ಮನುಷ್ಯನ ದೇಹದ ಅಂಗಾಗಗಳಲ್ಲಿ ಮುಖ,ಕಣ್ಣು, ಮೂಗು, ಹಲ್ಲುಗಳು, ಆಕರ್ಷಣೀಯ ಮೈಕಟ್ಟು ನೋಡುಗರನ್ನು ಆಕರ್ಷಿಸುತ್ತದೆ. ಅಂತೆಯೇ ಅತ್ಯಾಕರ್ಷಣೀಯವೆಂದರೆ ಅದು ಕೂದಲು. ಕೂದಲು ಸಾಮಾನ್ಯವಾಗಿ ಎಲ್ಲರಿಗೂ ಬಿಲಿಯಾಗುತ್ತದೆ. ಇಂದು ನಾವು ತಲೆ ಕೂದಲಿಗೆ ಸಂಬಂಧಪಟ್ಟ ಕೆಲಸಮಸ್ಯೆಯ ಪರಿಹಾರದ ಕುರಿತು ತಿಳಿದುಕೊಳ್ಳೋಣ.
ಕೂದಲು ಸಾಮಾನ್ಯವಾಗಿ ಎಲ್ಲರಿಗೂ ಬಿಳಿಯಾಗುತ್ತದೆ. ವಯಸ್ಸಾದ ಮೇಲೆ ಬಿಳಿಯಾಗುತ್ತದೆ. ಆದರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುತ್ತದೆ. ಇದನ್ನು ತಡೆಗಟ್ಟಲು ಮನೆಯ ಮದ್ದು ಇದೆ. ಇದರಿಂದ ಯಾವುದೇ ರೀತಿಯ ಅಪಾಯವಿಲ್ಲ.ಹಾಗೆಯೇ ಕೂದಲಿಗೆ ಡೈ ಹಾಕಲು ಇಚ್ಛೆ ಇಲ್ಲದಿರುವವರಿಗೆ ಮನೆ ಮದ್ದನ್ನು ತಯಾರಿಸಿಕೊಳ್ಳುವ ವಿಧವನ್ನು ನೋಡೋಣ.
ಮೊದಲಿಗೆ ಮೆಹಂದಿ ಸೊಪ್ಪನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ಮೆಹಂದಿ ಹಚ್ಚಿದರೆ ಕೆಂಪಾಗುತ್ತದೆ ಅನ್ನುವವರಿಗೆ ಪರಿಹಾರವಾಗಿ ಸ್ವಲ್ಪ ಮೊಸರು ಹಾಗೂ ಕರಿಬೇವನ್ನು ಬಳಸಬೇಕು. ಕರಿಬೇವಿನಲ್ಲಿ ಕಬ್ಬಿಣದ ಅಂಶ ಇರುವುದರಿಂದ ಕೂದಲು ಕೆಂಪಾಗಲಾರದು ಎನ್ನುತ್ತಾರೆ ತಜ್ಞ ಪ್ರವೀಣ್ ಬಾಬು. ನಂತರ ಇವೆಲ್ಲದರ ಮಿಶ್ರಣವನ್ನು ಕಬ್ಬಿಣದ ಬಾಣಲೆಯಲ್ಲಿ ನನೆಸಿಡಬೇಕು. ಇದರಲ್ಲಿ ಶೇಖರಿಸುವದರಿಂದ ಕಬ್ಬಿಣವು ಕಿಳುಬನ್ನು ಬಿಡುತ್ತದೆ ಹಾಗೂ ಅದು ಕಪ್ಪು ಬಣ್ಣವಾಗಿರುತ್ತದೆ.
ನಂತರ ಬೆಳಿಗ್ಗೆ ಏದ್ದ ನಂತರ ತಲೆಗೆ ಮಿಶ್ರಣವನ್ನ ಹಚ್ಚಿಕೊಳ್ಳಬೇಕು. ಅದು ಪೂರ್ತಿಯಾಗಿ ಒಣಗುವವರೆಗೆ ಬಿಡಬೇಕು. ಅಂದರೆ ಬೇಗ ಒಣಗಲು ಬಿಡಬಾರದು. ತಲೆಗೆ ಮಾಸ್ಕ್ಅನ್ನು ಕಟ್ಟಿ ಗಾಳಿಯು ಆಡದಂತೆ ಕವರ್ ಮಾಡಿಕೊಳ್ಳಬೇಕು. ಏಕೆಂದರೆ ಅದರ ತೇವಾಂಶ ಅಲ್ಲಿಯೇ ಇದ್ದು ಕೂದಲಿಗೆ ಹೊಂದಿಕೊಳ್ಳಲು ಸಹಕಾರಿಯಾಗುತ್ತದೆ. ತದನಂತರ ತಲೆ ಸ್ನಾನವನ್ನು ಮಾಡಬೇಕು. ಇಲ್ಲಿ ಸ್ನಾನ ಮಾಡುವಾಗ ತಲೆಗೆ ಸೋಪ್ ಅನ್ನು ಬಳಸಬಾರದು.
ನಂತರ ಸ್ನಾನವಾದ ಕೂಡಲೇ ತಲೆಗೆ ಕೊಬ್ಬರಿ ಎಣ್ಣೆಯನ್ನು ಹಾಕಬೇಕು. ಕಾರಣ ಮೆಹಂದಿ ಹಾಗು ಕಬ್ಬಿಣದ ಕಿಳುಬಿನಿಂದ ತಲೆ ಹೊಟ್ಟುಗಳಾಗುವ ಸಾಧ್ಯತೆಗಳಿರುತ್ತವೆ. ಇದನ್ನು ಸುಮಾರು ಒಂದು ತಿಂಗಳಿನವರೆಗೆ ಹಚ್ಚಿದರೆ ತಲೆ ಕೂದಲು ಬೆಳ್ಳಗಾಗುವುದನ್ನು ಕಡಿಮೆ ಮಾಡುತ್ತದೆ. ಹಾಗೆಯೇ ತಮ್ಮ ಕೈ ಬೆರಳುಗಳ ಉಗುರುಗಳನ್ನು ಚರ್ಮ ಹಾಗೂ ಉಗುರು ಕೂಡುವ ಜಾಗದಲ್ಲಿ ಉಜ್ಜಬೇಕು. ಇದರಿಂದಲೂ ಕೂಡ ಕೂದಲು ಬೇಗ ಬೆಳ್ಳಗಾಗುವುದನ್ನು ತಡೆಗಟ್ಟಬಹುದು.