ಭಾರತದಲ್ಲಿ ವಿಕೆಟ್ ಕೀಪರ್ಸ್ ನಡುವೆ ಸ್ಪೋರ್ಟಿವ್ ಸ್ಪರ್ಧೆ ಏರ್ಪಟ್ಟಿದ್ದು ಇದು ಖುಷಿಯ ವಿಚಾರವೇ ಆಗಿದೆ. ಆದರೆ ಈಗ BCCI ಮುಂದಿದೆ ಇರುವುದು ವಿಕೆಟ್​​ ಕೀಪರ್​ ಆಯ್ಕೆಯ ದೊಡ್ಡ ಸವಾಲು. ಧೋನಿ ನಂತರ ವಿಕೆಟ್ ಕೀಪರ್ ಆಗಿ ಉತ್ತರಾಧಿಕಾರಿ ಪಟ್ಟವನ್ನು ಯಾರು ಪಡೆಯಲಿದ್ದಾರೆ ? ಎನ್ನುವುದರ ಬಗ್ಗೆ ಗಹನವಾದ ಚರ್ಚೆ ನಡೆಯುತ್ತಿದೆ. ಮುಂದಿನ ವಿಕೆಟ್ ಕೀಪರ್ ಯಾರು ಎನ್ನುವುದರ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ.

ಅತ್ತ ಕಾಂಗರೂ ನೆಲದಲ್ಲಿ ಟೀಂ ಇಂಡಿಯಾ ಕಠಿಣ ಸರಣಿಗೆ ಸಿದ್ಧವಾಗುತ್ತ ಇದೆ ಮತ್ತೆ ಇತ್ತ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಸ್ಥಾನಕ್ಕಾಗಿ ನಾಲ್ವರು ಆಟಗಾರರು ಪೈಪೋಟಿ ನಡೆಸುತ್ತ ಇದ್ದಾರೆ. ಜೀವನದಲ್ಲಿ ಒಮ್ಮೆಯಾದರೂ ಟೀಂ ಇಂಡಿಯಾವನ್ನ ಪ್ರತಿನಿಧಿಸಬೇಕು ಅನ್ನೋದು ಲಕ್ಷಾಂತರ ಯುವ ಕ್ರಿಕೆಟಿಗರ ಕನಸಾಗಿರುತ್ತೆ. ಹಾಗಂತ ಎಲ್ಲರೂ ಕನಸು ಕಂಡ ತಕ್ಷಣ ಟೀಂ ಇಂಡಿಯಾವನ್ನು ಪ್ರತಿನಿಧಿಸುವ ಅವಕಾಶ ಎಲ್ಲರಿಗೂ ಅಷ್ಟು ಸುಲಭಕ್ಕೆ ಸಿಗುವುದೂ ಇಲ್ಲ. ಅದಕ್ಕೆಂದೇ ಕಠಿಣ ಪರಿಶ್ರಮ ಪಡಬೇಕು ನಡೆಯೊ ದಾರಿಯಲ್ಲಿ ಬದ್ಧತೆ ಇರಬೇಕು. ಜತೆಗೆ ಸ್ವಲ್ಪ ಅದೃಷ್ಟವೂ ಇದ್ದರೆ ಅವಕಾಶದ ಬಾಗಿಲು ಸಲೀಸಾಗಿ ತೆರೆಯೋದು. ಮೇಲೆ ಹೇಳಿದಂತೆ ವಿಶ್ವದ ಶ್ರೀಮಂತ ಕ್ರಿಕೆಟ್​​ ಸಂಸ್ಥೆ ಬಿಸಿಸಿಐ, ಇದು ಜಗತ್ತಿನಲ್ಲಿ ಕ್ರಿಕೆಟ್​​ ಕುರಿತು ಏನೇ ನಿರ್ಣಯವನ್ನ ತೆಗೆದುಕೊಂಡರೂ ಅರಗಿಸಿಕೊಳ್ಳುವ ಶಕ್ತಿ ಇರೋ ಏಕೈಕ ಕ್ರಿಕೆಟ್​ ಸಂಸ್ಥೆ. ಅಂತಹ ಪವರ್​ಫುಲ್​​ ಕ್ರಿಕೆಟ್​ ಸಂಸ್ಥೆಗೆ ಈಗ ಅಗ್ನಿ ಪರೀಕ್ಷೆ ಎದುರಾಗಿದೆ. ಧೋನಿ ನಿವೃತ್ತಿಯಾದ ಬಳಿಕ ಟೀಂ ಇಂಡಿಯಾಕ್ಕೆ ಸಮರ್ಥ ವಿಕೆಟ್​​ ಕೀಪರ್​ ಒಬ್ಬರು ಬೇಕಾಗಿದ್ದಾರೆ. ವಿಕೆಟ್​ ಕೀಪರ್ಸ್​ ಆಯ್ಕೆ ಮಾಡಿಕೊಳ್ಳುವ ಸವಾಲು ಈಗ ಬಿಸಿಸಿಐ ಮುಂದೆ ಇದೆ. ಬಿಸಿಸಿಐ ಮುಂದೆ ಇರುವ ವಿಕೆಟ್ ಕೀಪರ್ಸ್​ ಪಟ್ಟಿ ಬಹಳ ದೊಡ್ಡದಾಗಿದೆ. ಈ ಪೈಕಿ ಯಾರನ್ನ ಆಯ್ಕೆ ಮಾಡೋದು ಅನ್ನೋದೇ ಬಿಸಿಸಿಐಗೆ ಈಗ ತಲೆನೋವಾಗಿದೆ.

