ಮೂಲಂಗಿ ಅನ್ನೋದು ಉತ್ತಮ ಆಹಾರವಾಗಿದೆ, ಇದನ್ನು ತಿನ್ನೋದ್ರಿಂದ ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಅನ್ನೋದನ್ನ ಈ ಹಿಂದೆ ಕೆಲವು ಲೇಖನದ ಮೂಲಕ ತಿಳಿಸಿಕೊಟ್ಟಿದ್ದೇವೆ, ಇಂದಿನ ಲೇಖನದಲ್ಲಿ ಮೂಲಂಗಿ ಜಾಂಡಿಸ್ ಹಾಗೂ ಮೂಲವ್ಯಾದಿ ಸಮಸ್ಯೆ ಇರೋರಿಗೆ ಒಳ್ಳೆಯ ಆಹಾರವೇ ಅನ್ನೋದನ್ನ ತಿಳಿದುಕೊಳ್ಳೋಣ.
ಹಸಿ ಮೂಲಂಗಿಯನ್ನು ಸಲಾಡ್ ರೂಪದಲ್ಲಿ ಇದನ್ನು ತಿನ್ನಬಹದು ಅಲ್ಲದೆ ಇದನ್ನು ಅಡುಗೆಗಳಲ್ಲಿ ಬಳಸಿ ಸೇವನೆ ಮಾಡಬಹುದಾಗಿದೆ. ನೈಸರ್ಗಿಕವಾಗಿ ಭೂಮಿಯಲ್ಲಿ ಬೆಳೆಯುವಂತ ಈ ಮೂಲಂಗಿಯಲ್ಲಿ ವಿಟಮಿನ್ ಪ್ರಮಾಣ ಹೇರಳವಾಗಿರುತ್ತದೆ. ಕೆಲವರು ಈ ಮೂಲಂಗಿಯನ್ನು ತಿನ್ನೋದ್ರಿಂದ ಉತ್ತಮ ಅರೋಗ್ಯ ಪಡೆದುಕೊಂಡರೆ ಇನ್ನು ಕೆಲವರು ಮೂಲಂಗಿ ಕಂಡು ಮಾರುದ್ದ ಓಡುತ್ತಾರೆ ಅಂತವರು ಕೂಡ ಐದರ ಉಪಯೋಗ ತಿಳಿದು ಮೂಲಂಗಿ ಸೇವನೆ ಮಾಡಲಿ ಆರೋಗ್ಯಕ್ಕೆ ಒಳ್ಳೇದು.
ಮೂಲಂಗಿ ಅನ್ನೋದು ಅಜೀರ್ಣತೆ ನಿವಾರಿಸುವಲ್ಲಿ ಸಹಕಾರಿ ಕೆಲವರಿಗೆ ಸೇವನೆ ಮಾಡುವಂತ ಆಹಾರ ಬೇಗನೆ ಜೀರ್ಣವಾಗೋದಿಲ್ಲ, ಅಂತವರು ಊಟದಲ್ಲಿ ಮೂಲಂಗಿ ತಿನ್ನುವುದು ಉತ್ತಮ. ಈ ಮೂಲಂಗಿಯಲ್ಲಿ ನೀರಿನಂಶ ಹೆಚ್ಚಾಗಿದ್ದು ಆರೋಗ್ಯವನ್ನು ವೃದ್ಧಿಸಲು ಹೆಚ್ಚು ಸಹಕಾರಿಯಾಗಿದೆ, ಜೀರ್ಣ ಕ್ರಿಯೆಗೆ ಹಾಗೂ ಹೊಟ್ಟೆ ಬಾಧೆಗಳನ್ನು ಮೂಲಂಗಿ ನಿವಾರಿಸಬಲ್ಲದು.
ಮೂಲಂಗಿಯನ್ನು ಮೂಲವ್ಯಾದಿ ಹಾಗೂ ಜಾಂಡಿಸ್ ಸಮಸ್ಯೆ ಇರೋರು ಕೂಡ ಇದನ್ನು ಬಳಸಬಹುದಾಗಿದೆ ಇದರಲ್ಲಿ ಈ ಸಮಸ್ಯೆಗೆ ಪರಿಹಾರವಿದೆ ಅಷ್ಟೇ ಅಲ್ದೆ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ಇದು ಸಹಕಾರಿ ಜಾಂಡಿಸ್ ಮತ್ತು ಕ್ಯಾನ್ಸರ್ ಬಳಲುತ್ತಿರುವವರು ದಿನಕ್ಕೆ ಎರಡು ಸಲ ಸೇವಿಸಬೇಕು ಮೂಲವ್ಯಾಧಿಗಂತೂ ರಾಮಬಾಣವಾಗಿ ಕೆಲಸ ಮಾಡುತ್ತದೆ.