ್ ಎಂದೇ ಕರೆಯುತ್ತಾರೆ.