ಟೀಂ ಇಂಡಿಯಾದ ವಿಕೆಟ್​ ಕೀಪರ್ಸ್​​ ಅಂದಾಗ ತಕ್ಷಣಕ್ಕೆ ನೆನಪಿಗೆ ಬರುವುದು ಕೆ.ಎಲ್​.ರಾಹುಲ್​​, ದಿನೇಶ್​​ ಕಾರ್ತಿಕ್​,​ ಸಂಜು ಸ್ಯಾಮ್ಸನ್​​, ವೃದ್ದಿಮಾನ್​​ ಸಹಾ, ರಿಷಭ್​​ ಪಂತ್​​ ಹೀಗೆ ಸಾಲು ಸಾಲು ಆಟಗಾರರ ಹೆಸರು ಕೇಳಿ ಬರುತ್ತದೆ. ಈ ಪೈಕಿ ಈಗಾಗಲೇ ಕೆ.ಎಲ್​.ರಾಹುಲ್​ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. ಇನ್ನು ಸಂಜು ಸ್ಯಾಮ್ಸನ್​​, ವೃದ್ದಿಮಾನ್​​ ಸಹಾ, ರಿಷಭ್​ ಪಂತ್​​, ದಿನೇಶ್​​ ಕಾರ್ತಿಕ್​​ ಇವರುಗಳ ನಡುವೆ ಟೀಂ ಇಂಡಿಯಾದ 2ನೇ ವಿಕೆಟ್​​ ಕೀಪರ್​​ ಸ್ಥಾನಕ್ಕಾಗಿ ಬಿರುಸಿನ ಪೈ ಪೋಟಿಯಿದೆ. ಇನ್ನು ಐಪಿಎಲ್ ನಲ್ಲಿ ಉದಯಿಸಿದ ಹೊಸ ಸ್ಟಾರ್​ ಬ್ಯಾಟ್ಸ್​ಮನ್​ ಕಮ್ ವಿಕೆಟ್​ ಕೀಪರ್​​ ಇಶಾನ್​​ ಕಿಶನ್​​ ಎಂಬುವವರ ಹೊಸ ಸೇರ್ಪಡೆ ಆಗಿದೆ. ಪ್ರಸಕ್ತ ಐಪಿಎಲ್​ನಲ್ಲಿ ಮುಂಬೈ ಪರ ಮ್ಯಾಚ್​​ ವಿನ್ನಿಂಗ್​ ಪರ್ಫಾಮೆನ್ಸ್​ ನೀಡಿರೋ ಇಶಾನ್​​​ ಕೂಡ ಟೀಂ ಇಂಡಿಯಾ ರೇಸ್​ನಲ್ಲಿರೊ ಟಫ್​ ಕ್ಯಾಂಡಿಡೇಟ್​ ಎಂದರೆ ತಪ್ಪಾಗಲಾರದು.

