ನಮ್ಮ ದೇಹದಲ್ಲಿರುವಂತಹ ಬಿಳಿ ರಕ್ತ ಕಣಗಳು ಹೆಚ್ಚು ಆಗಲು ನಾವು ಉಪಯೋಗಿಸುವಂತಹ ಆಹಾರಗಳು ನಮಗೆ ಸಹಕಾರಿ ಆಗಿರುತ್ತವೆ. ಮನುಷ್ಯನ ಉತ್ತಮ ಆರೋಗ್ಯವನ್ನು ರೂಪಿಸಲು ರೋಗ ನಿರೋಧಕ ಶಕ್ತಿ ತುಂಬಾ ಸಹಕಾರಿ ಆಗಿರುತ್ತದೆ. ಈ ಆಹಾರ ಸೇವನೆಯಿಂದ ನಮ್ಮ ದೇಹವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳಬಹುದು. ನಮ್ಮ ದೇಹಕ್ಕೆ ಸರಿಯಾದ ಸಮಯಕ್ಕೆ ಹಾಗು ನಿಯಮುತ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದರೆ ನಮ್ಮ ದೇಹದ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ನಮ್ಮ ದೇಹ ಅನಾರೋಗ್ಯಕ್ಕೆ ತುತ್ತಾಗದಂತೆ ದೀರ್ಘ ಕಾಲದವರೆಗೆ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳಬಹುದು. ಹಾಗಿದ್ರೆ ನಮ್ಮ ದೇಹಕ್ಕೆ ಬೇಕಾದ ಬಿಳಿ ರಕ್ತ ಕಣಗಳನ್ನು ಹೆಚ್ಚು ಮಾಡುವ ಆಹಾರ ಯಾವುದು ಅನ್ನೋದನ್ನ ನೋಡೋಣ.
ಮೊದಲಿಗೆ ಕಿತ್ತಳೆ ಹಣ್ಣು ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಾಗಿ ಇರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿ ಬೆಳ್ಳುಳ್ಳಿಯ ಪ್ರೊಟೀನ್,, ವಿಟಮಿನ್ ಎ ಬಿ ಸಿ ಸೇರಿದಂತೆ ಹಲವಾರು ಪೌಷ್ಟಿಕಾಂಶಗಳು ಇದ್ದು ಅಸಿಡಿಟಿ, ಗ್ಯಾಸ್ಟ್ರಿಕ್ ಮುಂತಾದ ಸಮಸ್ಯೆಗಳಿಗೆ ಬಹಳ ಉತ್ತಮ ಔಷಧಿ ಆಗಿದೆ. ಬಸಳೆ ಸೊಪ್ಪು ಬಸಳೆ ಸೊಪ್ಪನ್ನು ಪೌಷ್ಟಿಕಾಂಶದ ಸೊಪ್ಪು ಎಂತಲೂ ಕರೆಯಲಾಗುತ್ತದೆ. ಪ್ರತೀ ನಿತ್ಯ ಆರೋಗ್ಯಕರವಾದ ಈ ಸೊಪ್ಪನ್ನು ಸೇವಿಸುತ್ತಾ ಬಂದರೆ ದೇಹದ ಆರೋಗ್ಯ ಹೆಚ್ಚುತ್ತದೆ.
ಸಿಹಿ ಗೆಣಸು ಇದರಲ್ಲಿ ಕೊರೊಟಿನೈಟ್ ಗಳು ಹೆಚ್ಚಾಗಿದ್ದು ವಿಟಮಿನ್ ಏ ಅಧಿಕ ಪ್ರಮಾಣದಲ್ಲಿ ಇದ್ದು ಪೋಷಕಾಂಶ ಹಾಗೂ ನಾರಿನ ಅಂಶವನ್ನು ಒದಗಿಸಿ ಜೀರ್ಣ ಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.
ಅಣಬೆ ಅಣಬೆ ಅತೀ ಹೆಚ್ಚು ಪ್ರೊಟೀನ್ ಯುಕ್ತ ಆಹಾರವಾಗಿದ್ದು ವಿಟಮಿನ್ ಮಿನರಲ್, ಅಮೈನೋ ಆಸಿಡ್ ಆಂಟಿ ಬಯೋಟಿಕ್ ಮುಂತಾದ ಅಂಶಗಳು ಅಧಿಕವಾಗಿ ಇರುವುದರಿಂದ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಕೋಸು ಗಡ್ಡೆ ಇದನ್ನು ಹೆಚ್ಚಾಗಿ ಸೇವಿಸಬೇಕು ಕೋಸು ಗಡ್ಡೆ ಇಂದ ಪದಾರ್ಥಗಳನ್ನು ಮಾಡಿ ಸೇವಿಸಬಹುದು ಹಾಗೂ ಸೂಪ್ ಗಳನ್ನು ಹಾಗೂ ಸಲಾಡ್ ಗಳನ್ನು ಸಹ ಮಾಡಬಹುದು. ಇಂತಹ ಆಹಾರಗಳನ್ನು ತಿನ್ನುತ್ತಾ ಬಂದರೆ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು.
ಕಿವಿ ಹಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚು ಇದ್ದು ಪ್ರತೀ ದಿನ ಈ ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಜವೇ ಗೋಧಿ ಜವೇ ಗೋಧಿಯಲ್ಲಿ ಅಣಬೆಯಲ್ಲಿ ಇರುವಂತೆ ಹೆಚ್ಚು ಪೌಷ್ಟಿಕಾಂಶಗಳು ಇದ್ದು ದೇಹದಲ್ಲಿ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾದಾಮಿ ಇದರಲ್ಲಿ ಶೇಕಡಾ 50 ರಷ್ಟು ವಿಟಮಿನ್ ಈ ಅಂಶ ಇದ್ದು ಇದು ಖಿನ್ನತೆಯನ್ನು ಹೋಗಲಾಡಿಸುತ್ತದೆ. ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಮೊಸರು ಇದರಲ್ಲಿ ವಿಟಮಿನ್ ಡಿ ಇದ್ದು , ಪ್ರತೀ ದಿನ ನಿಯಮಿತವಾಗಿ ಸೇವಿಸುತ್ತಾ ಇದ್ದರೆ ಶೀತ ಕೆಮ್ಮು ಇಂತಹ ಕಾಯಿಲೆಗಳು ಬರದೆ ದೂರ ಇರಬಹುದು. ಶೇಕಡಾ 70 ರಷ್ಟು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರ್ಣ ಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ. ಇಷ್ಟೆಲ್ಲ ರೀತಿಯ ಆಹಾರ ಪದಾರ್ಥಗಳನ್ನು ಉಪಯೋಗಿಸುವುದರಿಂದ ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.