ಆಸೀಸ್ ನಲ್ಲಿ ಸುದೀರ್ಘ ಸರಣಿಗೆ ತೆರಳಿರುವ ಟೀಂ ಇಂಡಿಯಾ ತನ್ನ ಬತ್ತಳಿಕೆಯಲ್ಲಿ ನಾಲ್ವರು ವಿಕೆಟ್ ಕೀಪರ್​​​​ಗಳನ್ನ ಇಟ್ಟುಕೊಂಡಿದೆ. ಕೆ.ಎಲ್​.ರಾಹುಲ್​ ಟಿ20 ಸರಣಿಯಲ್ಲಿ ವಿಕೆಟ್​​​ ಕೀಪರ್​ ಆಗಿ​​ ಕಾರ್ಯನಿರ್ವಹಿಸಲಿದ್ದು, ಏಕದಿನ ಸರಣಿಯಲ್ಲೂ ​ಮುಂದುವರಿಯಲಿದ್ದಾರೆ. ಸಂಜು ಸ್ಯಾಮ್ಸನ್​ ಟಿ20 ಸರಣಿಗೆ ಸೆಕೆಂಡ್​ ವಿಕೆಟ್ ಕೀಪರ್​, ಟೆಸ್ಟ್​ಗೆ ವೃದ್ದಿಮಾನ್​ ಸಹಾ ಹಾಗೂ ಸೆಕೆಂಡ್​ ಕೀಪರ್​​ ಆಗಿ ರಿಷಭ್​​ ಪಂತ್​ರನ್ನ ಆಯ್ಕೆ ಮಾಡಲಾಗಿದೆ. ಕೆ ಎಲ್ ರಾಹುಲ್ ಕೀಪರ್​​ ಬ್ಯಾಟ್ಸ್​ಮನ್​ ಆಗಿ ಯಶಸ್ವಿಯಾಗಿದ್ದಾರೆ ಹಾಗೂ ಐಪಿಎಲ್​ನಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಹೀಗಾಗಿ ಬಿಸಿಸಿಐ ಇವರನ್ನ ಲಿಮಿಟೆಡ್​​ ಓವರ್​ ಸರಣಿಗಳಿಗೆ ನಂಬರ್ 1 ಆಯ್ಕೆಯಾಗಿ ಪರಿಗಣಿಸಲು ಪ್ಲ್ಯಾನ್ ಮಾಡಿದೆ ಎಂಬ ಮಾಹಿತಿ ಕೂಡಾ ಇದೆ. ಪ್ರಸಕ್ತ ಐಪಿಎಲ್​​​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಪರವಾಗಿ ಪ್ರತಿನಿಧಿಸಿದ್ದ ರಿಷಭ್​​ ಪಂತ್,​ ಕಳಪೆ ಸ್ಟ್ರೈಕ್​​ ರೇಟ್​ ಪ್ರದರ್ಶಿಸಿದ್ದಾರೆ. ಹೀಗಾಗಿ ಇವರನ್ನ ಲಿಮಿಟೆಡ್​​ ಓವರ್​​ ತಂಡದಿಂದ ಕೈ ಬಿಡಲಾಗಿದೆ. ಇವರಿಗಿಂತ ಲಿಮಿಟೆಡ್​​ ಓವರ್​ಗೆ ಸಂಜು ಸ್ಯಾಮ್ಸನ್​ ಆಯ್ಕೆಯೇ ಉತ್ತಮ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಇನ್ನು ವೃದ್ದಿಮಾನ್​​ ಸಹಾ ಟೆಸ್ಟ್​​ ಸರಣಿಗೆ ಒಳ್ಳೆಯ ಆಯ್ಕೆ. ಆದರೆ ಸಹಾಗೆ ವಯಸ್ಸಿನ ಸಮಸ್ಯೆ, ಸೀಮಿತ ಓವರ್​ಗಳ ಪಂದ್ಯಕ್ಕೆ ಅಡ್ಡಿಯಾಗಬಹುದು. ಜೊತೆಗೆ ಗಾಯದ ಸಮಸ್ಯೆಯೂ ಆಗಾಗ್ಗೆ ಕಾಡುತ್ತಿರುವುದು ತೊಡಕಾಗಿ ಪರಿಣಮಿಸಿದೆ. ಈ ಸ್ಪರ್ಧೆಯಲ್ಲಿ ಪ್ರತಿಭಾವಂತರಿಗೆ ಅವಕಾಶ ಸಿಗಲಿ ಅನ್ನೋದಷ್ಟೇ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಆಶಯ ಆಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!